ನಿಮ್ಮ ಕೃಷಿ ಅವಶ್ಯಕತೆಗಳಿಗಾಗಿ ಸರಿಯಾದ ಟ್ರ್ಯಾಕ್ಟರ್ ಆಯ್ಕೆ ಮಾಡುವುದರಿಂದ ನಿಮ್ಮ ಕೃಷಿ ಕಾರ್ಯಾಚರಣೆಗಳ ಯಶಸ್ಸಿಗೆ ಅಗತ್ಯವಾದ ಎಲ್ಲ ಬದಲಾವಣೆಗಳನ್ನು ಮಾಡಬಹುದು. ನಿಮ್ಮ ಬೇಡಿಕೆಗಳಿಗೆ ತಕ್ಕ ಮತ್ತು ನಿಮ್ಮ ಇಂಪ್ಲಿಮೆಂಟ್‌ಗಳೊಂದಿಗೆ ಕೆಲಸ ಮಾಡುವ ಹಲವಾರು ಆಯ್ಕೆಗಳೊಂದಿಗೆ ಲಭ್ಯವಿರುವ ಟ್ರ್ಯಾಕ್ಟರ್ ಅನ್ನು ಆಯ್ಕೆ ಮಾಡುವುದು ಕಷ್ಟವಾಗಬಹುದು.
ಚಿಂತಿಸಬೇಡಿ - ಈ ಬ್ಲಾಗ್ ನಿರ್ದಿಷ್ಟವಾಗಿ ಭಾರತದಲ್ಲಿ ಹೆಸರು ವಾಸಿಯಾದ ಜಾನ್ ಡಿಯರ್ ಟ್ರ್ಯಾಕ್ಟರ್ ಗಳ ಪೈಕಿ ಸೂಕ್ತ ಟ್ರ್ಯಾಕ್ಟರ್ ಮತ್ತು ಇಂಪ್ಲಿಮೆಂಟ್ ಗಳನ್ನು ಆಯ್ಕೆ ಮಾಡುವ ಪ್ರತಿಯೊಂದು ಹಂತವನ್ನು ನಿಮಗೆ ಪರಿಚಯಿಸುತ್ತದೆ. ಜಾನ್ ಡಿಯರ್ ಯಾವ ರೀತಿ ಭಾರತದಲ್ಲಿ ಉನ್ನತ ಟ್ರ್ಯಾಕ್ಟರ್ ಸಂಸ್ಥೆಯಾಗಿ ವಿಭಿನ್ನವಾಗಿದೆ ಮತ್ತು ಏಕೆ ರೈತರ ನಂಬಿಗಸ್ಥ ಆಯ್ಕೆಯಾಗಿದೆ ಎಂಬುದನ್ನು ಕೂಡ ನಾವು ವಿವರವಾಗಿ ನೋಡಲಿದ್ದೇವೆ.
ಜಾನ್ ಡಿಯರ್ ಟ್ರ್ಯಾಕ್ಟರ್ ಗಳನ್ನು ಏಕೆ ಆಯ್ಕೆ ಮಾಡಬೇಕು?
ಭಾರತದಲ್ಲಿ ಒಂದು ಟ್ರ್ಯಾಕ್ಟರ್ ಸಂಸ್ಥೆಯನ್ನು ಆಯ್ಕೆ ಮಾಡುವಾಗ ಜಾನ್ ಡಿಯರ್ ಉನ್ನತ ಆಯ್ಕೆಗಳಲ್ಲಿ ಒಂದಾಗಿದೆ. ಭಾರತೀಯ ರೈತರು ಜಾನ್ ಡಿಯರ್ ಟ್ರ್ಯಾಕ್ಟರ್‌ಗಳಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರಲು ಕಾರಣ ಅವುಗಳ ಹೊಸ ತಂತ್ರಜ್ಞಾನ ಮತ್ತು ಅವಲಂಬನೆ, ಇವುಗಳ ಮೂಲಕ ಈ ಟ್ರ್ಯಾಕ್ಟರ್‌ಗಳು ನಿರ್ದಿಷ್ಟ ಬೇಡಿಕೆಗಳನ್ನು ಈಡೇರಿಸಲು ಜನಪ್ರಿಯವಾಗಿವೆ.
ಆದರೆ ಭಾರತದಲ್ಲಿ ಜಾನ್ ಡಿಯರ್ ಟ್ರ್ಯಾಕ್ಟರ್ ಏಕೆ ನಿಮ್ಮ ಪ್ರಥಮ ಆಯ್ಕೆಯಾಗಿರಬೇಕು?
ಈ ಬಗ್ಗೆ ವಿವರವಾಗಿ ತಿಳಿಯೋಣ:
- ಅತ್ಯಾಧುನಿಕ ತಂತ್ರಜ್ಞಾನ - ಜಾನ್ ಡಿಯರ್ ಟ್ರ್ಯಾಕ್ಟರ್‌ಗಳು ಆಧುನಿಕ ಲಕ್ಷಣಗಳು ಮತ್ತು ಬಲಿಷ್ಠ ಎಂಜಿನಿಯರಿಂಗ್ ಹೊಂದಿದ್ದು ಶ್ರೇಷ್ಠ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯ ಒದಗಿಸುತ್ತದೆ. ಹೊಸತನಕ್ಕೆ ಅವುಗಳ ಬದ್ಧತೆಯಿಂದಾಗಿ ಭಾರತದಲ್ಲಿ ಅದೊಂದು ವಿಭಿನ್ನ ಟ್ರ್ಯಾಕ್ಟರ್ ಸಂಸ್ಥೆಯಾಗಿ ನಿಲ್ಲುತ್ತದೆ.
- ಬಹುಪಯೋಗಿ - ಜಾನ್ ಡಿಯರ್ ಮಾಡಲ್ ಗಳ ದೊಡ್ಡ ಸಂಗ್ರಹಣೆ ಹೊಂದಿದ್ದು, ಅವು 50 ಕ್ಕೂ ಹೆಚ್ಚು ವಿಶಿಷ್ಟ ಕೃಷಿ ಕೆಲಸಗಳನ್ನು ನಿರ್ವಹಿಸುವ ಮೂಲಕ ನೇಗಿಲು ಹೂಡಲು, ಸಸ್ಯಗಳನ್ನು ನೆಡಲು, ಅಥವಾ ಕೊಯ್ಲು ಮಾಡಲು ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಗಳನ್ನು ಆಯ್ಕೆ ಮಾಡುವುದನ್ನು ಸುಲಭವಾಗಿಸುತ್ತದೆ.
- ಬಾಳಿಕೆ - ಒರಟಾದ ಭೂಮಿ ಮತ್ತು ತಂಪು ಹವಾಮಾನ ಒಳಗೊಂಡು ಅತಿ ಹೆಚ್ಚು ಕಠಿಣವಾದ ಕೃಷಿ ಸಂದರ್ಭಗಳನ್ನು ಸಹಿಸಿಕೊಳ್ಳುವುದಕ್ಕಾಗಿ ಜಾನ್ ಡಿಯರ್ ಟ್ರ್ಯಾಕ್ಟರ್‌ಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಅವುಗಳ ಬಲಿಷ್ಠ ರಚನೆ ಮತ್ತು ಉತ್ಕೃಷ್ಟ ಮಟ್ಟದ ಕಂಪೋನೆಂಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವು ಟ್ರ್ಯಾಕ್ಟರ್ ಇಂಪ್ಲಿಮೆಂಟ್‌ಗಳ ವಿಷಯವಾಗಿ ದೇಶದಾದ್ಯಂತ ವಿಶ್ವಾಸಾರ್ಹ ಆಯ್ಕೆಯಾಗಲು ಕಾರಣವೇನು ಎಂಬುದು ಈಗ ಸ್ಪಷ್ಟವಾಗುತ್ತದೆ.
- ಇಂಧನ ದಕ್ಷತೆ - ಜಾನ್ ಡಿಯರ್‌ನ ಹೈ-ಪ್ರೆಶರ್ ಕಾಮನ್ ರೈಲ್ (HPCR) ತಂತ್ರಜ್ಞಾನ ಉಪಯೋಗಿಸಿ ಇಂಧನ ಬಳಕೆಯನ್ನು ಉತ್ತಮಗೊಳಿಸಲಾಗಿದ್ದು, ಈ ತಂತ್ರಜ್ಞಾನವು ಕಡಿಮೆ ವೆಚ್ಚದ ಮತ್ತು ಪರಿಸರ ಸ್ನೇಹಿ ಎರಡೂ ಆಗಿದೆ.
- ಅಸಾಮಾನ್ಯ ಬೆಂಬಲ - ಭಾರತದ ಪ್ರಮುಖ ಟ್ರ್ಯಾಕ್ಟರ್ ಸಂಸ್ಥೆಯಾಗಿರುವ ಜಾನ್ ಡಿಯರ್ ಸಾಟಿಯಿಲ್ಲದ ಗ್ರಾಹಕರ ಬೆಂಬಲ ನೀಡುತ್ತದೆ, ಈ ಮೂಲಕ ರೈತರಿಗೆ ಅವಶ್ಯಕತೆ ಇದ್ದಾಗಲೆಲ್ಲ ಸಮಯಕ್ಕೆ ಸರಿಯಾಗಿ ಸಹಾಯ ದೊರಕುವಂತೆ ಮಾಡುತ್ತದೆ.
ಭಾರತದಲ್ಲಿ ಜಾನ್ ಡಿಯರ್ ಟ್ರ್ಯಾಕ್ಟರ್‌ಗಳು ರೈತರ ಪ್ರಥಮ ಆಯ್ಕೆಯಾಗಲು ಕಾರಣವಾಗಿರುವ ಕೆಲವು ನಿರ್ದಿಷ್ಟ ಮಾಡಲ್‌ಗಳನ್ನು ವಿವರವಾಗಿ ತಿಳಿಯೋಣ:
#1. ಜಾನ್ ಡಿಯರ್ 5310 PowerTech™
ನಿಮಗೆ ಶಕ್ತಿ ಮತ್ತು ವಿಶ್ವಾಸಾರ್ಹತೆ ಎರಡೂ ನೀಡುವ ಟ್ರ್ಯಾಕ್ಟರ್ ಬೇಕಿದ್ದರೆ, ಈ ಜಾನ್ ಡಿಯರ್ 5310 ಅತ್ಯುತ್ತಮ ಆಯ್ಕೆಯಾಗಿದೆ. ಈ ಮಾಡಲ್ ನಲ್ಲಿರುವ ಶಕ್ತಿಶಾಲಿ 57 HP ಎಂಜಿನ್ 2100 RPM ನಲ್ಲಿ ಓಡುವುದರಿಂದ ಅತ್ಯಂತ ಕಠಿಣವಾದ ಕೆಲಸಗಳನ್ನು ಕೂಡ ಸುಲಭವಾಗಿ ಮಾಡುತ್ತದೆ. ಈ ಕೆಳಗಿನ ಅಂಶಗಳು ಜಾನ್ ಡಿಯರ್ 5310 ಟ್ರ್ಯಾಕ್ಟರ್ ಅನ್ನು ವಿಭಿನ್ನವಾದ ಆಯ್ಕೆಯನ್ನಾಗಿಸುತ್ತವೆ:
ಪ್ರಮುಖ ಲಕ್ಷಣಗಳು
- TREM IV ಎಮಿಶನ್ ತಂತ್ರಜ್ಞಾನ - ಎಮಿಶನ್ ಅಗತ್ಯಗಳನ್ನು ಅನುಸರಿಸುವ ಮೂಲಕ ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.
- ಅಧಿಕ ಎತ್ತುವ ಸಾಮರ್ಥ್ಯ - 2500 kg ವರೆಗೆ ಎತ್ತುವ ಸಾಮರ್ಥ್ಯ ಹೊಂದಿದೆ, ಈ ಮೂಲಕ ಇದು 3 ಬಾಟಮ್ ರಿವರ್ಸಿಬಲ್ ಪ್ಲೋ ಮತ್ತು ಪೊಟೆಟೊ ಪ್ಲಾಂಟರ್ ನಂತಹ ದೊಡ್ಡ ಟ್ರ್ಯಾಕ್ಟರ್ ಇಂಪ್ಲಿಮೆಂಟ್‌ಗಳಿಗೆ ಸೂಕ್ತವಾಗಿರುತ್ತದೆ.
- GearPro ಟ್ರಾನ್ಸ್ ಮಿಶನ್ - 12 ಫಾರ್ವರ್ಡ್ ಮತ್ತು 4 ರಿವರ್ಸ್ ಗೇರ್ ಗಳನ್ನು ನೀಡುವ ಮೂಲಕ ವಿಭಿನ್ನ ಕೃಷಿ ಕೆಲಸಗಳಿಗಾಗಿ ತಡೆರಹಿತ ಸ್ಪೀಡ್ ಸರಿಹೊಂದಿಸುವಿಕೆಗಳಿಗೆ ಅವಕಾಶ ಮಾಡಿಕೊಡುತ್ತದೆ.
- ಬಲಿಷ್ಠ ವಿನ್ಯಾಸ - ಅದರ ಪ್ರಬಲವಾದ ನಿರ್ಮಾಣದಿಂದಾಗಿ ಅದು ಹಲವಾರು ಮಣ್ಣು ಮತ್ತು ಭೂಪ್ರದೇಶದ ಸ್ಥಿತಿಗಳಿಗೆ ಸೂಕ್ತವಾಗಿರುತ್ತದೆ.
- ಆಧುನಿಕ ಕೂಲಿಂಗ್ ಸಿಸ್ಟಮ್ - CleanPro™ ತಂತ್ರಜ್ಞಾನವು ಹೆಚ್ಚಿನ ಎಂಜಿನ್ ತಣ್ಣಗಾಗಿಸುವಿಕೆಯನ್ನು ಖಚಿತಪಡಿಸುತ್ತದೆ ಮತ್ತು ಎಂಜಿನ್ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ.
- LED ಹೆಡ್ ಲ್ಯಾಂಪ್ಗಳು - ಹೊಸ ಶೈಲಿಯ ಹುಡ್ ನಲ್ಲಿರುವ LED ಹೆಡ್ ಲೈಟ್ ಗಳು ದಾರಿ ಚೆನ್ನಾಗಿ ಕಾಣಿಸುವಂತೆ ಮಾಡುತ್ತವೆ ಮತ್ತು ಅದಕ್ಕೆ ಹೆಚ್ಚು ಸಮಕಾಲೀನ ನೋಟ ನೀಡುತ್ತವೆ.
- ಹೈ-ಪ್ರೆಶರ್ ಕಾಮನ್ ರೈಲ್ (HPCR) ಸಿಸ್ಟಮ್ - ಫ್ಯೂಲ್ ಇಂಜೆಕ್ಷನ್ ಸಾಮರ್ಥ್ಯದ ಮುಖಾಂತರ ಉತ್ತಮ ಶಕ್ತಿ ಮತ್ತ ಕಡಿಮೆ ವೆಚ್ಚ.
ಅದನ್ನು ವಿಶಿಷ್ಟವಾಗಿಸುವ ಅಂಶಗಳಾವುವು?
ಭಾರತದಲ್ಲಿ ಜಾನ್ ಡಿಯರ್ ಒಂದು ಪ್ರಸಿದ್ಧ ಟ್ರ್ಯಾಕ್ಟರ್ ಬ್ರ್ಯಾಂಡ್ ಆಗಿರುವುದಕ್ಕೆ ಒಂದು ಕಾರಣ ಜಾನ್ ಡಿಯರ್ 5310 ಆಗಿದೆ. ಅದರ ಶಕ್ತಿ ಮತ್ತು ಹೊಂದಿಕೊಳ್ಳುವಿಕೆಯಿಂದಾಗಿ ಅದನ್ನು ರೋಟರಿ ಟಿಲ್ಲಿಂಗ್ ಮತ್ತು ನೇಗಿಲು ಹೂಡುವಿಕೆ ಒಳಗೊಂಡು ವಿವಿಧ ಪ್ರಕಾರದ ಕೆಲಸಗಳಿಗೆ ಬಳಸಬಹುದು. ದೊಡ್ಡ ಲೋಡ್‌ಗಳ ವಿಷಯದಲ್ಲಿ ಕೂಡ 5310 ತನ್ನ ಅಧಿಕ ಟಾರ್ಕ್ ಬ್ಯಾಕ್ ಅಪ್ ಮೂಲಕ ನಿರಂತರ ಪವರ್ ಪೂರೈಕೆ ಖಾತ್ರಿಪಡಿಸತ್ತದೆ.
#2. ಜಾನ್ ಡಿಯರ್ 5405 PowerTech™
ಅಸಾಮಾನ್ಯವಾದ ಜಾನ್ ಡಿಯರ್ 5405 ರೈತರಿಗೆ ಶಕ್ತಿ, ಸಾಮರ್ಥ್ಯ, ಮತ್ತು ಸೊಗಸಾದ ಸಮತೋಲನ ನೀಡುತ್ತದೆ. 63 HP ಎಂಜಿನ್ ಹೊಂದಿರುವ ಈ ಟ್ರ್ಯಾಕ್ಟರ್ ಕಾರ್ಯಕ್ಷಮತೆಯನ್ನು ಆಧುನಿಕ ವಿನ್ಯಾಸದೊಂದಿಗೆ ಜೊತೆಗೂಡಿಸುವುದರಿಂದ ಭಾರತದಲ್ಲಿ ವಿಶ್ವಾಸಾರ್ಹ ಟ್ರ್ಯಾಕ್ಟರ್ ಕಂಪನಿಗಾಗಿ ಹುಡುಕುತ್ತಿರುವ ರೈತರ ಮಧ್ಯೆ ನೆಚ್ಚಿನ ಟ್ರ್ಯಾಕ್ಟರ್ ಆಗಿದೆ.
ಪ್ರಮುಖ ಲಕ್ಷಣಗಳು
- ಟರ್ಬೊಚಾರ್ಜ್ಡ್ ಎಂಜಿನ್ - ಹೆಚ್ಚಿನ ಇಂಧನ ಉಳಿತಾಯಕ್ಕಾಗಿ, ಈ ಎಂಜಿನ್ ನಲ್ಲಿ HPCR ಇಲೆಕ್ಟ್ರಾನಿಕ್ ಇಂಜೆಕ್ಟರ್ ಮತ್ತು PowerTech ಎಂಜಿನ್ ಇವೆ.
- ಪ್ರಭಾವಶಾಲಿ ಎತ್ತುವ ಸಾಮರ್ಥ್ಯ - 2500 kg ವರೆಗೆ ಎತ್ತುವ ಸಾಮರ್ಥ್ಯ, ಪವರ್ ಹ್ಯಾರೋಗಳು ಮತ್ತು ಮಲ್ಚರ್‌ಗಳನ್ನು ಒಳಗೊಂಡು ವಿವಿಧ ಪ್ರಕಾರದ ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಗಳಿಗೆ ಸೂಕ್ತವಾಗಿದೆ.
- ಡ್ಯುಯೆಲ್ ಟಾರ್ಕ್ ಮೋಡ್ - ಸಾಮರ್ಥ್ಯ ಮತ್ತು ಇಂಧನ ದಕ್ಷತೆ ಹೆಚ್ಚಿಸಲು ಸ್ಟ್ಯಾಂಡರ್ಡ್ ಮತ್ತು ಇಕನಾಮಿಕಲ್ ಮೋಡ್‌ಗಳನ್ನು ಅದಲುಬದಲಾಗಿ ಬಳಸಬಹುದು.
- GearPro ಸರಣಿ - GearPro ಸಾಲಿನ ಭಾಗವಾಗಿ ಹೆಚ್ಚಿನ ಉತ್ಪಾದಕತೆಗಾಗಿ ಅಧಿಕ ಗೇರ್ ಸ್ಪೀಡ್ ಆಯ್ಕೆಗಳನ್ನು ನೀಡುತ್ತದೆ.
- ಫ್ಯಾಕ್ಟರಿಯಲ್ಲಿ ಜೋಡಿಸಲಾದ SCV - ವಿವಿಧ ಹೈಡ್ರಾಲಿಕ್ ಅಪ್ಲಿಕೇಶನ್ ಗಳಿಗೆ ಸೂಕ್ತವಾಗಿರುವ ಈ ಮಾಡಲ್ ಎರಡನೇ SCV ಜೊತೆ ಬರುತ್ತದೆ.
- ಹೆಚ್ಚು ಸ್ಥಳಾವಕಾಶವುಳ್ಳ ವಿನ್ಯಾಸ - ಹಿಂಭಾಗದ ಫ್ಲೋರ್ ಎಕ್ಸ್ ಟೆನ್ಶನ್ ಗಳೊಂದಿಗೆ ಅಗಲವಾದ ಪ್ಲಾಟ್ ಫಾರ್ಮ್ ಆಪರೇಟರ್ ಗಳಿಗೆ ಹೆಚ್ಚು ಆರಾಮ ನೀಡುತ್ತದೆ.
ಅದನ್ನು ವಿಶಿಷ್ಟವಾಗಿಸುವ ಅಂಶಗಳಾವುವು?
ಜಾನ್ ಡಿಯರ್‌ನ ಟ್ರ್ಯಾಕ್ಟರ್‌ಗಳು ವಿವಿಧ ಪ್ರಕಾರದ ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಗಳನ್ನು ಬಳಸಿಕೊಂಡು ವಿವಿಧ ಕೆಲಸಗಳನ್ನು ನಿರ್ವಹಿಸುವ ಬಹುಪಯೋಗಿ ಟ್ರ್ಯಾಕ್ಟರ್ ಆಗಿರುವುದರಿಂದ ಭಾರತದಲ್ಲಿ ಅದರ ಜನಪ್ರಿಯತೆ ಹೆಚ್ಚಾಗಿದೆ. ಈ ವಿಧಾನವು ಉಳುಮೆಯಿಂದ ಕೊಯ್ಲಿನವರೆಗೆ ಎಲ್ಲವನ್ನೂ ಸಮರ್ಥವಾಗಿ ಮಾಡುವುದನ್ನು ಖಚಿತಪಡಿಸುತ್ತದೆ.
#3. ಜಾನ್ ಡಿಯರ್ 5075E PowerTech™
ಉನ್ನತ ಮಟ್ಟದ ಕಾರ್ಯಕ್ಷಮತೆಯ ಅಗತ್ಯವಿರುವವರಿಗೆ ಜಾನ್ ಡಿಯರ್ 5075E ಸೂಕ್ತ ಆಯ್ಕೆಯಾಗಿದೆ. ಪ್ರಭಾವಶಾಲಿ 74 HP ಎಂಜಿನ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಟ್ರ್ಯಾಕ್ಟರ್ ಅನ್ನು ತಮ್ಮ ಟ್ರ್ಯಾಕ್ಟರ್ ಇಂಪ್ಲಿಮೆಂಟ್ಗಳಿಂದ ಅತ್ಯುತ್ತಮ ಕೆಲಸವನ್ನೇ ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ.
ಪ್ರಮುಖ ಲಕ್ಷಣಗಳು
- ಪ್ರಬಲ ಎಂಜಿನ್ - ಜಾನ್ ಡಿಯರ್ 3029H ಎಂಜಿನ್, ಟರ್ಬೊಚಾರ್ಜರ್ ಅನ್ನು ಹೊಂದಿದ್ದು, TREM IV ಎಮಿಶನ್ ಮಾನದಂಡಗಳನ್ನು ಪೂರೈಸುತ್ತದೆ.
- ವ್ಯಾಪಕ ಟ್ರಾನ್ಸ್ ಮಿಶನ್ ಆಯ್ಕೆಗಳು - ಹಲವಾರು ಕೃಷಿ ಕೆಲಸಗಳಿಗೆ ಹೊಂದಿಕೊಳ್ಳುವುದರ ಜೊತೆಗೆ GearPro ಸ್ಪೀಡ್, PowerReverser ಸ್ಪೀಡ್, ಮತ್ತು Creeper ಸ್ಪೀಡ್ ನೀಡುತ್ತದೆ.
- PermaClutch ಡ್ಯುಯೆಲ್ PTO - ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು ಮೆಂಟೆನನ್ಸ್ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತದೆ, ಈ ಮೂಲಕ ಕಡಿಮೆ ಕಾರ್ಯಾಚರಣೆ ವೆಚ್ಚಗಳನ್ನುಂಟು ಮಾಡುತ್ತದೆ.
- ಸಮರ್ಥ ತಂಪಾಗಿಸುವಿಕೆ ಅಥವಾ ಕೂಲಿಂಗ್ - CleanPro™ ಕೂಲಿಂಗ್ ಸಿಸ್ಟಮ್ ಎಂಜಿನ್ ಅನ್ನು ಉತ್ತಮ ತಾಪಮಾನಗಳಲ್ಲಿ ಇರಿಸುತ್ತದೆ, ಬಿಸಿ ವಾತಾವರಣದಲ್ಲಿ ಕೂಡ ಉತ್ತಮ ಸ್ಥಿತಿಯಲ್ಲಿರಿಸುತ್ತದೆ.
- ಅಧಿಕ ಎತ್ತುವ ಸಾಮರ್ಥ್ಯ - 2500 kg ವರೆಗೆ ನಿರ್ವಹಿಸುವ ಮೂಲಕ ಭಾರೀ ಕೆಲಸಗಳಲ್ಲಿ ಬಳಸುವ ಟ್ರ್ಯಾಕ್ಟರ್ ಇಂಪ್ಲಿಮೆಂಟ್ಗಳಿಗಾಗಿ ಬಳಸಲು ಸೂಕ್ತವಾಗಿದೆ.
- ಆಧುನಿಕ ಆಪರೇಟರ್ ಆರಾಮದಾಯಕತೆ - ಟಿಲ್ಟ್ ಸ್ಟೇರಿಂಗ್, ಸರಿಹೊಂದಿಸಬಹುದಾದ ಸೀಟ್ ಗಳು, ಮತ್ತು ಲೈಟಿಂಗ್ ಕಂಟ್ರೋಲ್ ಗಾಗಿ ಕಾಂಬಿನೇಶನ್ ಸ್ವಿಚ್ ಸುಲಭವಾಗಿ ಕೆಲಸ ಮಾಡುವುದನ್ನು ಖಚಿತಪಡಿಸುತ್ತವೆ.
ಅದನ್ನು ವಿಶಿಷ್ಟವಾಗಿಸುವ ಅಂಶಗಳಾವುವು?
ಜಾನ್ ಡಿಯರ್ 5075E ಭಾರತದಲ್ಲಿ ಉನ್ನತ ಮಟ್ಟದ ಟ್ರ್ಯಾಕ್ಟರ್ ಕಂಪನಿಯಾಗಿರಲು ಜಾನ್ ಡಿಯರ್ ಎಷ್ಟು ಬದ್ಧವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಶ್ರೇಷ್ಠತೆ ಬಯಸುವ ರೈತರಿಗಾಗಿ ನಿರ್ಮಿಸಲಾಗಿದ್ದು, ಎಲ್ಲ ಪ್ರಕಾರದ ಕೃಷಿ ಕೆಲಸಗಳಿಗಾಗಿ ಸಾಟಿಯಿಲ್ಲದ ಶಕ್ತಿ ಒದಗಿಸುತ್ತದೆ ಮತ್ತು ಬಹುಪಯೋಗಿಯಾಗಿದೆ.
#4. ಜಾನ್ ಡಿಯರ್ 5050D GearPro™
ಜಾನ್ ಡಿಯರ್ 5050D GearProTM ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯ ಸಂಗಮವಾಗಿದೆ. 50 HP ಎಂಜಿನ್ ಹೊಂದಿರುವ ಈ ಮಾಡಲ್ ಶಕ್ತಿಯ ಸಮತೋಲನ ಮತ್ತು ಇಂಧನದ ಮಿತವಾದ ಬಳಕೆ ಬಯಸುವವರಿಗೆ ಹೇಳಿ ಮಾಡಿಸಿದಂತಿದೆ. ನೀವು ಸಣ್ಣ ಪ್ರಮಾಣದ ರೈತರಾಗಿರಲಿ ಅಥವಾ ದೊಡ್ಡ ಕೃಷಿ ಉದ್ಯಮವನ್ನು ನಡೆಸುತ್ತಿರಲಿ, ಈ ಟ್ರ್ಯಾಕ್ಟರ್ ಅನ್ನು ನಿಮ್ಮ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಸಿದ್ಧಪಡಿಸಿದೆ.
ಪ್ರಮುಖ ಲಕ್ಷಣಗಳು
- ವಿವಿಧ ಪ್ರಕಾರದ ಗೇರ್ ಆಯ್ಕೆಗಳು - 12F+4R ಗೇರ್ ಗಳನ್ನು ಹೊಂದಿದ್ದು, ಹಲವಾರು ಕೃಷಿ ಕೆಲಸಗಳಲ್ಲಿ ಅಗತ್ಯವಾದ ಉತ್ತಮ ಸ್ಪೀಡ್ ನಿಯಂತ್ರಣ ನೀಡುತ್ತದೆ.
- ಬಾಳಿಕೆ - ಸ್ಟೈಲಿಶ್ ಸ್ಟೇರಿಂಗ್ ವ್ಹೀಲ್ ಮತ್ತು ಬಾಳಿಕೆ ಬರುವ ರಬ್ಬರ್ ಫ್ಲೋರ್ ಮ್ಯಾಟ್ ನೊಂದಿಗೆ ಬಲಿಷ್ಠ ರಚನೆ ಹೊಂದಿದೆ.
- HLD ಆಯ್ಕೆಯೊಂದಿಗೆ 4WD - ವಿಭಿನ್ನ ಭೂಪ್ರದೇಶಗಳಲ್ಲಿ ಉತ್ತಮ ಹಿಡಿತ ಮತ್ತು ಸ್ಥಿರತೆ ನೀಡುತ್ತದೆ.
- ಹೆಚ್ಚು ಸ್ಥಳಾವಕಾಶವಿರುವ ಆಪರೇಟರ್ ಜಾಗ - ಆಪರೇಟರ್ ಆರಾಮವಾಗಿ ಕೆಲಸ ಮಾಡಲೆಂದು ಹಿಂಭಾಗದ ಫ್ಲೋರ್ ಎಕ್ಸ್ ಟೆನ್ಶನ್ ಗಳೊಂದಿಗೆ ಅಗಲವಾದ ಪ್ಲಾಟ್ ಫಾರ್ಮ್.
- ವಿಸ್ತರಿತ ಸರ್ವಿಸ್ ಮಧ್ಯಂತರಗಳು - 500-ಗಂಟೆಗಳ ಸರ್ವಿಸ್ ಮಧ್ಯಂತರಗಳನ್ನು ನೀಡುವ ಮೂಲಕ ಪದೇ ಪದೇ ಮೆಂಟೆನನ್ಸ್ ಮಾಡುವುದು ಮತ್ತು ವೆಚ್ಚಗಳನ್ನು ಕಡಿಮೆ ಮಾಡುತ್ತದೆ.
ಅದನ್ನು ವಿಶಿಷ್ಟವಾಗಿಸುವ ಅಂಶಗಳಾವುವು?
GearPro™ ಸರಣಿಯ ಭಾಗವಾಗಿ, ಜಾನ್ ಡಿಯರ್ 5050D ಭಾರತದಲ್ಲಿ ನಂಬಿಗಸ್ಥ ಟ್ರ್ಯಾಕ್ಟರ್ ಕಂಪನಿಗಾಗಿ ಹುಡುಕುತ್ತಿರುವ ರೈತರಿಗೆ ಸರಿಹೊಂದುವ ಆಯ್ಕೆಯಾಗಿದೆ. ನಿಮ್ಮ ಕೆಲಸ ಎಂಥದ್ದೇ ಆಗಿರಲಿ, ಈ ಮಾಡಲ್ ಕಾರ್ಯಕ್ಷಮತೆ ಮತ್ತು ಪ್ರಯೋಗಶೀಲತೆ ಎರಡನ್ನೂ ನೀಡುವುದು ಎಂಬುದರಲ್ಲಿ ಎರಡು ಮಾತಿಲ್ಲ.
ನಿಮ್ಮ ಇಂಪ್ಲಿಮೆಂಟ್ ಗಳಿಗೆ ಸರಿಯಾದ ಆಯ್ಕೆ ಮಾಡಿ
ಭಾರತದಲ್ಲಿ ಪ್ರತಿಷ್ಠಿತ ಟ್ರ್ಯಾಕ್ಟರ್ ಕಂಪನಿಯಿಂದ ಸರಿಯಾದ ಟ್ರ್ಯಾಕ್ಟರ್ ಆಯ್ಕೆ ಮಾಡುವುದು ಎಂದರೆ ಟ್ರ್ಯಾಕ್ಟರ್‌ನ ಸಾಮರ್ಥ್ಯಗಳೊಂದಿಗೆ ನಿಮ್ಮ ನಿರ್ದಿಷ್ಟ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವುದು. ಭಾರತದಲ್ಲಿನ ಜಾನ್ ಡಿಯರ್ ಟ್ರ್ಯಾಕ್ಟರ್‌ಗಳನ್ನು ವಿವಿಧ ಪ್ರಕಾರದ ಟ್ರ್ಯಾಕ್ಟರ್ ಇಂಪ್ಲಿಮೆಂಟ್ಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ, ಇದು ಸಾಟಿಯಿಲ್ಲದ ಬಹುಪಯೋಗಿ ಕೆಲಸಗಳನ್ನು ಮಾಡುತ್ತದೆ ಮತ್ತು ಕಾರ್ಯಕ್ಷಮತೆ ನೀಡುತ್ತದೆ.
ನಿಮ್ಮ ಇಂಪ್ಲಿಮೆಂಟ್ ಗಳಿಗಾಗಿ ಅತ್ಯುತ್ತಮ ಟ್ರ್ಯಾಕ್ಟರ್ ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ಲಘು ಮಾರ್ಗದರ್ಶಿ ಇಲ್ಲಿದೆ:
- ನಿಮ್ಮ ಅವಶ್ಯಕತೆಗಳ ಮೌಲ್ಯಮಾಪನ ಮಾಡಿ - ನೀವು ಮಾಡಲಿರುವ ಕೆಲಸಗಳ ವಿಧಗಳನ್ನು ಮತ್ತು ನೀವು ಉಪಯೋಗಿಸಲಿರುವ ಇಂಪ್ಲಿಮೆಂಟ್ ಗಳನ್ನು ನಿರ್ಧರಿಸಿ. ನೇಗಿಲು ಹೂಡುವುದಿರಲಿ, ಉಳುಮೆ ಮಾಡುವುದಿರಲಿ, ಅಥವಾ ಕೊಯ್ಲು ಮಾಡುವುದಿರಲಿ, ನಿಮ್ಮ ಅವಶ್ಯಕತೆಗಳನ್ನು ತಿಳಿದುಕೊಳ್ಳುವುದು ಮೊದಲ ಹೆಜ್ಜೆಯಾಗಿರುತ್ತದೆ.
- ಹಾರ್ಸ್ ಪವರ್ ಅನ್ನು ಪರಿಗಣಿಸಿ - ಅಧಿಕ ಹಾರ್ಸ್ ಪವರ್ ಎಂದರೆ ಭಾರೀ ಪ್ರಮಾಣದ ಕೆಲಸಗಳನ್ನು ನಿರ್ವಹಿಸಲು ಅಧಿಕ ಶಕ್ತಿ ದೊರೆಯುತ್ತದೆ.
- ಲಕ್ಷಣಗಳನ್ನು ಮೌಲ್ಯಮಾಪನ ಮಾಡಿ - ಸಾಮರ್ಥ್ಯ ಹೆಚ್ಚಿಸುವ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಕಡಿಮೆ ಮಾಡುವ HPCR ತಂತ್ರಜ್ಞಾನ, ಡ್ಯುಯೆಲ್ ಟಾರ್ಕ್ ಮೋಡ್‌ಗಳು, ಮತ್ತು ಅಧಿಕ ಎತ್ತುವ ಸಾಮರ್ಥ್ಯಗಳಂತಹ ಲಕ್ಷಣಗಳನ್ನು ಹುಡುಕಿ.
- ಹೊಂದಾಣಿಕೆಯನ್ನು ಪರೀಕ್ಷಿಸಿ - ನೀವು ಆಯ್ಕೆ ಮಾಡುವ ಟ್ರ್ಯಾಕ್ಟರ್ ನಿಮ್ಮ ಇಂಪ್ಲಿಮೆಂಟ್‌ಗಳ ಜೊತೆಗೂಡಿ ಅಡಚಣೆಯಿಲ್ಲದ ಕಾರ್ಯಾಚರಣೆ ಒದಗಿಸುವುದನ್ನು ಖಚಿತಪಡಿಸಿ.
- ತಜ್ಞರ ಸಲಹೆ ಪಡೆಯಿರಿ - ಜಾನ್ ಡಿಯರ್ ತಜ್ಞರು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾದ ಪರಿಪೂರ್ಣ ಟ್ರ್ಯಾಕ್ಟರ್ ಅನ್ನು ಆಯ್ಕೆ ಮಾಡಲು ನಿಮಗೆ ಮಾರ್ಗದರ್ಶನ ನೀಡುವುದರಿಂದ ಅವರಿಂದ ಸಲಹೆ ಪಡೆಯಲು ಹಿಂಜರಿಯಬೇಡಿ.
ಸಾಮರ್ಥ್ಯ ಮತ್ತು ಉತ್ಪಾದಕತೆ ಹೆಚ್ಚಿಸಲು ಸರಿಯಾದ ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಗಳನ್ನು ಆಯ್ಕೆ ಮಾಡುವುದು ಮುಖ್ಯ. ಭಾರತದಲ್ಲಿನ ಜಾನ್ ಡಿಯರ್ ಟ್ರ್ಯಾಕ್ಟರ್ ಗಳು ಹಲವಾರು ಇಂಪ್ಲಿಮೆಂಟ್ ಗಳಿಗೆ ಹೊಂದಿಕೊಳ್ಳುತ್ತವೆ, ಅವುಗಳೆಂದರೆ:
- ನೇಗಿಲುಗಳು - ಸಸಿ ನೆಡುವುದಕ್ಕಾಗಿ ಮಣ್ಣು ಸಿದ್ಧಪಡಿಸುವುದು
- ರೋಟರಿ ಟಿಲ್ಲರ್ ಗಳು - ಮಣ್ಣು ಪುಡಿ ಮಾಡಲು ಮತ್ತು ಪೋಷಕಾಂಶಗಳನ್ನು ಮಿಶ್ರಣ ಮಾಡಲು
- ಸಾಗಣೆ - ಸರಕುಗಳು ಮತ್ತು ವಸ್ತುಗಳನ್ನು ಸಾಗಿಸುವುದಕ್ಕಾಗಿ
- ಪ್ಲಾಂಟರ್ಗಳು - ನಿಖರವಾದ ಅಂತರಗಳಲ್ಲಿ ಬೀಜಗಳನ್ನು ಬಿತ್ತುವುದಕ್ಕಾಗಿ
ಭಾರತದಲ್ಲಿನ ಜಾನ್ ಡಿಯರ್ ಟ್ರ್ಯಾಕ್ಟರ್‌ಗಳು ಕೇವಲ ಯಂತ್ರಗಳಲ್ಲ; ಅವು ನಿಮ್ಮ ಕೃಷಿ ಪ್ರಯಾಣದ ಸಂಗಾತಿಗಳಾಗಿರುತ್ತವೆ. ಅವು ಶಕ್ತಿ, ತಂತ್ರಜ್ಞಾನ, ಮತ್ತು ಅವಲಂಬನೆಯನ್ನು ಸಂಯೋಜಿಸುವುದರಿಂದ ಸರಿಯಾದ ಟ್ರ್ಯಾಕ್ಟರ್ ಇಂಪ್ಲಿಮೆಂಟ್‌ಗಳೊಂದಿಗೆ ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸುತ್ತಿರುವ ಯಾವುದೇ ರೈತರಿಗೆ ಅತ್ಯುತ್ತಮ ಆಯ್ಕೆಯಾಗಿವೆ.
ಜಾನ್ ಡಿಯರ್ ಟ್ರ್ಯಾಕ್ಟರ್ ನಲ್ಲಿ ಹಣ ಹೂಡಿ ಮತ್ತು ಸರ್ವಶ್ರೇಷ್ಠ ಎಂಜಿನಿಯರಿಂಗ್, ವಿಶ್ವಾಸಾರ್ಹ ಕಾರ್ಯಕ್ಷಮತೆ, ಮತ್ತು ಹೊಸ ಲಕ್ಷಣಗಳೊಂದಿಗೆ ಸಿಗುವ ವಿಭಿನ್ನತೆಯನ್ನು ಅನುಭವಿಸಿ. ಭಾರತದಲ್ಲಿನ ಪ್ರಮುಖ ಟ್ರ್ಯಾಕ್ಟರ್ ಕಂಪನಿಯ ಸರಿಯಾದ ಟ್ರ್ಯಾಕ್ಟರ್ ಮತ್ತು ಇಂಪ್ಲಿಮೆಂಟ್‌ಗಳನ್ನು ಬಳಸಿಕೊಂಡು ನಿಮ್ಮ ಕೃಷಿ ಕೆಲಸಗಳನ್ನು ಹೆಚ್ಚು ಸಮರ್ಥ ಮತ್ತು ಫಲಪ್ರದವಾಗಿಸಿಕೊಳ್ಳಿ.