John Deere ಕೂಲಂಟ್

John Deere ಕೂಲಂಟ್

ನಿಮ್ಮ ಕೂಲಿಂಗ್ ಸಿಸ್ಟಮ್‌ಗೆ ಅತ್ಯಂತ ಶ್ರೇಷ್ಠವಾದ ಇಡೀ ವರ್ಷ ದೊರಕುವ ರಕ್ಷಣೆ ನಿಮ್ಮ ಇಂಜಿನ್ ಅನ್ನು ತಂಪಾಗಿಡುತ್ತದೆ ಹಾಗೂ ಇಂಜಿನ್ ಬಾಳಿಕೆಯನ್ನು ಹೆಚ್ಚಿಸುತ್ತದೆ

John Deere ಕೂಲಂಟ್ ನಿಮ್ಮ ಯಂತ್ರಕ್ಕೆ ಹೇಗೆ ಅತ್ಯುತ್ತಮವಾಗಿದೆ?

ಎಂಜಿನ್ ನಿಮ್ಮ ಸಲಕರಣೆಗಳ ಹೃದಯವಾಗಿದೆ. ನಿಮ್ಮ ಸಲಕರಣೆಗಳ ವಿಶ್ವಾಸಾರ್ಹ ಮತ್ತು ದಕ್ಷ ಕಾರ್ಯನಿರ್ವಹಣೆಗಾಗಿ ಅದು ತನ್ನ ನಿರೀಕ್ಷಿತ ಬಾಳಿಕೆಯುದ್ದಕ್ಕೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಬಹಳ ಅಗತ್ಯವಾಗಿರುತ್ತದೆ. ಇಂಧನ ಉರಿಯುವುದರಿಂದ ಶಕ್ತಿ ಮತ್ತು ಶಾಖ ಉತ್ಪತ್ತಿಯಾಗುತ್ತದೆ. ಈ ಶಾಖವು ಎಂಜಿನ್ ಮತ್ತು ಅದರ ಘಟಕಗಳಿಗೆ ವರ್ಗಾವಣೆಯಾಗುತ್ತದೆ. ಎಂಜಿನ್ ಒಳಗೆ ಗರಿಷ್ಠ ತಾಪಮಾನವನ್ನು ಕಾಪಾಡಿಕೊಳ್ಳಲು ಕೂಲಿಂಗ್ ವ್ಯವಸ್ಥೆಯನ್ನು ಹೊಂದಿರುವುದು ಅಗತ್ಯವಾಗುತ್ತದೆ. ಈ ಕೂಲಿಂಗ್ ಸಿಸ್ಟಮ್ ತೀವ್ರ ಒತ್ತಡಗಳು ಮತ್ತು ತಾಪಮಾನಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿರುತ್ತದೆ.

John Deere ಉಪಕರಣಗಳು ಸುಧಾರಿತ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಎಂಜಿನ್‌ನ ಗರಿಷ್ಠ ಕಾರ್ಯಕ್ಷಮತೆ ಮತ್ತು ನಿರ್ವಹಣೆ-ಮುಕ್ತ ದೀರ್ಘ ಬಾಳಿಕೆಗಾಗಿ ವಿಶೇಷವಾಗಿ ರೂಪಿಸಲಾದ ಕೂಲಂಟ್ ಅನ್ನು ಬಳಸುತ್ತದೆ. John Deere ಕೂಲಂಟ್ ವಿಶೇಷವಾಗಿ ರೂಪಿಸಲಾದ ಕೂಲಂಟ್ ಕಂಡಿಷನರ್, ಸವೆತ ನಿರೋಧಕ ಅಡಿಟಿವ್‌ಗಳು ಮತ್ತು ಫೋಮಿಂಗ್ ನಿರೋಧಕ ಏಜೆಂಟ್‌ಗಳ ಪರಿಪೂರ್ಣ ಮಿಶ್ರಣವಾಗಿದೆ. ಇದು ಬಳಸಲು ಸಿದ್ಧವಾಗಿರುವ, ಖನಿಜರಹಿತ ನೀರಿನ ನಿಗದಿತ ಶೇಕಡಾವಾರು ಪೂರ್ವ-ಮಿಶ್ರಣವಾಗಿ ಲಭ್ಯವಿರುತ್ತದೆ.

ಕೂಲಂಟ್

ಯಾವುದೇ ಎಂಜಿನ್ ನ ಆರೋಗ್ಯ ಮತ್ತು ದಕ್ಷತೆಯನ್ನು ಕಾಪಾಡುವಲ್ಲಿ ಕೂಲಂಟ್ ಪ್ರಮುಖ ಪಾತ್ರ ವಹಿಸುತ್ತದೆ. ಅದು ಎಂಜಿನ್ ತಾಪಮಾನವನ್ನು ನಿಯಂತ್ರಿಸುತ್ತದೆ, ಅತಿಯಾಗಿ ಬಿಸಿಯಾಗುವುದನ್ನು (ಓವರ್ ಹೀಟಿಂಗ್) ತಡೆಯುತ್ತದೆ ಮತ್ತು ಒಳಗಿನ ಬಿಡಿಭಾಗಗಳನ್ನು ಅತಿಯಾದ ಶಾಖ ಅಥವಾ ಶೀತದಿಂದ ಉಂಟಾಗುವ ಸವೆತ ಮತ್ತು ಹಾನಿಯಿಂದ ರಕ್ಷಿಸುತ್ತದೆ. ಉತ್ತಮ-ಗುಣಮಟ್ಟದ ಕೂಲಂಟ್ ಸವೆತವನ್ನು ಕಡಿಮೆ ಮಾಡಲು, ಮೆಂಟೆನನ್ಸ್ ಅಗತ್ಯಗಳನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಎಂಜಿನ್ ಬಾಳಿಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೃಷಿ ಯಂತ್ರೋಪಕರಣಗಳು, ಸಲಕರಣೆಗಳು ಅಥವಾ ಟ್ರ್ಯಾಕ್ಟರ್, ಗಳಲ್ಲಿ ಯಾವುದರಲ್ಲಿ ಬೇಕಾದರೂ ಬಳಸಿದಾಗ, ಸರಿಯಾದ ಕೂಲಂಟ್ ವಿವಿಧ ಕೆಲಸದ ಪರಿಸ್ಥಿತಿಗಳಲ್ಲಿ ಸುಗಮ, ತಡೆರಹಿತ ಕಾರ್ಯಾಚರಣೆಯನ್ನು ಖಚಿತಪಡಿಸುತ್ತದೆ. ಸಲಕರಣೆಗಳ ಅಪ್ ಟೈಮ್ ಅನ್ನು ಹೆಚ್ಚಿಸಲು ಮತ್ತು ದುಬಾರಿ ರಿಪೇರಿಗಳನ್ನು ಕಡಿಮೆ ಮಾಡಲು ವಿಶ್ವಾಸಾರ್ಹ, ಉತ್ತಮವಾಗಿ ರೂಪಿಸಲಾದ ಕೂಲಂಟ್ ಅನ್ನು ಆಯ್ಕೆ ಮಾಡುವುದು ಅಗತ್ಯವಾಗಿರುತ್ತದೆ. ...