ಟ್ರ್ಯಾಕ್ಟರ್ ಗಳು

ಜಾನ್ ಡಿಯರ್ ಇಂಡಿಯಾ D ಸರಣಿ ಟ್ರ್ಯಾಕ್ಟರ್ ಶ್ರೇಣಿ

D ಸರಣಿ ಟ್ರ್ಯಾಕ್ಟರ್ ಗಳು

ಜಾನ್ ಡಿಯರ್ 5D ಸರಣಿ ಟ್ರ್ಯಾಕ್ಟರ್ ಗಳ ಶ್ರೇಣಿ 36 HP ನಿಂದ 50 HP ವರೆಗೆ ಇರುತ್ತದೆ. 5D ಸರಣಿ ಟ್ರ್ಯಾಕ್ಟರ್ ಗಳನ್ನು ವಿವಿಧ ರೀತಿಗಳಲ್ಲಿ ಬಳಸಬಹುದಾಗಿದ್ದು, ಅವು ಕೃಷಿ ಕೆಲಸಗಳಲ್ಲಿ ಮತ್ತು ಹೆವಿ ಡ್ಯೂಟಿ ಎಳೆತದಲ್ಲಿ ಸಮರ್ಥವಾಗಿವೆ. ಈ ಟ್ರ್ಯಾಕ್ಟರ್ ಗಳು ದೊಡ್ಡ ಆಪರೇಟರ್ ಸ್ಟೇಶನ್, ನ್ಯೂಟ್ರಲ್ ಸೇಫ್ಟಿ ಸ್ವಿಚ್ ವಿಷಯವಾಗಿ ಸಾಕಷ್ಟು ಆರಾಮದಾಯಕವಾಗಿರುತ್ತದೆ ಮತ್ತು ಇವುಗಳ ಮೆಂಟೆನನ್ಸ್ ಖರ್ಚು ಕಡಿಮೆ ಇರುತ್ತದೆ. ಜಾನ್ ಡಿಯರ್ 5D ಸರಣಿ ಪವರ್ ಪ್ರೋ ಮಾಡಲ್ ಗಳನ್ನು ಮತ್ತು ವ್ಯಾಲ್ಯೂ+ + + ಮಾಡಲ್ ಗಳನ್ನು ಒಳಗೊಂಡಿದ್ದು, ನಮ್ಮ ಗ್ರಾಹಕರಿಗೆ ಹಲವಾರು ಪ್ರಕಾರದ ಟ್ರ್ಯಾಕ್ಟರ್ ಗಳಿಂದ ಆಯ್ಕೆ ಮಾಡುವ ಅವಕಾಶ ನೀಡುತ್ತದೆ.

ಜಾನ್ ಡಿಯರ್ ಇಂಡಿಯಾ E ಸರಣಿ ಟ್ರ್ಯಾಕ್ಟರ್ ಶ್ರೇಣಿ

E ಸರಣಿ ಟ್ರ್ಯಾಕ್ಟರ್ ಗಳು

ಜಾನ್ ಡಿಯರ್ 5E ಸರಣಿ ಟ್ರ್ಯಾಕ್ಟರ್ ಗಳು 50 HP ನಿಂದ 74 HP ವರೆಗೆ ಲಭ್ಯವಿರುತ್ತವೆ. 5E ಸರಣಿ ಟ್ರ್ಯಾಕ್ಟರ್ ಗಳನ್ನು ವಿಶೇಷವಾಗಿ ಹೆವಿ ಡ್ಯೂಟಿ ಕೆಲಸಗಳನ್ನು ಮಾಡಲು ಮತ್ತು ದೊಡ್ಡ ಗಾತ್ರದ ಇಂಪ್ಲಿಮೆಂಟ್ ಗಳನ್ನು ಸುಲಭವಾಗಿ ಹಾಗೂ ದಕ್ಷತೆಯಿಂದ ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.

ಜಾನ್ ಡಿಯರ್ ಇಂಡಿಯಾ ಸ್ಪೆಶಾಲ್ಟಿ ಟ್ರ್ಯಾಕ್ಟರ್

ಸ್ಪೆಶಾಲ್ಟಿ ಟ್ರ್ಯಾಕ್ಟರ್ ಗಳು

ಜಾನ್ ಡಿಯರ್ ಸ್ಪೆಶಾಲ್ಟಿ ಟ್ರ್ಯಾಕ್ಟರ್ ಗಳು 28HP ನಿಂದ 35HP ವರೆಗೆ ಇರುತ್ತವೆ. ಈ ಅಗಲ ಕಡಿಮೆ ಇರುವ ಟ್ರ್ಯಾಕ್ಟರ್ ಗಳನ್ನುಆರಾಮ ನೀಡಲು ಅಷ್ಟೇ ಅಲ್ಲದೇ ಹಣ್ಣಿನ ತೋಟಗಳಲ್ಲಿ, ಅಂತರ್ ಕೃಷಿಗಾಗಿ ಮತ್ತು ಕೆಸರು ಹದಗೊಳಿಸುವ ಕೆಲಸಗಳಲ್ಲಿ ಉಪಯೋಗಿಸುವುದಕ್ಕಾಗಿ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ನಿಪುಣತೆಯಿಂದ ನಿರ್ಮಿಸಿದೆ.

ಜಾನ್ ಡಿಯರ್ ಇಂಡಿಯಾ ಮೊಬೈಲ್ ಆಪ್ ಲಿಂಕ್

JDLink™ (TREM III-A)

JDLink™ ಜಾನ್ ಡಿಯರ್ ಪರಿಚಯಿಸಿದ ಒಂದು ಹೊಸ ಅಪ್ಲಿಕೇಶನ್ ಆಗಿದ್ದು ನೀವು ಯಾವಾಗ ಬೇಕಾದರೂ ಎಲ್ಲಿಂದ ಬೇಕಾದರೂ ನಿಮ್ಮ ಟ್ರ್ಯಾಕ್ಟರ್ ಚೆನ್ನಾಗಿದೆಯೆ ಎಂದು ಪರಿಶೀಲಿಸಲು ಮತ್ತು ನಿಮ್ಮ ಟ್ರ್ಯಾಕ್ಟರ್ ನೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ. 

ಟ್ರ್ಯಾಕ್ಟರ್ 3D ಅನುಭವ

ಟ್ರ‍್ಯಾಕ್ಟರ‍್ 3D ಅನುಭವ

ಎಫ್ಎಕ್ಯೂಗಳು

ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆಯ ಶ್ರೇಣಿ ಏನು?

ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆ ರೂ.4.80 ಲಕ್ಷಗಳಿಂದ ರೂ.29 ಲಕ್ಷಗಳವರೆಗೆ ಇರುತ್ತದೆ.

ಜಾನ್ ಡಿಯರ್ ಟ್ರ್ಯಾಕ್ಟರ್ HP ಬೆಲೆಯ ಶ್ರೇಣಿ ಏನು?

ಜಾನ್ ಡಿಯರ್ ಟ್ರ್ಯಾಕ್ಟರ್ HP 28HP ನಿಂದ 120HP ವರೆಗೆ ಇರುತ್ತದೆ

ಜಾನ್ ಡಿಯರ್ ಆಟೊಟ್ರ್ಯಾಕ್™ ಎಂದರೇನು?

ಜಾನ್ ಡಿಯರ್ ಆಟೊಟ್ರ್ಯಾಕ್ ಒಂದು ಆಟೊಮೇಟೆಡ್ ವೆಹಿಕಲ್ ಗೈಡನ್ಸ್ ಸಿಸ್ಟಮ್ ಆಗಿದೆ. ಅದು ಆಪರೇಟರ್ ಗೆ ಹ್ಯಾಂಡ್ಸ್-ಫ್ರೀ ಸ್ಟ್ರೈಟ್ ಪಾತ್ ಗೈಡನ್ಸ್, ತೋಟದಲ್ಲಿನ ಉತ್ಪಾದಕತೆಯಲ್ಲಿ ಹೆಚ್ಚಳ ನೀಡುವುದರೊಂದಿಗೆ & ಕೆಲಸ ಮಾಡುವಾಗ ಆಯಾಸವನ್ನು ಸಾಕಷ್ಟು ಕಡಿಮೆ ಮಾಡುತ್ತದೆ.

ನಮಗೆ ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆಗಳ ಪಟ್ಟಿಯ ಬಗ್ಗೆ ಸಂಪೂರ್ಣ ಮಾಹಿತಿ ಎಲ್ಲಿ ಸಿಗುತ್ತದೆ?

ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆ ವಿಚಾರಣೆ ಪೇಜ್ ನಲ್ಲಿ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಬೆಲೆಗಳ ಪಟ್ಟಿಯ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಬಹುದು.ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆ ವಿಚಾರಣೆ ಪೇಜ್ ನಲ್ಲಿ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಬೆಲೆಗಳ ಪಟ್ಟಿಯ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಬಹುದು.

ಜಾನ್ ಡಿಯರ್ ಮಿನಿ ಟ್ರ್ಯಾಕ್ಟರ್ ಗಳು ಯಾವ ಪ್ರಕಾರದ ಕೃಷಿ ಕೆಲಸ ಮಾಡುವುದರಲ್ಲಿ ವಿಶೇಷ ಕೌಶಲ್ಯ ಹೊಂದಿವೆ?

ಜಾನ್ ಡಿಯರ್ ಮಿನಿ ಟ್ರ್ಯಾಕ್ಟರ್ ಗಳು ಅಥವಾ ಸ್ಪೆಶಾಲ್ಟಿ ಟ್ರ್ಯಾಕ್ಟರ್ ಗಳು 28HP ನಿಂದ 35HP ವರೆಗೆ ಇರುತ್ತವೆ. ಈ ಅಗಲ ಕಡಿಮೆ ಇರುವ ಟ್ರ್ಯಾಕ್ಟರ್ ಗಳನ್ನು ಹಣ್ಣಿನ ತೋಟಗಳಲ್ಲಿ, ಅಂತರ್ ಕೃಷಿಗಾಗಿ ಮತ್ತು ಕೆಸರು ಹದಗೊಳಿಸುವ ಕೆಲಸಗಳಲ್ಲಿ ಉಪಯೋಗಿಸುವುದಕ್ಕಾಗಿ ನಿಪುಣತೆಯಿಂದ ನಿರ್ಮಿಸಿದೆ.

ಟ್ರ್ಯಾಕ್ಟರ್ ವಾರಂಟಿ ಬಗ್ಗೆ ಜಾನ್ ಡಿಯರ್ ನ ನೀತಿ ಏನಿದೆ?

ಜಾನ್ ಡಿಯರ್ ತನ್ನ ಎಲ್ಲ ಟ್ರ್ಯಾಕ್ಟರ್ ಗಳ ಮೇಲೆ ಟ್ರ್ಯಾಕ್ಟರ್ ಖರೀದಿಸಿದ ದಿನಾಂಕದಿಂದ ವ್ಯಾಪಕ 5-ವರ್ಷಗಳವರೆಗೆ ಅಥವಾ 5000 ಗಂಟೆಗಳವರೆಗೆ, ಇವುಗಳಲ್ಲಿ ಯಾವುದು ಮೊದಲು ಸಂಭವಿಸುವುದೋ ಅಲ್ಲಿಯವರೆಗೆ, ವಾರಂಟಿ ನೀಡುತ್ತದೆ.

2WD ಟ್ರ್ಯಾಕ್ಟರ್ ಎಂದರೇನು?

“2WD” ಎಂದರೆ “ಟೂ-ವ್ಹೀಲ್ ಡ್ರೈವ್”. 2WD ಟ್ರ್ಯಾಕ್ಟರ್ ಗಳಲ್ಲಿ, ಎಲ್ಲ ಎಳೆತ ಅಥವಾ ಟ್ರ್ಯಾಕ್ಷನ್ ಹಿಂದಿನ ವ್ಹೀಲ್ ಗಳಿಂದ ಆಗುತ್ತದೆ ಮತ್ತು ಈ ಮೂಲಕ ಅತಿ ಕಡಿಮೆ ಸ್ಥಳಾವಕಾಶದಲ್ಲಿ ತಿರುಗಲು ಅನುಕೂಲ ಮಾಡಿಕೊಡುತ್ತದೆ. 2WD ಟ್ರ್ಯಾಕ್ಟರ್ ಗಳು ಕೃಷಿ ಮತ್ತು ಎಳೆಯುವ ಕೆಲಸಗಳಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುತ್ತವೆ. ಜಾನ್ ಡಿಯರ್ 2WD ಟ್ರ್ಯಾಕ್ಟರ್ ಗಳಲ್ಲಿ ಮೆಂಟೆನನ್ಸ್ ಕಡಿಮೆ ಇರುತ್ತದೆಯಲ್ಲದೇ ದಕ್ಷತೆ ಮತ್ತು ಆರಾಮ ಅಧಿಕವಾಗಿರುತ್ತದೆ.

4WD ಟ್ರ್ಯಾಕ್ಟರ್ ಎಂದರೇನು?

“4WD” ಎಂದರೆ “ಫೋರ್-ವ್ಹೀಲ್ ಡ್ರೈವ್”. 4WD ಟ್ರ್ಯಾಕ್ಟರ್ ಗಳಲ್ಲಿ, ಟ್ರ್ಯಾಕ್ಟರ್ ಅನ್ನು ಮುಂದಕ್ಕೆ ಎಳೆಯುವಲ್ಲಿ ಮುಂದಿನ ಚಕ್ರಗಳು ಅಥವಾ ವ್ಹೀಲ್ ಗಳು ಹಿಂದಿನ ವ್ಹೀಲ್ ಗಳಿಗೆ ಸಹಾಯ ಮಾಡುತ್ತವೆ. ಎಲ್ಲ ನಾಲ್ಕು ವ್ಹೀಲ್ ಗಳಿಗೆ ಟ್ರಾನ್ಸ್ ಮಿಶನ್ ನಿಂದ ಶಕ್ತಿಯ ಪೂರೈಕೆಯಾಗುತ್ತದೆ ಮತ್ತು ಇದರಿಂದಾಗಿ ಜಾರುವುದು ಕಡಿಮೆಯಾಗುತ್ತದೆ ಹಾಗೂ ಎಳೆತ ಹೆಚ್ಚಾಗುತ್ತದೆ. ಶಕ್ತಿ ಮತ್ತು ತಂತ್ರಜ್ಞಾನದಿಂದ ನಿರ್ಮಿಸಲಾದ ಜಾನ್ ಡಿಯರ್ 4WD ಟ್ರ್ಯಾಕ್ಟರ್ ಗಳು ಅಧಿಕ ಕಾರ್ಯಕ್ಷಮತೆ ನೀಡುತ್ತವೆ ಮತ್ತು ಹೆವಿ ಡ್ಯೂಟಿ ಕೆಲಸಗಳಿಗಾಗಿ ಎಂದೇ ವಿಶೇಷವಾಗಿ ತಯಾರಿಸಲಾಗಿವೆ.

ನನ್ನ ಸಮೀಪದಲ್ಲಿ ಜಾನ್ ಡಿಯರ್ ಡೀಲರ್ ಶಿಪ್?

ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಸಮೀಪದ ಜಾನ್ ಡಿಯರ್ ಡೀಲರ್ ಕಂಡುಹಿಡಿಯಿರಿ 

ಜಾನ್ ಡಿಯರ್ ಏಕೆ ಅತ್ಯುತ್ತಮವಾಗಿದೆ?

ಜಾನ್ ಡಿಯರ್ ಭಾರತದ ಅತ್ಯುತ್ತಮವಾದ & ಮುಂಚೂಣಿಯಲ್ಲಿರುವ ಟ್ರ್ಯಾಕ್ಟರ್ ಉತ್ಪಾದಕ ಸಂಸ್ಥೆಯಾಗಿದ್ದು, ಅದರ ಟ್ರ್ಯಾಕ್ಟರ್ HP 28HP ನಿಂದ 75HP ವರೆಗೆ ಇರುತದೆ, ಜಾನ್ ಡಿಯರ್ ವಿವಿಧ ಪ್ರಕಾರದ ಕೃಷಿ ಉಪಕರಣಗಳನ್ನು & ಇತರ ಕೊಡುಗೆಗಳನ್ನು ನೀಡುತ್ತದೆ.

50HP ನಲ್ಲಿ ಯಾವ ಟ್ರ್ಯಾಕ್ಟರ್ ಅತ್ಯುತ್ತಮವಾಗಿದೆ?

ಜಾನ್ ಡಿಯರ್ ಬಳಿ ಸರಿಸಾಟಿಯಿಲ್ಲದ ಶಕ್ತಿ ತಂತ್ರಜ್ಞಾನ ನೀಡುವಂತಹ 50HP+ ಟ್ರ್ಯಾಕ್ಟರ್ ಗಳ ವ್ಯಾಪಕ ಶ್ರೇಣಿ ಇದೆ. ನೋಡಲು ಕ್ಲಿಕ ಮಾಡಿ : 5050D , 5210 ಗೇರ್ ಪ್ರೋ , 5310 , 5405 & 5075

ಟ್ರೆಮ್ 4 ಟ್ರ್ಯಾಕ್ಟರ್ ಎಂದರೇನು?

ಜಾನ್ ಡಿಯರ್ ಟ್ರೆಮ್ 4 ಗೆ ಹೊಂದುವಂತಹ ಟ್ರ್ಯಾಕ್ಟರ್ ಗಳನ್ನು ಒದಗಿಸುತ್ತದೆ, ಇವು ಎಲ್ಲ ಅನ್ವಯಿಸುವ ಸರ್ಕಾರಿ ನಿಯಮಗಳನ್ನು ಪಾಲಿಸುತ್ತವೆ. ಅವು ಶ್ರೇಷ್ಠ ಮಟ್ಟದ ಶಕ್ತಿ & ತಂತ್ರಜ್ಞಾನವನ್ನು ಒದಗಿಸುತ್ತವೆ. ನೋಡಲು ಇಲ್ಲಿ ಕ್ಲಿಕ್ ಮಾಡಿ: 5405 , 5075

ನೀವು ಇದರಲ್ಲಿ ಕೂಡ ಆಸಕ್ತರಾಗಿರಬಹುದು...

ಧಾನ್ಯಗಳ ಸುಗ್ಗಿ