John Deere ಟ್ರಾಕ್ಟರ್ 5036 ಸ್ಪರ್ಧಾತ್ಮಕ ಟ್ರ್ಯಾಕ್ಟರ್ ಬೆಲೆಯಲ್ಲಿ ಸಾಟಿಯಿಲ್ಲದ ದಕ್ಷತೆಯನ್ನು ನೀಡುತ್ತದೆ. ಈ ವಿವಿಧೋದ್ದೇಶ ಕೃಷಿ ಟ್ರ‍್ಯಾಕ್ಟರ‍್ ಎಲ್ಲಾ ಕೃಷಿ ಮತ್ತು ಸಾಗಣೆ ಅಪ್ಲಿಕೇಶನ್‌ಗಳಿಗೆ ಸೂಕ್ತವಾಗಿದೆ.
ಇವುಗಳಿಗಾಗಿ ಹುಡುಕಿ:
ಪವರ‍್ ಸ್ಟೇರಿಂಗ್ ಹೆಚ್ಚು ಕೆಲಸದ ಗಂಟೆಗಳವರೆಗೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ
ಅಧಿಕ ಬಾಳಿಕೆ ಮತ್ತು ಕಡಿಮೆ ನಿರ್ವಹಣೆಗಾಗಿ ಕಾಲರ್ ಶಿಫ್ಟ್ ಗೇರ್ ಬಾಕ್ಸ್
ಸುಲಭ ಕಾರ್ಯಾಚರಣೆ ಮತ್ತು ಹೆಚ್ಚಿನ ಆರಾಮಕ್ಕಾಗಿ ಸೈಡ್ ಶಿಫ್ಟ್ ಗೇರ್ ಲೀವರ್ ಗಳು
ಜಾನ್ ಡಿಯರ್ 5036D ಒಂದು 36 HP ಟ್ರ್ಯಾಕ್ಟರ್ ಆಗಿದ್ದು, ವಿಭಿನ್ನ ಪ್ರಕಾರದ ಕೃಷಿ ಮತ್ತು ಸಾರಿಗೆ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಅದು 3-ಸಿಲಿಂಡರ್ ಗಳ, ಸಹಜವಾಗಿ ಗಾಳಿ ಪೂರೈಕೆಯುಳ್ಳ (ಆಸ್ಪಿರೇಟೆಡ್) ಎಂಜಿನ್ ಹೊಂದಿದ್ದು 2100 RPM ನಲ್ಲಿ ಓಡುತ್ತದೆ, ಹೀಗೆ ಅದು ವಿವಿಧ ಕೆಲಸಗಳಿಗೆ ವಿಶ್ವಾಸಾರ್ಹವಾಗಿದೆ. ...
ಅದರ ಹೈಡ್ರೊಸ್ಟ್ಯಾಟಿಕ್ ಪವರ್ ಸ್ಟೇರಿಂಗ್ ನಿಂದಾಗಿ ಹೆಚ್ಚು ಶ್ರಮವಿಲ್ಲದೇ ಆರಾಮವಾಗಿ ನಿರ್ವಹಿಸುವುದು ಮತ್ತು ದೀರ್ಘ ಅವಧಿಯವರೆಗೆ ನಿರಾಯಾಸವಾಗಿ ಉಪಯೋಗಿಸುವುದು ಸಾಧ್ಯವಾಗುತ್ತದೆ. ಕಾಲರ್ ಶಿಫ್ಟ್ ಗೇರ್ ಬಾಕ್ಸ್ 8 ಫಾರ್ವರ್ಡ್ ಮತ್ತು 4 ರಿವರ್ಸ್ ಗೇರ್ ಗಳನ್ನು ಹೊಂದಿದ್ದು, ಸರಾಗವಾಗಿ ಗೇರ್ ಬದಲಾಯಿಸಬಹುದು ಮತ್ತು ಮೆಂಟೆನನ್ಸ್ ತಲೆನೋವು ಕಡಿಮೆಯಾಗುತ್ತದೆ.
ಸೈಡ್ ಶಿಫ್ಟ್ ಗೇರ್ ಲೀವರ್ ಗಳನ್ನು ಆಪರೇಟರ್ ಗೆ ಆರಾಮ ಮತ್ತು ಸುರಕ್ಷತೆ ಒದಗಿಸುವ ರೀತಿಯಲ್ಲಿ ಇರಿಸಲಾಗಿದ್ದು, ಕಾರ್ಯನಿರ್ವಹಣೆಯ ಸ್ಟೇಶನ್ ಒಳಗೆ ಹೋಗುವುದು (ಇಂಗ್ರೆಸ್) ಮತ್ತು ಹೊರಗೆ ಬರುವುದನ್ನು (ಎಗ್ರೆಸ್) ಸುಲಭಗೊಳಿಸುತ್ತದೆ. 1600 kgf ನಷ್ಟು ಎತ್ತುವ ಸಾಮರ್ಥ್ಯ ಹೊಂದಿರುವ ಈ ಟ್ರ್ಯಾಕ್ಟರ್ ವಿವಿಧ ಪ್ರಕಾರದ ಇಂಪ್ಲಿಮೆಂಟ್ ಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಬೇರೆ ಬೇರೆ ಜಮೀನಿನ ಪರಿಸ್ಥಿತಿಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.
ಅಲ್ಲದೇ, ಎಣ್ಣೆಯಲ್ಲಿ-ಅದ್ದಿದ ಡಿಸ್ಕ್ ಬ್ರೇಕ್ ಗಳು ಉತ್ತಮ ಬ್ರೇಕಿಂಗ್ ಸಾಮರ್ಥ್ಯ ಮತ್ತು ದೀರ್ಘ ಬಾಳಿಕೆ ಒದಗಿಸುತ್ತವೆ. ಏರ್ ರಿಸ್ಟ್ರಿಕ್ಷನ್ ಸೆನ್ಸರ್ ಹೊಂದಿರುವ ಡ್ರೈ-ಟೈಪ್ ಏರ್ ಫಿಲ್ಟರ್ ಎಂಜಿನ್ ಅನ್ನು ಸ್ವಚ್ಛವಾಗಿಡುತ್ತದೆ ಮತ್ತು ಅದು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಈ ಅತ್ಯಾಧುನಿಕ ಲಕ್ಷಣಗಳ ಸಂಯೋಜನೆಯು ಜಾನ್ ಡಿಯರ್ 5036D ಟ್ರ್ಯಾಕ್ಟರ್ ಅನ್ನು ಆಧುನಿಕ ಕೃಷಿ ಕಾರ್ಯಾಚರಣೆಗಳಿಗಾಗಿ ಒಂದು ವಿಶ್ವಾಸಾರ್ಹ ಆಯ್ಕೆಯನ್ನಾಗಿಸುತ್ತದೆ.
ಪ್ರಮಾಣಿತ ವೈಶಿಷ್ಟ್ಯಗಳು -
ಗೇರ್ ಬಾಕ್ಸ್‌ನಲ್ಲಿ ಟಾಪ್ ಶಾಫ್ಟ್ ಲೂಬ್ರಿಕೇಶನ್, ಪಿಸ್ಟನ್ ಸ್ಪ್ರೇ ಕೂಲಿಂಗ್ ಜೆಟ್ & ಮೆಟಲ್ ಫೇಸ್ ಸೀಲ್ ನೊಂದಿಗೆ ಹಿಂಭಾಗದ ಆಯಿಲ್ ಆಕ್ಸೆಲ್ ಎಲ್ಲಾ 5D ಮಾಡಲ್ ಗಳಲ್ಲಿ ಪ್ರಮಾಣಿತ ವೈಶಿಷ್ಟ್ಯಗಳಾಗಿದ್ದು, ಇವುಗಳನ್ನು ವಿವಿಧ ಕೆಲಸಗಳನ್ನು ಮಾಡಬಲ್ಲ, ಬಾಳಿಕೆ ಬರುವಂತೆ ಮಾಡುತ್ತದೆ & ಟ್ರಾಕ್ಟರ್‌ಗಳ ಕಡಿಮೆ ನಿರ್ವಹಣೆ ಶ್ರೇಣಿ..
ಉತ್ಪನ್ನದಲ್ಲಿ ಸುಧಾರಣೆ ತರುವುದು ಒಂದು ನಿಂತರವಾದ ಪ್ರಕ್ರಿಯಾಗಿದೆ. ಆದ್ದರಿಂದ, ಮುಂಚಿತವಾಗಿ ಸೂಚನೆ ನೀಡದೇ ಇಲ್ಲಿ ನೀಡಲಾದ ಮಾಹಿತಿಯಲ್ಲಿ ಬದಲಾವಣೆ ಮಾಡಬಹುದಾಗಿರುತ್ತದೆ.
ಇಲ್ಲಿ ತೋರಿಸಲಾದ ಪರಿಕರಗಳು ಪ್ರಮಾಣಿತ ಸಲಕರಣೆಗಳ ಭಾಗವಾಗಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ. ಮೇಲಿನ ಲಕ್ಷಣಗಳ ಪೈಕಿ ಕೆಲವು ಲಕ್ಷಣಗಳು ಐಚ್ಛಿಕವಾಗಿರುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಆನ್ ಲೈನ್ ಬ್ರೋಶರ್ ನೋಡಿ ಅಥವಾ ನಿಮ್ಮ ಸಮೀಪದ ಡೀಲರ್ ಅನ್ನು ಸಂಪರ್ಕಿಸಿ.