
ಐಫೋನ್ ಬಳಕೆದಾರರು ಅನುಭೂತಿ ಆ್ಯಪ್ ಅನ್ನು ಏಕೆ ಇಷ್ಟಪಡುತ್ತಾರೆ?
1. ಜಾನ್ ಡಿಯರ್ ಉತ್ಪನ್ನಗಳನ್ನು ಸುಲಭವಾಗಿ ಅನ್ವೇಷಿಸಿ:
ವ್ಯಾಪಕ ಶ್ರೇಣಿಯ ಟ್ರ್ಯಾಕ್ಟರ್ ಗಳು, ಇಂಪ್ಲಿಮೆಂಟ್ ಗಳು, ನಿಜವಾದ ಪಾರ್ಟ್ ಗಳು ಮತ್ತು ಇನ್ನೂ ಹೆಚ್ಚಿನ ಅಂಶಗಳನ್ನು ಹುಡುಕಿ. ಮಾಡಲ್ ಗಳು, ಹಾರ್ಸ್ ಪವರ್ ಮತ್ತು ವೈಶಿಷ್ಟ್ಯಗಳನ್ನು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಹೋಲಿಸಿ ನೋಡಿ.
2. ನಿಮ್ಮ ಹತ್ತಿರದ ಡೀಲರ್ ಶಿಪ್ ಅನ್ನು ತಕ್ಷಣ ಕಂಡುಕೊಳ್ಳಿ:
ನಿಮ್ಮ ತೋಟಕ್ಕೆ ಹತ್ತಿರದ ಜಾನ್ ಡಿಯರ್ ಮಳಿಗೆಗಳನ್ನು ಹುಡುಕಲು ಇನ್ ಬಿಲ್ಟ್ ಡೀಲರ್ ಲೊಕೇಟರ್ ಬಳಸಿ. ತಜ್ಞರ ಮಾರ್ಗದರ್ಶನದಿಂದ ಹಿಡಿದು ಸ್ಥಳೀಯ (ಆನ್-ಗ್ರೌಂಡ್) ಬೆಂಬಲದವರೆಗೆ, ಎಲ್ಲವನ್ನೂ ಕೆಲವೇ ಸೆಕೆಂಡುಗಳಲ್ಲಿ ಪ್ರವೇಶಿಸಬಹುದು.
3. ನಿಜವಾದ ಟ್ರ್ಯಾಕ್ಟರ್ ಪಾರ್ಟ್ ಗಳನ್ನು ಆರ್ಡರ್ ಮಾಡಿ:
ಅನುಭೂತಿ ಆಪ್ ನಿಮ್ಮ ಟ್ರ್ಯಾಕ್ಟರ್ ಪಾರ್ಟ್ ಗಳ ಅಂಗಡಿಯಾಗಿ ಕಾರ್ಯನಿರ್ವಹಿಸುತ್ತದೆ, ಇಲ್ಲಿ ನೀವು ಅಧಿಕೃತ ಜಾನ್ ಡಿಯರ್ ಬಿಡಿಭಾಗಗಳನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಬಹುದು. ನಿಮ್ಮ ಐಫೋನ್ ಮೂಲಕ ಹೋಮ್ ಡೆಲಿವರಿ ಅಥವಾ ಡೀಲರ್ ಶಿಪ್ ಪಿಕ್-ಅಪ್ ಆಯ್ಕೆ ಮಾಡಿ.
4. ಒಂದು ಟ್ಯಾಪ್ ಮೂಲಕ ಸರ್ವಿಸ್ ಬುಕ್ ಮಾಡಿ:
ಆಪ್ ಮುಖಾಂತರ ಟ್ರ್ಯಾಕ್ಟರ್ ಸರ್ವಿಸಿಂಗ್ ಅಥವಾ ರಿಪೇರಿಗಳನ್ನು ನಿಗದಿಪಡಿಸಿ. ನಿಮಗೆ ಬೇಕಾದ ಸಮಯಾವಧಿಗಳನ್ನು ಆರಿಸಿಕೊಳ್ಳಿ ಮತ್ತು ತರಬೇತಿ ಪಡೆದ ಮೆಕ್ಯಾನಿಕ್ ಗಳು ಮತ್ತು ನಿಜವಾದ ಪಾರ್ಟ್ ಗಳನ್ನು ಮಾತ್ರ ಬಳಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ, ಈ ಮೂಲಕ ಸಮಯ ಮತ್ತು ವೆಚ್ಚ ಎರಡನ್ನೂ ಉಳಿಸಿ.
ತಡೆರಹಿತ ಅನುಭವಕ್ಕಾಗಿ ಸುಗಮ, ಆಧುನಿಕ UI
ಅನುಭೂತಿ iOS ಆಪ್ ಅನ್ನು ಆಪಲ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದ್ದು, ಅದು ಅರ್ಥಗರ್ಭಿತ ವಿನ್ಯಾಸ, ವೇಗವಾದ ಪ್ರವೇಶ ಮತ್ತು iOS UX ಮಾನದಂಡಗಳಿಗೆ ಹೊಂದಾಣಿಕೆಯಾಗುವಂತಹ ಅದ್ಭುತ ದೃಶ್ಯಗಳನ್ನು ನೀಡುತ್ತದೆ. ಹೋಮ್ ಸ್ಕ್ರೀನ್ ನಿಂದ ಉತ್ಪನ್ನದ ಪುಟಗಳವರೆಗೆ (ಪ್ರಾಡಕ್ಟ್ ಪೇಜ್ ಗಳು), ಪ್ರತಿಯೊಂದು ವಿವರವು ಸುಲಭ ಬಳಕೆಯ ಮತ್ತು ಅತ್ಯುತ್ಕೃಷ್ಟ ಬ್ರೌಸಿಂಗ್ ಅನುಭವವನ್ನು ಖಚಿತಪಡಿಸುತ್ತದೆ.
ಸರಳ ಹಂತಗಳನ್ನು ಅನುಸರಿಸಿ iOS ನಲ್ಲಿ ಅನುಭೂತಿ ಆಪ್ ಅನ್ನು ಹೇಗೆ ಡೌನ್ ಲೋಡ್ ಮಾಡುವುದು ಮತ್ತು ಬಳಸುವುದು
ಹಂತ 1: ಆಪ್ ಡೌನ್ಲೋಡ್ ಮಾಡಿ
- ನಿಮ್ಮ ಐಫೋನ್ ನಲ್ಲಿ ಆಪ್ ಸ್ಟೋರ್ ತೆರೆಯಿರಿ
- " ಅನುಭೂತಿ ಆಪ್ – ಜಾನ್ ಡಿಯರ್ " ಗಾಗಿ ಹುಡುಕಿ
- ಡೌನ್ ಲೋಡ್ ಟ್ಯಾಪ್ ಮಾಡಿ ಮತ್ತು ಆಪ್ ಅನ್ನು ಇನ್ ಸ್ಟಾಲ್ ಮಾಡಿ
ಆಪ್ ಅನ್ನು ನೇರವಾಗಿ ಡೌನ್ ಲೋಡ್ ಮಾಡಿಕೊಳ್ಳಲು, ನೀವು ಕೆಳಗಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು.
ಹಂತ 2: ಸೈನ್ ಅಪ್ / ಲಾಗ್ ಇನ್ ಮಾಡಿ
- ಆಪ್ ತೆರೆಯಿರಿ
- ನಿಮ್ಮ ಮೊಬೈಲ್ ನಂಬರ್ ನಮೂದಿಸಿ
- OTP ಯೊಂದಿಗೆ ಪ್ರಮಾಣೀಕರಿಸಿ ಮತ್ತು ನಿಮ್ಮ ಪ್ರೊಫೈಲ್ ಸೃಷ್ಟಿಸಿ
- ನೀವು ಜಾನ್ ಡಿಯರ್ ಗ್ರಾಹಕರಾಗಿದ್ದರೆ, ವೈಯಕ್ತಿಕಗೊಳಿಸಿದ ವೈಶಿಷ್ಟ್ಯಗಳಿಗಾಗಿ ನಿಮ್ಮ ಟ್ರ್ಯಾಕ್ಟರ್ ನ ಚಾಸಿಸ್ ನಂಬರ್ ನೋಂದಾಯಿಸಿ
ಹಂತ 3: ಡ್ಯಾಶ್ ಬೋರ್ಡ್ ಅನ್ನು ಅನ್ವೇಷಿಸಿ
- ಜಾನ್ ಡಿಯರ್ ಟ್ರ್ಯಾಕ್ಟರ್ ಗಳು, ಇಂಪ್ಲಿಮೆಂಟ್ ಗಳು ಮತ್ತು ನಿಜವಾದ ಭಾಗಗಳನ್ನು ಹುಡುಕಿ ಅಥವಾ ಬ್ರೌಸ್ ಮಾಡಿ
- ಉತ್ಪನ್ನದ ವಿವರಗಳನ್ನು ವೀಕ್ಷಿಸಿ, ಮಾಡಲ್ ಗಳನ್ನು ಹೋಲಿಸಿ ಮತ್ತು ಬೆಲೆಗಳನ್ನು ಅನ್ವೇಷಿಸಿ
ಅನುಭೂತಿ ಆ್ಯಪ್ ಕೇವಲ ಒಂದು ಟೂಲ್ ಅಲ್ಲ, ಅದು ನಿಮ್ಮ ಡಿಜಿಟಲ್ ಕೃಷಿ ಸಹಾಯಕವಾಗಿದೆ. ಈಗ ಐಫೋನ್ ಪೀಳಿಗೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಅದು ನಿಮ್ಮ ಬೆರಳ ತುದಿಗಳಲ್ಲಿ ಗರಿಷ್ಠ ಅನುಕೂಲವನ್ನು ಒದಗಿಸುತ್ತದೆ. ಹಾಗಾಗಿ ಆಪ್ ಡೌನ್ ಲೋಡ್ ಮಾಡಲು ಮತ್ತು ನಿಮ್ಮ ಟ್ರ್ಯಾಕ್ಟರ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮರೆಯಬೇಡಿ, ಇದೆಲ್ಲವೂ ನಿಮ್ಮ ಮನೆಯಲ್ಲಿ ಆರಾಮವಾಗಿ ಕುಳಿತುಕೊಂಡೇ ಮಾಡಬಹುದು!