ಜಾನ್ ಡಿಯರ್ ಇಂಡಿಯಾ ಟ್ರ್ಯಾಕ್ಟರ್ ಗಳು ಸ್ಪರ್ಧೆಯಿಂದ ವಿಭಿನ್ನವಾಗಿ ನಿಲ್ಲಲು 7 ಕಾರಣಗಳು

Reasons why tractors stand out

1. ಭಾರತೀಯ ಗದ್ದೆಗಳು ಮತ್ತು ರೈತರಿಗಾಗಿ ನಿರ್ಮಿತ

ಭಾರತದಲ್ಲಿ ಕೃಷಿಯು ಈ ದೇಶದಷ್ಟೇ ವೈವಿಧ್ಯಪೂರ್ಣವಾಗಿದೆ. ಮಹಾರಾಷ್ಟ್ರದ ಕಬ್ಬಿನ ಗದ್ದೆಗಳಿಂದ ತಮಿಳು ನಾಡಿನ ಭತ್ತದ ಗದ್ದೆಗಳವರೆಗೆ ಮತ್ತು ಗುಜರಾತಿನ ಹತ್ತಿ ತೋಟಗಳವರೆಗೆ ಪ್ರತಿಯೊಂದು ಪ್ರದೇಶವು ತನ್ನ ಟ್ರ್ಯಾಕ್ಟರ್ ನಿಂದ ವಿಶಿಷ್ಟ ಸೇವೆಯನ್ನು ಬಯಸುತ್ತದೆ.

ನಿಮ್ಮ ಪ್ರದೇಶಗಳ ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಂಡು ಜಾನ್ ಡಿಯರ್ ಇಂಡಿಯಾ ಟ್ರ್ಯಾಕ್ಟರ್ ಗಳನ್ನು ವಿನ್ಯಾಸಗೊಳಿಸಿರುವುದು ಅವುಗಳ ವಿಶೇಷತೆಯಾಗಿದೆ. ಅದರರ್ಥ:

  • ಬೆಳೆ-ನಿರ್ದಿಷ್ಟ ಸಾಲಗಳ ನಡುವೆ ಅಂತರ ಕಾಪಾಡುವುದಕ್ಕಾಗಿ ಹೊಂದಿಸಬಹುದಾದ ವ್ಹೀಲ್ ಟ್ರ್ಯಾಕ್ ಗಳು
  • ಹಸಿ ಗೊಬ್ಬರ ಹಾಕುವುದು (ಮಲ್ಚಿಂಗ್) ಮತ್ತು ಪಕ್ಕ ಪಕ್ಕದಲ್ಲಿ ಆಳವಾದ ಸಮಾನಾಂತರ ಗುಂಡಿಗಳನ್ನು ತೋಡಿ ಮಣ್ಣು ಮಗುಚಿ ಹಾಕುವುದು (ಟ್ರೆಂಚಿಂಗ್) ಇಂತಹ ತೀರ-ಕಡಿಮೆ ವೇಗದ ಅಗತ್ಯವಿರುವ ಕೆಲಸಗಳಿಗಾಗಿ ಕ್ರೀಪರ್ ಗೇರ್ ಆಯ್ಕೆಗಳು
  • ಬೆಳೆಗಳಿಗೆ ಹಾನಿಯಾಗದಂತೆ ತಡೆಯಲು ಅಧಿಕ ಗ್ರೌಂಡ್ ಕ್ಲಿಯರೆನ್ಸ್
  • ಕಠಿಣ ಭೂಪ್ರದೇಶಗಳಲ್ಲಿ ಮತ್ತು ದೀರ್ಘಕಾಲದ ಕೆಲಸವನ್ನು ಸುಲಭವಾಗಿ ಮಾಡಲು ಬಲಿಷ್ಠ ನಿರ್ಮಾಣ

ಜಾನ್ ಡಿಯರ್ ಜಾಗತಿಕ ಗುಣಮಟ್ಟವನ್ನು ನೀಡುವುದರ ಜೊತೆಗೆ ಸ್ಥಳೀಯ ಸೂಕ್ತತೆಯನ್ನು ಕೂಡ ನೀಡುತ್ತದೆ, ಹಾಗೂ ಈ ಕಾರಣದಿಂದಾಗಿ ಅದು ತನ್ನದೇ ಆದ ಸ್ಥಾನಮಾನ ಹೊಂದಿದೆ.

2. ಕಠಿಣ ಶ್ರಮ ವಹಿಸುವ ಎಂಜಿನ್ ಗಳು

ಯಾವುದೇ ರೈತನನ್ನು ಕೇಳಿ, ಅವರು ನಿಮಗೆ ತಿಳಿಸುತ್ತಾರೆ, ಇಂಧನ ದಕ್ಷತೆ ನಿಮ್ಮ ಲಾಭದ ಉಳಿಕೆಗಳನ್ನು ಗಳಿಸಲು ಅಥವಾ ನಷ್ಟ ಅನುಭವಿಸಲು ಕಾರಣವಾಗಿರುತ್ತದೆ. ಜಾನ್ ಡಿಯರ್ ಟ್ರ್ಯಾಕ್ಟರ್ ಗಳು ತಮ್ಮ PowerTech™ ಎಂಜಿನ್ ಗಳು ಹೆಸರು ವಾಸಿಯಾಗಿದ್ದು, ಇವು ಹಾರ್ಸ್ ಪವರ್ ಮತ್ತು ಮೈಲೇಜ್ ನಡುವೆ ಸರಿಯಾದ ಸಮತೋಲನ ಕಾಪಾಡುತ್ತವೆ.

  • ಕಡಿಮೆ RPM ಗಳಲ್ಲಿ ಹೆಚ್ಚು ಟೋರ್ಕ್ ನ ಅರ್ಥ ಹೆಚ್ಚು ಶಕ್ತಿಗಾಗಿ ಕಡಿಮೆ ಇಂಧನದ ಅಗತ್ಯವಿರುತ್ತದೆ
  • ದೀರ್ಘಕಾಲದವರೆಗೆ ನಿರಂತರವಾಗಿ ಕೆಲಸ ಮಾಡಿದ ನಂತರ ಕೂಡ ಎಂಜಿನ್ ಗಳು ತಂಪಾಗಿರುತ್ತವೆ
  • ಯಾವುದೇ ಒತ್ತಡವಿಲ್ಲದೆ ವಿವಿಧ ಪ್ರಕಾರದ ಇಂಪ್ಲಿಮೆಂಟ್ ಗಳನ್ನು ನಿರ್ವಹಿಸಲು ನಿರ್ಮಿಸಲಾಗಿದೆ 

ಇದರಿಂದಾಗಿ ಕಾರ್ಯಾಚರಣೆಯ ವೆಚ್ಚಗಳು ಕಡಿಮೆಯಾಗುತ್ತವೆ, ಎಂಜಿನ್ ಹೆಚ್ಚು ಕಾಲ ಬಾಳಿಕೆ ಬರುತ್ತದೆ, ಮತ್ತು ಉತ್ತಮ ಉತ್ಪಾದಕತೆ ನೀಡುತ್ತದೆ, ಹೀಗೆ ಜಾನ್ ಡಿಯರ್ ದೀರ್ಘಕಾಲದ ಮೌಲ್ಯಕ್ಕಾಗಿ ಭಾರತದಲ್ಲಿ ಅತ್ಯುತ್ತಮ ಟ್ರ್ಯಾಕ್ಟರ್ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ.

3. ಕೃಷಿಯನ್ನು ಜಟಿಲಗೊಳಿಸದೆ, ಅದನ್ನು ಸರಳೀಕರಿಸುವ ತಂತ್ರಜ್ಞಾನ

ಇವತ್ತಿನ ಕೃಷಿಯಲ್ಲಿ, ತಂತ್ರಜ್ಞಾನ ಐಶಾರಾಮಿನ ಸಂಗತಿಯಲ್ಲ, ಅದೊಂದು ಅವಶ್ಯಕತೆಯಾಗಿದೆ. ಆದರೆ ಜಾನ್ ಡಿಯರ್ ತನ್ನ ತಂತ್ರಜ್ಞಾನ ನಿಜವಾಗಿಯೂ ರೈತರಿಗೆ ಗೊಂದಲವುಂಟು ಮಾಡದೆ, ಅವರಿಗೆ ಸಹಾಯ ಮಾಡುವಂತೆ ಖಚಿತಪಡಿಸುತ್ತದೆ.

ಕೆಲವು ವಿಶಿಷ್ಟ ಲಕ್ಷಣಗಳು ಇವುಗಳನ್ನು ಒಳಗೊಂಡಿರುತ್ತವೆ:

  • JDLink™: ನಿಮ್ಮ ಟ್ರ್ಯಾಕ್ಟರ್ ಅನ್ನು ನಿಮ್ಮ ಮೊಬೈಲ್ ಗೆ ಸಂಪರ್ಕಿಸುತ್ತದೆ. ಕಾರ್ಯಕ್ಷಮತೆ, ಇಂಧನ ಮಟ್ಟಗಳು, ಮತ್ತು ಇನ್ನೂ ಅನೇಕ ಅಂಶಗಳನ್ನು ನಿಮ್ಮ ಫೋನ್ ನಿಂದ ಗಮನಿಸಿ.
  • AutoTrac™: GPS-ಆಧಾರಿತ ಸ್ಟೇರಿಂಗ್ ಒದಗಿಸುತ್ತಿದ್ದು, ಟ್ರ್ಯಾಕ್ಟರ್ ಅನ್ನು ನೇರ ದಾರಿಯಲ್ಲಿರುವಂತೆ ಮಾಡುತ್ತದೆ, ಒಂದು ಸಾಲಿನ ಮೇಲೆ ಇನ್ನೊಂದು ಸಾಲು ಹಾಯುವುದನ್ನು ಕಡಿಮೆ ಮಾಡುತ್ತದೆ ಮತ್ತು ಇಂಧನ, ಬೀಜ, ಹಾಗೂ ಸಮಯ ಉಳಿತಾಯ ಮಾಡುತ್ತದೆ.  
  • PowrReverser™: ಕ್ಲಚ್ ಉಪಯೋಗಿಸದೆ ಫಾರ್ವರ್ಡ್ ಮತ್ತು ರಿವರ್ಸ್ ನಡುವೆ ಬದಲಾಯಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ, ಇದರಿಂದ ಲೋಡರ್ ಕಾರ್ಯಾಚರಣೆಗಳಿಗೆ ಮತ್ತು ಇಕ್ಕಟ್ಟಾದ ತಿರುವುಗಳಿಗೆ ಬಹಳ ಅನುಕೂಲವಾಗುತ್ತದೆ.

ಇವು "ತೋರಿಕೆಯ” ಲಕ್ಷಣಗಳಲ್ಲ, ಅವು ದಿನನಿತ್ಯದ ಕೃಷಿ ಸವಾಲುಗಳಿಗೆ ವ್ಯಾವಹಾರಿಕ ಪರಿಹಾರಗಳಾಗಿವೆ. 

4. ಗದ್ದೆಯಲ್ಲಿ ದೀರ್ಘ ಕಾಲದವರೆಗೆ ಕೆಲಸ ಮಾಡುವುದನ್ನು ಸುಲಭಗೊಳಿಸುವ ಆರಾಮದಾಯಕತೆ

ವಾಸ್ತವದಲ್ಲಿ, ಟ್ರ್ಯಾಕ್ಟರ್ ಚಾಲನೆ 9-ರಿಂದ-5 ರವರೆಗೆ ಮಾಡುವ ಕೆಲಸದಂತಲ್ಲ. ಬೀಜ ಬಿತ್ತನೆ ಮತ್ತು ಕೊಯ್ಲು ಋತುಗಳ ವೇಳೆ, ನೀವು ಡ್ರೈವರ್ ಸೀಟ್ ನಲ್ಲಿ 12 ರಿಂದ 14 ಗಂಟೆಗಳವರೆಗೆ ಕುಳಿತುಕೊಳ್ಳಬೇಕಾಗಬಹುದು. ಆದ್ದರಿಂದ ಜಾನ್ ಇಯರ್ ಟ್ರ್ಯಾಕ್ಟರ್ ಗಳನ್ನು ಆರಾಮದಾಯಕತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. 

  • ಮುಂದಿನದೆಲ್ಲ ಚೆನ್ನಾಗಿ ಕಾಣಿಸುವಂತಹ ಹೆಚ್ಚು ಸ್ಥಳಾವಕಾಶವಿರುವ ಆಪರೇಟರ್ ಸ್ಟೇಶನ್
  • ಪವರ್ ಸ್ಟೇರಿಂಗ್ ಮತ್ತು ಸರಾಗವಾದ ಗೇರ್ ಬದಲಾವಣೆಗಳು ಆಯಾಸವನ್ನು ಕಡಿಮೆ ಮಾಡುತ್ತವೆ
  • ಹೆಚ್ಚು ವೈಬ್ರೇಶನ್ ಆಗುವುದಿಲ್ಲ, ಶಬ್ದ ಕಡಿಮೆ ಇರುತ್ತದೆ, ಮತ್ತು ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬಹುದು
  • ದೇಹದ ಒತ್ತಡವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ಸೀಟ್ ಸಸ್ಪೆನ್ಶನ್

ಯಂತ್ರವನ್ನು ನಿರ್ವಹಿಸುವುದು ಇಷ್ಟು ಸುಲಭವಾಗಿದ್ದರೆ, ನೀವು ಕೆಲಸದ ಕಡೆ ಹೆಚ್ಚು ಗಮನ ಕೇಂದ್ರೀಕರಿಸಬಹುದು ಮತ್ತು ಶ್ರಮ ಕಡಿಮೆ ಮಾಡಬಹುದು.

5. ಯಾವುದೇ ಅಡಚಣೆ ಇಲ್ಲದೆ ಕೆಲಸ ಮಾಡುವ ಇಂಪ್ಲಿಮೆಂಟ್ ಗಳ ಪೂರ್ಣ ಶ್ರೇಣಿ

ಟ್ರ್ಯಾಕ್ಟರ್ ಕೇವಲ ಅರ್ಧ ಪರಿಹಾರ ನೀಡುತ್ತದೆ, ಅದರ ಜೊತೆ ಒಂದು ಸರಿಯಾದ ಇಂಪ್ಲಿಮೆಂಟ್ ಬಳಸಿದಾಗ ಕೆಲಸ ಪೂರ್ಣಗೊಂಡಂತೆ. ತನ್ನ ಟ್ರ್ಯಾಕ್ಟರ್ ಗಳಿಗೆ ಸರಿಯಾಗಿ ಹೊಂದುವಂತೆ ನಿರ್ಮಿಸಲಾದ ವಿವಿಧ ಪ್ರಕಾರದ ಕೃಷಿ ಇಂಪ್ಲಿಮೆಂಟ್ ಗಳನ್ನು ಜಾನ್ ಡಿಯರ್ ಒದಗಿಸುತ್ತದೆ.

ಜಮೀನು ಸಿದ್ಧಪಡಿಸುವುದರಿಂದ ಹಿಡಿದು ಕೊಯ್ಲು ಕೆಲಸದ ನಂತರದವರೆಗೆ ಬಳಕೆಯಾಗುವ ಜಾನ್ ಡಿಯರ್ ಇಂಪ್ಲಿಮೆಂಟ್ ಗಳು ಇವುಗಳನ್ನು ಒಳಗೊಂಡಿರುತ್ತವೆ:

  • ಆಳವಾದ ಮತ್ತು ಸಮಾನ ಉಳುಮೆಗಾಗಿ ರೋಟರಿ ಟಿಲ್ಲರ್ ಗಳು
  • ಬಾಳೆಹಣ್ಣು ಅಥವಾ ಕಬ್ಬುಗಳ ಉಳಿದ ಅವಶೇಷಗಳ ನಿರ್ವಹಣೆಗಾಗಿ ಮಲ್ಚರ್ ಗಳು
  • ಮಟೀರಿಯಲ್ ಗಳ ನಿರ್ವಹಣೆಗಾಗಿ ಲೋಡರ್ ಗಳು
  • ನಿಖರ ಕೃಷಿಗಾಗಿ ಸೀಡರ್ ಗಳು ಮತ್ತು ಪ್ಲಾಂಟರ್ ಗಳು
  • ಬೆಳೆ-ನಿರ್ದಿಷ್ಟ ಕಾರ್ಯಾಚರಣೆಗಳಿಗಾಗಿ ಬೇಲರ್ ಗಳು, ಸ್ಪ್ರೇಯರ್ ಗಳು, ಮತ್ತು ಹಾರ್ವೆಸ್ಟರ್ ಗಳು

ಇವೆಲ್ಲವನ್ನೂ ಗರಿಷ್ಠ ಹೊಂದಾಣಿಕೆ ಮತ್ತು ಬಾಳಿಕೆಗಾಗಿ ನಿರ್ಮಿಸಲಾಗಿದೆ. ನೀವು ಸಲಕರಣೆಗಳು ಹೊಂದುತ್ತವೆಯೋ ಇಲ್ಲವೋ ಎಂದು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಅಥವಾ ಸರಿ ಹೊಂದದ ಸಲಕರಣೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ

6. ಸದಾ ನಿಕಟವಾದ, ಯಾವಾಗಲೂ ವಿಶ್ವಾಸಾರ್ಹವಾದ ಸೇವೆ

ನೀವು ಪ್ರತಿದಿನ ನಿಮ್ಮ ಟ್ರ್ಯಾಕ್ಟರ್ ಮೇಲೆ ಅವಲಂಬಿತರಾದಾಗ, ಡೌನ್ ಟೈಮ್ ಒಳ್ಳೆಯದಲ್ಲ. ಇಂತಹ ಸಮಸ್ಯೆಗೆ ಭಾರತದಲ್ಲಿ ಜಾನ್ ಡಿಯರ್ ನ ಪ್ರಬಲ ಸರ್ವಿಸ್ ಪರಿಸರವು ಸೂಕ್ತ ಪರಿಹಾರ ಒದಗಿಸುತ್ತದೆ.

  • ಭಾರತದಾದ್ಯಂತ 500 ಕ್ಕೂ ಹೆಚ್ಚು ಡೀಲರ್ ಸ್ಥಳಗಳು
  • ತರಬೇತಿ ಪಡೆದ ಟೆಕ್ನಿಶನ್ ಗಳು ಮತ್ತು ನಿಜವಾದ ಸ್ಪೇರ್ ಪಾರ್ಟ್ ಗಳು
  • ಮನೆ ಬಾಗಿಲಿಗೆ ಸೇವೆ ತಲುಪಿಸಲು ಸರ್ವಿಸ್-ಆನ್-ವ್ಹೀಲ್ಸ್
  • ಸಮಸ್ಯೆಗಳಿಗೆ ಶೀಘ್ರ ಪ್ರತಿಕ್ರಿಯೆ, ವಿಶೇಷವಾಗಿ ಕೆಲಸ ತುಂಬಾ ಹೆಚ್ಚಾಗಿರುವ ಋತುಗಳಲ್ಲಿ ಬಹಳ ಕಡಿಮೆ ಸಮಯದಲ್ಲಿ ಪ್ರತಿಕ್ರಿಯಿಸಲಾಗುತ್ತದೆ

ಜಾನ್ ಡಿಯರ್ ಇಂಡಿಯಾದಿಂದಾಗಿ, ಖರೀದಿ ಮಾಡುವ ರೈತ ಬಾಂಧವರು ಒಬ್ಬಂಟಿ ಎಂಬ ಭಾವನೆ ಮೂಡುವುದಿಲ್ಲ. ನೀವು ಯಂತ್ರದ ಜೊತೆಗೆ ಜೀವಮಾನದ ವಿಶ್ವಸನೀಯ ಸೇವೆ ಪಡೆಯುತ್ತೀರಿ.

7. ಭಾರತೀಯ ರೈತರೊಂದಿಗೆ ಅಭಿವೃದ್ಧಿ ಹೊಂದಿರುವ ಬ್ರ್ಯಾಂಡ್

ಜಾನ್ ಡಿಯರ್ ಕೇವಲ ಇನ್ನೊಂದು ಟ್ರ್ಯಾಕ್ಟರ್ ಬ್ರ್ಯಾಂಡ್ ಅಲ್ಲ, ಅದು ರೈತರು ಹೆಮ್ಮೆಯಿಂದ ಚರ್ಚಿಸುವಂತಹ ಹೆಸರಾಗಿದೆ. ಜಾಗತಿಕವಾಗಿ 185 ವರ್ಷಗಳಿಗಿಂತ ಹೆಚ್ಚು ಕಾಲ, ಮತ್ತು ಭಾರತದಲ್ಲಿ ಇಪ್ಪತ್ತು ವರ್ಷಗಳಿಗಿಂತ ಹೆಚ್ಚು ಕಾಲ, ಜಾನ್ ಡಿಯರ್ ಹೊಸತನ, ಬಾಳಿಕೆ, ಮತ್ತು ಕೃಷಿಯ ಬಗ್ಗೆ ಆಳವಾದ ಜ್ಞಾನದ ಪ್ರತೀಕವಾಗಿದೆ.

  • 15 ಕ್ಕಿಂತ ಹೆಚ್ಚು ವರ್ಷಗಳ ಹಿಂದೆ ತಮ್ಮ ಮೊದಲ ಜಾನ್ ಡಿಯರ್ ಖರೀದಿಸಿದ ಅನೇಕ ರೈತರು ಇಂದಿಗೂ ಸಹ ಅದರ ಮೇಲೆ ಅಗಾಧ ನಂಬಿಕೆ ಇಟ್ಟುಕೊಂಡಿದ್ದಾರೆ
  • ರೈತರ ಹಲವಾರು ತಲೆಮಾರುಗಳು ಈ ಬ್ರ್ಯಾಂಡ್ ಅನ್ನೇ ನಂಬಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ
  • ಪ್ರತಿಯೊಂದು ಟ್ರ್ಯಾಕ್ಟರ್ ನೊಂದಿಗೆ, ರೈತರು ಯಂತ್ರ ಪಡೆಯುವುದರ ಜೊತೆಗೆ ಜ್ಞಾನ ಮತ್ತು ಬೆಂಬಲ ಹಂಚಿಕೊಳ್ಳುವ ದೊಡ್ಡ ಕೃಷಿ ಸಮುದಾಯದ ಭಾಗವಾಗುತ್ತಾರೆ

ಕೃಷಿ ಸಾಕಷ್ಟು ಅನಿಶ್ಚಿತ ಸಂಗತಿಗಳಿಂದ ಕೂಡಿದ ಪ್ರಯಾಣವಾಗಿದೆ. ಆದರೆ ನೀವು ಆಯ್ಕೆ ಮಾಡುವ ಟೂಲ್ ಗಳು ನಿಮಗೆ ಬಲ ಮತ್ತು ಸ್ಥಿರತೆ ನೀಡುತ್ತವೆ. ಜಾನ್ ಡಿಯರ್ ಇಂಡಿಯಾ ಟ್ರ್ಯಾಕ್ಟರ್ ಗಳೊಂದಿಗೆ, ನೀವು ನಿಮ್ಮ ಕನಸುಗಳೊಂದಿಗೆ ಬೆಳವಣಿಗೆಯಾಗುವ ಹಾರ್ಸ್ ಪವರ್ ನಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಮನಸ್ಸಿನ ನೆಮ್ಮದಿ, ಉತ್ತಮ ಉತ್ಪಾದಕತೆಯಲ್ಲಿ, ಯಂತ್ರದಲ್ಲಿ ಕೂಡ ಹೂಡಿಕೆ ಮಾಡುತ್ತೀರಿ.

ನಿಮ್ಮ ಬೇಸಿಕ್ ಮಾಡಲ್ ಕೊಟ್ಟು ಹೆಚ್ಚು ಆಧುನಿಕ ಮಾಡಲ್ ಖರೀದಿಸುತ್ತಿರಲಿ ಅಥವಾ ನಿಮ್ಮ ಮೊಟ್ಟ ಮೊದಲ ಟ್ರ್ಯಾಕ್ಟರ್ ಖರೀದಿಸುತ್ತಿರಲಿ, ಟೆಸ್ಟ್ ಡ್ರೈವ್ ಮಾಡಿ, ಸ್ಥಳೀಯ ಡೀಲರ್ ಜೊತೆ ಮಾತನಾಡಿ, ಮತ್ತು ಎಷ್ಟು ವ್ಯತ್ಯಾಸವಿದೆ ಎಂದು ಸ್ವತಃ ಅನುಭವಿಸಿ.