ಭಾರತೀಯ ಕೃಷಿಗಾಗಿ ಜಾನ್ ಡಿಯರ್ 4WD ಟ್ರ್ಯಾಕ್ಟರ್ ಗಳನ್ನು ಬಳಸುವುದರ ಪ್ರಯೋಜನಗಳು

Benefits of Using John Deere 4WD Tractors for Indian Farming

ಉನ್ನತ ಕೃಷಿ ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನದ ಅಳವಡಿಕೆಯೊಂದಿಗೆ ಭಾರತದಲ್ಲಿ ಆಧುನಿಕ ಕೃಷಿಯು ವೇಗವಾಗಿ ವಿಕಸನಗೊಳ್ಳುತ್ತಿದೆ. ರೈತರು ಇಂದು ಉತ್ತಮ ಉತ್ಪಾದಕತೆಯನ್ನು ನೀಡುವ, ಕಾರ್ಯಾಚರಣೆಯ ಶ್ರಮವನ್ನು ಕಡಿಮೆ ಮಾಡುವ ಮತ್ತು ವಿವಿಧ ಭೂಪ್ರದೇಶಗಳು ಮತ್ತು ಕೃಷಿ ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಟ್ರ್ಯಾಕ್ಟರ್‌ಗಳಿಗಾಗಿ ಹುಡುಕುತ್ತಿದ್ದಾರೆ.  ಇಲ್ಲಿ ಜಾನ್ ಡಿಯರ್ 4WD ಟ್ರ್ಯಾಕ್ಟರ್ ಶ್ರೇಣಿ ಪ್ರಮುಖ ಪಾತ್ರ ವಹಿಸುತ್ತದೆ.

ಹಿಡಿತ (ಟ್ರ್ಯಾಕ್ಷನ್), ಶಕ್ತಿಯ ಪೂರೈಕೆ (ಪವರ್ ಡೆಲಿವರಿ) ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ವ್ಯಾಪಕ ಶ್ರೇಣಿಯ 4WD ಟ್ರ್ಯಾಕ್ಟರ್‌ಗಳನ್ನು ನಾವೀನ್ಯತೆ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಗೆ ಹೆಸರುವಾಸಿಯಾದ ಜಾನ್ ಡಿಯರ್ ಇಂಡಿಯಾ ನೀಡುತ್ತದೆ. ಅದು ಹಣ್ಣಿನ ತೋಟದ ಕೃಷಿ ಆಗಿರಲಿ, ಮಣ್ಣು ಹದಗೊಳಿಸುವಿಕೆ, ಸಾಗುವಳಿ ಅಥವಾ ಸಾಗಣೆ ಕೆಲಸವಾಗಿರಲಿ, 4WD ಟ್ರ್ಯಾಕ್ಟರ್‌ಗಳು ಕಾರ್ಯಗಳನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ರೈತರಿಗೆ ಸಹಾಯ ಮಾಡುತ್ತವೆ.

4WD ಟ್ರ್ಯಾಕ್ಟರ್ ಎಂದರೇನು?

ಫೋರ್-ವೀಲ್ ಡ್ರೈವ್ ಟ್ರ್ಯಾಕ್ಟರ್ ಎಂದೂ ಕರೆಯಲ್ಪಡುವ 4WD ಟ್ರ್ಯಾಕ್ಟರ್, ಹಿಂದಿನ ವೀಲ್‌ಗಳಿಗೆ ಮಾತ್ರ ಶಕ್ತಿ (ಪವರ್) ವಿತರಿಸದೇ ಎಲ್ಲಾ ನಾಲ್ಕು ವೀಲ್‌ಗಳಿಗೆ ಶಕ್ತಿಯನ್ನು ವಿತರಿಸುತ್ತದೆ. ಈ ವ್ಯವಸ್ಥೆಯು ಕೃಷಿ ಕಾರ್ಯಾಚರಣೆಗಳ ಸಮಯದಲ್ಲಿ ಹಿಡಿತ, ಸ್ಥಿರತೆ ಮತ್ತು ಎಳೆಯುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.

ಸಾಂಪ್ರದಾಯಿಕ ಟ್ರ್ಯಾಕ್ಟರ್ ಗಳಿಗೆ ಹೋಲಿಸಿದರೆ, ಜಾನ್ ಡಿಯರ್ 4WD ಟ್ರ್ಯಾಕ್ಟರ್ ಕೆಸರಿರುವ ಗದ್ದೆಗಳು, ಅಸಮ ಭೂಪ್ರದೇಶ ಮತ್ತು ಅತ್ಯಂತ ಶ್ರಮದಾಯಕ ಕೆಲಸಗಳಲ್ಲಿ (ಹೆವಿ-ಲೋಡ್ ಅಪ್ಲಿಕೇಶನ್) ಉತ್ತಮ ನಿಯಂತ್ರಣವನ್ನು ಒದಗಿಸುತ್ತದೆ. ಈ ಸಾಮರ್ಥ್ಯವು ಸುಧಾರಿತ ಕೃಷಿ ಉತ್ಪಾದಕತೆ ನೀಡುತ್ತದೆ ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಜಾರುವಿಕೆಯನ್ನು ಕಡಿಮೆ ಮಾಡುತ್ತದೆ.

ಕಠಿಣ ಕೃಷಿ ಪರಿಸ್ಥಿತಿಗಳಿಗೆ ಉತ್ತಮ ಹಿಡಿ

ಭಾರತೀಯ ತೋಟಗಳು ಸಾಮಾನ್ಯವಾಗಿ ವಿಭಿನ್ನ ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಹೊಂದಿರುತ್ತವೆ. ಮಳೆಗಾಲದಲ್ಲಿ ಅಥವಾ ನೀರಾವರಿ ಆಧಾರಿತ ತೀವ್ರ ಕೃಷಿಯ ಸಮಯದಲ್ಲಿ, ಗದ್ದೆಗಳ ನೆಲ ಜಾರುವಂತಾಗುತ್ತದೆ ಮತ್ತು ಅದನ್ನು ನಿರ್ವಹಿಸಲು ಕಷ್ಟವಾಗಬಹುದು. 4WD ಸಾಮರ್ಥ್ಯವನ್ನು ಹೊಂದಿರುವ  ಜಾನ್ ಡಿಯರ್ ಟ್ರ್ಯಾಕ್ಟರ್ ವರ್ಧಿತ ಹಿಡಿತವನ್ನು ಒದಗಿಸುತ್ತದೆ, ಇದರಿಂದಾಗಿ ಒದ್ದೆಯಾದ ಮತ್ತು ಮೃದುವಾದ ಮಣ್ಣಿನ ಪರಿಸ್ಥಿತಿಗಳಲ್ಲಿಯೂ ಸರಾಗವಾಗಿ ಚಲಿಸಲು ಟ್ರ್ಯಾಕ್ಟರ್‌ಗೆ ಸಹಾಯ ಮಾಡುತ್ತದೆ.

ಈ ಸುಧಾರಿತ ಹಿಡಿತವು (ಗ್ರಿಪ್) ವೀಲ್ ಜಾರುವಿಕೆ ಮತ್ತು ಇಂಧನ ವ್ಯರ್ಥವಾಗುವುದನ್ನು ಕಡಿಮೆ ಮಾಡುವುದರ ಜೊತೆಗೆ ಭಾರವಾದ ಉಪಕರಣಗಳನ್ನು (ಇಂಪ್ಲಿಮೆಂಟ್‌ಗಳನ್ನು) ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಉತ್ತಮ ಹಿಡಿತವು ಒಂದೇ ತೆರನಾದ ಗದ್ದೆ ಕಾರ್ಯಾಚರಣೆಗಳನ್ನು ಸಹ ಖಚಿತಪಡಿಸುತ್ತದೆ, ಇದು ಬೆಳೆಯ ಗುಣಮಟ್ಟ ಮತ್ತು ಇಳುವರಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು.

ಭಾರೀ ಉಪಕರಣಗಳೊಂದಿಗೆ ಸುಧಾರಿತ ದಕ್ಷತೆ

ಆಧುನಿಕ ಕೃಷಿಯಲ್ಲಿ ಟ್ರ್ಯಾಕ್ಟರ್‌ಗಳು  ರೋಟಾವೇಟರ್‌ಗಳು, ಕಲ್ಟಿವೇಟರ್‌ಗಳು, ಸೀಡ್ ಡ್ರಿಲ್‌ಗಳು, ಲೋಡರ್‌ಗಳು ಮತ್ತು ನೇಗಿಲುಗಳಂತಹ ಅನೇಕ ಕೃಷಿ ಉಪಕರಣಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಬೇಡಿಕೆಯ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ಜಾನ್ ಡಿಯರ್ 4WD ಟ್ರ್ಯಾಕ್ಟರ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಎಲ್ಲಾ ನಾಲ್ಕು ವೀಲ್‌ಗಳಲ್ಲಿ ಶಕ್ತಿಯ ವಿತರಣೆಯಾಗುವುದರಿಂದ, ಟ್ರ್ಯಾಕ್ಟರ್ ಉತ್ತಮ ಸಮತೋಲನ ಮತ್ತು ಎಂಜಿನ್ ಮೇಲೆ ಕಡಿಮೆ ಒತ್ತಡದೊಂದಿಗೆ ಭಾರವಾದ ಲೋಡ್‌ಗಳನ್ನು ಎಳೆಯಬಹುದು. ಈ ಪ್ರಯೋಜನದಿಂದಾಗಿ ಒಟ್ಟಾರೆ ಟ್ರ್ಯಾಕ್ಟರ್ ದಕ್ಷತೆ ಸುಧಾರಿಸುತ್ತದೆ ಮತ್ತು ರೈತರಿಗೆ ಕಡಿಮೆ ಸಮಯದಲ್ಲಿ ಕೃಷಿ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಡುತ್ತದೆ.

ದೊಡ್ಡ ಪ್ರಮಾಣದ ಕೃಷಿ ಕಾರ್ಯಾಚರಣೆಗಳಿಗಾಗಿ, ಈ ದಕ್ಷತೆಯು ಋತುಮಾನದುದ್ದಕ್ಕೂ ಕಾರ್ಯಾಚರಣೆಯ ವೆಚ್ಚಗಳನ್ನು ಕಡಿಮೆಯಾಗಿಸುತ್ತದೆ ಮತ್ತು ಹೆಚ್ಚಿನ ಉತ್ಪಾದಕತೆ ಒದಗಿಸುತ್ತದೆ.

ಕಡಿಮೆ ಸಮಯದಲ್ಲಿ ಹೆಚ್ಚಿನ ಉತ್ಪಾದಕತೆ

ಕೃಷಿಯಲ್ಲಿ ಸಮಯ ನಿರ್ವಹಣೆ ನಿರ್ಣಾಯಕವಾಗಿರುತ್ತದೆ. ಬಿತ್ತನೆ, ಭೂಮಿ ಸಿದ್ಧತೆ ಅಥವಾ ಕೊಯ್ಲಿನಲ್ಲಿನ ವಿಳಂಬದಿಂದಾಗಿ ಬೆಳೆ ಉತ್ಪಾದನೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಜಾನ್ ಡಿಯರ್ ಇಂಡಿಯಾ ರೈತರಿಗೆ ಗದ್ದೆಯ ಕಾರ್ಯಾಚರಣೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡಲೆಂದು ತನ್ನ 4WD ಟ್ರ್ಯಾಕ್ಟರ್‌ಗಳನ್ನು ವಿನ್ಯಾಸಗೊಳಿಸುತ್ತದೆ.

ಉತ್ತಮ ಹಿಡಿತ ಮತ್ತು ಹೆಚ್ಚಿನ ಎಳೆಯುವ ಶಕ್ತಿಯೊಂದಿಗೆ, ರೈತರು ಕಡಿಮೆ ಅವಧಿಯಲ್ಲಿ ದೊಡ್ಡ ಕೃಷಿ ಪ್ರದೇಶಗಳಲ್ಲಿನ ಕಾರ್ಯಗಳನ್ನು ಮಾಡಬಹುದು. ಈ ಸುಲಭತೆಯು ಒಟ್ಟಾರೆ ಕೃಷಿ ಉತ್ಪಾದಕತೆಯನ್ನು ಸುಧಾರಿಸುತ್ತದೆ ಮತ್ತು ಕೃಷಿ ಚಟುವಟಿಕೆಗಳನ್ನು ಸಕಾಲಿಕವಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ.

ಹೆಚ್ಚುವರಿಯಾಗಿ, 4WD ಟ್ರ್ಯಾಕ್ಟರ್‌ಗಳು ಇಳಿಜಾರುಗಳಲ್ಲಿ ಮತ್ತು ಅಸಮ ಭೂಮಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದರಿಂದ ಇವು ವೈವಿಧ್ಯಮಯ ಭಾರತೀಯ ಕೃಷಿ ಪ್ರದೇಶಗಳಿಗೆ ಸೂಕ್ತವಾಗಿವೆ.

ಉತ್ತಮ ಸ್ಥಿರತೆ ಮತ್ತು ಆಪರೇಟರ್ ಆರಾಮದಾಯಕತೆ

ಜಾನ್ ಡಿಯರ್ 4WD ಟ್ರ್ಯಾಕ್ಟರ್ ಅನ್ನು ಬಳಸುವ ಒಂದು ಪ್ರಮುಖ ಪ್ರಯೋಜನವೆಂದರೆ ಕಾರ್ಯಾಚರಣೆಯ ಸಮಯದಲ್ಲಿ ಸುಧಾರಿತ ಸ್ಥಿರತೆ. ವಿಶೇಷವಾಗಿ ಭಾರವಾದ ಉಪಕರಣಗಳೊಂದಿಗೆ ಕೆಲಸ ಮಾಡುವಾಗ ಅಥವಾ ಸಾರಿಗೆ ಕಾರ್ಯಗಳ ಸಮಯದಲ್ಲಿ ಸಮತೋಲಿತ ಶಕ್ತಿ ವಿತರಣೆಯು ಉತ್ತಮ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಜಾನ್ ಡಿಯರ್ ಟ್ರ್ಯಾಕ್ಟರ ಗಳನ್ನು ಆಪರೇಟರ್ ಆರಾಮವನ್ನು ಗಮನದಲ್ಲಿಟ್ಟುಕೊಂಡು ಕೂಡ ವಿನ್ಯಾಸಗೊಳಿಸಲಾಗಿದೆ. ಪವರ್ ಸ್ಟೇರಿಂಗ್, ದಕ್ಷ ಮತ್ತು ಆರಾಮದಾಯಕ ಆಸನ, ಸುಲಭ ಗೇರ್ ಶಿಫ್ಟಿಂಗ್ ಮತ್ತು ಸರಾಗವಾದ ನಿಯಂತ್ರಣಗಳಂತಹ ಲಕ್ಷಣಗಳು ದೀರ್ಘಕಾಲದವರೆಗೆ ಕೆಲಸದ ಸಮಯದಲ್ಲಿ ಆಪರೇಟರ್ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆರಾಮದಾಯಕ ಕಾರ್ಯಾಚರಣೆಯು ದಿನವಿಡೀ ಹೆಚ್ಚಿನ ಕೆಲಸದ ದಕ್ಷತೆ ಮತ್ತು ಸುಧಾರಿತ ಗದ್ದೆಯಲ್ಲಿನ ಕಾರ್ಯಕ್ಷಮತೆಗೆ ಕೊಡುಗೆ ನೀಡುತ್ತದೆ.

ವಿಶೇಷ ಕೃಷಿ ಕಾರ್ಯಗಳಿಗಾಗಿ ಸೂಕ್ತವಾಗಿದೆ

ಜಾನ್ ಡಿಯರ್ ಇಂಡಿಯಾ ಹಣ್ಣಿನ ಕೃಷಿ, ಬಿತ್ತನೆ ಮತ್ತು ಕೊಯ್ಲಿನ ನಡುವೆ ಮಾಡುವ ಹಲವಾರು ಕಾರ್ಯಾಚರಣೆಗಳು ಮತ್ತು ಕಿರಿದಾದ ಗದ್ದೆ ಕಾರ್ಯಗಳಿಗಾಗಿ ವಿಶೇಷ 4WD ಟ್ರ್ಯಾಕ್ಟರ್ ಗಳನ್ನು ನೀಡುತ್ತದೆ. ಜಾನ್ ಡಿಯರ್ 3036EN ಮತ್ತು 3036E ನಂತಹ ಮಾದರಿಗಳು ದ್ರಾಕ್ಷಿತೋಟಗಳು, ಕಬ್ಬಿನ ತೋಟಗಳು ಮತ್ತು ತೋಟಗಾರಿಕೆ ಚಟುವಟಿಕೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಈ ಕಾಂಪ್ಯಾಕ್ಟ್ 4WD ಟ್ರ್ಯಾಕ್ಟರ್‌ಗಳು ಬಲವಾದ ಹಿಡಿತ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಕಾಪಾಡಿಕೊಳ್ಳುವಾಗ ಅತ್ಯುತ್ತಮ ತಿರುಗಿಸುವಿಕೆಯನ್ನು ಒದಗಿಸುತ್ತವೆ. ಇಕ್ಕಟ್ಟಾದ ಕೃಷಿ ಸ್ಥಳಗಳಲ್ಲಿಯೂ ರೈತರು ಸಿಂಪಡಿಸುವಿಕೆ, ಕೃಷಿ ಮತ್ತು ಬಿತ್ತನೆ-ಕೊಯ್ಲಿನ ನಡುವೆ ಮಾಡುವ ಹಲವಾರು ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದು.

ಕಡಿಮೆ ಮಣ್ಣಿನ ಸಾಂದ್ರತೆ ಮತ್ತು ಉತ್ತಮ ಗದ್ದೆ ಕಾರ್ಯಕ್ಷಮತೆ

4WD ಟ್ರ್ಯಾಕ್ಟರ್‌ಗಳು ಎಲ್ಲಾ ವೀಲ್‌ಗಳಲ್ಲಿ ತೂಕವನ್ನು ಹೆಚ್ಚು ಸಮಾನವಾಗಿ ವಿತರಿಸುವುದರಿಂದ, ಅವು ಮಣ್ಣಿನ ಮೇಲಿನ ಅತಿಯಾದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಲಕ್ಷಣವು ಮಣ್ಣಿನ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೆಳೆ ಬೆಳವಣಿಗೆಗೆ ಆರೋಗ್ಯಕರ ಮಣ್ಣಿನ ರಚನೆಯನ್ನು ಬೆಂಬಲಿಸುತ್ತದೆ.

ಅದೇ ಸಮಯದಲ್ಲಿ, ಸುಧಾರಿತ ಗದ್ದೆ ಹಿಡಿತವು ಉಪಕರಣದ ಉತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚು ಸ್ಥಿರವಾದ ಕೃಷಿ ಕಾರ್ಯಾಚರಣೆಗಳನ್ನು ಖಚಿತಪಡಿಸುತ್ತದೆ. ಇದು ಕಾಲಾನಂತರದಲ್ಲಿ ಸುಧಾರಿತ ಬೆಳೆ ನಿರ್ವಹಣೆ ಮತ್ತು ಹೆಚ್ಚಿನ ಕೃಷಿ ಉತ್ಪಾದನೆಗೆ ಅನುಕೂಲ ಮಾಡಿಕೊಡುತ್ತದೆ.

ಉಪಸಂಹಾರ

ಭಾರತೀಯ ಕೃಷಿಯು ಆಧುನೀಕರಣಗೊಳ್ಳುವುದನ್ನು ಮುಂದುವರಿಸುತ್ತಿದ್ದಂತೆ, ಹೆಚ್ಚಿನ ಕಾರ್ಯಕ್ಷಮತೆ ಮತ್ತು ಸಮರ್ಥ ಟ್ರ್ಯಾಕ್ಟರ್‌ಗಳ ಬೇಡಿಕೆ ಹೆಚ್ಚುತ್ತಿದೆ. ಜಾನ್ ಡಿಯರ್ 4WD ಟ್ರ್ಯಾಕ್ಟರ್ ರೈತರಿಗೆ ವಿವಿಧ ಕೃಷಿ ಕಾರ್ಯಗಳಲ್ಲಿ ಹಿಡಿತ, ಉತ್ಪಾದಕತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಭಾರೀ ಉಪಕರಣಗಳನ್ನು ನಿರ್ವಹಿಸುವುದರಿಂದ ಹಿಡಿದು ಕಷ್ಟಕರವಾದ ಗದ್ದೆ ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವವರೆಗೆ, ಜಾನ್ ಡಿಯರ್ ಇಂಡಿಯಾ ಆಧುನಿಕ ಭಾರತೀಯ ರೈತರಿಗಾಗಿ ವಿನ್ಯಾಸಗೊಳಿಸಲಾದ ಸುಧಾರಿತ ಟ್ರ್ಯಾಕ್ಟರ್ ಪರಿಹಾರಗಳನ್ನು ನೀಡುವುದನ್ನು ಮುಂದುವರಿಸಿದೆ. ವಿಶ್ವಾಸಾರ್ಹ 4WD ಟ್ರ್ಯಾಕ್ಟರ್‌ನಲ್ಲಿ ಹೂಡಿಕೆ ಮಾಡುವುದರಿಂದ ರೈತರಿಗೆ ಸಮಯವನ್ನು ಉಳಿಸಲು, ಉತ್ಪಾದನೆಯನ್ನು ಸುಧಾರಿಸಲು ಮತ್ತು ಉತ್ತಮ ದೀರ್ಘಕಾಲೀನ ಕೃಷಿ ಕಾರ್ಯಕ್ಷಮತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ.