ಉನ್ನತ-ಮಟ್ಟದ ಫಿಲ್ಟ್ರೇಶನ್: ಜಾನ್ ಡಿಯರ್ ಎಂಜಿನ್ ಆಯಿಲ್ ಫಿಲ್ಟರ್ ಪರಿಣಾಮಕಾರಿಯಾಗಿ ಮಾಲಿನ್ಯಕಾರಕಗಳನ್ನು ತೆಗೆಯುವ ಮೂಲಕ ಮತ್ತು ಆಯಿಲ್ ಶುದ್ಧತೆ ಕಾಪಾಡುವ ಮೂಲಕ ಉತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.
ದೀರ್ಘಗೊಳಿಸಿದ ಎಂಜಿನ್ ಬಾಳಿಕೆ: ಎಂಜಿನ್ ಸವೆತವನ್ನು ತಡೆಗಟ್ಟುವ ಮೂಲಕ ಮತ್ತು ಎಂಜಿನ್ ಬಾಳಿಕೆ ಹೆಚ್ಚಿಸುವ ಮೂಲಕ ಈ ಫಿಲ್ಟರ್ ಸರಾಗ ಕಾರ್ಯಾಚರಣೆ ಮತ್ತು ಅಧಿಕ ಬಾಳಿಕೆ ಬರುವುದನ್ನು ಖಚಿತಪಡಿಸುತ್ತದೆ.
ವರ್ಧಿತ ಕಾರ್ಯಕ್ಷಮತೆ: ಜಾನ್ ಡಿಯರ್ ಎಂಜಿನ್ ಆಯಿಲ್ ಫಿಲ್ಟರ್ ಉಪಯೋಗಿಸುವುದರಿಂದ ನಿರಂತರವಾದ ಎಂಜಿನ್ ಕಾರ್ಯಕ್ಷಮತೆ ಕಾಪಾಡಲು ಸಹಾಯ ಮಾಡುತ್ತದೆ, ಈ ಮೂಲಕ ಸುಧಾರಿತ ದಕ್ಷತೆ ಮತ್ತು ವಿಶ್ವಾಸಾರ್ಹತೆ ಒದಗಿಸುತ್ತದೆ.
ವಿವಿಧ ಎಂಜಿನ್ ಗಳೊಂದಿಗೆ ಹೊಂದಿಕೊಳ್ಳುತ್ತದೆ: ಅನೇಕ ಪ್ರಕಾರದ ಜಾನ್ ಡಿಯರ್ ಎಂಜಿನ್ ಗಳೊಂದಿಗೆ ಫಿಟ್ ಆಗುವಂತೆ ಮತ್ತು ಅಡಚಣೆ ಇಲ್ಲದೇ ಕೆಲಸ ಮಾಡುವಂತೆ ಈ ಫಿಲ್ಟರ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಸುಲಭ ಬದಲಾವಣೆ: ಫಿಲ್ಟರ್ ಬದಲಾಯಿಸಲು ಮತ್ತು ಎಂಜಿನ್ ಕಾರ್ಯಕ್ಷಮತೆ ಉತ್ತಮ ಸ್ಥಿತಿಯಲ್ಲಿ ಕಾಪಾಡಲು ಶಿಫಾರಸು ಮಾಡಿದ ಸರ್ವಿಸ್ ಮಧ್ಯಂತರಗಳನ್ನು ಅನುಸರಿಸಿ.
ಏರ್ ಫಿಲ್ಟರ್ ಗಳ ಎಲಿಮೆಂಟ್
ಸಮಾನ ಪ್ಲೀಟ್ ಗಳು ಮತ್ತು ಅಧಿಕ ಮೀಡಿಯಾ: ಒಳಗಿನ ಫಿಲ್ಟರ್ ಎಲಿಮೆಂಟ್ ನಲ್ಲಿ ಸಮಾನ ಪ್ಲೀಟ್ ಗಳು ಮತ್ತು ಅಧಿಕ ಪ್ರಮಾಣದ ಮೀಡಿಯಾ ಹೊಂದಿದೆ, ಇದು ಮಾಲಿನ್ಯಕಾರಕಗಳನ್ನು ಹಿಡಿಯುವಲ್ಲಿ ಹೆಚ್ಚಿನ ದಕ್ಷತೆ ಖಚಿತಪಡಿಸುತ್ತದೆ ಮತ್ತು ಸರ್ವಿಸ್ ಮಧ್ಯಂತರಗಳ ನಡುವೆ ದೀರ್ಘ ಸಮಯವನ್ನು ಒದಗಿಸುತ್ತದೆ.
ವಿಸ್ತೃತ ಎಂಜಿನ್ ಬಾಳಿಕೆ: ಒಳಗಿನ ಫಿಲ್ಟರ್ ಎಲಿಮೆಂಟ್ ಒದಗಿಸುವ ಹೆಚ್ಚುವರಿ ಫಿಲ್ಟರಿಂಗ್ ಎಂಜಿನ್ ಮೇಲಿನ ಸವೆತ ಮತ್ತು ಬಿರುಕು ಕಡಿಮೆ ಮಾಡುತ್ತದೆ, ಹೀಗೆ ಅದು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು ಮೆಂಟೆನನ್ಸ್ ಖರ್ಚುಗಳನ್ನು ಕಡಿಮೆ ಮಾಡುತ್ತದೆ.
ಸುಲಭ ಮೆಂಟೆನನ್ಸ್: ಸೆಕೆಂಡರಿ ಏರ್ ಫಿಲ್ಟರ್ ಎಲಿಮೆಂಟ್ ಅನ್ನು ಸುಲಭವಾಗಿ ತೆಗೆದುಹಾಕಲು ಮತ್ತು ಬದಲಾಯಿಸಲು ಬರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ, ಹೀಗೆ ವಾಡಿಕೆಯ ಮೆಂಟೆನನ್ಸ್ ಸರಳ ಮತ್ತು ಸರಾಗವಾಗುತ್ತದೆ, ಗ್ರಾಹಕರ ಸಮಯ ಮತ್ತು ಶ್ರಮ ಉಳಿಯುತ್ತದೆ.
ಉತ್ತಮ ಕಾರ್ಯಕ್ಷಮತೆ: ಜಾನ್ ಡಿಯರ್ ಉಪಕರಣಗಳಲ್ಲಿ ಉತ್ತಮ ಎಂಜಿನ್ ಕಾರ್ಯಕ್ಷಮತೆ, ಇಂಧನ ದಕ್ಷತೆ, ಮತ್ತು ಕಡಿಮೆ ಎಮಿಶನ್ ಗಾಗಿ ಅವುಗಳೊಳಗೆ ಶುದ್ಧ ಗಾಳಿ ಪ್ರವೇಶಿಸುವುದನ್ನು ಖಚಿತಪಡಿಸುತ್ತದೆ.
ಹೈಡ್ರಾಲಿಕ್ ಆಯಿಲ್ ಫಿಲ್ಟರ್
ವರ್ಧಿತ ಫಿಲ್ಟರಿಂಗ್: ಜಾನ್ ಡಿಯರ್ ಟ್ರಾನ್ಸ್ ಆಕ್ಸೆಲ್ ಆಯಿಲ್ ಫಿಲ್ಟರ್ ಗಳು ದೊಡ್ಡ ಇನ್ಲೆಟ್ ಹೋಲ್ ಗಳನ್ನು, ಹೆಚ್ಚು ಮೀಡಿಯಾ ಪೇಪರ್, ಮತ್ತು ರಬ್ಬರ್ ಸೀಲ್ ಗಳನ್ನು ಹೊಂದಿದ್ದು, ಅಪಾಯಕಾರಿ ಕಣಗಳ ಸ್ಥಿರವಾದ ಹರಿವು ಮತ್ತು ದೊಡ್ಡ ಪ್ರಮಾನದ ಫಿಲ್ಟರ್ ಮಾಡುವ ಸೌಲಭ್ಯ ಒದಗಿಸುತ್ತವೆ.
ಸೋರಿಕೆ ತಡೆಗಟ್ಟುವಿಕೆ: ಫಿಲ್ಟರ್ ನ ವಿನ್ಯಾಸವು ಒಳಗಿನ ಸೋರಿಕೆಯನ್ನು ತಡೆಗಟ್ಟಲು ಸಹಾಯ ಮಾಡುವ ಮೂಲಕ ಎಂಜಿನ್ ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.
ಉತ್ತಮ ಕಾರ್ಯಕ್ಷಮತೆ: ನಿಮ್ಮ ಉಪಕರಣಗಳು ಯಾವುದೇ ಅಡಚಣೆ ಇಲ್ಲದೇ ಕೆಲಸ ಮಾಡುವಂತೆ ಇಟ್ಟುಕೊಳ್ಳಲು ನಿಯಮಿತ ಮೆಂಟೆನನ್ಸ್ ಮತ್ತು ಫಿಲ್ಟರ್ ಬದಲಾವಣೆ ಮಾಡುವುದನ್ನು ಶಿಫಾರಸು ಮಾಡಲಾಗಿದೆ.
ನಿಜವಾದ ಜಾನ್ ಡಿಯರ್ ಭಾಗ: ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗಾಗಿ ಮೂಲ ಉಪಕರಣಗಳ ಉತ್ಪಾದಕರ ಭಾಗದಲ್ಲಿ ನಂಬಿಕೆ ಇಡಿ.
ನಿಜವಾದ OEM ಪಾರ್ಟ್: ನಿಜವಾದ ಜಾನ್ ಡಿಯರ್ ಮೂಲ ಉಪಕರಣಗಳ ಉತ್ಪಾದಕರ ಭಾಗವಾಗಿ ಬರುತ್ತದೆ ಮತ್ತು ಸರಿಯಾದ ಫಿಟ್ ಹಾಗೂ ಕಾರ್ಯನಿರ್ವಹಣೆಯನ್ನು ಖಚಿತಪಡಿಸುತ್ತದೆ.