ಭಾಗಗಳ ನೈಜತೆಯ ಪರಿಶೀಲನೆ

Parts genuiness check

ಜಾನ್ ಡಿಯರ್ ನಿಜವಾದ ಭಾಗಗಳಿಗಾಗಿ ಪರಿಚಯಿಸಲಾಗುತ್ತಿದೆ ಅಧಿಕ ಭದ್ರತೆಯ ಲೇಬಲ್

ಜಾನ್ ಡಿಯರ್ ಭಾಗಗಳ ನೈಜತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಲು, ಅಧಿಕ ಭದ್ರತೆಯ ಲೇಬಲ್ ಅನ್ನು ಪರಿಚಯಿಸಲು ನಮಗೆ ಹೆಮ್ಮೆ ಇದೆ. ನಿಜವಾದ ಭಾಗಗಳನ್ನು ಸುಲಭವಾಗಿ ಪರಿಶೀಲಿಸಲು ಮತ್ತು ನಕಲಿ ಭಾಗಗಳ ವಿರುದ್ಧ ರಕ್ಷಣೆ ಪಡೆಯಲು ಗ್ರಾಹಕರಿಗೆ ಮತ್ತು ಪಾಲುದಾರರಿಗೆ ಸಹಾಯವಾಗುವಂತೆ ಈ ಲೇಬಲ್‌ ಅನ್ನು ವಿನ್ಯಾಸಗೊಳಿಸಲಾಗಿದೆ.

ಅಧಿಕ ಭದ್ರತೆಯ ಲೇಬಲ್ ಮೂರು ಆಧುನಿಕ ಭದ್ರತೆಯ ಅಂಶಗಳನ್ನು ಹೊಂದಿದೆ:

  • ಹೋಲೋಗ್ರಾಫಿಕ್ ಸ್ಟ್ರಿಪ್ – ಬೇರೆ ಬೇರೆ ದಿಕ್ಕುಗಳಿಂದ ನೋಡಿದಾಗ ಬೆಳಕು ಸೂಸುವ ಮತ್ತು ವಿಭಿನ್ನವಾಗಿ ಕಾಣುವ ನೋಡಲು ವಿಶಿಷ್ಟವಾದ ಸ್ಟ್ರಿಪ್.
  • ಕಿತ್ತು ತೆಗೆದಾಗ ಖಾಲಿ ಜಾಗದ ಗುರುತು – ಲೇಬಲ್ ಅನ್ನು ಒಮ್ಮೆ ತೆಗೆದರೆ “ಖಾಲಿ ಜಾಗದ” ಗುರುತನ್ನು ಬಿಡುತ್ತದೆ, ಇದು ವಿರೂಪಗೊಳಿಸಿರುವುದನ್ನು ಸೂಚಿಸುತ್ತದೆ.
  • ಕಾಣಿಸದ UV ಹಿನ್ನೆಲೆ – ಅತಿನೇರಳೆ (ಅಲ್ಟ್ರಾವೈಲೆಟ್) ಬೆಳಕಿನಲ್ಲಿ ಮಾತ್ರ ಕಾಣಿಸುವ ಅಡಗಿರುವ ಪದರು ಪರಿಶೀಲನೆಯನ್ನು ಹೆಚ್ಚು ಕಟ್ಟುನಿಟ್ಟಾಗಿಸುತ್ತದೆ.

ಈ ಲಕ್ಷಣಗಳ ಮೂಲಕ ಒಂದು ಭಾಗವು ನಿಜವಾದ ಜಾನ್ ಡಿಯರ್ ಉತ್ಪನ್ನವಾಗಿದೆಯೇ ಎಂದು ಒಟ್ಟಾರೆಯಾಗಿ ಪ್ರಮಾಣಿಕರಿಸುತ್ತವೆ. ಜಾನ್ ಡಿಯರ್ ಹೆಸರು ವಾಸಿಯಾಗಿರುವ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ನಿಮಗೆ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಯಾವಾಲೂ ಈ ಅಧಿಕ ಭದ್ರತೆಯ ಲೇಬಲ್ ಇದೆಯೇ ಎಂದು ನೋಡಿಕೊಳ್ಳಿ.