ಕೃಷಿ ಮತ್ತು ಕೈಗಾರಿಕಾ ಯಂತ್ರೋಪಕರಣಗಳ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಬಾಳಿಕೆಗಾಗಿ ಎಂಜಿನ್ ಪಾರ್ಟ್ ಗಳು ಬಹಳ ಮುಖ್ಯವಾಗಿರುತ್ತವೆ. ನಿಯಮಿತ ತಪಾಸಣೆ ಮತ್ತು ಎಂಜಿನ್ ಬಿಡಿ ಭಾಗಗಳನ್ನು ಸಮಯೋಚಿತವಾಗಿ ಬದಲಾಯಿಸುವುದರಿಂದ ಸ್ಥಗಿತಗೊಳ್ಳುವಿಕೆಗಳಿಂದಾಗುವ (ಬ್ರೇಕ್ ಡೌನ್) ಅಧಿಕ ವೆಚ್ಚವನ್ನು ತಡೆಗಟ್ಟಲು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಕಾಪಾಡಲು ಸಹಾಯವಾಗುತ್ತದೆ. ಉತ್ತಮ-ಗುಣಮಟ್ಟದ, ಹೊಂದಿಕೆಯಾಗುವ ಎಂಜಿನ್ ಪಾರ್ಟ್ ಗಳನ್ನು ಬಳಸುವ ಮೂಲಕ, ಸಲಕರಣೆಗಳ ಮಾಲೀಕರು ತಮ್ಮ ಯಂತ್ರಗಳು ವಿವಿಧ ಪ್ರಮಾಣದ ಕೆಲಸಗಳಲ್ಲಿ ಮತ್ತು ಪರಿಸರದ ಪರಿಸ್ಥಿತಿಗಳಲ್ಲಿ ಸರಾಗವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಬಹುದು.
ನಿಯಮಿತ ಮೆಂಟೆನನ್ಸ್ ಗಾಗಿ ಅಥವಾ ದೊಡ್ಡ ರಿಪೇರಿಗಳಿಗಾಗಿ, ಅಪ್ ಟೈಮ್ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸರಿಯಾದ ಎಂಜಿನ್ ಭಾಗಗಳನ್ನು ಹೊಂದಿರುವುದು ಅತ್ಯಗತ್ಯ. ಕೃಷಿ ಮತ್ತು ಕೈಗಾರಿಕಾ ಉಪಕರಣಗಳ ದೀರ್ಘಕಾಲದ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಗುಣಮಟ್ಟದ ಬಿಡಿ ಭಾಗಗಳನ್ನು ಬಳಸಿಕೊಂಡು ನಿಯಮಿತ ಮೆಂಟೆನನ್ಸ್ ಅಗತ್ಯವಾಗಿರುತ್ತದೆ. ಎಂಜಿನ್ ಆಯಿಲ್ ಗಳು, ಫಿಲ್ಟರ್ ಗಳು ಮತ್ತು ದ್ರವಗಳಂತಹ ನಿಜವಾದ ಮೆಂಟೆನನ್ಸ್ ಪಾರ್ಟ್ ಗಳನ್ನು ಬಳಸುವುದರಿಂದ, ಸ್ಥಗಿತಗೊಳ್ಳುವಿಕೆಗಳನ್ನು (ಬ್ರೇಕ್ ಡೌನ್) ತಡೆಗಟ್ಟಲು, ಡೌನ್ ಟೈಮ್ ಕಡಿಮೆ ಮಾಡಲು ಮತ್ತು ಒಟ್ಟಾರೆ ಯಂತ್ರದ ದಕ್ಷತೆಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ
...
1. ಈ ಪುಟದಲ್ಲಿ ಯಾವ ಪ್ರಕಾರದ ಎಂಜಿನ್ ಪಾರ್ಟ್ ಗಳು ಲಭ್ಯ ಇವೆ? ಜಾನ್ ಡಿಯರ್ ಯಂತ್ರೋಪಕರಣಗಳಿಗಾಗಿ ನಿಜವಾದ ಕ್ರ್ಯಾಂಕ್ ಶಾಫ್ಟ್ ಗಳು, ಸಿಲಿಂಡರ್ ಹೆಡ್ ಗಳು, ಇಂಜೆಕ್ಟರ್ ಗಳು, ಪಿಸ್ಟನ್ ಗಳು, ಕ್ಯಾಮ್ ಶಾಫ್ಟ್ ಗಳು ಮತ್ತು ಇನ್ನೂ ಅನೇಕ ಎಂಜಿನ್ ಬಿಡಿ ಭಾಗಗಳನ್ನು ನೀವು ಕಾಣಬಹುದು.
2. ನಿರ್ದಿಷ್ಟ ಎಂಜಿನ್ ಪಾರ್ಟ್ ಅನ್ನು ನಾನು ಹೇಗೆ ಹುಡುಕಬಹುದು? ಅಗತ್ಯವಿರುವ ಎಂಜಿನ್ ಪಾರ್ಟ್ ಗಳನ್ನು ಹುಡುಕಲು ನಿಮ್ಮ ಮಾಡಲ್, PIN, ಸಲಕರಣೆ ಅಥವಾ ಕ್ಯಾಟಲಾಗ್ ಸಂಖ್ಯೆಯನ್ನು ನಮೂದಿಸುವ ಮೂಲಕ ಹುಡುಕುವ ಪಟ್ಟಿಯನ್ನು (ಸರ್ಚ್ ಬಾರ್) ಬಳಸಿ.
3. ನಾನು ನಿಜವಾದ ಜಾನ್ ಡಿಯರ್ ಎಂಜಿನ್ ಪಾರ್ಟ್ ಗಳನ್ನು ಏಕೆ ಆಯ್ಕೆ ಮಾಡಬೇಕು? ನಿಜವಾದ ಪಾರ್ಟ್ ಗಳು ಜಾನ್ ಡಿಯರ್ ನ ಗುಣಮಟ್ಟದ ಮಾನದಂಡಗಳ ದೃಢೀಕರಣದೊಂದಿಗೆ ನಿಖರವಾದ ಫಿಟ್, ಉತ್ತಮ ಕಾರ್ಯಕ್ಷಮತೆ ಮತ್ತು ವಿಸ್ತೃತ ಯಂತ್ರ ಬಾಳಿಕೆಯನ್ನು ಖಚಿತಪಡಿಸುತ್ತವೆ.
4. ಈ ಭಾಗಗಳು ಎಲ್ಲ ಜಾನ್ ಡಿಯರ್ ಯಂತ್ರಗಳೊಂದಿಗೆ ಹೊಂದಿಕೆಯಾಗುತ್ತವೆಯೇ? ಪ್ರತಿಯೊಂದು ಭಾಗವು ಮಾಡಲ್-ನಿರ್ದಿಷ್ಟವಾಗಿದೆ, ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ನೀವು ಪಾರ್ಟ್ ಗಳನ್ನು ನಿಮ್ಮ ಯಂತ್ರದ ಮಾಡಲ್ ಅಥವಾ ಸೀರಿಯಲ್ ನಂಬರ್ ನೊಂದಿಗೆ ಹೊಂದಿಸಬೇಕಾಗುತ್ತದೆ.
5. ನಾನು ಹಳೆಯ ಜಾನ್ ಡಿಯರ್ ಮಾಡಲ್ ಗಳಿಗಾಗಿ ಇಲ್ಲಿ ಭಾಗಗಳನ್ನು ಹುಡುಕಬಹುದೇ? ಹೌದು, ಜಾನ್ ಡಿಯರ್ ಲಭ್ಯತೆಗೆ ಅನುಗುಣವಾಗಿ ಪ್ರಸ್ತುತ ಮತ್ತು ಪರಂಪರೆಯ ಉಪಕರಣಗಳಿಗಾಗಿ ಸಹಾಯ ಮತ್ತು ಪಾರ್ಟ್ ಗಳನ್ನು ಒದಗಿಸುತ್ತದೆ.
6. ಎಂಜಿನ್ ಮೆಂಟೆನನ್ಸ್ ಬ್ರೋಷರ್ ನಲ್ಲಿ ಏನನ್ನು ಸೇರಿಸಲಾಗಿದೆ? ಎಂಜಿನ್ ಸರ್ವಿಸ್ ಪಾರ್ಟ್ ಗಳು, ಮೆಂಟೆನನ್ಸ್ ಸಲಹೆಗಳು, ಆಯಿಲ್ ಮತ್ತು ದ್ರವದ ಬಗ್ಗೆ ಶಿಫಾರಸುಗಳು ಮತ್ತು ಸರ್ವಿಸ್ ಮಧ್ಯಂತರಗಳ ಬಗ್ಗೆ ವಿವರಗಳನ್ನು ಬ್ರೋಷರ್ ಒದಗಿಸುತ್ತದೆ.
7. ನಾನು ಬ್ರೋಷರ್ ಅನ್ನು ಎಲ್ಲಿ ಡೌನ್ ಲೋಡ್ ಮಾಡಬಹುದು? ಎಂಜಿನ್ ಪಾರ್ಟ್ ಗಳ ಪುಟದಲ್ಲಿ "ಇನ್ನಷ್ಟು ತಿಳಿಯಲು ಬ್ರೋಷರ್ ವೀಕ್ಷಿಸಿ" ಎಂಬ ಲಿಂಕ್ ನಿಂದ ನೀವು ಬ್ರೋಷರ್ ಅನ್ನು ವೀಕ್ಷಿಸಬಹುದು ಅಥವಾ ಡೌನ್ ಲೋಡ್ ಮಾಡಬಹುದು.
8. ಯಾವ ಮೆಂಟೆನನ್ಸ್ ಉತ್ಪನ್ನಗಳು ಸಹ ಇಲ್ಲಿ ಕಾಣಿಸುತ್ತವೆ? ಉತ್ಪನ್ನಗಳು ಎಂಜಿನ್ ಆಯಿಲ್ ಗಳು (ಪ್ಲಸ್ -50 II), ಕೂಲಂಟ್ ಗಳು, ಹೈಡ್ರಾಲಿಕ್ ದ್ರವಗಳು, ಇಂಧನ ರಕ್ಷಕಗಳು, ಡಿಗ್ರೀಸರ್ ಗಳು ಮತ್ತು ಚೈನ್ ಲೂಬ್ರಿಕಂಟ್ ಗಳನ್ನು ಒಳಗೊಂಡಿವೆ.
9. ಎಂಜಿನ್ ಮೆಂಟೆನನ್ಸ್ ಗೆ ಶಿಫಾರಸು ಮಾಡಲಾದ ಸರ್ವಿಸ್ ಮಧ್ಯಂತರವಿದೆಯೇ? ಹೌದು, ಜಾನ್ ಡಿಯರ್ ಉಪಕರಣ ಕೈಪಿಡಿಗಳಲ್ಲಿ ಅಥವಾ ಬ್ರೋಷರ್ ಗಳಲ್ಲಿ ಮಾಡಲ್-ನಿರ್ದಿಷ್ಟ ಸರ್ವಿಸ್ ಮಧ್ಯಂತರಗಳನ್ನು ಒದಗಿಸುತ್ತದೆ, ಇದು ಎಂಜಿನ್ ಸ್ಥಿತಿ ಉತ್ತಮವಾಗಿರುವುದನ್ನು ಖಚಿತಪಡಿಸುತ್ತದೆ.
10. ನಾನು ವೆಬ್ ಸೈಟ್ ನಿಂದ ನೇರವಾಗಿ ಎಂಜಿನ್ ಪಾರ್ಟ್ ಗಳನ್ನು ಖರೀದಿಸಬಹುದೇ? ಪ್ರಸ್ತುತ, ವೆಬ್ ಸೈಟ್ ಪಾರ್ಟ್ ಗಳನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ, ಆದರೆ ಖರೀದಿಗಳನ್ನು ಸಾಮಾನ್ಯವಾಗಿ ಅಧಿಕೃತ ಜಾನ್ ಡಿಯರ್ ಡೀಲರ್ ಗಳ ಮೂಲಕ ಮಾಡಲಾಗುತ್ತದೆ.
11. ನಿಜವಾದ ಪಾರ್ಟ್ ಗಳನ್ನು ಬಳಸಲು ಯಾವುದೇ ವಾರಂಟಿ ಪ್ರಯೋಜನಗಳಿವೆಯೇ? ಹೌದು, ನಿಜವಾದ ಜಾನ್ ಡಿಯರ್ ಪಾರ್ಟ್ ಗಳನ್ನು ಅಧಿಕೃತ ಡೀಲರ್ ಗಳು ಅಥವಾ ಟೆಕ್ನಶನ್ ಗಳು ಇನ್ ಸ್ಟಾಲ್ ಮಾಡಿದರೆ ಅವುಗಳಿಗೆ ವಾರಂಟಿ ಕವರೇಜ್ ಸಿಗುತ್ತದೆ.
12. ನನ್ನ ಎಂಜಿನ್ ಪಾರ್ಟ್ ಗಳನ್ನು ಬದಲಾಯಿಸಬೇಕೆಂದು ತಿಳಿಸುವ ಚಿಹ್ನೆಗಳು ಯಾವುವು? ಸಾಮಾನ್ಯ ಚಿಹ್ನೆಗಳು ಕಾರ್ಯಕ್ಷಮತೆ ಕಡಿಮೆಯಾಗುವುದು, ಹೊಗೆ ಹೊರಸೂಸುವುದು, ಅತಿಯಾಗಿ ಬಿಸಿಯಾಗುವುದು, ಅಸಾಮಾನ್ಯ ಶಬ್ದಗಳನ್ನು ಮಾಡುವುದು ಅಥವಾ ಕಳಪೆ ಇಂಧನ ದಕ್ಷತೆ ಒಳಗೊಂಡಿರುತ್ತವೆ.
13. ಜಾನ್ ಡಿಯರ್ ಎಂಜಿನ್ ರಿಪೇರಿ ಸೇವೆಗಳನ್ನು ಒದಗಿಸುತ್ತದೆಯೇ? ಹೌದು, ಅಧಿಕೃತ ಜಾನ್ ಡಿಯರ್ ಸರ್ವಿಸ್ ಸೆಂಟರ್ ಗಳು ಎಂಜಿನ್ ವ್ಯವಸ್ಥೆಗಳಿಗಾಗಿ ಸಮಸ್ಯೆ ಪತ್ತೆ ಮಾಡುವುದು, ರಿಪೇರಿಗಳು ಮತ್ತು ಪಾರ್ಟ್ ಗಳನ್ನು ಬದಲಿಸುವಂತಹ ಸೇವೆಗಳನ್ನು ನೀಡುತ್ತವೆ.
14. ಹತ್ತಿರದ ಜಾನ್ ಡಿಯರ್ ಡೀಲರ್ ಅನ್ನು ನಾನು ಹೇಗೆ ಕಂಡುಹಿಡಿಯಬಹುದು? ನಿಮ್ಮ ಹತ್ತಿರದ ಅಧಿಕೃತ ಜಾನ್ ಡಿಯರ್ ಡೀಲರ್ ಶಿಪ್ ಅನ್ನು ಹುಡುಕಲು ವೆಬ್ ಸೈಟ್ ನಲ್ಲಿ “ಡೀಲರ್ ಹುಡುಕಿ” ಎಂಬ ಟೂಲ್ ಉಪಯೋಗಿಸಿ.
15. ಸರಿಯಾದ ಎಂಜಿನ್ ಪಾರ್ಟ್ ಅನ್ನು ಆಯ್ಕೆ ಮಾಡಲು ನಾನು ತಾಂತ್ರಿಕ ಸಹಾಯವನ್ನು ಪಡೆಯಬಹುದೇ? ಹೌದು, ನಿಮ್ಮ ಸ್ಥಳೀಯ ಜಾನ್ ಡಿಯರ್ ಡೀಲರ್ ಅಥವಾ ಸೇವಾ ಸಲಹೆಗಾರ (ಸರ್ವಿಸ್ ಅಡ್ವೈಸರ್) ನಿಮ್ಮ ಉಪಕರಣಗಳಿಗೆ ಸರಿಯಾದ ಪಾರ್ಟ್ ಅನ್ನು ಗುರುತಿಸಲು ಮತ್ತು ಶಿಫಾರಸು ಮಾಡಲು ಸಹಾಯ ಮಾಡಬಹುದು.