ಜಾನ್ ಡಿಯರ್ 5130M: 130 HP ಟ್ರ್ಯಾಕ್ಟರ್ ನಲ್ಲಿನ ಶಕ್ತಿ, ಉತ್ಪಾದಕತೆ, ಮತ್ತು ಕಾರ್ಯಕ್ಷಮತೆ

5130M

ಭಾರೀ ಪ್ರಮಾಣದ ಕೆಲಸಕ್ಕಾಗಿ ಶಕ್ತಿಶಾಲಿ ಎಂಜಿನ್

ಜಾನ್ ಡಿಯರ್ 5130M ನ ಪ್ರಮುಖ ಲಕ್ಷಣವೆಂದರೆ ಅದರ 4.5L PowerTech™ ಪ್ಲಸ್ ಎಂಜಿನ್,ಇದು 2200 rpm ನಲ್ಲಿ 130 HP ಪೂರೈಸುತ್ತದೆ. ಈ ಎಂಜಿನ್ ಅನ್ನು ಇದಕ್ಕಾಗಿ ವಿನ್ಯಾಸಗೊಳಿಸಲಾಗಿದೆ:

  • ಕಠಿಣ ಕೃಷಿ ಕಾರ್ಯಗಳನ್ನು ನಿರ್ವಹಿಸಲು ಅಧಿಕ ಶಕ್ತಿಯ ಉತ್ಪಾದನೆ
  • ಒಣ ಗದ್ದೆಗಳು ಮತ್ತು ಕೆಸರಿನ ಪರಸ್ಥಿತಿಗಳನ್ನು ಒಳಗೊಂಡು ಎಲ್ಲ ಪ್ರಕಾರದ ಭೂಪ್ರದೇಶಗಳಲ್ಲಿ ಒಂದೇ ತೆರನಾದ ಕಾರ್ಯಕ್ಷಮತೆ.
  • ಕಾರ್ಯಕ್ಷಮತೆಗೆ ಧಕ್ಕೆಯುಂಟು ಮಾಡದೇ ಕಾರ್ಯಾಚರಣೆಯ ಖರ್ಚುಗಳನ್ನು ಕಡಿಮೆಗೊಳಿಸುವ ಇಂಧನ ದಕ್ಷತೆ

ಟರ್ಬೊಚಾರ್ಜ್ ಹೊಂದಿರುವ ಮತ್ತು ಇಂಟರ್ ಕೂಲ್ಡ್ ಸಿಸ್ಟಮ್ ನಿಂದಾಗಿ ಉತ್ತಮ ದಹನವನ್ನು ಖಚಿತಪಡಿಸುತ್ತದೆ, ಈ ಮೂಲಕ ಇಂಧನ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಅಧಿಕ ಸಾಮರ್ಥ್ಯ ಒದಗಿಸುತ್ತದೆ.

ಸರಾಗವಾದ ಕಾರ್ಯಾಚರಣೆಗಾಗಿ ಅತ್ಯಾಧುನಿಕ ಟ್ರಾನ್ಸ್ ಮಿಶನ್

ಜಾನ್ ಡಿಯರ್ 5130M ನಲ್ಲಿ Powr8™ ಇಕೊಶಿಫ್ಟ್ ಟ್ರಾನ್ಸ್ ಮಿಶನ್ ಇದ್ದು, ಇವುಗಳನ್ನು ಒದಗಿಸುತ್ತದೆ:

  • ಅನುಕೂಲಕರ ರೀತಿಯಲ್ಲಿ ಕೆಲಸ ಮಾಡುವುದಕ್ಕಾಗಿ 32 ಫಾರ್ವರ್ಡ್ ಮತ್ತು 16 ರಿವರ್ಸ್ ಗೇರ್ ಗಳನ್ನು ಒದಗಿಸುತ್ತದೆ
  • ಸಸಿ ನೆಡುವುದು ಮತ್ತು ಸಿಂಪಡಣೆಯಂತಹ ನಿಖರವಾದ ಕೆಲಸಕ್ಕಾಗಿ 16 ಕ್ರೀಪರ್ ಗೇರ್ ಗಳು
  • ಇಂಧನ-ದಕ್ಷತೆಯ ಸಾಗಣೆಗಾಗಿ ಕೇವಲ 1750 rpm ನಲ್ಲಿ 40 km/h ನಷ್ಟು ಅಧಿಕ ಸ್ಪೀಡ್

ಈ ಟ್ರಾನ್ಸ್ ಮಿಶನ್ ಅಡಚಣೆ ರಹಿತ ಬದಲಾವಣೆ ಅಥವಾ ಶಿಫ್ಟಿಂಗ್ ಒದಗಿಸುವ ಮೂಲಕ ಟ್ರ್ಯಾಕ್ಟರ್ ತೋಟದಲ್ಲಿ  ಅಥವಾ ರಸ್ತೆಯಲ್ಲಿ ಎಲ್ಲೇ ಇದ್ದರೂ ಸರಾಗವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುತ್ತದೆ.  ಇಕೊಶಿಫ್ಟ್ ಕಾರ್ಯವು ಹೆಚ್ಚುವರಿಯಾಗಿ ಶಕ್ತಿಯ ವಿತರಣೆಯನ್ನು ಉತ್ತಮಗೊಳಿಸುವ ಮೂಲಕ ಭಾರೀ-ಪ್ರಮಾಣದ ಕೆಲಸಗಳ ವೇಳೆ ಉತ್ತಮ ನಿಯಂತ್ರಣ ಮತ್ತು ಹಿಡಿತ ಒದಗಿಸುತ್ತದೆ.

ಆಧುನಿಕ ಕೃಷಿಗಾಗಿ ಬುದ್ಧಿವಂತಿಕೆಯ (ಸ್ಮಾರ್ಟ್) ತಂತ್ರಜ್ಞಾನ (ಟೆಕ್ನಾಲಜಿ)

ಜಾನ್ ಡಿಯರ್ 5130M ಭವಿಷ್ಯಕ್ಕಾಗಿ ನಿರ್ಮಿಸಲಾಗಿದ್ದು, ಉತ್ಪಾದಕತೆ ಮತ್ತು ಸಾಮರ್ಥ್ಯ ವೃದ್ಧಿಸುವ ಅತ್ಯಾಧುನಿಕ ಕೃಷಿ ತಂತ್ರಜ್ಞಾನಗಳನ್ನು ಹೊಂದಿದೆ:

  • JDLink™ ಟೆಲಿಮ್ಯಾಟಿಕ್ಸ್: ಟ್ರ್ಯಾಕ್ಟರ್ ಕಾರ್ಯಕ್ಷಮತೆ ಮತ್ತು ಸಮಸ್ಯೆಗಳ ಪತ್ತೆ ಮಾಡುವಿಕೆಯನ್ನು (ಡಯಗ್ನೋಸ್ಟಿಕ್ಸ್) ದೂರದಿಂದಲೇ ಮೇಲ್ವಿಚಾರಿಸುವುದನ್ನು ಸಾಧ್ಯವಾಗಿಸುತ್ತದೆ
  • ISOBUS-ಹೊಂದಿದೆ: ನಿಖರ ಕೃಷಿಗಾಗಿ ಸರಿಹೊಂದುವ ಇಂಪ್ಲಿಮೆಂಟ್ ಗಳೊಂದಿಗೆ ಹೊಂದಿಕೊಂಡು ಕೆಲಸ ಮಾಡುವುದನ್ನು ಸುಲಭವಾಗಿಸುತ್ತದೆ
  • ಇಲೆಕ್ಟ್ರಾನಿಕ್ ಹಿಚ್ ಕಂಟ್ರೋಲ್ (EHC): ಉತ್ತಮ ಕಾರ್ಯಕ್ಷಮತೆಗಾಗಿ ಇಂಪ್ಲಿಮೆಂಟ್ ಗಳ ನಿಖರವಾದ ನಿಯಂತ್ರಣವನ್ನು ಖಚಿತಪಡಿಸುತ್ತದೆ

ಈ ಲಕ್ಷಣಗಳ ಸಹಾಯದಿಂದ ರೈತರು ಡೇಟಾ-ಆಧರಿತ ನಿರ್ಧಾರಗಳನ್ನು ಕೈಗೊಳ್ಳಲು, ಡೌನ್ ಟೈಮ್ ಅನ್ನು ಕಡಿಮೆ ಮಾಡಲು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಬಹುಪಯೋಗಿ ಕಾರ್ಯಗಳಿಗಾಗಿ ಭಾರ ಎತ್ತುವ ಸಾಮರ್ಥ್ಯ

ಜಾನ್ ಡಿಯರ್ 5130M ಬಾಲ್ ಎಂಡ್ ನಲ್ಲಿ 3700 kg ಎತ್ತುವ ಸಾಮರ್ಥ್ಯ ಹೊಂದಿದ್ದು, ಈ ಕೆಲಸಗಳಿಗಾಗಿ ಸೂಕ್ತವಾಗಿರುತ್ತದೆ:

  • ಹೈಡ್ರಾಲಿಕ್ ರಿವರ್ಸಿಬಲ್ ನೇಗಿಲುಗಳು ಮತ್ತು ಕಲ್ಟಿವೇಟರ್ ಗಳಂತಹ ಭಾರೀ-ಪ್ರಮಾಣದ ಕೆಲಸಗಳನ್ನು ಮಾಡುವ ಇಂಪ್ಲಿಮೆಂಟ್ ಗಳು
  • ಮಟೀರಿಯಲ್ ಗಳನ್ನು ನಿರ್ವಹಿಸಲು ಮತ್ತು ಸಾಗಿಸಲು ಫ್ರಂಟ್ ಲೋಡರ್ ಗಳು
  • ದೊಡ್ಡ-ಪ್ರಮಾಣದ ಕೃಷಿ ಕೆಲಸಕ್ಕಾಗಿ ಅಧಿಕ-ಕಾರ್ಯಕ್ಷಮತೆಯ ಬೇಲರ್ ಗಳು ಮತ್ತು ಸೀಡರ್ ಗಳು

ಹೆಚ್ಚಿನ ಹೈಡ್ರಾಲಿಕ್ ಹರಿವು ಎಲ್ಲ ಜೋಡಣೆಗಳು ಅಥವಾ ಅಟ್ಯಾಚ್ಮೆಂಟ್ ಗಳು ಸರಾಗವಾಗಿ ಮತ್ತು ಸಮರ್ಥವಾಗಿ ಕೆಲಸ ಮಾಡುವುದನ್ನು ಖಚಿತಪಡಿಸುವ ಮೂಲಕ ಹಲವಾರು ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ರೈತರಿಗೆ ಸಹಾಯ ಮಾಡುತ್ತದೆ.

ಆಪರೇಟರ್ ದೀರ್ಘಕಾಲದವರೆಗೆ ಆರಾಮವಾಗಿ ಕೆಲಸ ಮಾಡಬಹುದು

ಆಪರೇಟರ್ ಆರಾಮದಾಯಕತೆಯನ್ನು ಗಮನದಲ್ಲಿಟ್ಟುಕೊಂಡು ಜಾನ್ ಡಿಯರ್ 5130M ಅನ್ನು ವಿನ್ಯಾಸಗೊಳಿಸಿದೆ. ಟ್ರ್ಯಾಕ್ಟರ್ ಈ ಲಕ್ಷಣಗಳನ್ನು ಹೊಂದಿದೆ:

  • ಎಲ್ಲ ರೀತಿಯ ಹವಾಮಾನ ಕಾರ್ಯಾಚರಣೆಗಳಿಗಾಗಿ ಹೆಚ್ಚಿನ ಸ್ಥಳಾವಕಾಶವಿರುವ, ವಾತಾವರಣ-ನಿಯಂತ್ರಿತ ಕ್ಯಾಬಿನ್
  • ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವಾಗ ಆಯಾಸವನ್ನು ಕಡಿಮೆಗೊಳಿಸುವ ಏರ್-ಸಸ್ಪೆನ್ಶನ್ ಸೀಟ್
  • ಸುಲಭ ಮತ್ತು ಸಹಜ ಕಾರ್ಯಾಚರಣೆಗಾಗಿ ಬಳಸಲು ಸುಲಭವಾದ ರೀತಿಯಲ್ಲಿ ಇರಿಸಲಾದ ಕಂಟ್ರೋಲ್ ಗಳು
  • ಹೆಚ್ಚು ಶ್ರಮವಿಲ್ಲದ ಪವರ್ ಟೇಕ್-ಆಫ್ ಕಾರ್ಯನಿರ್ವಹಣೆಗಾಗಿ ಇಲೆಕ್ಟ್ರೊ-ಹೈಡ್ರಾಲಿಕ್ PTO ಕಂಟ್ರೋಲ್

ಶಬ್ದ ಮತ್ತು ಕಂಪನವನ್ನು ಕಡಿಮೆ ಮಾಡಲು ಕೂಡ ಕ್ಯಾಬಿನ್ ಅನ್ನು ವಿನ್ಯಾಸಗೊಳಿಸಾಗಿದ್ದು, ವಿಸ್ತರಿತ ತೋಟದ ಕಾರ್ಯಾಚರಣೆಗಳಿಗಾಗಿ ಹೆಚ್ಚು ಆರಾಮದಾಯಕವಾದ ಕೆಲಸದ ವಾತಾವರಣ ಸೃಷ್ಟಿಸುತ್ತದೆ.

ಇಂಧನ ದಕ್ಷತೆ ಮತ್ತು ವಿಸ್ತರಿತ ಕೆಲಸದ ಅವಧಿ

ಜಾನ್ ಡಿಯ್ 5130M 165-ಲೀಟರ್ ಗಳ ಇಂಧನ ಟ್ಯಾಂಕ್ ಹೊಂದಿರುವುದರಿಂದ ರೈತರು ಮೇಲಿಂದ ಮೇಲೆ ಇಂಧನ ತುಂಬಿಸಲು ನಿಲ್ಲುವ ಅಗತ್ಯವಿಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡಬಹುದು. ಅದರ ಇಂಧನ-ದಕ್ಷತೆಯುಳ್ಳ ಎಂಜಿನ್ ನೊಂದಿಗೆ, ಇದರರ್ಥ:

  • ಕಾಲಕ್ರಮೇಣ ಕಾರ್ಯಾಚರಣೆಯ ಖರ್ಚುಗಳು ಕಡಿಮೆಯಾಗುತ್ತವೆ
  • ಪ್ರಮುಖ ಕೃಷಿ ಕೆಲಸಗಳ ವೇಳೆ ಕೆಲವೇ ಕೆಲವು ಅಡಚಣೆಗಳು
  • ಪ್ರತಿಯೊಂದು ಕೃಷಿ ಋತುವಿನಲ್ಲಿ ಗರಿಷ್ಠ ಉತ್ಪಾದಕತೆ

PowerTech™ ಪ್ಲಸ್ ಎಂಜಿನ್ ಇರುವುದರಿಂದ ಪ್ರತಿಯೊಂದು ಲೀಟರ್ ಇಂಧನ ಸಮರ್ಥವಾಗಿ ಉಪಯೋಗಿಸಲ್ಪಡುತ್ತದೆ ಎಂದು ಖಚಿತಪಡಿಸುತ್ತದೆಯಲ್ಲದೇ ಅದನ್ನು ರೈತರ ಕಡಿಮೆ-ವೆಚ್ಚದ ಆಯ್ಕೆಯಾಗಿಸುತ್ತದೆ.

ಜಾನ್ ಡಿಯರ್ 5130M ಏಕೆ ಒಂದು ಬುದ್ಧಿವಂತಿಕೆಯ ಹೂಡಿಕೆಯಾಗಿದೆ

ಶಕ್ತಿಶಾಲಿ, ವಿಶ್ವಾಸಾರ್ಹ, ಮತ್ತು ತಂತ್ರಜ್ಞಾನದ ದೃಷ್ಟಿಯಿಂದ ಅತ್ಯಾಧುನಿಕ ಕೃಷಿ ಟ್ರ್ಯಾಕ್ಟರ್ ಗಾಗಿ ಹುಡುಕುತ್ತಿರುವವರ ಪಾಲಿಗೆ ಜಾನ್ ಡಿಯರ್ 5130M ಒಂದು ಅತ್ಯುತ್ತಮ ಆಯ್ಕೆಯಾಗಿದೆ.  ಅದಕ್ಕೆ ಕಾರಣಗಳು ಇಂತಿವೆ:

  • ಎಲ್ಲ ಕೃಷಿ ಕಾರ್ಯಗಳಿಗಾಗಿ ಉಪಯೋಗಿಸಬಹುದಾದ 130 HP ಪ್ರಬಲ ಶಕ್ತಿ
  • ಸರಾಗವಾದ ಕಾರ್ಯಾಚರಣೆಗಾಗಿ ಅತ್ಯಾಧುನಿಕ ಟ್ರಾನ್ಸ್ ಮಿಶನ್ ಸಿಸ್ಟಮ್
  • ಸಾಮರ್ಥ್ಯವನ್ನು ಉತ್ತಮಗೊಳಿಸಲು ಬುದ್ಧಿವಂತಿಕೆಯಿಂದ ಕೂಡಿದ ಕೃಷಿ ತಂತ್ರಜ್ಞಾನ
  • ವಿವಿಧ ಪ್ರಕಾರದ ಇಂಪ್ಲಿಮೆಂಟ್ ಗಳನ್ನು ಬೆಂಬಲಿಸಲು ಅಧಿಕ ಎತ್ತುವ ಸಾಮರ್ಥ್ಯ
  • ಬಳಕೆಯ ಖರ್ಚುಗಳನ್ನು ಕಡಿಮೆ ಮಾಡಲು ಇಂಧನ ದಕ್ಷತೆ
  • ಅತ್ಯುತ್ಕೃಷ್ಟವಾದ ಆಪರೇಟರ್ ಆರಾಮದಾಯಕತೆಯಿಂದಾಗಿ ಅವರು ದೀರ್ಘ ಕಾಲದವರೆಗೆ ಕೆಲಸ ಮಾಡಬಹುದು

ಜಾನ್ ಡಿಯರ್ 5130M ಟ್ರ್ಯಾಕ್ಟರ್ ಮಾತ್ರವಲ್ಲ, ಅದು ಉತ್ಪಾದಕತೆ ಹೆಚ್ಚಿಸುವಲ್ಲಿ ಕೂಡ ಸಹಕಾರಿಯಾಗಿದೆ. ನೀವು ದೊಡ್ಡ-ಪ್ರಮಾಣದ ಕೃಷಿಯಲ್ಲಿ, ಗುತ್ತಿಗೆ ಕಾರ್ಯಾಚರಣೆಗಳಲ್ಲಿ, ಅಥವಾ ಸಾರಿಗೆ ಕೆಲಸಗಳಲ್ಲಿ, ಇಂತಹ ಯಾವುದೇ ಕೆಲಸಗಳಲ್ಲಿ ತೊಡಗಿರಲಿ, ಈ ಅಧಿಕ-ಶಕ್ತಿಯ ಯಂತ್ರವು ಸಾಮರ್ಥ್ಯ, ಬಾಳಿಕೆ, ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪೂರೈಸುವ ಮೂಲಕ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿ ಮುಗಿಸಲು ನಿಮಗೆ ಸಹಾಯ ಮಾಡುತ್ತದೆ.