
ಜಾನ್ ಡಿಯರ್ ನಿಂದ ಟ್ರ್ಯಾಕ್ಟರ್ ಹಣಕಾಸು ರೈತರಿಗೆ ಅತ್ಯಾಧುನಿಕ ಟ್ರಾಕ್ಟರ್ ಗಳನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುವ ಅಗತ್ಯಾನುಸಾರ ಮಾರ್ಪಡಿಸಿದ ಹಣಕಾಸು ಪರಿಹಾರಗಳನ್ನು ಒದಗಿಸುತ್ತದೆ. ರೈತರ ಆದಾಯದ ಮೂಲಗಳು ಮತ್ತು ಕೃಷಿ ಮೌಲ್ಯವನ್ನು ಪರಿಗಣಿಸುವ ಮೂಲಕ, ಜಾನ್ ಡಿಯರ್ ಫೈನಾನ್ಶಿಯಲ್ ಟ್ರ್ಯಾಕ್ಟರ್ ವೆಚ್ಚದ 90% ವರೆಗೆ ಸಾಲವನ್ನು ನೀಡುತ್ತದೆ. ಈ ಯೋಜನೆಯು 5 ವರ್ಷಗಳವರೆಗೆ ಸುಲಭ ಸಾಲದ ಕಾಲಾವಧಿಯನ್ನು ಬೆಂಬಲಿಸುತ್ತದೆ, ಜೊತೆಗೆ ಕೃಷಿ ಆದಾಯ ಚಕ್ರಗಳಿಗೆ ಹೊಂದಿಕೆಯಾಗುವ ಹೊಂದಿಕೊಳ್ಳುವ ಮರುಪಾವತಿ ವೇಳಾಪಟ್ಟಿಗಳನ್ನು ಬೆಂಬಲಿಸುತ್ತದೆ. ಇದರಿಂದ ರೈತರಿಗೆ ಆರ್ಥಿಕ ಒತ್ತಡವಿಲ್ಲದೆ ಉತ್ಪಾದಕತೆಯತ್ತ ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ.
ನಾವು ಕೇವಲ ಉತ್ಪನ್ನಗಳನ್ನು ಮಾರುತ್ತಿಲ್ಲ. ರೈತರು ತಮ್ಮ ಅಪೇಕ್ಷಿತ ಮಟ್ಟದ ದಕ್ಷತೆಯನ್ನು ಸಾಧಿಸಲು ಸಹಾಯ ಮಾಡುವ ಅಗತ್ಯಾನುಸಾರ ಮಾರ್ಪಡಿಸಿದ ಟ್ರ್ಯಾಕ್ಟರ್ ಹಣಕಾಸು ಪರಿಹಾರಗಳನ್ನು ನಾವು ನೀಡುತ್ತೇವೆ. ರೈತರಿಗೆ ಸಾಲ ನೀಡುವಾಗ, ಜಾನ್ ಡಿಯರ್ ಫೈನಾನ್ಶಿಯಲ್ ರೈತರ ಆದಾಯದ ಮೂಲಗಳು ಮತ್ತು ಆರ್ಥಿಕ ಶಕ್ತಿಯನ್ನು ಪರಿಗಣಿಸುತ್ತದೆ, ಜೊತೆಗೆ ಒಟ್ಟಾರೆಯಾಗಿ ತೋಟದ ಉತ್ಪಾದನಾ ಮೌಲ್ಯವನ್ನು ಪರಿಗಣಿಸುತ್ತದೆ ಮತ್ತು ಟ್ರ್ಯಾಕ್ಟರ್ ಗಳು ಮತ್ತು ಸಂಬಂಧಿತ ಉಪಕರಣಗಳಿಗೆ 90% ವರೆಗೆ ಹಣಕಾಸು ಒದಗಿಸಬಹುದು.
ಸುಲಭ ಟ್ರ್ಯಾಕ್ಟರ್ ಸಾಲ ಮರುಪಾವತಿ ಕಾಲಾವಧಿಯು ರೈತರಿಗೆ ಕೈಗೆಟುಕುವ ಬೆಲೆಗೆ ಟ್ರ್ಯಾಕ್ಟರ್ ಸಿಗುವಂತೆ ಮಾಡುತ್ತದೆ. ನಾವು 5 ವರ್ಷಗಳ ಅವಧಿಗೆ ಧನಸಹಾಯ ನೀಡುತ್ತೇವೆ, ಇದರಿಂದ ಯೋಜಿಸುವುದು ಮತ್ತು ನಗದು ವಹಿವಾಟಿನ ನಿರ್ವಹಣೆಯನ್ನು ಸುಲಭಗೊಳಿಸುತ್ತೇವೆ.
ಜಾನ್ ಡಿಯರ್ ಫೈನಾನ್ಶಿಯಲ್ ಕೃಷಿಯ ಆವರ್ತಕ ಸ್ವರೂಪವನ್ನು ಅರ್ಥಮಾಡಿಕೊಳ್ಳುತ್ತದೆ. ನಮ್ಮ ಟ್ರ್ಯಾಕ್ಟರ್ ಹಣಕಾಸು ಪರಿಹಾರಗಳು ನಿಮ್ಮ ಬೆಳೆ ಮಾದರಿ ಮತ್ತು ನಗದು ವಹಿವಾಟಿನ ಆಧಾರದ ಮೇಲೆ ಮಾಸಿಕ, ತ್ರೈಮಾಸಿಕ, ಅಥವಾ ಅರೆ-ವಾರ್ಷಿಕ ಮರುಪಾವತಿಗಳನ್ನು ಬೆಂಬಲಿಸುತ್ತವೆ. ಇದು ಸರಾಗವಾದ ಮತ್ತು ಸುಸ್ಥಿರ ಕೃಷಿ ಕಾರ್ಯಾಚರಣೆಗಳನ್ನು ಖಚಿತಪಡಿಸುತ್ತದೆ.
ಟೋಲ್-ಫ್ರೀ ಸಂಖ್ಯೆ- 18002091034
ನಮಗೆ ಇಮೇಲ್ ಮಾಡಿ
ಟ್ರ್ಯಾಕ್ಟರ್ ಹಣಕಾಸು ಎಂಬುದು ಸಾಲ ಉತ್ಪನ್ನವಾಗಿದ್ದು, ಇದು ರೈತರಿಗೆ ಅನುಕೂಲಕರ ಮರುಪಾವತಿ ಆಯ್ಕೆಗಳೊಂದಿಗೆ ಹಣವನ್ನು ಒದಗಿಸುವ ಮೂಲಕ ಟ್ರ್ಯಾಕ್ಟರ್ ಗಳನ್ನು ಖರೀದಿಸಲು ಸಹಾಯ ಮಾಡುತ್ತದೆ.
ನೀವು ನಿಮ್ಮ ಅರ್ಹತೆಯನ್ನು ಆಧರಿಸಿ ಟ್ರ್ಯಾಕ್ಟರ್ ವೆಚ್ಚದ 90% ದವರೆಗೆ ನೀವು ಹಣಕಾಸು ಪಡೆಯಬಹುದು.
ಸ್ಥಿರ ಆದಾಯ ಮತ್ತು ಮಾನ್ಯ ದಾಖಲೆಗಳನ್ನು ಹೊಂದಿರುವ ರೈತರು, ಕೃಷಿ-ವ್ಯವಹಾರ ಮಾಲೀಕರು, ಮತ್ತು ವಾಣಿಜ್ಯ ಕೃಷಿ ನಿರ್ವಾಹಕರು ಅರ್ಜಿ ಸಲ್ಲಿಸಬಹುದು.
ಜಾನ್ ಡಿಯರ್ 5 ವರ್ಷಗಳವರೆಗೆ ಸಾಲದ ಕಾಲಾವಧಿಯನ್ನು ನೀಡುತ್ತದೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಮರುಪಾವತಿ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.
ನಿಮ್ಮ ಆದಾಯ ಚಕ್ರಕ್ಕೆ ಹೊಂದಿಕೆಯಾಗುವಂತೆ ಮಾರ್ಪಡಿಸಿದ ಮಾಸಿಕ, ತ್ರೈಮಾಸಿಕ, ಮತ್ತು ಅರೆ-ವಾರ್ಷಿಕ ಮರುಪಾವತಿ ಆಯ್ಕೆಗಳನ್ನು ನಾವು ನೀಡುತ್ತೇವೆ.
ಆಧಾರ ಅವಶ್ಯಕತೆಗಳು ನಿಮ್ಮ ಸಾಲದ ವಿವರ (ಕ್ರೆಡಿಟ್ ಪ್ರೊಫೈಲ್) ಮತ್ತು ಸಾಲದ ಮೊತ್ತವನ್ನು ಅವಲಂಬಿಸಿರುತ್ತದೆ. ಅನೇಕ ಸಂದರ್ಭಗಳಲ್ಲಿ, ಟ್ರ್ಯಾಕ್ಟರ್ ಸ್ವತಃ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ.
ಸಾಮಾನ್ಯವಾಗಿ, ಕೆವೈಸಿ ದಾಖಲೆಗಳು, ಆದಾಯ ಪುರಾವೆ, ಭೂ ಮಾಲೀಕತ್ವದ ಪುರಾವೆ ಮತ್ತು ಟ್ರ್ಯಾಕ್ಟರ್ ಕೊಟೇಶನ್ ಅಗತ್ಯವಿದೆ.
ಹೌದು, ವೆಚ್ಚದ ಒಂದು ಸಣ್ಣ ಪ್ರತಿಶತವನ್ನು ಸಾಮಾನ್ಯವಾಗಿ ಮುಂಗಡವಾಗಿ ಪಾವತಿಸಬೇಕು. ಉಳಿದ ಮೊತ್ತವನ್ನು ಹಣಕಾಸು ಮೂಲಕ ಪೂರೈಸಬಹುದು.
ನೀವು ಹತ್ತಿರದ ಜಾನ್ ಡಿಯರ್ ಡೀಲರ್ ಶಿಪ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ವಿಚಾರಣೆಯನ್ನು ಪ್ರಾರಂಭಿಸಬಹುದು.
ಪೂರ್ವಪಾವತಿಯನ್ನು ಸಾಮಾನ್ಯವಾಗಿ ಅನುಮತಿಸಲಾಗುತ್ತದೆ, ಆದರೆ ಶುಲ್ಕಗಳು (ಯಾವುದಾದರೂ ಇದ್ದರೆ) ಸಾಲದ ನಿಯಮಗಳನ್ನು ಅವಲಂಬಿಸಿರುತ್ತದೆ. ದಯವಿಟ್ಟು ನಿಮ್ಮ ಡೀಲರ್ ನೊಂದಿಗೆ ದೃಢೀಕರಿಸಿಕೊಳ್ಳಿ.
ಪ್ರಸ್ತುತವಾಗಿ, ಜಾನ್ ಡಿಯರ್ ಮೊದಲಿಗೆ ಹೊಸ ಟ್ರ್ಯಾಕ್ಟರ್ ಗಳಿಗೆ ಟ್ರ್ಯಾಕ್ಟರ್ ಹಣಕಾಸು ಒದಗಿಸುತ್ತಾರೆ. ಬಳಸಿದ ಟ್ರ್ಯಾಕ್ಟರ್ ಗಳ ಲಭ್ಯತೆಯು ಬದಲಾಗಬಹುದು.
ಬಡ್ಡಿ ದರಗಳು ನಿಮ್ಮ ಕ್ರೆಡಿಟ್ ಸ್ಕೋರ್, ಮರುಪಾವತಿ ಸಾಮರ್ಥ್ಯ, ಮತ್ತು ಚಾಲ್ತಿಯಲ್ಲಿರುವ ಆರ್ಥಿಕ ಪರಿಸ್ಥಿತಿಗಳನ್ನು ಆಧರಿಸಿರುತ್ತವೆ.
ಹೌದು, ವೈಯಕ್ತಿಕ ಮತ್ತು ವಾಣಿಜ್ಯ ರೈತರು ಟ್ರ್ಯಾಕ್ಟರ್ ಸಾಲಗಳಿಗೆ ಅರ್ಹರಾಗಿರುತ್ತಾರೆ.
ವಿಳಂಬವಾದ ಪಾವತಿಗಳು ದಂಡಕ್ಕೆ ಕಾರಣವಾಗಬಹುದು ಮತ್ತು ನಿಮ್ಮ ಕ್ರೆಡಿಟ್ ಪ್ರೊಫೈಲ್ ಮೇಲೆ ಪರಿಣಾಮ ಬೀರಬಹುದು. ಅನುಕೂಲಕರ ಪರಿಹಾರಗಳನ್ನು ಅನ್ವೇಷಿಸಲು ನಮಗೆ ಮೊದಲೇ ಸೂಚನೆ ನೀಡಲು ನಾವು ಸಲಹೆ ನೀಡುತ್ತೇವೆ.
ನಮ್ಮ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ: 18002091034 ಅಥವಾ ನೇರ ಸಹಾಯಕ್ಕಾಗಿ ನಮಗೆ ಇಮೇಲ್ ಮಾಡಿ ಎಂಬ ಆಯ್ಕೆ ಬಳಸಿ.