ಲ್ಯೂಬ್ರಿಕೆಂಟ್‌ಗಳು

John Deere ಟಾರ್ಕ್ ಗಾರ್ಡ್ ಇಂಜಿನ್ ಆಯಿಲ್

John Deere ಟಾರ್ಕ್ ಗಾರ್ಡ್ ಇಂಜಿನ್ ಆಯಿಲ್

ನಿಮ್ಮ John Deere ಯಂತ್ರಕ್ಕೆ ಪರಿಪೂರ್ಣ ಇಂಜಿನ್ ಆಯಿಲ್

John Deere ಇಂಜಿನ್ ಆಯಿಲ್ ಜೊತೆ ನಿಮ್ಮ ಯಂತ್ರದ ಹೃದಯ ಆರೋಗ್ಯಕರವಾಗಿರುವುದನ್ನು ಖಚಿತಪಡಿಸಿಕೊಳ್ಳಿ

ನಿಮ್ಮ John Deere ಉಪಕರಣಕ್ಕೆ ವಿಶೇಷವಾಗಿ ತಯಾರಿಸಲಾದ ಇಂಜಿನ್ ಆಯಿಲ್; ಧೀರ್ಘಾವಧಿ ಇಂಜಿನ್ ಬಾಳಿಕೆ ಹಾಗೂ ಸುಗಮವಾದ ಕಾರ್ಯಾಚರಣೆಯನ್ನು ಖಚಿತಪಡಿಸುತ್ತದೆ.

ನಿಮ್ಮ ಎಂಜಿನ್‌ಗೆ ಇದು ಹೇಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ?

ಇಂಧನವು ಎಂಜಿನ್ ಒಳಗೆ ಉರಿಯುವಾಗ ಅದು ಶಕ್ತಿಯನ್ನು ಉತ್ಪಾದಿಸುತ್ತಿದ್ದು ಅದು ಹೈಡ್ರಾಲಿಕ್ ಸಿಸ್ಟಮ್ ಮತ್ತು ಟ್ರಾನ್ಸ್‌ಮಿಷನ್‌ಗೆ ರವಾನಿಸಲ್ಪಟ್ಟು, ಏಕಕಾಲದಲ್ಲಿ ಶಾಖವೂ ಉತ್ಪತ್ತಿಯಾಗುತ್ತದೆ. ಎಂಜಿನ್ ಅನೇಕ ವೇಗವಾಗಿ ಚಲಿಸುವ ಘಟಕಗಳನ್ನು ಹೊಂದಿದ್ದು, ಅದು ಘರ್ಷಣೆಯಿಂದಾಗಿ ಸವೆತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಘರ್ಷಣೆ ಮತ್ತು ಶಾಖ ಎರಡನ್ನೂ ಹೊಂದಿಸಲು ಪರಿಣಾಮಕಾರಿಯಾದ ಲೂಬ್ರಿಕೇಷನ್ ವ್ಯವಸ್ಥೆ ಅತ್ಯಗತ್ಯವಾಗಿದೆ.

John Deere ಉಪಕರಣಗಳು ವಿಶೇಷವಾಗಿ ರೂಪಿಸಲಾದ ಎಂಜಿನ್ ಆಯಿಲ್ ಅನ್ನು ಬಳಸುವ ಸುಧಾರಿತ ಲೂಬ್ರಿಕೇಶನ್ ವ್ಯವಸ್ಥೆಯನ್ನು ಹೊಂದಿವೆ.

John Deere ಎಂಜಿನ್ ಆಯಿಲ್ ವಿಶೇಷವಾಗಿ ರೂಪಿಸಲಾದ ಅಡಿಟಿವ್‌ಗಳು ಮತ್ತು ಬೇಸ್ ಆಯಿಲ್‌ಗಳ ಪರಿಪೂರ್ಣ ಮಿಶ್ರಣವಾಗಿದ್ದು ಇದು ಸವೆತವನ್ನು ಕಡಿಮೆ ಮಾಡುತ್ತದೆ, ಹಾನಿಕಾರಕ ಶೇಖರಣೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಶಾಖವನ್ನು ಚದುರಿಸುತ್ತದೆ, ಹಾಗೂ ಇದರ ಪರಿಣಾಮವಾಗಿ ದೀರ್ಘವಾದ, ತೊಂದರೆ-ಮುಕ್ತ ಬಾಳಿಕೆ ಮತ್ತು ಎಂಜಿನ್‌ನ ವರ್ಧಿತ ಕಾರ್ಯಕ್ಷಮತೆಯನ್ನು ನೀಡುತ್ತದೆ.


John Deere HY-ಗಾರ್ಡ್ ಟ್ರಾನ್ಸ್‌ಮಿಶನ್ ಆಯಿಲ್

John Deere HY-ಗಾರ್ಡ್ ಟ್ರಾನ್ಸ್‌ಮಿಶನ್ ಆಯಿಲ್

ನಿಮ್ಮ ಟ್ರಾನ್ಸ್‌ಮಿಶನ್‌ಗೆ ಅತ್ಯುತ್ತಮ ಆಯಿಲ್ ಕೆಲಸ ಮಾಡಲಿ

ಜಾನ್ ಡಿಯರ್ ಹೈ-ಗಾರ್ಡ್ ಟ್ರಾನ್ಸ್‌ಮಿಷನ್ ಆಯಿಲ್ ಬಳಸುವ ಮೂಲಕ ಗಿಯರ್ ಬದಲಾವಣೆಗಳು ಯಾವಾಗಲೂ ನಯವಾಗಿರುವುದನ್ನು ಖಚಿತಪಡಿಸಿಕೊಳ್ಳಿ – ಇವುಗಳನ್ನು ಉತ್ತಮ ಕಾರ್ಯಕ್ಷಮತೆ ಪಡೆಯಲು ಮತ್ತು ನಿಮ್ಮ ಯಂತ್ರದಿಂದ ಹೆಚ್ಚಿದ ಪವರ್ ಟ್ರಾನ್ಸ್‌ಮಿಶನ್ ಪಡೆಯಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ

HY ಗಾರ್ಡ್ ಆಯಿಲ್ ನಿಮ್ಮ ಯಂತ್ರಕ್ಕೆ ಹೇಗೆ ಅತ್ಯುತ್ತಮವಾಗಿದೆ

John Deer ಸಲಕರಣೆಗಳ ಟ್ರಾನ್ಸ್‌ಮಿಶನ್ ವ್ಯವಸ್ಥೆ ಅತ್ಯಾಧುನಿಕ ತಂತ್ರಜ್ಞಾನದ ನಿಖರತೆಗಾಗಿ ತಯಾರಿಸಿದ ಗಿಯರ್ ಟ್ರೇನ್ ಅನ್ನು ಹೊಂದಿದ್ದು ಅದು ಇಂಜಿನ್‌ನಿಂದ ಚಕ್ರಕ್ಕೆ ಹಾಗೂ PTO ಶಾಫ್ಟ್‌ಗೆ ಪವರ್ ಅನ್ನು ವರ್ಗಾಯಿಸಲು ಹೊಂದಿಕೊಂಡು ಕೆಲಸ ಮಾಡುತ್ತದೆ. ಈ ಗಿಯರ್ ಟ್ರೈನ್‌ಗಳನ್ನು ಪರಿಣಾಮಕಾರಿ ಪವರ್ ಪ್ರಸರಣ ಮತ್ತು ಘರ್ಷಣೆ ಮತ್ತು ಶಾಖದಿಂದಾಗಿ ಉಂಟಾಗುವ ಸವೆತವನ್ನು ಕಡೀಮೆ ಮಾಡಲು ಚೆನ್ನಾಗಿ ಲ್ಯೂಬ್ರಿಕೇಟ್ ಮಾಡಬೇಕು.

ಉತ್ತಮವಾದ ಲ್ಯೂಬ್ರಿಕೇಷನ್ ಹಾಗೂ ಗರಿಷ್ಠ ವಾದ ಕಾರ್ಯನಿರ್ವಹಣೆಯ ಉಷ್ಣತೆಗಳು ಅಧಿಕ ಪವರ್ ವರ್ಗಾವಣೆಯ ದಕ್ಷತೆ, ಉತ್ಪಾದಕತೆ ಹಾಗೂ ಗಿಯರ್‌ಗಳು ಹಾಗೂ ಟ್ರಾನ್ಸ್ಮಿಷನ್ ವ್ಯವಸ್ಥೆಯ ಬಿಡಿಭಾಗಗಳ ದೀರ್ಘಕಾಲ ನಿರ್ವಹಣೆ ಮುಕ್ತವಾದ ಬಾಳಿಕೆಯನ್ನು ಒದಗಿಸುತ್ತವೆ.

John Deere ಟ್ರಾನ್ಸ್‌ಮಿಷನ್ ಆಯಿಲ್ ವಿಶೇಷವಾಗಿ ರೂಪಿಸಲಾದ ಲ್ಯೂಬ್-ಆಯಿಲ್ ಆಗಿದ್ದು, ಇದು ನಿಮ್ಮ John Deere ಉಪಕರಣದ ಎಲ್ಲಾ ಅನೇಕ-ಕಾರ್ಯಗಳ ಕಾರ್ಯಕ್ಷಮತೆಯ ಅವಶ್ಯಕತೆಗಳನ್ನು ಪೂರೈಸುತ್ತದೆ. ಇದರ ಅತ್ಯುತ್ತಮವಾದ ಘರ್ಷಣೆ ನಿರೋಧಕ ಮತ್ತು ವೆಲ್ಡ್ ನಿರೋಧಕ ಏಜೆಂಟ್‌ಗಳು John Deere ಉಪಕರಣಗಳಲ್ಲಿ ಬಳಸುವ ಹೆಚ್ಚಿನ ಟಾರ್ಕ್ ಪವರ್ ಟ್ರೇನ್‌ಗಳಿಗೆ ಸೂಕ್ತವಾಗಿದೆ.


John Deere ಗ್ರೀಸ್ ಕಾರ್ಡ್ ಪ್ರೀಮಿಯಂ

John Deere ಗ್ರೀಸ್ ಕಾರ್ಡ್ ಪ್ರೀಮಿಯಂ

ನಿಮ್ಮ ಲ್ಯೂಬ್ರಿಕೇಷನ್ ಅಗತ್ಯಗಳನ್ನು ಪೂರೈಸಲು ವಿಶೇಷವಾಗಿ ರೂಪಿಸಲಾದ ಗ್ರೀಸ್

- ಜರ್ಕ್‌ಗಳಾದಾಗ ಅತ್ಯುತ್ತಮ ಯಾಂತ್ರಿಕ ಸ್ಥಿರತೆ
– ಜಲ ನಿರೋಧಕ
- ತುಕ್ಕು ನಿರೋಧಕ, –ಸವೆತ ನಿರೋಧಕ ಮತ್ತು ಅಧಿಕವಾದ ಆಕ್ಸಿಡೇಶನ್ ಸ್ಥಿರತೆ