
ನಾವು ಕೇವಲ ಉತ್ಪನ್ನಗಳನ್ನು ಮಾರಾಟ ಮಾಡುತ್ತಿಲ್ಲ. ಜಾನ್ ಡಿಯರ್ ಫೈನಾನ್ಶಿಯಲ್ ನಲ್ಲಿ, ರೈತರು ಮತ್ತು ಕೃಷಿ-ವ್ಯವಹಾರಗಳ ವಿಶಿಷ್ಟ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಬಳಸಿದ ಸಲಕರಣೆ ಹಣಕಾಸು ಪರಿಹಾರಗಳನ್ನು ನಾವು ನೀಡುತ್ತೇವೆ. ನೀವು ಪೂರ್ವ-ಮಾಲೀಕತ್ವದ (ಪ್ರೀ-ಓನ್ಡ್) ಟ್ರ್ಯಾಕ್ಟರ್ ಗಳು ಅಥವಾ ಇತರ ಕೃಷಿ ಉಪಕರಣಗಳನ್ನು ಖರೀದಿಸುತ್ತಿದ್ದರೂ, ಕಾರ್ಯಾಚರಣೆಯ ದಕ್ಷತೆಯನ್ನು ವೃದ್ಧಿಸಲು ನಮ್ಮ ಹಣಕಾಸು ಆಯ್ಕೆಗಳನ್ನು ರಚಿಸಲಾಗಿದೆ. ನಿಮ್ಮ ಆದಾಯದ ಮೂಲಗಳು, ಸಾಲದ ಅರ್ಹತೆ, ಮತ್ತು ನಿಮ್ಮ ತೋಟದ ಉತ್ಪಾದನಾ ಮೌಲ್ಯವನ್ನು ನಾವು ಪರಿಗಣಿಸುತ್ತೇವೆ-ಉಪಕರಣದ ಮೌಲ್ಯದ 90% ದವರೆಗೆ ಹಣಕಾಸು ಒದಗಿಸುತ್ತೇವೆ.
ನಮ್ಮ ಬಳಸಿದ ಸಲಕರಣೆ ಹಣಕಾಸು ಯೋಜನೆಗಳು 5 ವರ್ಷಗಳವರೆಗಿನ ಅನುಕೂಲಕರ ಸಾಲದ ಅವಧಿ ನೀಡುತ್ತವೆ, ಇದರಿಂದ ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ನಿರ್ವಹಿಸಲು ನಿಮಗೆ ಸಹಾಯವಾಗುತ್ತದೆ. ಈ ಅನುಕೂಲಕರ ವ್ಯವಸ್ಥೆಯು ದೀರ್ಘಕಾಲೀನ ಕೃಷಿ ಯೋಜನೆಯನ್ನು ಬೆಂಬಲಿಸುತ್ತದೆ ಮತ್ತು ವಿಶ್ವಾಸಾರ್ಹ ಪೂರ್ವ-ಮಾಲೀಕತ್ವದ ಉಪಕರಣಗಳನ್ನು ಹೊಂದುವುದನ್ನು ಹೆಚ್ಚು ಸುಲಭವಾಗಿಸುತ್ತದೆ.
ಪ್ರತಿ ಬೆಳೆ ಚಕ್ರದೊಂದಿಗೆ ನಗದು ವಹಿವಾಟು ಬದಲಾಗುತ್ತದೆ ಎಂದು ನಮಗೆ ಗೊತ್ತು. ಆದ್ದರಿಂದ ಜಾನ್ ಡಿಯರ್ ಫೈನಾನ್ಶಿಯಲ್ ಮಾಸಿಕ, ತ್ರೈಮಾಸಿಕ, ಮತ್ತು ಅರೆ-ವಾರ್ಷಿಕ ಕಂತುಗಳನ್ನು ಒಳಗೊಂಡಂತೆ ಅನುಕೂಲಕರ ಮರುಪಾವತಿ ಆಯ್ಕೆಗಳೊಂದಿಗೆ ಬಳಸಿದ ಸಲಕರಣೆ ಹಣಕಾಸು ಒದಗಿಸುತ್ತದೆ. ವರ್ಷದುದ್ದಕ್ಕೂ ಸರಾಗವಾದ ಕಾರ್ಯಾಚರಣೆ ಮತ್ತು ಉತ್ತಮ ನಗದು ವಹಿವಾಟನ್ನು ಬೆಂಬಲಿಸಲು ನಿಮ್ಮ ಕೊಯ್ಲು ವೇಳಾಪಟ್ಟಿಗೆ ತಕ್ಕಂತೆ ಪಾವತಿಗಳನ್ನು ಪಾವತಿಸುವ ವ್ಯವಸ್ಥೆ ಮಾಡಬಹುದು.
ಟೋಲ್ ಫ್ರೀ ನಂಬರ್- 18002091034
ಇಮೇಲ್ ವಿಳಾಸ
ಬಳಸಿದ ಸಲಕರಣೆಗಳ ಹಣಕಾಸು ಎಂಬುದು ಒಂದು ಸಾಲ ಸೌಲಭ್ಯವಾಗಿದ್ದು, ವ್ಯವಸ್ಥಿತ EMI-ಆಧಾರಿತ ಮರುಪಾವತಿ ಆಯ್ಕೆಗಳ ಮೂಲಕ ಟ್ರ್ಯಾಕ್ಟರ್ ಗಳು ಮತ್ತು ಉಪಕರಣಗಳಂತಹ ಪೂರ್ವ-ಮಾಲೀಕತ್ವದ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ರೈತರಿಗೆ ಸಹಾಯ ಮಾಡುತ್ತದೆ.
ಜಾನ್ ಡಿಯರ್ ಫೈನಾನ್ಶಿಯಲ್ ಅರ್ಹತೆಯನ್ನು ಆಧರಿಸಿ ಬಳಸಿದ ಸಲಕರಣೆಗಳ ಮೌಲ್ಯದ 90% ದವರೆಗೆ ಹಣಕಾಸು ಒದಗಿಸಬಹುದು.
ಪರಿಶೀಲಿಸಬಹುದಾದ ಆದಾಯ ಮತ್ತು ಉತ್ತಮ ಸಾಲದ ಇತಿಹಾಸವನ್ನು ಹೊಂದಿರುವ ರೈತರು, ಕೃಷಿ-ಉದ್ಯಮಿಗಳು, ಮತ್ತು ವಾಣಿಜ್ಯ ಕೃಷಿ ಘಟಕಗಳು ಸಾಮಾನ್ಯವಾಗಿ ಅರ್ಹರಾಗಿರುತ್ತಾರೆ.
ಪೂರ್ವ-ಮಾಲೀಕತ್ವದ ಟ್ರ್ಯಾಕ್ಟರ್ ಗಳು, ಹಾರ್ವೆಸ್ಟರ್ ಗಳು, ಮತ್ತು ಆಯ್ದ ಕೃಷಿ ಯಂತ್ರೋಪಕರಣಗಳು ಬಳಸಿದ ಸಲಕರಣೆಗಳ ಹಣಕಾಸು ಪಡೆಯಲು ಅರ್ಹವಾಗಿರುತ್ತವೆ.
ಸಾಲದ ಕಾಲಾವಧಿಗಳು ಅನುಕೂಲಕರವಾಗಿರುತ್ತವೆ ಮತ್ತು ನಿಮ್ಮ ಮರುಪಾವತಿಸುವ ಸಾಮರ್ಥ್ಯ ಮತ್ತು ಬೆಳೆ ಚಕ್ರ ಆಧರಿಸಿ 5 ವರ್ಷಗಳವರೆಗೆ ಹೋಗಬಹುದು.
ಹೌದು, ಸಾಮಾನ್ಯವಾಗಿ ಸಣ್ಣ ಪ್ರಮಾಣದ ಮುಂಗಡ ಪಾವತಿಯ ಅಗತ್ಯವಿರುತ್ತದೆ, ಉಳಿದ ಮೊತ್ತವನ್ನು ಹಣಕಾಸಿನಡಿ ಪಾವತಿಸಲಾಗುತ್ತದೆ
ಉತ್ಪನ್ನ ಮತ್ತು ನಿಮ್ಮ ಸಾಲದ ವಿವರ (ಕ್ರೆಡಿಟ್ ಪ್ರೊಫೈಲ್) ಅವಲಂಬಿಸಿ ಬಡ್ಡಿ ದರಗಳು ಬದಲಾಗಬಹುದು ಮತ್ತು ನಿಗದಿತವಾಗಿರಬಹುದು ಅಥವಾ ಬದಲಾಗಬಹುದು.
ಸಾಲದ ಅರ್ಹತೆಯು ಸಲಕರಣೆಗಳ ಮೌಲ್ಯಮಾಪನ, ನಿಮ್ಮ ಆರ್ಥಿಕ ಹಿನ್ನೆಲೆ, ಮತ್ತು ನಿಮ್ಮ ಕೃಷಿ ಆದಾಯವನ್ನು ಆಧರಿಸಿರುತ್ತದೆ.
ಹೌದು, ಪೂರ್ವಪಾವತಿ ಮತ್ತು ಅವಧಿಗೆ ಮುಂಚೆ ತೀರಿಸುವ ಆಯ್ಕೆಗಳು ಸಾಮಾನ್ಯವಾಗಿ ಲಭ್ಯವಿದ್ದು, ಇವು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ.
ಸಾಮಾನ್ಯವಾಗಿ, ನಿಮಗೆ KYC ದಾಖಲೆಗಳ, ಜಮೀನು ಮಾಲೀಕತ್ವದ ದಾಖಲೆಗಳ, ಸಲಕರಣೆಗಳ ವಿವರಗಳ, ಮತ್ತು ಆದಾಯ ಪುರಾವೆಯ ಅಗತ್ಯವಿರುತ್ತದೆ.
ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ-ಅನುಮೋದನೆ ಶೀಘ್ರವಾಗಿ ಸಿಗುತ್ತದೆ-ಸಾಮಾನ್ಯವಾಗಿ ಕೆಲವು ಕೆಲಸದ ದಿನಗಳ ಒಳಗಾಗಿ ಸಿಕ್ಕುಬಿಡುತ್ತದೆ.
ಹೌದು, ನೀವು ಆನ್ ಲೈನ್ ನಲ್ಲಿ ಸಾಲದ ವಿನಂತಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಜಾನ್ ಡಿಯರ್ ಡೀಲರ್ ಅನ್ನು ಸಂಪರ್ಕಿಸುವ ಮೂಲಕ ಸಲ್ಲಿಸಬಹುದು.
ಹೌದು, ಸಾಮಾನ್ಯವಾಗಿ ನಿಮ್ಮ ಹೂಡಿಕೆಯನ್ನು ರಕ್ಷಿಸುವುದಕ್ಕಾಗಿ ಹಣಕಾಸು ನೀಡಲಾದ ಸಲಕರಣೆಗಳಿಗಾಗಿ ವಿಮೆ ಕಡ್ಡಾಯವಾಗಿರುತ್ತದೆ.
ಹೌದು, ನಿಮ್ಮ ಬೆಳೆ ಚಕ್ರಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಅರೆ-ವಾರ್ಷಿಕ ಅಥವಾ ತ್ರೈಮಾಸಿಕ EMI ಗಳಂತಹ ಋತುಗಳಿಗನುಗುಣವಾದ ಮರುಪಾವತಿ ಯೋಜನೆಗಳನ್ನು ಒದಗಿಸಲಾಗುತ್ತದೆ.
ಜಾನ್ ಡಿಯರ್ ಕೃಷಿ ಆದಾಯದ ನೈಜತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ನಿಯಮಗಳೊಂದಿಗೆ ಅಗತ್ಯಾನುಸಾರ ಮಾರ್ಪಡಿಸಿದ ಹಣಕಾಸು, ವಿಶ್ವಾಸಾರ್ಹ ಬೆಂಬಲ, ಮತ್ತು ತ್ವರಿತ ಪ್ರಕ್ರಿಯೆಗೊಳಿಸುವಿಕೆ ಒದಗಿಸುತ್ತದೆ.