ಉತ್ಪನ್ನ ಬೆಂಬಲ

John Deere ಇಂಡಿಯಾ John Deere ಸರ್ವಿಸ್ ಬೆಂಬಲ ಬಲಬದಿಯ ಪ್ರೊಫೈಲ್

ನಾವು ನಮ್ಮ ಉತ್ಪನ್ನಗಳನ್ನು ಬೆಂಬಲಿಸುತ್ತೇವೆ

ಮುಂಬರುವ ಅನೇಕ ವರ್ಷಗಳವರೆಗೆ ನಿಮ್ಮ ಉಪಕರಣ ಅತ್ಯಂತ ದಕ್ಷವಾಗಿ ಕೆಲಸ ಮಾಡಲು ನಾವು ಸಮೃದ್ಧವಾದ ಸಂಪನ್ಮೂಲಗಳನ್ನು ಒದಗಿಸುತ್ತೇವೆ. ಅತ್ಯುತ್ತಮ ಉತ್ಪನ್ನ ಬೆಂಬಲ ಮತ್ತು ಸರ್ವೀಸ್‌ಗಳು ನಮ್ಮ ನಂಬಿಕೆಯ ಪರಂಪರೆಯನ್ನು ವ್ಯಾಖ್ಯಾನಿಸುತ್ತದೆ, ಪ್ರತ್ಯೇಕಿಸುತ್ತದೆ ಮತ್ತು ಮುಂದಕ್ಕೆ ಕೊಂಡೊಯ್ಯುತ್ತದೆ.

ಮಾರಾಟ ಪೂರ್ವ, ಮಾರಾಟದ ನಂತರದ ಮತ್ತು ಹಣಕಾಸಿನಂಥ ಎಲ್ಲಾ ಗ್ರಾಹಕರ ಅಗತ್ಯಗಳನ್ನು ಪೂರೈಸಲು ದೇಶಾದ್ಯಂತ ಡೀಲರ್‌ಗಳ ಜಾಲವನ್ನು ಸಜ್ಜುಗೊಳಿಸಲಾಗಿದೆ.

ಡೀಲರ್ ಬೆಂಬಲ ಸಿಬ್ಬಂದಿ –ಅವಶ್ಯಕತೆಯ ಸಮಯದಲ್ಲಿ ನಿಮ್ಮ ವಿಶ್ವಾಸಾರ್ಹ ಸ್ನೇಹಿತ

ಅಧಿಕೃತ John Deere ಅಧಿಕೃತ ಮಾರಾಟಗಾರರು ಚೆನ್ನಾಗಿ ತರಬೇತಿ ಪಡೆದ ಹಾಗೂ ಕೌಶಲ್ಯಯುತ ತಂತ್ರಜ್ಞರ ತಂಡವನ್ನು ಹೊಂದಿದ್ದು ಅವರು ನಮ್ಮ ಗ್ರಾಹಕರಿಗೆ ಮೊದಲ ಬಾರಿಗೇ ಉತ್ತಮವಾದ ಪರಿಹಾರಗಳನ್ನು ಕಂಡುಕೊಳ್ಳಲು ಬದ್ಧರಾಗಿರುತ್ತಾರೆ

ಶಿಫಾರಸು ಮಾಡಿದ ಸರ್ವಿಸ್ ಮಧ್ಯಂತರಗಳಲ್ಲಿ ನಿಮ್ಮ John  Deere ಉಪಕರಣಗಳನ್ನು ನಿಯಮಿತವಾಗಿ ಸರ್ವೀಸಿಂಗ್ ಮಾಡಿಸುವ ಲಾಭಗಳು ಹೀಗಿರುತ್ತವೆ

  • ಎಲ್ಲಾ ಸಮಯದಲ್ಲೂ ಗರಿಷ್ಠ ಕಾರ್ಯನಿರ್ವಹಣೆಯನ್ನು ಖಚಿತಪಡಿಸುತ್ತದೆ
  • ರಕ್ಷಣಾತ್ಮಕ ನಿರ್ವಹಣೆಯಿಂದಾಗಿ ಕಡಿಮೆಯಾದ ದುರಸ್ತಿಯ ವೆಚ್ಚಗಳು
  • ಋತುಮಾನದ ಸಮಯದಲ್ಲಿ ಹಾಳಾಗುವುದನ್ನು ರಿಪೇರಿ ಮಾಡುವ ದುಬಾರಿ ವೆಚ್ಚದಲ್ಲಿ ಕಡಿತ
  • ಸಾಬೀತಾದ John Deere ನೈಜ ಪಾರ್ಟ್‌ಗಳ ಬಳಕೆ
  • ಚೆನ್ನಾಗಿ ನಿರ್ವಹಿಸಲಾದ ಸಲಕರಣೆಗಳಿಗೆ ಹೆಚ್ಚಿನ ಮರು ಮಾರಾಟದ ಮೌಲ್ಯ