GreenSystem™ ಲಿಂಕ್
ಫೀಲ್ಡ್ ಇನ್ ಸ್ಟಲೇಶನ್ ಕಿಟ್ (FIK) Trem-IIIA ಟ್ರ್ಯಾಕ್ಟರ್ ಗಳಿಗಾಗಿ GreenSystem™ ಲಿಂಕ್ಒ ದಗಿಸಿರುವ ಒಂದು ಲಕ್ಷಣವಾಗಿದ್ದು, ಐಡಲ್ ಟೈಮ್ ಮತ್ತು ಸ್ಪೀಡ್, GPS ಮೂಲಕ ಸ್ಥಳ ಹಾಗೂ ದಾರಿ ಕಂಡುಹಿಡಿಯುವುದು, ಇಂಧನ ಎಷ್ಟಿದೆ ಎಂದು ನಿಗಾವಹಿಸುವುದು, ಮತ್ತು ಅಕ್ರಿಯೇಜ್ ಮೀಟರ್ ನಂತಹ ರಿಯಲ್-ಟೈಮ್ ಕಾರ್ಯಾಚರಣೆಯ ಎಚ್ಚರಿಕೆಗಳಂಹ ಲಕ್ಷಣಗಳ ಮೂಲಕ ಟ್ರ್ಯಾಕ್ಟರ್ ಗಳ ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ, ಸೆಂಟ್ರಲೈಸ್ಡ್ ಆಪರೇಶನ್ಸ್ ಸೆಂಟರ್ ನಿಂದ ಹಲವಾರು ಟ್ರ್ಯಾಕ್ಟರ್ ಗಳ ಮೇಲೆ ನಿಗಾವಹಿಸಲು ಮತ್ತು ಅವುಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟು ಫ್ಲೀಟ್ ಅಥವಾ ಟ್ರ್ಯಾಕ್ಟರ್ ಗಳ ಸಮೂಹ ನಿರ್ವಹಣೆಯನ್ನು ಬೆಂಬಲಿಸುವ ಮೂಲಕ ನಮ್ಮ ಗ್ರಾಹಕರು ಉತ್ತಮ ನಿರ್ಧಾರ ಕೈಗೊಳ್ಳಲು ಮತ್ತು ಸಂಪನ್ಮೂಲ ಉತ್ತಮಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇವುಗಳನ್ನು ಗಮನಿಸಿ :
- ನಮ್ಮ GreenSystem™ ಲಿಂಕ್ ಮೋಡಮ್ ಗಳು ಯಾವುದೇ ಜಾನ್ ಡಿಯರ್ Trem-IIIA ಟ್ರ್ಯಾಕ್ಟರ್ ಗಳೊಂದಿಗೆ ಕನೆಕ್ಟ್ ಆಗುತ್ತವೆ ಮತ್ತು ವೇಗವಾಗಿ ಡೇಟಾ ಸ್ಥಳಾಂತರಿಸುತ್ತವೆ, ಹೀಗೆ ಉಪಕರಣಗಳು ಎಷ್ಟೇ ಹಳೆಯದಾಗಿದ್ದರೂ ಇಡೀ ಟ್ರ್ಯಾಕ್ಟರ್ ಗಳ ಫ್ಲೀಟ್ ಅಥವಾ ಸಮೂಹವನ್ನು ಕನೆಕ್ಟ್ ಮಾಡುತ್ತದೆ.
- ಮಷೀನ್ ಮತ್ತು ಅದರ ಕಾರ್ಯನಿರ್ವಹಣೆಯ ಡೇಟಾವನ್ನು ನಿಮ್ಮ ಜಾನ್ ಡಿಯರ್ ಆಪರೇಷನ್ಸ್ ಸೆಂಟರ್ ಖಾತೆಯಲ್ಲಿ ಸ್ಟ್ರೀಮ್ ಮಾಡಿ ಅಥವಾ ಸ್ವೀಕರಿಸಿ ವೀಕ್ಷಿಸಿ.