John Deere ಟ್ರ್ಯಾಕ್ಟರ್ 5050 ರೈತರಿಗೆ ಅತ್ಯಂತ ಸೂಕ್ತವಾಗಿದೆ ಏಕೆಂದರೆ ಇದು ಸಾಟಿಯಿಲ್ಲದ ಶಕ್ತಿ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯನ್ನು ಹೊಂದಿದೆ. 2WD ಮತ್ತು 4WD ಎರಡರಲ್ಲೂ ಲಭ್ಯವಿದೆ, ಈ ಕೃಷಿ ಟ್ರ್ಯಾಕ್ಟರ್ ಎಲ್ಲಾ ಹೆವಿ ಡ್ಯೂಟಿ ಕೃಷಿ ಕೆಲಸಗಳಿಗೆ ಸೂಕ್ತವಾಗಿದೆ.
ಇವುಗಳಿಗಾಗಿ ಹುಡುಕಿ-
ಸುಲಭ ಕಾರ್ಯಾಚರಣೆ ಸೈಡ್ ಶಿಫ್ಟ್ ಗೇರ್ ಲೀವರ್ ಗಳ ಜೊತೆಗೆ ಅನುಕೂಲಕರ ಸೀಟ್
ಜಾನ್ ಡಿಯರ್ 5050D ಶಕ್ತಿಯುತವಾದ, ವಿಶ್ವಾಸಾರ್ಹವಾದ ಟ್ರ್ಯಾಕ್ಟರ್ ...ಆಗಿದೆ ಮತ್ತು 50HP ಶ್ರೇಣಿಯಲ್ಲಿ ರೈತರ ಮೊದಲ ಆಯ್ಕೆಯಾಗಿದೆ. ಜಾನ್ ಡಿಯರ್ 5050D ಭಾರತದ ಶಕ್ತಿಶಾಲಿ 50 HP ಟ್ರ್ಯಾಕ್ಟರ್ ಆಗಿದೆ. ಈ ದಕ್ಷವಾದ ಟ್ರ್ಯಾಕ್ಟರ್ ಕೃಷಿ ಉಪಕರಣಗಳಾದ ಉಳುಮೆಗೆ ಕಲ್ಟಿವೇಟರ್, ರೋಟಾವೇಟರ್ ಅಥವಾ MB ನೇಗಿಲು, ಬಿತ್ತನೆಗಾಗಿ ಸೀಡ್ ಡ್ರಿಲ್ ಅಥವಾ ಪ್ಲಾಂಟರ್ಗೆ ಸೂಕ್ತವಾಗಿದೆ ಮತ್ತು ಎಳೆಯುವಿಕೆಗೂ ಸಾಕಾಗುತ್ತದೆ. ಈ ಟ್ರ್ಯಾಕ್ಟರನ್ನು ಅತ್ಯಂತ ವೈವಿಧ್ಯಮಯವಾದ ಟ್ರ್ಯಾಕ್ಟರುಗಳಲ್ಲಿ ಒಂದೆಂದು ಕೂಡ ಕರೆಯಲಾಗುತ್ತದೆ, ಏಕೆಂದರೆ ನೀವು ಅದನ್ನು ಮಣ್ಣು ಹದ ಮಾಡುವುದಕ್ಕಾಗಿ ಬಳಸಿದರೂ, ನೀವು ರೋಟಾವೇಟರ್, ಫುಲ್ ಕೇಜ್ ಅಥವಾ ಹಾಫ್ ಕೇಜ್ ದೊಂದಿಗೆ ಮಣ್ಣು ಹದ ಮಾಡಿದರೂ ಅದರಲ್ಲಿ ಗಮನಾರ್ಹವಾದ ಕಾರ್ಯಕ್ಷಮತೆಯನ್ನು ನೀವು ಗಮನಿಸುತ್ತೀರಿ. 5050D ಟ್ರ್ಯಾಕ್ಟರ್ನ ಎಲ್ಲಾ ವೈಶಿಷ್ಟ್ಯಗಳು, ವಿವರಗಳು, ಗ್ರಾಹಕರ ಲಾಭಗಳು ಮತ್ತು ಗ್ರಾಹಕರ ವಿಮರ್ಶೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯಲು ಮುಂದೆ ಓದಿ. PTO ಕೆಲಸಗಳಿಗೆ ಸಂಬಂಧಿಸಿದಂತೆ, ಇದನ್ನು ಥ್ರೆಶರ್, ಮಲ್ಚರ್, ಸ್ಟ್ರಾ ರೀಪರ್, ಮಡ್ ಮಿಕ್ಸರ್, ಪೋಸ್ಟ್ ಹೋಲ್ ಡಿಗ್ಗರ್ ಮುಂತಾದ 30+ ಕೆಲಸಗಳಿಗೆ ಬಳಸಬಹುದು. ಇದು ರಿವರ್ಸ್ PTO, ಎಕಾನಮಿ PTO ಮತ್ತು ಸ್ಟ್ಯಾಂಡರ್ಡ್ PTO ಆಯ್ಕೆಗಳನ್ನು ಸಹ ಹೊಂದಿದೆ. ನೀವು ರೈತರ ಅಗತ್ಯಕ್ಕೆ ಅನುಗುಣವಾಗಿ ಆಕ್ಸಲ್ನ ಅಗಲವನ್ನು ಸರಿಹೊಂದಿಸಲು ಸಾಧ್ಯವಾಗುವಂತೆ ಸರಿಹೊಂದಿಸಬಹುದಾದ ಫ್ರಂಟ್ ಆಕ್ಸಲ್ ಆಯ್ಕೆಯನ್ನು ಸಹ ನೀಡಲಾಗಿದೆ. ಟ್ರ್ಯಾಕ್ಟರ್ ಖರೀದಿದಾರರು 4WD ಜೊತೆಗೆ ದೊಡ್ಡದಾದ ಮತ್ತು ಅಗಲವಾದ ಮುಂಭಾಗದ ಟೈರ್ಗಳ ಆಯ್ಕೆಯನ್ನು ಸಹ ಪಡೆಯುತ್ತಾರೆ. ದೊಡ್ಡ ಟೈರ್ಗಳು ಕಡಿಮೆ ಜಾರುವಿಕೆ, ಹೆಚ್ಚು ಎಳೆತ ಮತ್ತು ಅಂತಿಮವಾಗಿ ಹೆಚ್ಚಿನ ಉತ್ಪಾದಕತೆಯನ್ನು ನೀಡುವುದರಿಂದ ಇದು ವಿಶೇಷವಾಗಿ ಮಣ್ಣು ಹದ ಮಾಡುವಲ್ಲಿ ಸಹಾಯಕವಾಗಿದೆ. ಇದರ ಜೊತೆಗೆ ಡೀಸೆಲ್ ಬಳಕೆಯೂ ತುಂಬಾ ಕಡಿಮೆಯಿರುತ್ತದೆ. ಈ 50 HP ಟ್ರ್ಯಾಕ್ಟರ್ ಪ್ಲಾನೆಟರಿ ಗೇರ್ ಮತ್ತು ಸ್ಟ್ರೈಟ್ ಆಕ್ಸಲ್ ಅನ್ನು ಸಹ ಹೊಂದಿದ್ದು, ಇದು ಹಿಂಭಾಗದ ಚಕ್ರದ ಮೇಲೆ ಲೋಡ್ ಅನ್ನು ಏಕರೂಪವಾಗಿ ವಿತರಿಸುತ್ತದೆ ಮತ್ತು ಆಕ್ಸಲ್ಗಳು ಮತ್ತು ಟ್ರಾನ್ಸ್ಮಿಷನ್ನ ಬಾಳಿಕೆ ಹೆಚ್ಚಾಗುತ್ತದೆ. ಈ ಟ್ರಾಕ್ಟರ್ 8+4 (8 ಫಾರ್ವರ್ಡ್ ಮತ್ತು 4 ರಿವರ್ಸ್) ಗೇರ್ ಆಯ್ಕೆಗಳೊಂದಿಗೆ ಸಂಪೂರ್ಣ ಸ್ಥಿರವಾದ ಮೆಶ್ ಗೇರ್ಬಾಕ್ಸ್ ಅನ್ನು ಸಹ ಹೊಂದಿದೆ. ಸಂಪೂರ್ಣ ಸ್ಥಿರವಾದ ಮೆಶ್ ಗೇರ್ ಸುಗಮವಾದ ಗೇರ್ ಬದಲಾವಣೆ, ಬೇರಿಂಗ್ ಮೇಲೆ ಕಡಿಮೆ ಘರ್ಷಣೆ ಮತ್ತು ಕಡಿಮೆ ಮೆಂಟೆನನ್ಸ್ ಖಚಿತಪಡಿಸುತ್ತದೆ.
ಸ್ಟ್ರೈಟ್ ಆಕ್ಸೆಲ್ ನೊಂದಿಗಿನ ಪ್ಲಾನೆಟರಿ ಗೇರ್ ಹಿಂದಿನ ಆಕ್ಸೆಲ್ ಭಾರವನ್ನು ಮೂರು ಪಾಯಿಂಟ್ ಗಳ ಮೇಲೆ ವಿತರಿಸುವ ಮೂಲಕ ಪ್ರತ್ಯೇಕ ಗೇರ್ ಗಳು ಮತ್ತು ಶಾಫ್ಟ್ ಗಳ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ
ಕಡಿಮೆ ಸವೆತದೊಂದಿಗೆ ಆಕ್ಸೆಲ್ ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ
JD Link ಜಾನ್ ಡಿಯರ್ ಪರಿಚಯಿಸಿದ ಒಂದು ಹೊಸ ಅಪ್ಲಿಕೇಶನ್ ಆಗಿದ್ದು ನೀವು ಯಾವಾಗ ಬೇಕಾದರೂ ಎಲ್ಲಿಂದ ಬೇಕಾದರೂ ನಿಮ್ಮ ಟ್ರ್ಯಾಕ್ಟರ್ ಚೆನ್ನಾಗಿದೆಯೆ ಎಂದು ಪರಿಶೀಲಿಸಲು ಮತ್ತು ನಿಮ್ಮ ಟ್ರ್ಯಾಕ್ಟರ್ ನೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ.
ಇಂದೇ JDLink App ಡೌನ್ ಲೋಡ್ ಮಾಡಿ - JDLink Mobile App ಡೌನ್ ಲೋಡ್ ಮಾಡಿ
ಉತ್ಪನ್ನದಲ್ಲಿ ಸುಧಾರಣೆ ತರುವುದು ಒಂದು ನಿಂತರವಾದ ಪ್ರಕ್ರಿಯಾಗಿದೆ. ಆದ್ದರಿಂದ, ಮುಂಚಿತವಾಗಿ ಸೂಚನೆ ನೀಡದೇ ಇಲ್ಲಿ ನೀಡಲಾದ ಮಾಹಿತಿಯಲ್ಲಿ ಬದಲಾವಣೆ ಮಾಡಲಾಗುತ್ತದೆ.
ಇಲ್ಲಿ ತೋರಿಸಲಾದ ಪರಿಕರಗಳು ಪ್ರಮಾಣಿತ ಸಲಕರಣೆಗಳ ಭಾಗವಾಗಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ. ಮೇಲಿನ ಲಕ್ಷಣಗಳ ಪೈಕಿ ಕೆಲವು ಲಕ್ಷಣಗಳು ಐಚ್ಛಿಕವಾಗಿರುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಆನ್ ಲೈನ್ ಬ್ರೋಶರ್ ನೋಡಿ ಅಥವಾ ನಿಮ್ಮ ಸಮೀಪದ ಡೀಲರ್ ಅನ್ನು ಸಂಪರ್ಕಿಸಿ.