ಜಾನ್ ಡಿಯರ್ 5405 ಟ್ರ್ಯಾಕ್ಟರ್ ಅನ್ನು ಏಕೆ ಖರೀದಿಸಬೇಕು: ಮೈಲೇಜ್, ಲಕ್ಷಣಗಳು ಮತ್ತು ವಿಶೇಷತೆಗಳು!

john deere 5405 tractor

ಜಾನ್ ಡಿಯರ್ 5405 PowerTechTM ಟ್ರ್ಯಾಕ್ಟರ್ ಗಳು ರೈತರು ತಮ್ಮ ಕೆಲಸವನ್ನು ಸರಿಯಾಗಿ ಮಾಡಿ ಮುಗಿಸಲು ಅಗತ್ಯವಾದ ಶಕ್ತಿ, ಸಾಮರ್ಥ್ಯ, ಮತ್ತು ಬಹು ಉಪಯುಕ್ತತೆ ಒದಗಿಸುವ ಮೂಲಕ ಕೃಷಿ ಯಂತ್ರೋಪಕರಣಗಳ ಸ್ಪರ್ಧಾತ್ಮಕ ಜಗತ್ತಿನಲ್ಲಿ   ವಿಭಿನ್ನವಾಗಿ ನಿಲ್ಲುತ್ತದೆ. ನೀವು ದೊಡ್ಡ ಗದ್ದೆಗಳಲ್ಲಿ ಕೆಲಸ ಮಾಡುತ್ತಿರಲಿ ಅಥವಾ ಸಣ್ಣ ಪ್ಲಾಟ್ ಗಳಲ್ಲಿ ಕೆಲಸ ಮಾಡುತ್ತಿರಲಿ, ಒಂದು ಸಮರ್ಥ ಮತ್ತು ಉತ್ಪಾದಕತೆಯ ಕೃಷಿ ಅನುಭವಕ್ಕಾಗಿ ನಿಮಗೆ ಅಗತ್ಯವಿರುವುದೆಲ್ಲವನ್ನೂ ಈ ಟ್ರ್ಯಾಕ್ಟರ್ ಒದಗಿಸುತ್ತದೆ.

ಜಾನ್ ಡಿಯರ್ 5405 PowerTechTM ಅನ್ನು ಅಷ್ಟೊಂದು ಅಮೂಲ್ಯವಾಗಿಸುವ ಅಂಶಗಳಾವುವು?

ಉನ್ನತ ಲಕ್ಷಣಗಳು, ಪ್ರಯೋಜನಗಳು, ಮತ್ತು ಜಾನ್ ಡಿಯರ್ 5405 PowerTechTM 63 HP 4WD ಟ್ರ್ಯಾಕ್ಟರ್ ನಲ್ಲಿ  ಹೂಡಿಕೆ ಮಾಡುವುದು ಏಕೆ ನಿಮ್ಮ ಸರಿಯಾದ ನಿರ್ಧಾರವಾಗಬಹುದು ಎಂಬುದಕ್ಕೆ ಕಾರಣಗಳನ್ನು ತಿಳಿಯೋಣ. ಅಲ್ಲದೇ ನಾವು ಹಣಕಾಸು ಸಹಾಯದ ಆಯ್ಕೆಗಳನ್ನು, ಭಾರತದಲ್ಲಿ ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆ, ಮತ್ತು ಇನ್ನಷ್ಟು ವಿಷಯಗಳನ್ನು ಕುರಿತು ಚರ್ಚಿಸೋಣ.

ಶುರು ಮಾಡೋಣ ಬನ್ನಿ!

5405 ಟ್ರ್ಯಾಕ್ಟರ್ ನ ಉನ್ನತ ಲಕ್ಷಣಗಳು

ಜಾನ್ ಡಿಯರ್ 5405 ಸಾಮಾನ್ಯ ಟ್ರ್ಯಾಕ್ಟರ್ ಅಲ್ಲ; ಅದು ಗುಣಮಟ್ಟ, ಹೊಸತನ, ಮತ್ತು ಕಾರ್ಯಕ್ಷಮತೆಯನ್ನು ನೀಡುವ ಪ್ರಸಿದ್ಧ GearPro ಸರಣಿಯ ಅಂಗವಾಗಿದೆ.  ತನ್ನ ಹೆಚ್ಚಿನ ಗೇರ್ ಸ್ಪೀಡ್ ಆಯ್ಕೆಗಳಿಗೆ ಹೆಸರು ವಾಸಿಯಾಗಿರುವ GearPro ಸರಣಿಯು ಹಲವಾರ ಇಂಪ್ಲಿಮೆಂಟ್ ಗಳೊಂದಿಗೆ ಅಡಚಣೆಯಿಲ್ಲದೇ ಕೆಲಸ ಮಾಡಲು, ಉತ್ಪಾದಕತೆ ವರ್ಧಿಸಲು ಮತ್ತು ಬಹುಪಯೋಗದ ಕಾರ್ಯನಿರ್ವಹಿಸಲು ಆಪರೇಟರ್ ಗಳಿಗೆ ಅವಕಾಶ ನೀಡುತ್ತದೆ.

ಈ ಕೆಳಗಿನ ಅಂಶಗಳು ಜಾನ್ ಡಿಯರ್ 5405 ಟ್ರ್ಯಾಕ್ಟರ್ ಅನ್ನು ವಿಭಿನ್ನವಾಗಿಸುತ್ತವೆ:

  1. ಉನ್ನತ ಕಾರ್ಯಕ್ಷಮತೆಗಾಗಿ CRDI ತಂತ್ರಜ್ಞಾನ

    ಜಾನ್ ಡಿಯರ್ 5405 PowerTechTM  CRDI ತಂತ್ರಜ್ಞಾನದೊಂದಿಗೆ ಬಲಿಷ್ಠ 3029H ಎಂಜಿನ್ ಹೊಂದಿದ್ದು, ಉನ್ನತ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆ ಒದಗಿಸುತ್ತದೆ. ಕಠಿಣ ಕಾರ್ಯಗಳಿಗೆ ಸೂಕ್ತವಾಗಿದೆ, ಗದ್ದೆಯಲ್ಲಿ ಎಲ್ಲ ರೀತಿಯ ಕಾರ್ಯಗಳನ್ನು ಸಮರ್ಥವಾಗಿ ಮಾಡಿ ಮುಗಿಸುತ್ತದೆ. 
  1. ಡ್ಯುಯೆಲ್ ಟಾರ್ಕ್ ಮೋಡ್ನಿ

    ಮ್ಮ ಎಲ್ಲ ಅವಶ್ಯಕತೆಗಳಿಗಾಗಿ ಡ್ಯುಯೆಲ್ ಟಾರ್ಕ್, ಉತ್ತಮಗೊಳಿಸುವ ಫ್ಯೂಲ್ ಮತ್ತು ಕಾರ್ಯಕ್ಷಮತೆಯೊಂದಿಗೆ ಪ್ರಮಾಣಿತ ಮತ್ತು ಮಿತವ್ಯಯದ ಮೋಡ್ ಗಳನ್ನು ಬದಲಾಯಿಸಿ ಬಳಸಿ.
  1. ದೀರ್ಘಾವಧಿಯ ಸರ್ವಿಸ್ ಮಧ್ಯಂತರ

    500-ಗಂಟೆಗಳ ಸರ್ವಿಸ್ ಮಧ್ಯಂತರದೊಂದಿಗೆ ಕಡಿಮೆ ಡೌನ್ ಟೈಮ್ ಆನಂದಿಸಿ, ಮೆಂಟೆನನ್ಸ್ ಸಮಯ ಮತ್ತು ವೆಚ್ಚಗಳ ಉಳಿತಾಯ ಮಾಡಿ.
  1. ಸುಲಭ ಕಾರ್ಯನಿರ್ವಹಣೆಗಾಗಿ ಕಾಂಬಿನೇಶನ್ ಸ್ವಿಚ್ಕಾಂ

    ಬಿನೇಶನ್ ಸ್ವಿಚ್ ನೊಂದಿಗೆ ಎಲ್ಲ ಲೈಟ್ ಗಳನ್ನು ಸುಲಭವಾಗಿ ನಿಯಂತ್ರಿಸಿ, ಬೆಳಕು ಕಡಿಮೆ ಇರುವಾಗ ಹೆಚ್ಚಿನ ಸುರಕ್ಷತೆ ಪಡೆಯಿರಿ.
  1. ಸ್ಟೈಲಿಶ್ ಮತ್ತು ಉಪಯುಕ್ತ ವಿನ್ಯಾಸ

    ಲೂವರ್ ಗಳನ್ನು ಹೊಂದಿರುವ ಮುಂಭಾಗದ ನಯವಾದ ಗ್ರಿಲ್ ತಂಪಾಗಿರುವುದನ್ನು ಖಚಿತಪಡಿಸುತ್ತದೆ, LED ಹೆಡ್ ಲ್ಯಾಂಪ್ ಗಳು ನೀವು ಚಲಿಸುವ ದಾರಿಗೆ ಬೆಳಕು ನೀಡುತ್ತವೆ, ಹೀಗೆ ಈ ವಿನ್ಯಾಸವು ಸ್ಟೈಲ್ ಮತ್ತು ಉಪಯುಕ್ತತೆಯ ಸಂಯೋಜನೆಯಾಗಿದೆ. 
  1. ಆರಾಮದಾಯಕ ಅಗಲವಾದ ಪ್ಲಾಟ್ ಫಾರ್ಮ್ಹಿಂ

    ಭಾಗದ ಫ್ಲೋರ್ ಎಕ್ಸ್ ಟೆನ್ಶನ್ ಗಳೊಂದಿಗೆ ಸಾಕಷ್ಟು ಸ್ಥಳಾವಕಾಶವಿರುವ ಪ್ಲಾಟ್ ಫಾರ್ಮ್ ಗದ್ದೆಯಲ್ಲಿ ಬಹಳ ಹೊತ್ತು ಕೆಲಸ ಮಾಡುವಾಗ ಹೆಚ್ಚಿನ ಆರಾಮ ನೀಡುತ್ತದೆ. 
  1. CleanPro™ ಕೂಲಿಂಗ್ ತಂತ್ರಜ್ಞಾನ

    CleanPro™ ಎಂಜಿನ್ ಅನ್ನು ತಣ್ಣಗೆ ಮತ್ತು ಶುದ್ಧವಾಗಿಡುತ್ತದೆ, ಈ ಮೂಲಕ ಧೂಳಿನ ಸ್ಥಿತಿಗಳಲ್ಲಿ ಮೆಂಟೆನನ್ಸ್ ಅವಶ್ಯಕತೆ ಕಡಿಮೆಯಾಗುತ್ತದೆ.

ಕೆಲವು ಇತರ ಲಕ್ಷಣಗಳು ಮತ್ತು ಪ್ರಯೋಜನಗಳು

ಜಾನ್ ಡಿಯರ್ 5405 ಗಾಗಿ ಕೆಲವು ಹೆಚ್ಚುವರಿ ಲಕ್ಷಣಗಳು ಮತ್ತು ಪ್ರಯೋಜನಗಳ ಬಗ್ಗೆ ಮಾತನಾಡೋಣ:

  #1. GearPro ಸರಣಿಯ ಅನುಕೂಲ

  • ಬಹು ಉಪಯುಕ್ತತೆಗೆ ಇನ್ನೊಂದು ಹೆಸರು
  • 12 ಫಾರ್ವರ್ಡ್ ಮತ್ತು 4 ರಿವರ್ಸ್ ಗೇರ್ ಗಳೊಂದಿಗೆ ಅಧಿಕ ಗೇರ್ ಸ್ಪೀಡ್ ಆಯ್ಕೆಗಳು.
  • ಉಳುಮೆ, ನೇಗಿಲು ಹೂಡುವುದು, ಮತ್ತು ಸರಕುಗಳ ಸಾಗಣೆಯಂತಹ ಹಲವಾರು ಕೆಲಸಗಳಿಗೆ ಹೊಂದಿಕೊಳ್ಳುತ್ತದೆ.
  • ನಿಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಯಿಸಿದ ಸುಲಭ ಕಾರ್ಯ ಮತ್ತು ನಿಯಂತ್ರಣ ಒದಗಿಸುತ್ತದೆ.

  #2. ಅದ್ಭುತವಾದ ಎತ್ತುವ ಸಾಮರ್ಥ್ಯ

  • 2500 kgf ಎತ್ತುವ ಸಾಮರ್ಥ್ಯ ಹೊಂದಿದೆ.
  • ಭಾರೀ ಇಂಪ್ಲಿಮೆಂಟ್ ಗಳನ್ನು ಸುಲಭವಾಗಿ ನಿರ್ವಹಿಸುತ್ತದೆ.
  • ಅಧಿಕ ಕೆಲಸವಿರುವ ಕೃಷಿಗೆ ಮತ್ತು ಕಡಿಮೆ ಕೆಲಸವಿರುವ ಕೈಗಾರಿಕಾ ಕಾರ್ಯಗಳಿಗೆ ಸೂಕ್ತ.
  • ವೈವಿಧ್ಯಪೂರ್ಣ ವಾತಾವರಣಗಳಲ್ಲಿ ಪ್ರಯೋಜನಕಾರಿಯಾಗಿದೆ.

  #3. ಫ್ಯಾಕ್ಟರಿಯಲ್ಲಿ-ಜೋಡಿಸಲಾದ ಎರಡನೇ SCV

  • ಫ್ಯಾಕ್ಟರಿಯಲ್ಲಿ ಫಿಟ್ ಮಾಡಿದ ಎರಡನೇ ಸೆಲೆಕ್ಟಿವ್ ಕಂಟ್ರೋಲ್ ವಾಲ್ವ್ (SCV) ಹೊಂದಿರುತ್ತದೆ.
  • ಹೆಚ್ಚು ಜಟಿಲವಾದ ಕೆಲಸಗಳಿಗಾಗಿ ಹೈಡ್ರಾಲಿಕ್ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.
  • ಒಟ್ಟಾರೆ ಸಾಮರ್ಥ್ಯ ಹೆಚ್ಚಿಸುತ್ತದೆ.
  • ಯಾವುದೇ ಅಡಚಣೆಗಳಿಲ್ಲದೇ ಹೆಚ್ಚು ಹೊತ್ತು ಕೆಲಸ ಮಾಡುವುದಕ್ಕಾಗಿ 71-ಲೀಟರ್ ಫ್ಯೂಲ್ ಟ್ಯಾಂಕ್ ಗೆ ಜೋಡಿಸಲ್ಪಟ್ಟಿರುತ್ತದೆ.

  #4. EQRL ಆಯ್ಕೆಗಳು

  • ಒಣ ಮತ್ತು ಹಸಿ ಎರಡೂ ಕ್ಲಚ್ ಆಯ್ಕೆಗಳನ್ನು ನೀಡುತ್ತದೆ.
  • ವಿಭಿನ್ನ ಕೆಲಸಗಳನ್ನು ನಿರ್ವಹಿಸುವಲ್ಲಿ ಬಹುಪಯೋಗಿಯಾಗಿದೆ.
  • ಅಗತ್ಯಕ್ಕೆ ಅನುಗುಣವಾಗಿ ನಿಖರವಾದ ನಿಯಂತ್ರಣ ‌ಅಥವಾ ಅಧಿಕ ಶಕ್ತಿ ಖಚಿತಪಡಿಸುತ್ತದೆ.
  • ಕಾರ್ಯಕ್ಷಮತೆ ಮತ್ತು ಆಪರೇಟರ್ ತೃಪ್ತಿಯನ್ನು ವರ್ಧಿಸುತ್ತದೆ.

  #5. ಟಿಲ್ಟ್ ಸ್ಟೇರಿಂಗ್ ಮತ್ತು ಸೀಟ್ ಸರಿಹೊಂದಿಸುವ ಸೌಲಭ್ಯಗಳು

  • ಗದ್ದೆಯಲ್ಲಿ ದೀರ್ಘಕಾಲದವರೆಗೆ ಆಪರೇಟರ್ ಆರಾಮದಾಯಕತೆಗೆ ಆದ್ಯತೆ ನೀಡುತ್ತದೆ.
  • ಟಿಲ್ಟ್ ಸ್ಟೇರಿಂಗ್ ಮತ್ತು ಸರಿಹೊಂದಿಸಬಹುದಾದ ಸೀಟ್ ಗಳನ್ನು ಹೊಂದಿದೆ.
  • ಆಯಾಸ ಕಡಿಮೆ ಮಾಡುವುದಕ್ಕಾಗಿ ಉತ್ತಮ ಡ್ರೈವಿಂಗ್ ಸ್ಥಿತಿ ನೀಡುತ್ತದೆ.
  • ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

  #6. PowrReverserTM ತಂತ್ರಜ್ಞಾನ (PR)

  • ಹೊಸ ತಂತ್ರಜ್ಞಾನವು ಕ್ಲಚ್ ಬಳಸದೇ ದಿಕ್ಕು ಬದಲಾಯಿಸಲು ಅವಕಾಶ ನೀಡುತ್ತದೆ.
  • ಕೆಲಸಗಳನ್ನು ಸುಲಭವಾಗಿಸುತ್ತದೆ ಮತ್ತು ಸವಕಳಿ ಮತ್ತು ಹಾನಿಯನ್ನು ಕಡಿಮೆ ಮಾಡುತ್ತದೆ.
  • ನಿರ್ದಿಷ್ಟವಾಗಿ ಮೇಲಿಂದ ಮೇಲೆ ದಿಕ್ಕು ಬದಲಾಯಿಸುವ ಅಗತ್ಯವಿರುವ ಕೆಲಸಗಳಲ್ಲಿ ಉಪಯುಕ್ತವಾಗಿರುತ್ತದೆ.
  • ಸಾಮರ್ಥ್ಯ ಹೆಚ್ಚಿಸುತ್ತದೆ ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಜಾನ್ ಡಿಯರ್ 5405 PowerTechTM ಟ್ರ್ಯಾಕ್ಟರ್ ನ ಪ್ರಮುಖ ವಿಶೇಷತೆಗಳು

ಜಾನ್ ಡಿಯರ್ 5405 PowerTechTM ಟ್ರ್ಯಾಕ್ಟರ್ ಬರೀ ಒಂದು ಯಂತ್ರೋಪಕರಣವಲ್ಲ; ಅದು ಶಕ್ತಿ ಮತ್ತು ಹೊಸತನ ಒಟ್ಟಿಗೆ ನೀಡುವ ಕೃಷಿ ಸಂಗಾತಿ. ನಿಮ್ಮ ಕೃಷಿ ಕೆಲಸಕ್ಕಾಗಿ ನೀವು ಅದನ್ನು ಖರೀದಿಸಲೇಬೇಕಾದ ಅದರ ಉನ್ನತ ವಿಶೇಷತೆಗಳನ್ನು ಕುರಿತು ಚರ್ಚಿಸೋಣ.

  #1. ಎಂಜಿನ್

  • ವಿಧ: ಜಾನ್ ಡಿಯರ್ 3029H
  • ಹಾರ್ಸ್ ಪವರ್: 63 HP (42 kW)
  • RPM: 2100
  • ಸಿಲಿಂಡರ್‌ಗಳು: 3
  • ಟರ್ಬೊಚಾರ್ಜ್ಡ್: ಹೌದು
  • ಫ್ಯೂಲ್ ಇಂಜೆಕ್ಷನ್ ಸಿಸ್ಟಮ್: HPCR
  • ಕೂಲಿಂಗ್: ಓವರ್ ಫ್ಲೋ ರಿಸರ್ವಾಯರ್ ನೊಂದಿಗೆ ತಣ್ಣಗಾಗುವ ಕೂಲಂಟ್
  • ‌ಏರ್ ಫಿಲ್ಟರ್: ಡ್ರೈ ಟೈಪ್, ಡ್ಯುಯೆಲ್ ಎಲಿಮೆಂಟ್

  #2. ಹೆಚ್ಚಿನ ಕೂಲಿಂಗ್ ಸಾಮರ್ಥ್ಯ

  • ಉತ್ತಮ ಎಂಜಿನ್ ತಾಪಮಾನಗಳು - ಎಂಜಿನ್ ಕಾರ್ಯನಿರತವಾಗಿರುವಾಗ ಉತ್ತಮ ತಾಪಮಾನದಲ್ಲಿರುವಂತೆ ಕಾಪಾಡುವಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ.
  • ಅತಿಯಾಗಿ ಬಿಸಿಯಾಗದಂತೆ ತಡೆಯುತ್ತದೆ - ಫ್ಯಾನ್ ಅತಿಯಾಗಿ ಬಿಸಿಯಾಗದಂತೆ ತಡೆಯುತ್ತದೆ, ಸರಿಯಾಗಿ ತಂಪಾಗುವಂತೆ ಮಾಡುತ್ತದೆ.
  • ಸರಿಯಾದ ತಂಪಾಗಿಸುವಿಕೆ - ಕಠಿಣ ಪರಿಸರಗಳಲ್ಲಿ ಕೂಡ ಸರಿಯಾದ ಕೂಲಿಂಗ್ ಒದಗಿಸುತ್ತದೆ.

  #3. ರಿವರ್ಸ್ ಮಾಡಬಹುದಾದ ಫ್ಯಾನ್

ರಿವರ್ಸ್ ಮಾಡಬಹುದಾದ ಫ್ಯಾನ್ ಎಂಜಿನ್ ಸಾಮರ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹುಡ್ ಸ್ಕ್ರೀನ್ ಮತ್ತು ರೇಡಿಯೇಟರ್ ಸ್ವಚ್ಛಗೊಳಿಸುವ ಸಾಮರ್ಥ್ಯದೊಂದಿಗೆ ನಿಮ್ಮ ಟ್ರ್ಯಾಕ್ಟರ್ ‌ಇಡೀ ದಿನ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುತ್ತೀರಿ.

  • ಹುಡ್ ಸ್ಕ್ರೀನ್ ಸ್ವಚ್ಛಗೊಳಿಸುವುದು - ಹೊಲಸು ತಡೆಗಟ್ಟುವ ಮೂಲಕ ಅಡಚಣೆ ಇಲ್ಲದ ಕಾರ್ಯಾಚರಣೆಯನ್ನು ಖಚಿತಪಡಿಸುತ್ತದೆ.
  • ರೇಡಿಯೇಟರ್ ಸ್ವಚ್ಛಗೊಳಿಸುವುದು - ಗಾಳಿಯು ಉತ್ತಮ ರೀತಿಯಲ್ಲಿ ಹರಿಯುವಂತೆ ಮಾಡುವ ಮೂಲಕ ಅತಿಯಾಗಿ ಬಿಸಿಯಾಗದಂತೆ ತಡೆಯುತ್ತದೆ.

  #4. ಟ್ರಾನ್ಸ್ ಮಿಶನ್

ಹಲವಾರು ಕೃಷಿ ಅವಶ್ಯಕತೆಗಳನ್ನು ಈಡೇರಿಸಲು, ಆರಾಮವಾಗಿ ಕೆಲಸ ಮಾಡುವ ಮತ್ತು ನಿಯಂತ್ರಿಸುವ ಅವಕಾಶ ನೀಡಲೆಂದು ಜಾನ್ ಡಿಯರ್ 5405 ಟ್ರ್ಯಾಕ್ಟರ್ ನಲ್ಲಿರುವ ಟ್ರಾನ್ಸ್ ಮಿಶನ್ ಆಯ್ಕೆಗಳನ್ನು ವಿನ್ಯಾಸಗೊಳಿಸಲಾಗಿದೆ.

  • ಕ್ಲಚ್ - ಡ್ಯುಯೆಲ್ ಕ್ಲಚ್, ಡ್ರೈ ಕ್ಲಚ್, EH ಕ್ಲಚ್ (ಐಚ್ಛಿಕ)
  • ಗೇರ್ ಬಾಕ್ಸ್ ಆಯ್ಕೆಗಳು:
    • 12F + 4R (GearPro ಸ್ಪೀಡ್)
    • 12F + 12R (PowrReverser ಸ್ಪೀಡ್)
    • 9F + 3R (Creeper ಸ್ಪೀಡ್)
  • ಸ್ಪೀಡ್ ಆಯ್ಕೆಗಳು
    • GearPro ಸ್ಪೀಡ್ - 1.9 ರಿಂದ6 Kmph
    • PowerReverser ಸ್ಪೀಡ್ - 1.4 ರಿಂದ3 Kmph
    • Creeper ಸ್ಪೀಡ್ - 0.35 ರಿಂದ87 Kmph

  #5. ಬ್ರೇಕ್ ಗಳು

ಜಾನ್ ಡಿಯರ್ 5405 ಟ್ರ್ಯಾಕ್ಟರ್ ಉಳಿದೆಲ್ಲ ವಿಷಯಗಳಿಗಿಂತ ಸುರಕ್ಷತೆಗೆ ಆದ್ಯತೆ ನೀಡುತ್ತದೆ.  ಅದರ ಅತ್ಯಾಧುನಿಕ ಎಣ್ಣೆಯಲ್ಲಿ-ಅದ್ದಿದ ಡಿಸ್ಕ್ ಬ್ರೇಕಿಂಗ್ ಸಿಸ್ಟಮ್ ವಿಶ್ವಾಸಾರ್ಹ ಮತ್ತು ಸುರಕ್ಷಿತ ಚಾಲನೆಯ ಭರವಸೆ ನೀಡುತ್ತದೆ.  ವಿಶ್ವಾಸಾರ್ಹ ಮತ್ತು ಸಮರ್ಥ ನಿಲ್ಲಿಸುವಿಕೆಯ ಬಲ ಒದಗಿಸುವ ಮೂಲಕ ಆಪರೇಟರ್ ನ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಸುರಕ್ಷತೆ ಸುಧಾರಿಸುವುದು ಈ ಬ್ರೇಕ್ ಗಳ ಉದ್ದೇಶವಾಗಿದೆ.

  #6. ಹೈಡ್ರಾಲಿಕ್ಸ್

ಭಾರವಾದ ವಸ್ತುಗಳನ್ನು ನಿಖರತೆಯೊಂದಿಗೆ ಮತ್ತು ಆರಾಮವಾಗಿ ಎತ್ತುವುದಕ್ಕಾಗಿ ಜಾನ್ ಡಿಯರ್ 5405 ಟ್ರ್ಯಾಕ್ಟರ್ ನ ಹೈಡ್ರಾಲಿಕ್ ಸಿಸ್ಟಮ್ ಅನ್ನು ವಿನ್ಯಾಸಗೊಳಿಸಿದೆ.

  • ಗರಿಷ್ಠ ಎತ್ತುವ ಸಾಮರ್ಥ್ಯ
  • 2000 Kgf
  • 2500 Kgf (ಐಚ್ಛಿಕ)

  #7. ಸ್ಟೇರಿಂಗ್

ಜಾನ್ ಡಿಯರ್ 5405 ನ ಸ್ಟೇರಿಂಗ್ ಆಯ್ಕೆಗಳು ಆರಾಮದಾಯಕತೆ ಮತ್ತು ನಿಯಂತ್ರಣದ ಅದ್ಭುತ ಸಂಗಮವಾಗಿವೆ.

  • ವಿಧ - ಪವರ್ ಸ್ಟೇರಿಂಗ್ / ಟಿಲ್ಟ್ ಸ್ಟೇರಿಂಗ್ ಆಯ್ಕೆ (ಓಪನ್ ಆಪರೇಟರ್ ಸ್ಟೇಶನ್)
  • ಕ್ಯಾಬ್ ಆಯ್ಕೆ - ಪವರ್ ಸ್ಟೇರಿಂಗ್ / ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೇರಿಂಗ್

ಭಾರತದಲ್ಲಿ ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆ

ಭಾರತದಲ್ಲಿ ಜಾನ್ ಡಿಯರ್ 5405 ನ ಬೆಲೆಯು ಪ್ರದೇಶ, ಹೆಚ್ಚುವರಿ ಲಕ್ಷಣಗಳು, ಮತ್ತು ಡೀಲರ್-ನಿರ್ದಿಷ್ಟ ಕೊಡುಗೆಗಳನ್ನು ಒಳಗೊಂಡು ಹಲವಾರು ಅಂಶಗಳನ್ನಾಧರಿಸಿ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ, ಭಾರತದಲ್ಲಿ ಜಾನ್ ಡಿಯರ್ 5405 PowerTechTM 63 HP 4WD ಬೆಲೆಗೆ ತಕ್ಕಂತೆ ಅದರ ಪ್ರೀಮಿಯಮ್ ನಿರ್ಮಾಣ ಗುಣಮಟ್ಟ ಮತ್ತು ಆಧುನಿಕ ಲಕ್ಷಣಗಳಿವೆ. ಅದು ದೀರ್ಘಾವಧಿಯಲ್ಲಿ ಲಾಭ ನೀಡುವಂತಹ ಹೂಡಿಯಾಗಿದ್ದು, ಹಲವಾರು ಕೃಷಿ ಅವಶ್ಯಕತೆಗಳನ್ನು ಬೆಂಬಲಿಸುವ ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

ನಮ್ಮ ಟ್ರ್ಯಾಕ್ಟರ್ ಬೆಲೆಯನ್ನು ಕುರಿತು ಹೆಚ್ಚಿನ ವಿಷಯ ಕಲಿಯಲು, ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ.

ಜಾನ್ ಡಿಯರ್ 5405 PowerTechTM 63 HP  ಟ್ರ್ಯಾಕ್ಟರ್ ಹೊಸತನ, ಕಾರ್ಯಕ್ಷಮತೆ, ಮತ್ತು ಬಳಕೆದಾರರನ್ನಾಧರಿಸಿದ ವಿನ್ಯಾಸಕ್ಕೆ ಹಿಡಿದ ಕನ್ನಡಿಯಾಗಿದೆ. ಅದರ ಶಕ್ತಿಶಾಲಿ ಎಂಜಿನ್, ಡ್ಯುಯೆಲ್ ಟಾರ್ಕ್ ಮೋಡ್ ನಂತಹ ಆಧುನಿಕ ಲಕ್ಷಣಗಳು, ಹಾಗೂ ಆಪರೇಟರ್ ಆರಾಮದಾಯಕತೆಗೆ ಬದ್ಧತೆಯೊಂದಿಗೆ ಅದು ಈ ಕಾಲದ ಕೃಷಿಕರ ಬೇಡಿಕೆಗಳನ್ನು ಈಡೇರಿಸುವ ಉತ್ಕೃಷ್ಟ ಕೃಷಿ ಅನುಭವ ಪೂರೈಸುತ್ತದೆ.

ಅದರ GearPro ಸರಣಿಯಿಂದ ಹಿಡಿದು ಅತ್ಯಾಧುನಿಕ ಕೂಲಿಂಗ್ ತಂತ್ರಜ್ಞಾನದವರೆಗೆ, 5405 ನಿಮ್ಮ ಕಾರ್ಯಗಳನ್ನು ವರ್ಧಿಸಲು ಅಗತ್ಯವಿರುವ ಎಲ್ಲ ಅಂಶಗಳನ್ನು ಒದಗಿಸುತ್ತದೆ. ಅನುಕೂಲಕರ ಹಣಕಾಸು ಸಹಾಯದ ಆಯ್ಕೆಗಳು ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ತನ್ನ ಪ್ರತಿಷ್ಠೆಯೊಂದಿಗೆ ಜಾನ್ ಡಿಯರ್ 5405 ನೀವು ನೀಡುವ ಬೆಲೆಗೆ ತಕ್ಕ ಸೇವೆಗಳನ್ನು ಒದಗಿಸುತ್ತದೆ; ಅದು ನಿಮ್ಮ ಕೃಷಿ ಭವಿಷ್ಯದಲ್ಲಿನ ಹೂಡಿಕೆಯಾಗಿದೆ.