ಟೈಪ್ – ಜಾನ್ ಡಿಯರ್ 3029H, 57 HP (42 kW), 2100 RPM, 3 ಸಿಲಿಂಡರ್ ಗಳು, ಟರ್ಬೊ ಚಾರ್ಜ್ಡ್, HPCR ಫ್ಯೂಲ್ ಇಂಜೆಕ್ಷನ್ ಸಿಸ್ಟಮ್, ಓವರ್ ಫ್ಲೋ ರೆಸರ್ವಾಯರ್ ನೊಂದಿಗೆ ತಂಪಾಗುವ ಕೂಲಂಟ್
ಏರ್ ಫಿಲ್ಟರ್ – ಡ್ರೈ ಟೈಪ್, ಡುಯೆಲ್ ಎಲಿಮೆಂಟ್
CleanPro ™:
1. ಅಧಿಕ ಕೂಲಿಂಗ್ ಸಾಮರ್ಥ್ಯ:
ರಿವರ್ಸಿಬಲ್ ಫ್ಯಾನ್ ಗಾಳಿಯನ್ನು ರಿವರ್ಸ್ ಮಾಡುವ ಮೂಲಕ ಎಂಜಿನ್ ಕಾರ್ಯನಿರ್ವಹಣೆಯ ತಾಪಮಾನವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಲು ಸಹಾಯ ಮಾಡುತ್ತದೆ, ವಿಶೇಷವಾಗಿ ಅತಿಯಾದ ಡೆಬ್ರಿ ಅಥವಾ ಭಗ್ನಾವಶೇಷಗಳನ್ನು ಸ್ವಚ್ಛಗೊಳಿಸುವ ಅಪ್ಲಿಕೇಶನ್ ಗಳಲ್ಲಿ ಅಥವಾ ಅಧಿಕ-ತಾಪಮಾನವಿರುವ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವಾಗ ಸಹಕಾರಿಯಾಗಿರುತ್ತದೆ. ಇದರಿಂದ ಅತಿಯಾಗಿ ಹೀಟ್ ಆಗುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ ಮತ್ತು ದಕ್ಷ ಕೂಲಿಂಗ್ ಅನ್ನು ಖಚಿತಪಡಿಸುತ್ತದೆ.
2. ಡೌನ್ ಟೈಮ್ ಅಥವಾ ಬಳಕೆಯಲ್ಲಿರದ ಸಮಯ:
ರಿವರ್ಸಿಬಲ್ ಫ್ಯಾನ್ ರೇಡಿಯೇಟರ್ ಸ್ಕ್ರೀನ್ ಮತ್ತು ಫ್ರಂಟ್ ಗ್ರಿಲ್ ನಿಂದ ಭಗ್ನಾವಶೇಷಗಳನ್ನು ಸ್ವಚ್ಛಗೊಳಿಸುವ ಮೂಲಕ ಕೈಯಿಂದ ಸ್ವಚ್ಛಗೊಳಿಸುವ ಅಗತ್ಯವನ್ನು ಕಡಿಮೆಯಾಗಿಸುತ್ತದೆ ಮತ್ತು ಭಗ್ನಾವಶೇಷಗಳು ಸಿಕ್ಕಿಕೊಳ್ಳುವುದರಿಂದ ಎಂಜಿನ್ ಅಧಿಕ ಹೀಟ್ ಆಗುವ ಅಥವಾ ಡೌನ್ ಟೈಮ್ ಅಪಾಯವನ್ನು ಕಡಿಮೆ ಮಾಡುತ್ತದೆ.
3. ಸುಧಾರಿತ ಉತ್ಪಾದಕತೆ:
ರಿವರ್ಸಿಬಲ್ ಫ್ಯಾನ್ ಸಿಸ್ಟಮ್ ನಿಂದಾಗಿ ಅಧಿಕ ಹೀಟಿಂಗ್ ಮತ್ತು ಭಗ್ನಾವಶೇಷ ಹೆಚ್ಚಾಗುವುದರಿಂದ ಉಂಟಾಗುವ ಅಡ್ಡಿಗಳನ್ನು ತಡೆಯಲು ಸಹಾಯವಾಗುತ್ತದೆ, ಈ ಮೂಲಕ ಗ್ರಾಹಕರು ಹೆಚ್ಚಿನ ಕಾರ್ಯನಿರ್ವಹಣೆಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಅನುಭವಿಸಬಹುದು.
4. ವಿಸ್ತರಿಸಿದ ಎಂಜಿನ್ ಬಾಳಿಕೆ:
ರಿವರ್ಸಿಬಲ್ ಫ್ಯಾನ್ ಉತ್ತಮ ಕಾರ್ಯನಿರ್ವಹಣೆಯ ತಾಪಮಾನಗಳನ್ನು ಕಾಪಾಡುವ ಮೂಲಕ ಮತ್ತು ಅತಿಯಾದ ಹೀಟಿಂಗ್ ತಡೆಗಟ್ಟುವ ಮೂಲಕ ದೀರ್ಘಾವಧಿಯ ಎಂಜಿನ್ ಬಾಳಿಕೆ ನೀಡುತ್ತದೆ ಮತ್ತು ಎಂಜಿನ್ ಕಂಪೋನೆಂಟ್ ಗಳ ಸವೆತ ಮತ್ತು ಹಾನಿಯನ್ನು ಕಡಿಮೆ ಮಾಡುತ್ತದೆ.
5.ರಿವರ್ಸಿಬಲ್ ಫ್ಯಾನ್:
ಹುಡ್ ಸ್ಕ್ರೀನ್ ಮತ್ತು ರೇಡಿಯೇಟರ್ ಸ್ವಚ್ಛಗೊಳಿಸುವುದು