4240ಯುನಿವರ್ಸಲ್ ಡಿಸ್ಪ್ಲೇ

8.4 ಇಂಚಿನ ಸ್ಮಾರ್ಟ್ ಟಚ್ ಸ್ಕ್ರೀನ್ ಜೊತೆಗೆ ನಿಖರವಾದ ಎಗ್ ಪ್ರದರ್ಶನ: ನಿಖರವಾದ ಕೃಷಿ ಪ್ರದರ್ಶನ ಆಪರೇಟರ್‌ಗೆ ಬಳಸಲು ಸುಲಭವಾದ ಅನುಭವವನ್ನು ಒದಗಿಸುತ್ತದೆ. ಪ್ರಸ್ತುತ AutoTrac™ ಕಾರ್ಯಕ್ಷಮತೆ (ಟ್ರ್ಯಾಕ್ ದೋಷ) ಮತ್ತು ಇತರ ಎಲ್ಲಾ ಪ್ರಮುಖ ಮಾಹಿತಿಯನ್ನು ನೋಡಲು ಆಪರೇಟರ್‌ಗೆ ಈ ಡಿಸ್ಪ್ಲೇ ಸರಳವಾದ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾದ ಸ್ಕ್ರೀನ್ ಅನ್ನು ಹೊಂದಿದೆ.

4240 ಯುನಿವರ್ಸಲ್ ಡಿಸ್ಪ್ಲೇ

ಜಾನ್ ಡಿಯರ್ 4240 ಯುನಿವರ್ಸಲ್ ಡಿಸ್ಪ್ಲೇ ಗದ್ದೆಯ ಕಾರ್ಯಾಚರಣೆಗಳನ್ನು ಸರಳೀಕರಿಸಲು ಮತ್ತು ವೃದ್ಧಿಸಲು ವಿನ್ಯಾಸಗೊಳಿಸಲಾದ ನಿಖರ ಕೃಷಿ ಪರಿಹಾರವಾಗಿದೆ. 8.4-ಇಂಚಿನ ಸ್ಮಾರ್ಟ್ ಟಚ್ ಸ್ಕ್ರೀನ್ ಹೊಂದಿರುವ ಈ ಆಧುನಿಕ ಡಿಸ್ಪ್ಲೇ ಯೂನಿಟ್ ರೈತರಿಗೆ ಟ್ರ್ಯಾಕ್ಟರ್ ಮಾರ್ಗದರ್ಶನ ವ್ಯವಸ್ಥೆಗಳನ್ನು, ವಿಶೇಷವಾಗಿ AutoTrac™ (ಆಟೋಟ್ರ್ಯಾಕ್) ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅನುಕೂಲ ಮಾಡಿಕೊಡುತ್ತದೆ. ಇದರ ಬಳಸಲು ಸುಲಭವಾದ (ಇಂಟ್ಯೂಟಿವ್) ಇಂಟರ್ಫೇಸ್ ಟ್ರ್ಯಾಕ್ ದೋಷ, ಇಂಪ್ಲಿಮೆಂಟ್ ಸ್ಥಿತಿ ಮತ್ತು ಯಂತ್ರದ ಡೇಟಾದಂತಹ ರಿಯಲ್-ಟೈಮ್ ಮಾಹಿತಿ ಒದಗಿಸುವ ಮೂಲಕ ಬಿತ್ತನೆ ಸಾಲುಗಳು ಒಂದರ ಮೇಲೆ ಒಂದು ಹಾಯುವುದನ್ನು (ಓವರ್ ಲ್ಯಾಪಿಂಗ್) ಕಡಿಮೆ ಮಾಡಲು, ಗದ್ದೆ ನಿಖರತೆಯನ್ನು ಹೆಚ್ಚಿಸಲು ಮತ್ತು ಇನ್ಪುಟ್ ಬಳಕೆಯನ್ನು ಉತ್ತಮಗೊಳಿಸಲು ಆಪರೇಟರ್ ಗಳಿಗೆ ಸಹಾಯ ಮಾಡುತ್ತದೆ. 4240 ಡಿಸ್ಪ್ಲೇ ಜಾನ್ ಡಿಯರ್ ನ ಮಾರ್ಗದರ್ಶನದ ಮತ್ತು ಆಟೊಮೇಶನ್ ಇಕೋಸಿಸ್ಟಮ್ ನ ಪ್ರಮುಖ ಭಾಗವಾಗಿದೆ ಮತ್ತು ಇದು SF3 ರಿಸೀವರ್ ನೊಂದಿಗೆ AutoTract™ (ಆಟೋಟ್ರ್ಯಾಕ್™) ಯುನಿವರ್ಸಲ್ 300 ಮತ್ತು StarFire™ (ಸ್ಟಾರ್ಫೈರ್™) 6000 ನಂತಹ ಸಂಬಂಧಿತ ತಂತ್ರಜ್ಞಾನಗಳೊಂದಿಗೆ ಸರಾಗವಾಗಿ ಸಂಯೋಜಿಸುವುದರ ಜೊತೆಗೆ ಆಧುನಿಕ ನಿಖರ ಕೃಷಿಗೆ ಸಮಗ್ರ ಪರಿಹಾರವನ್ನು ನೀಡುತ್ತದೆ. ...