ಒಂದು ದೊಡ್ಡ ಹೊಲದಲ್ಲಿ ಜನರು ಅನೇಕ ರೀತಿಯ John Deere ಸಲಕರಣೆಗಳ ಮಧ್ಯೆ ನಡೆಯುತ್ತಿದ್ದಾರೆ.

ಜೀವನದ
ನಾಗಾಲೋಟದಿಂದ ಸಾಗುವಂತೆ ಮಾಡಲು ನಾವು ಓಡುತ್ತೇವೆ

ನಾವು ಬೇರೆಯವರಿಗಿಂತ ಭಿನ್ನವಾಗಿ ನಡೆಯುತ್ತೇವೆ

ನಾವು ಜೀವನಕ್ಕೆ ಅಗತ್ಯವಾದ ವ್ಯವಹಾರವನ್ನು ನಡೆಸುತ್ತೇವೆ. ನಮ್ಮನ್ನು ನಂಬುವ ಜನರಿಗಾಗಿ ಮತ್ತು ನಮ್ಮನ್ನು ಪೋಷಿಸುವ ಗ್ರಹಕ್ಕಾಗಿ ವ್ಯಾಪಾರ ಮಾಡುವ ನಾವು, ನಾವು ಬುದ್ಧಿಮತ್ತೆಯಿರುವ ಸಂಪರ್ಕಿತ ಯಂತ್ರಗಳನ್ನು ತಯಾರಿಸುತ್ತೇವೆ, ಅದು ಅನೇಕ ಜೀವಗಳು ನಾಗಾಲೋಟದಲ್ಲಿ ಸಾಗಲು ಸಹಾಯ ಮಾಡುತ್ತದೆ.


John Deere ಗ್ರಾಹಕರು ನಮ್ಮೆಲ್ಲ ಕೆಲಸಗಳ ಕೇಂದ್ರಬಿಂದುವಾಗಿದ್ದಾರೆ.

ಅವರನ್ನು ಮತ್ತು ಅವರ ವ್ಯವಹಾರಗಳನ್ನು ಇತರರಿಗಿಂತ ಉತ್ತಮವಾಗಿ ತಿಳಿದುಕೊಳ್ಳಲು ನಾವು 180 ವರ್ಷಗಳಿಗೂ ಹೆಚ್ಚಿನ ಅನುಭವ ಮತ್ತು ಟೆರಾಬೈಟ್‌ಗಳಷ್ಟು ನಿಖರ ಡೇಟಾವನ್ನು ಅವಲಂಬಿಸುತ್ತೇವೆ. ನಮ್ಮ ಸುಲಭವಾಗಿ ಬಳಸಬಹುದಾದ ತಂತ್ರಜ್ಞಾನವು ಅವರು ಕ್ಷೇತ್ರದಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ಬ್ಯಾಲೆನ್ಸ್ ಶೀಟ್‌ನಲ್ಲಿ ನೋಡುವ ಫಲಿತಾಂಶಗಳನ್ನು ನೀಡಲು ಸಹಾಯ ಮಾಡುತ್ತದೆ. ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡು, ತಮ್ಮ ಸಲಕರಣೆಗಳ ಬಾಳಿಕೆಯುದ್ದಕ್ಕೂ ವಿಶ್ವದರ್ಜೆಯ ಬೆಂಬಲವನ್ನು ಒದಗಿಸುವ ಮೂಲಕ ಭಾಗಗಳು, ಸೇವೆಗಳು ಮತ್ತು ಕಾರ್ಯಕ್ಷಮತೆಯ ನವೀಕರಣಗಳಿಗೆ ನಾವು ತಡೆರಹಿತವಾಗಿ ಕೈಗೆಟಕುವುದನ್ನು ಖಚಿತಪಡಿಸುತ್ತೇವೆ.

ಮತ್ತು ನಾವು ಜೀವನ ನಾಗಾಲೋಟದಲ್ಲಿ ಮುಂದೆ ಸಾಗಲು ಸಹಾಯ ಮಾಡಲೆಂದೇ ಇದ್ದೇವೆ ಎಂಬುದನ್ನು ನಾವು ಎಂದಿಗೂ ಮರೆಯುವುದಿಲ್ಲ.


ಸುಸ್ಥಿರತೆ

ಮುಂಬರುವ ಪೀಳಿಗೆಗಾಗಿ ಪ್ರಪಂಚದಾದ್ಯಂತದ ನಮ್ಮ ಗ್ರಾಹಕರು ಮತ್ತು ಸಮುದಾಯಗಳ ಜೀವನೋಪಾಯವನ್ನು ಉಳಿಸಿಕೊಳ್ಳುವ ಪರಿಹಾರಗಳನ್ನು ರಚಿಸಲು ನಾವು ನಡೆಯುತ್ತೇವೆ.

ಸುಸ್ಥಿರತೆಯ ಗುರಿಗಳು

ನಾವೀನ್ಯತೆ ಮತ್ತು ತಂತ್ರಜ್ಞಾನ

ನಾವು ಹೊಸ ಆಲೋಚನಾ ವಿಧಾನಗಳನ್ನು ರಚಿಸಲು ಮತ್ತು ಕೆಲಸ ಮಾಡುವ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಲು ನಡೆಯುತ್ತೇವೆ. ಇದು ಯಥಾಸ್ಥಿತಿಯನ್ನು ಭಂಗಗೊಳಿಸಲಲ್ಲದೇ ತಮ್ಮ ಕೆಲಸಗಳನ್ನು ಸುಲಭ ಮತ್ತು ಹೆಚ್ಚು ಲಾಭದಾಯಕ ರೀತಿಯಲ್ಲಿ ಮುಂದಕ್ಕೆ ಸಾಗಿಸುವ ಗ್ರಾಹಕ-ಕೇಂದ್ರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲಾಗಿದೆ.

ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕೆ ಭೇಟಿ ನೀಡಿ

ಸಮುದಾಯ

ನಮ್ಮ ಗ್ರಾಹಕರಿಗೆ ನಾವು ತೋರುವ ನಿಷ್ಠೆಯನ್ನು ಸದಾ ಹಾಗೆಯೇ ಉಳಿಸಿಕೊಂಡು ಹೋಗುವ ನಮ್ಮ ಉತ್ಸಾಹ ದಿನೇ ದಿನೇ ಇಮ್ಮಡಿಸುತ್ತದೆ. ಆ ರೀತಿಯ ಗೌರವವನ್ನು ಗಳಿಸಿಕೊಳ್ಳಬೇಕು. ಚೆನ್ನಾಗಿ ಮಾಡಿದ ಕೆಲಸದ ಬಗೆಗಿನ ಹೆಮ್ಮೆಯ ಜೊತೆ, ನಾವು ನಮ್ಮ ಸಮುದಾಯಗಳಲ್ಲಿ ಮತ್ತು ಪ್ರಪಂಚದಾದ್ಯಂತ ಪ್ರಬಲವಾದ ಪರಿಣಾಮ ಬೀರುತ್ತೇವೆ.

ನಮ್ಮ ಯುಎಸ್ ವೆಬ್‌ಸೈಟ್‌ನಲ್ಲಿ ಪೌರತ್ವದ ಶಕ್ತಿಯ ಬಗ್ಗೆ ಓದಿ

ನಾಯಕತ್ವ

ಮಹಾನ್ ನಾಯಕರು ಮಹಾನ್ ಕಂಪನಿಗಳಿಗೆ ಕಾರಣೀಭೂತರಾಗುತ್ತಾರೆ, ಮತ್ತು ನಮ್ಮ ಸಿಇಒ ಜಾನ್ ಮೇ ಸಮಗ್ರತೆ, ಗುಣಮಟ್ಟ, ಬದ್ಧತೆ ಮತ್ತು ನಾವೀನ್ಯತೆಗಳೂ ಸೇರಿದಂತೆ ಅವರ ಪೂರ್ವಾಧಿಕಾರಿಗಳ ಬಲವಾದ ಮಾರ್ಗದರ್ಶಿ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದಾರೆ.

ನಮ್ಮ ನಾಯಕರನ್ನು ಭೇಟಿ ಮಾಡಿ

ನಮ್ಮ ಬ್ರಾಂಡ್‌ಗಳ ಕುಟುಂಬ

Deere ಕಂಪನಿ ತಮ್ಮ ಯಂತ್ರಗಳ ಬಾಳಿಕೆಯುದ್ದಕ್ಕೂ ವಿವಿಧ ಉತ್ಪಾದನಾ ವ್ಯವಸ್ಥೆಗಳಲ್ಲಿ ನಮ್ಮ ಗ್ರಾಹಕರಿಗೆ ನವೀನ ಪರಿಹಾರಗಳ ಪೂರ್ಣ ಶ್ರೇಣಿಯನ್ನು ಒದಗಿಸಲು 25ಕ್ಕೂ ಹೆಚ್ಚು ಬ್ರಾಂಡ್‌ಗಳ ಪೋರ್ಟ್‌ಫೋಲಿಯೊವನ್ನು ನೀಡುತ್ತದೆ. ಈ ಬ್ರಾಂಡ್‌ಗಳ ಮಾದರಿಯನ್ನು ಇಲ್ಲಿ ತೋರಿಸಲಾಗಿದೆ.

Wirgen ಲಾಂಛನ

Wirtgen

Wirtgen, Vögele, Hamm, Kleemannಗಳ ಸಂಘಟನೆಯಾದ Wirtgen Group ರಸ್ತೆ ನಿರ್ಮಾಣ ಮತ್ತು ಪುನರ್ವಸತಿ, ಗಣಿಗಾರಿಕೆ ಮತ್ತು ಸಂಸ್ಕರಣಾ ಖನಿಜಗಳು ಅಥವಾ ಮರುಬಳಕೆ ವಸ್ತುಗಳ ಸ್ಥಾವರಗಳು ಮತ್ತು ಡಾಂಬರು ಉತ್ಪಾದನೆಗಾಗಿ ಗ್ರಾಹಕರಿಗೆ ಸಾಗಿಸಬಹುದಾದ ಯಂತ್ರದ ಪರಿಹಾರಗಳನ್ನು ನೀಡುತ್ತದೆ. ಐದು ಬ್ರಾಂಡ್‌ಗಳನ್ನು ಒಟ್ಟಿಗೆ ಬಳಸಿದಾಗ, ಅವು ಸಂಸ್ಕರಣೆ, ಮಿಶ್ರಣ, ನೆಲಹಾಸು, ಕಾಂಪ್ಯಾಕ್ಟಿಂಗ್ ಮತ್ತು ಪುನರ್ವಸತಿಗಳನ್ನು ಒಳಗೊಂಡು ಇಡೀ ರಸ್ತೆ ನಿರ್ಮಾಣ ಚಕ್ರವನ್ನು ಒಳಗೊಳ್ಳುತ್ತವೆ.

Hagie ಲಾಂಛನ

Hagie

Hagie ಯದು ನಾವೀನ್ಯತೆ ಮತ್ತು ಅಂತಃಪ್ರಜ್ಞೆಯ ಕಥೆಯಾಗಿದೆ.. ರೇ ಹ್ಯಾಗಿ ಅದಕ್ಷತೆಯನ್ನು ಕಡಿಮೆ ಮಾಡುವ ಮತ್ತು ಉತ್ತಮ ಮಾರ್ಗವನ್ನು ಕಂಡುಹಿಡಿಯಲು ಪ್ರೇರಿತರಾಗಿದ್ದರು ಹಾಗೂ ಇದು ಅವರು ಬೆಳೆಗಳಿಗೆ ದ್ರಾವಣಗಳನ್ನು ಸಿಂಪಡಿಸುವತ್ತ ಗಮನ ಹರಿಸಲು ಕಾರಣವಾಯಿತು. 1947ರಲ್ಲಿ, ಅವರ ಸಮಸ್ಯೆ-ಪರಿಹರಿಸುವ ಉತ್ಸಾಹವು ವಿಶ್ವ’ದ ಮೊದಲ ಸ್ವಯಂ ಚಾಲಿತ ಸ್ಪ್ರೇಯರ್ ಉತ್ಪಾದನೆಗೆ ಕಾರಣವಾಯಿತು. ಈ ಕ್ರಾಂತಿಕಾರಿ ಪ್ರಗತಿಯು ಮಾರಾಟ, ಕಾರ್ಖಾನೆ ವಿಸ್ತರಣೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು  ಹೆಚ್ಚಿಸಿದೆ ಹಾಗೂ Hagie ಅಧಿಕ ಕ್ಲಿಯರೆನ್ಸ್ ಸ್ಪ್ರೇಯರ್‌ಗಳು ಮತ್ತು ಡಿಟಾಸ್ಸೆಲರ್‌ಗಳನ್ನು ಉತ್ಪಾದಿಸುವುದನ್ನು ಮುಂದುವರಿಸಿದೆ.

PLA ಲಾಂಛನ

PLA

ಸ್ಥಾಪಕರಾದ ಜುವಾನ್ ಕಾರ್ಲೋಸ್ ಪ್ಲಾ ತನ್ನ ಪ್ರಸಿದ್ಧ ಉತ್ಪನ್ನವಾದ ಹೈ-ಚಾಸಿಸ್ ಸ್ಪ್ರೇಯರ್ ಅನ್ನು ತಯಾರಿಸುವ ಮೊದಲು ಅರ್ಜೆಂಟೀನಾ’ದ ಹಡಗಿನ ಬಂದರುಗಳಲ್ಲಿ ಮೊದಲ ಗ್ರೇನ್ ಎಲಿವೇಟರ್ ಗಳನ್ನು ಸ್ಥಾಪಿಸಿದರು. 1978ರ ಹೊತ್ತಿಗೆ, ಪಿಎಲ್ಎ ಲ್ಯಾಟಿನ್ ಅಮೆರಿಕಾ’ದ ಮೊದಲ ಸ್ವಯಂ ಚಾಲಿತ ಸ್ಪ್ರೇಯರ್ ಅನ್ನು, ನಂತರ ಆಟೋ-ಟ್ರೈಲರ್ ಸಿಸ್ಟಮ್ (1993) ಮತ್ತು ವಿಶ್ವ’ದ ಮೊದಲ “ಸ್ವಯಂಚಾಲಿತ ಪೈಲಟ್” ಸ್ಪ್ರೇಯರ್ (1999) ಅನ್ನು ತಯಾರಿಸಿತು. PLA ಪ್ಲಾಂಟರ್‌ಗಳು ಮತ್ತು ಸ್ಪ್ರೇಯರ್‌ಗಳನ್ನು ತಯಾರಿಸುತ್ತದೆ.

Mazzotti ಲಾಂಛನ

Mazzotti

ಮಜೊಟ್ಟಿ ಕುಟುಂಬದಿಂದ ಸ್ಥಾಪಿಸಲಾದ ಈ ಕಂಪನಿ’ ಸ್ವಯಂ ಚಾಲಿತ ಕೃಷಿ ಉಪಕರಣಗಳ ನಿರ್ಮಾಣದಲ್ಲಿ ಸುಮಾರು 75 ವರ್ಷಗಳಷ್ಟು ಅನುಭವವನ್ನು ಹೊಂದಿದೆ. ಮೂಲತಃ ರೈತರಾದ ಈ ಕುಟುಂಬವು ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಬೇಡಿಕೆಯನ್ನು ಪೂರೈಸುವ ನಿರಂತರ ಅಭಿವೃದ್ಧಿಯಲ್ಲಿ ಉತ್ಕಟಾಸಕ್ತಿಯಿರುವ ಆವಿಷ್ಕಾರಕರು ಮತ್ತು ದೂರದೃಷ್ಟಿಯುಳ್ಳವರೆಂದು ಖ್ಯಾತಿ ಗಳಿಸಿದೆ. Mazzotti ಇಟಲಿಯಲ್ಲಿ ಸ್ವಯಂ ಚಾಲಿತ ಸ್ಪ್ರೇಯರ್‌ಗಳನ್ನು ತಯಾರಿಸುತ್ತದೆ.

Monosem ಲಾಂಛನ

Monosem

75 ವರ್ಷಗಳಿಗೂ ಹೆಚ್ಚು ಕಾಲ Monosem ವಿಶ್ವದಾದ್ಯಂತ 80ಕ್ಕೂ ಹೆಚ್ಚು ದೇಶಗಳಿಗೆ ಗುಣಮಟ್ಟದ ಪ್ರಿಸಿಷನ್ ವ್ಯಾಕ್ಯೂಮ್ ಪ್ಲಾಂಟರ್‌ಗಳು ಮತ್ತು ಕಲ್ಟಿವೇಟರ್‌ಗಳನ್ನು ನೀಡುತ್ತಿದೆ   . 1945 ರಿಂದ, Monosem’ನ ಇತಿಹಾಸವು ನಿರಂತರ ಉತ್ಪನ್ನ ಆವಿಷ್ಕಾರಗಳಿಂದ ಸಮೃದ್ಧವಾಗಿದೆ. ಫ್ರೆಂಚ್ ಪ್ರಿಸಿಷನ್ ಪ್ಲಾಂಟರ್ ಮಾರುಕಟ್ಟೆಯ ನಾಯಕನೆಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟ Monosem ತನ್ನ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದು ಈಗ ಅದರ ಉತ್ಪಾದನೆಯ ಸುಮಾರು 70 ಪ್ರತಿಶತವನ್ನು ರಫ್ತು ಮಾಡಲಾಗುತ್ತಿದೆ.  ಕಾನ್ಸಾಸ್ ಸಿಟಿ, ಕಾನ್ಸಾಸ್ ಶಾಖೆಯು ಉತ್ತರ ಅಮೆರಿಕಾದ ವಿಶೇಷ ಬೆಳೆ ಮಾರುಕಟ್ಟೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ.

A&I Products ಲಾಂಛನ

A&I Products

1980ರಿಂದ, A&I Products ಕೃಷಿ, ಹುಲ್ಲುಹಾಸು ಮತ್ತು ಕೈಗಾರಿಕಾ ಸಲಕರಣೆಗಳ ಮಾರುಕಟ್ಟೆಗಳಿಗೆ ಮಾರುಕಟ್ಟೆಯ ನಂತರದ ಬದಲಿ ಭಾಗಗಳ ಪ್ರಮುಖ ತಯಾರಕರು ಮತ್ತು ಸಗಟು ವಿತರಕರಾಗಿದೆ. ಸಣ್ಣ ಯಂತ್ರದ ಅಂಗಡಿ ಮತ್ತು ದುರಸ್ತಿ ಸೌಲಭ್ಯದಿಂದ ಪ್ರಾರಂಭಗೊಂಡ A&I Products, ಸಾಮಾನ್ಯವಾಗಿ ದುರಸ್ತಿಯ ಅಗತ್ಯವಿದೆಯೆಂದು ಗುರುತಿಸಲಾದ ಭಾಗಗಳನ್ನು ಬದಲಾಯಿಸಲು ಹೊಸ ಭಾಗಗಳನ್ನು ತಯಾರಿಸುವ ಮೂಲಕ ನಾಂದಿ ಹಾಡಿತು. ಈಗ A&I Products ಹಲವಾರು ಅಪ್ಲಿಕೇಶನ್‌ಗಳಲ್ಲಿ 160,000 ಕ್ಕೂ ಹೆಚ್ಚು ಪಾರ್ಟ್ ಸಂಖ್ಯೆಗಳನ್ನು ನೀಡುತ್ತದೆ.

Blue River Technology ಲಾಂಛನ

Blue River Technology

Blue River Technologyಯನ್ನು ತಗ್ಗಿಸುವಾಗ ಗರಿಷ್ಠಗೊಳಿಸುವ ಒಂದು ಸರಳ ಪರಿಕಲ್ಪನೆಯ– ಮೇಲೆ ನಿರ್ಮಿಸಲಾಗಿದೆ. Blue River ಇತ್ತೀಚಿನ ಆವಿಷ್ಕಾರಗಳು ಮತ್ತು ತಂತ್ರಜ್ಞಾನವನ್ನು ಸಂಯೋಜಿಸಿ ಕೃಷಿ ಉತ್ಪಾದನೆಯನ್ನು ಸುಧಾರಿಸುತ್ತದೆ ಮತ್ತು ನಮ್ಮ ಗ್ರಹದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ. Blue River John  Deere 400 ಮತ್ತು 600 ಸೀರೀಸ್ ಸ್ಪ್ರೇಯರ್‌ಗಳಲ್ಲಿ ಲಭ್ಯವಿರುವ ಸೀ & ಸ್ಪ್ರೇ ಸೆಲೆಕ್ಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಸೀ & ಸ್ಪ್ರೇ ಸುಸ್ಥಿರ ರೀತಿಯಲ್ಲಿ ಲಾಭದಾಯಕತೆಯನ್ನು ಹೆಚ್ಚಿಸುತ್ತ ಗ್ರಾಹಕರ ಸಮಯ ಮತ್ತು ಹಣವನ್ನು ಉಳಿಸಲು ಕಂಪ್ಯೂಟರ್ ದೃಷ್ಟಿ, ಯಂತ್ರದ ಕಲಿಕೆ ಮತ್ತು ರೊಬೊಟಿಕ್ಸ್ ಅನ್ನು ಸಂಯೋಜಿಸುತ್ತದೆ.

Harvest Profit ಲಾಂಛನ

Harvest Profit

2015ರಲ್ಲಿ ಸ್ಥಾಪಿಸಲಾದ Harvest Profit ಉತ್ತರ ಡಕೋಟಾ ಕೃಷಿ ಪ್ರದೇಶದ ಹೃದಯಭಾಗದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ತಂಡವನ್ನು ಒಳಗೊಂಡಿದೆ. ಕೃಷಿಯ ಆರ್ಥಿಕ ಭಾಗಕ್ಕೆ ಹೆಚ್ಚಿನ ಗೋಚರತೆಯನ್ನು ನೀಡುವುದು ಕಂಪನಿ’ಯ ಧ್ಯೇಯವಾಗಿದೆ. Harvest Profit ಕೃಷಿ ವೆಚ್ಚಗಳು, ಲಾಭಗಳು, ಧಾನ್ಯ ಮಾರುಕಟ್ಟೆ ಸ್ಥಾನಗಳು ಮತ್ತು ದಾಸ್ತಾನುಗಳನ್ನು ಪತ್ತೆಹಚ್ಚುವುದನ್ನು ರೈತರಿಗೆ ಸುಲಭವಾಗುವಂತೆ ಮಾಡುವ ಸಾಫ್ಟ್‌ವೇರ್ ಉಪಕರಣಗಳ ಸಮೂಹವನ್ನು ಸ್ಥಾಪಿಸಿದೆ. ವರ್ಷವಿಡೀ ತಮ್ಮ ಹೊಲಗಳನ್ನು ವ್ಯವಹಾರವಾಗಿ ಪರಿಗಣಿಸುವ ಬುದ್ಧಿವಂತ ರೈತರಿಗಾಗಿನ” – ಸಾಫ್ಟ್‌ವೇರ್ ಎಂದು ಇದ’ನ್ನು ಕರೆಯಲಾಗುತ್ತದೆ“.

Bear Flag Robotics ಲಾಂಛನ

Bear Flag Robotics

Bear Flag Robotics' ನ ಧ್ಯೇಯವೆಂದರೆ ಜಾಗತಿಕ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಜೊತೆ ಯಂತ್ರಗಳ ಯಾಂತ್ರೀಕರಣದ ಮೂಲಕ ಆಹಾರ ಬೆಳೆಸುವ ವೆಚ್ಚವನ್ನು ಕಡಿಮೆ ಮಾಡುವುದಾಗಿದೆ. ಕಂಪನಿಯು ಕೃಷಿ ಟ್ರಾಕ್ಟರುಗಳಿಗಾಗಿ ಸ್ವಾಯತ್ತ ತಂತ್ರಜ್ಞಾನವನ್ನು ತಯಾರಿಸುತ್ತಿದ್ದು,   ಇದು ಹೊಲಗಳಲ್ಲಿ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸುತ್ತದೆ. Bear Flag Robotics ಅನ್ನು ಸಿಲಿಕಾನ್ ವ್ಯಾಲಿಯಲ್ಲಿ ಸಹ-ಸಂಸ್ಥಾಪಕರಾದ ಆಬ್ರೆ ಡೊನೆಲನ್ ಮತ್ತು ಇಗಿನೊ ಕ್ಯಾಫಿರೊ 2017ರಲ್ಲಿ ಪ್ರಾರಂಭಿಸಿದರು. John Deere ಜೊತೆಗೆ ಡೊನೆಲನ್ ಮತ್ತು ಕ್ಯಾಫಿರೊ ಅವರ ಸಂಬಂಧವು 2019 ರಲ್ಲಿ John Deere ಸ್ಟಾರ್ಟ್ಅಪ್ ಸಹಯೋಗ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು ಮತ್ತು ಇದರ ಸ್ವಾಧೀನವನ್ನು 2021ರಲ್ಲಿ ಘೋಷಿಸಲಾಯಿತು.

Kriesel Electric ಲಾಂಛನ

Kriesel Electric

2014ರಿಂದ, Kreisel ಇಮ್ಮರ್ಶನ್-ಕೂಲ್ಡ್ ಎಲೆಕ್ಟ್ರಿಕ್ ಬ್ಯಾಟರಿ ಮಾಡ್ಯೂಲ್‌ಗಳು ಮತ್ತು ಪ್ಯಾಕ್‌ಗಳ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸಿದ ಪ್ರಮುಖ ಆವಿಷ್ಕಾರಕವಾಗಿದೆ. ಕಂಪನಿಯು ವ್ಯತ್ಯಾಸವಿರುವ ಬ್ಯಾಟರಿ ತಂತ್ರಜ್ಞಾನ ಮತ್ತು ಬ್ಯಾಟರಿ-ಬಫರ್ಡ್ ಚಾರ್ಜಿಂಗ್ ಮೂಲಸೌಕರ್ಯ ಕೊಡುಗೆಯನ್ನು ಹೊಂದಿದೆ ಮತ್ತು ಪ್ರಸ್ತುತ ವಾಣಿಜ್ಯ ವಾಹನಗಳು, ಆಫ್-ಹೈವೇ ವಾಹನಗಳು, ಮರೀನ್, ಇ-ಮೋಟಾರ್ ಸ್ಪೋರ್ಟ್ಸ್ ಮತ್ತು ಇತರ ಉನ್ನತ-ಕಾರ್ಯಕ್ಷಮತೆಯ ಅಪ್ಲಿಕೇಶನ್‌ಗಳೂ ಸೇರಿದಂತೆ ಅನೇಕ ಅಂತಿಮ ಮಾರುಕಟ್ಟೆಗಳಲ್ಲಿ ಜಾಗತಿಕ ಗ್ರಾಹಕರ ನೆಲೆಗೆ ಸೇವೆಯನ್ನು ಒದಗಿಸುತ್ತದೆ. ಈ ಕಂಪನಿಯನ್ನು ಸಹೋದರರಾದ ಜೋಹಾನ್, ಮಾರ್ಕಸ್ ಮತ್ತು ಫಿಲಿಪ್ ಕ್ರೀಸೆಲ್ ಸ್ಥಾಪಿಸಿದರು ಮತ್ತು ಇದು ಆಸ್ಟ್ರಿಯಾದ ರೇನ್‌ಬಾಕ್ ಇಮ್ ಮüಲ್‌ಕ್ರೇಸ್‌ನಲ್ಲಿ ನೆಲೆಗೊಂಡಿದೆ.