John Deere 5045 ಒಂದು ಶಕ್ತಿಯುತ ಟ್ರ್ಯಾಕ್ಟರ್ ಆಗಿದೆ, ಇದು ಎಲ್ಲಾ ಕೃಷಿ ಕೆಲಸಗಳಿಗೆ ಬೇಕಾಗುವ ಹೆಚ್ಚಿನ ಬ್ಯಾಕ್ ಅಪ್ ಟಾರ್ಕ್ ಮತ್ತು ವೇಗವರ್ಧಿತ ಉತ್ಪಾದಕತೆಯನ್ನು ಹೊಂದಿರುವ ಟ್ರಾಕ್ಟರ್ ಆಗಿದೆ.
ಇವುಗಳಿಗಾಗಿ ಹುಡುಕಿ:
ಆರ್ದ್ರ ಭೂಮಿಯಲ್ಲಿನ ಬಳಕೆಗಳಿಗೆ HLD ಟೈರ್‌ಗಳೊಂದಿಗೆ 4WD
ಹೈಡ್ರಾಲಿಕ್ ಆಗಿ ಕಾರ್ಯನಿರ್ವಹಿಸುವ ಉಪಕರಣಗಳಿಗೆ ಸೆಲೆಕ್ಟಿವ್ ಕಂಟ್ರೋಲ್ ವಾಲ್ವ್ ಕಾರ್ಯಾಚರಣೆಯ ಸುಲಭತೆಯನ್ನು ಒದಗಿಸುತ್ತದೆ
ಸುಲಭ ಕಾರ್ಯಾಚರಣೆ ಸೈಡ್ ಶಿಫ್ಟ್ ಗೇರ್ ಲೀವರ್ ಗಳ ಜೊತೆಗೆ ಅನುಕೂಲಕರ ಸೀಟ್
John Deere ಟ್ರ‍್ಯಾಕ್ಟರ‍್ ನ ವಿವಿಧ ಬೆಲೆಗಳನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ‍್ ಅನ್ನು ಈಗಲೇ ಸಂಪರ್ಕಿಸಿ!
ಸ್ಟ್ರೈಟ್ ಆಕ್ಸೆಲ್ ನೊಂದಿಗಿನ ಪ್ಲಾನೆಟರಿ ಗೇರ್ ಹಿಂದಿನ ಆಕ್ಸೆಲ್ ಭಾರವನ್ನು ಮೂರು ಪಾಯಿಂಟ್ ಗಳ ಮೇಲೆ ವಿತರಿಸುವ ಮೂಲಕ ಪ್ರತ್ಯೇಕ ಗೇರ್ ಗಳು ಮತ್ತು ಶಾಫ್ಟ್ ಗಳ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ
ಕಡಿಮೆ ಸವೆತದೊಂದಿಗೆ ಆಕ್ಸೆಲ್ ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ
JD Link ಜಾನ್ ಡಿಯರ್ ಪರಿಚಯಿಸಿದ ಒಂದು ಹೊಸ ಅಪ್ಲಿಕೇಶನ್ ಆಗಿದ್ದು ನೀವು ಯಾವಾಗ ಬೇಕಾದರೂ ಎಲ್ಲಿಂದ ಬೇಕಾದರೂ ನಿಮ್ಮ ಟ್ರ್ಯಾಕ್ಟರ್ ಚೆನ್ನಾಗಿದೆಯೆ ಎಂದು ಪರಿಶೀಲಿಸಲು ಮತ್ತು ನಿಮ್ಮ ಟ್ರ್ಯಾಕ್ಟರ್ ನೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ.
ಫ್ಯಾಕ್ಟರಿ ಫಿಟೆಡ್ ಅಥವಾ ಉತ್ಪಾದನೆ ವೇಳೆ ಟ್ರ್ಯಾಕ್ಟರ್ ನಲ್ಲಿ ಅಳವಡಿಸಿದ ಆಯ್ಕೆಗಳು
ಫ್ಯಾಕ್ಟರಿ ಫಿಟೆಡ್ ಅಥವಾ ಉತ್ಪಾದನೆ ವೇಳೆ ಟ್ರ್ಯಾಕ್ಟರ್ ನಲ್ಲಿ ಅಳವಡಿಸಿದ ಆಯ್ಕೆಗಳು
JDLink (ಎಚ್ಚರಿಕೆ ಸಂದೇಶಗಳು, ಮಾನಿಟರಿಂಗ್ ಮತ್ತು ಟ್ರ್ಯಾಕಿಂಗ್ ಸಿಸ್ಟಮ್) ರಿವರ್ಸ್ ಪಿಟಿಒ ಡಿಲಕ್ಸ್ ಸೀಟ್ ಮತ್ತು ಸೀಟ್ ಬೆಲ್ಟ್ ನೊಂದಿಗೆ ರೋಲ್ ಓವರ್ ಪ್ರೊಟೆಕ್ಷನ್ ರಚನೆ (ROPS) ಸರಿಹೊಂದಿಸಬಹುದಾದ ಮುಂದಿನ ಆಕ್ಸೆಲ್ ಮೆಕ್ಯಾನಿಕಲ್ ಕ್ವಿಕ್ ರೈಸ್ ಮತ್ತು ಲೋವರ್ (MQRL)
ಜಾನ್ ಡಿಯರ್ 5045D PowerPro™ 46 HP ಟ್ರ್ಯಾಕ್ಟರ್ ಆಗಿದ್ದು, ಆಧುನಿಕ ಕೃಷಿಯ ವಿವಿಧ ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. 3-ಸಿಲಿಂಡರ್ ಗಳ, 2900 CC ಎಂಜಿನ್ 2100 RPM ನಲ್ಲಿ ಕೆಲಸ ಮಾಡುವ ಮೂಲಕ ಅಧಿಕ ಟೋರ್ಕ್ ಪೂರೈಸುವ ಮೂಲಕ ವಿವಿಧ ಕೃಷಿ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುತ್ತದೆ. ಡ್ರೈ-ಟೈಪ್ ಡ್ಯುಯೆಲ್-ಎಲಿಮೆಂಟ್ ಏರ್ ಫಿಲ್ಟರ್ ಅತ್ಯುತ್ತಮ ಎಂಜಿನ್ ರಕ್ಷಣೆ ಖಚಿತಪಡಿಸುತ್ತದೆ, ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು ಮೆಂಟೆನನ್ಸ್ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತದೆ. ...
ಕಾಲರ್ ಶಿಫ್ಟ್ ಟ್ರಾನ್ಸ್ ಮಿಶನ್ ಹೊಂದಿರುವ 8 ಫಾರ್ವರ್ಡ್ ಮತ್ತು 4 ರಿವರ್ಸ್ ಗೇರ್ ಗಳನ್ನು ಒದಗಿಸುವ 5045D 2.83 ರಿಂದ 30.92 km/h ವರೆಗಿನ ವಿವಿಧ ಸ್ಪೀಡ್ ಗಳನ್ನು ಒದಗಿಸುತ್ತದೆ, ಈ ಮೂಲಕ ನೇಗಿಲು ಹೂಡುವುದು, ಉಳುಮೆ ಅಥವಾ ಸರಕು ಸಾಗಣೆಯಂತಹ ಕೆಲಸಗಳಿಗಾಗಿ ಉತ್ತಮ ಸ್ಪೀಡ್ ಆಯ್ಕೆ ಮಾಡಲು ಆಪರೇಟರ್ ಗಳಿಗೆ ಅವಕಾಶ ನೀಡುತ್ತದೆ. ಸೈಡ್ ಶಿಫ್ಟ್ ಗೇರ್ ಲೀವರ್ ಗಳನ್ನು ಉಪಯೋಗಿಸಲು ಅನುಕೂಲವಾಗುವ ರೀತಿಯಲ್ಲಿ ಇರಿಸಲಾಗಿದ್ದು, ಇದರಿಂದ ಆಪರೇಟರ್ ಗೆ ಹೆಚ್ಚು ಆರಾಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಮತ್ತು ನಿರಾಯಾಸವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
1600 kgf ನಷ್ಟು ಅಧಿಕ ಎತ್ತುವ ಸಾಮರ್ಥ್ಯ ಹೊಂದಿರುವ ಈ ಟ್ರ್ಯಾಕ್ಟರ್ ವಿವಿಧ ಪ್ರಕಾರದ ಇಂಪ್ಲಿಮೆಂಟ್ ಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಬೇರೆ ಬೇರೆ ಜಮೀನಿನ ಪರಿಸ್ಥಿತಿಗಳಲ್ಲಿ ಉತ್ಪಾದಕತೆ ಖಚಿತಪಡಿಸುತ್ತದೆ. ಪವರ್ ಸ್ಟೇರಿಂಗ್ ಸಿಸ್ಟಮ್ ನಿಂದಾಗಿ ದೀರ್ಘಕಾಲದವರೆಗೆ ಕೆಲಸ ಮಾಡವಾಗ ಆಪರೇಟರ್ ಗೆ ಹೆಚ್ಚು ದಣಿವಾಗುವುದಿಲ್ಲ ಹಾಗೂ ಸಾಮರ್ಥ್ಯ ಹೆಚ್ಚುತ್ತದೆ. ಅಲ್ಲದೇ, ಆಯಿಲ್ ನಲ್ಲಿ ಅದ್ದಿದ ಡಿಸ್ಕ್ ಅಧಿಕ ಬ್ರೇಕಿಂಗ್ ಸಾಮರ್ಥ್ಯ ನೀಡುತ್ತದೆ ಮತ್ತು ಬ್ರೇಕ್ ಸಿಸ್ಟಮ್ ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.
60-ಲೀಟರ್ ಗಳ ಫ್ಯೂಲ್ ಟ್ಯಾಂಕ್ ಹೊಂದಿರುವ ಈ ಟ್ರ್ಯಾಕ್ಟರ್ ಗೆ ಮೇಲಿಂದ ಮೇಲೆ ಫ್ಯೂಲ್ ಹಾಕಿಸದೇ ವಿಸ್ತರಿತ ಕೆಲಸಗಳನ್ನು ಮಾಡಲು ಹೆಚ್ಚು ಸೂಕ್ತವಾಗಿದೆ. ಶಕ್ತಿ ಮತ್ತು ಅನುಕೂಲತೆಯನ್ನು ಒಟ್ಟಿಗೆ ಬಯಸುವ ರೈತರು ಜಾನ್ ಡಿಯರ್ 5045D PowerPro™ ಟ್ರ್ಯಾಕ್ಟರ್ ಅನ್ನು ನಂಬಬಹುದು.
ಪ್ರಮಾಣಿತ ವೈಶಿಷ್ಟ್ಯಗಳು -
ಗೇರ್ ಬಾಕ್ಸ್‌ನಲ್ಲಿ ಟಾಪ್ ಶಾಫ್ಟ್ ಲೂಬ್ರಿಕೇಶನ್, ಪಿಸ್ಟನ್ ಸ್ಪ್ರೇ ಕೂಲಿಂಗ್ ಜೆಟ್ & ಮೆಟಲ್ ಫೇಸ್ ಸೀಲ್ ನೊಂದಿಗೆ ಹಿಂಭಾಗದ ಆಯಿಲ್ ಆಕ್ಸೆಲ್ ಎಲ್ಲಾ 5D ಮಾಡಲ್ ಗಳಲ್ಲಿ ಪ್ರಮಾಣಿತ ವೈಶಿಷ್ಟ್ಯಗಳಾಗಿದ್ದು, ಇವುಗಳನ್ನು ವಿವಿಧ ಕೆಲಸಗಳನ್ನು ಮಾಡಬಲ್ಲ, ಬಾಳಿಕೆ ಬರುವಂತೆ ಮಾಡುತ್ತದೆ & ಟ್ರಾಕ್ಟರ್‌ಗಳ ಕಡಿಮೆ ನಿರ್ವಹಣೆ ಶ್ರೇಣಿ..
PowerPro™ ಟ್ರ್ಯಾಕ್ಟರ್ ಎಂದರೆ ಶಕ್ತಿಶಾಲಿ ಟ್ರ್ಯಾಕ್ಟರ್, ಅದು ಅಧಿಕ ಬ್ಯಾಕ್ ಅಪ್ ಟೋರ್ಕ್ ಹೊಂದಿರುತ್ತದೆ ಮತ್ತು ಎಲ್ಲ ಕೃಷಿ ಕೆಲಸಗಳಲ್ಲಿ ಹೆಚ್ಚಿನ ಉತ್ಪಾದಕತೆಯನ್ನು ಸೃಷ್ಟಿಸುತ್ತದೆ
ವಿವಿಧ ಸ್ಥಳಗಳಲ್ಲಿ ಸಲಕರಣೆಗಳ ಮಾದರಿಗಳು, ವೈಶಿಷ್ಟ್ಯಗಳು, ಆಯ್ಕೆಗಳು, ಲಗತ್ತುಗಳು ಮತ್ತು ಬೆಲೆಗಳು ಬದಲಾಗಬಹುದು. ವಿವರಗಳಿಗಾಗಿ, ದಯವಿಟ್ಟು ನಿಮ್ಮ ಸ್ಥಳೀಯ John Deere ಡೀಲರ್ ಅನ್ನು ಸಂಪರ್ಕಿಸಿ. ನಿರ್ದಿಷ್ಟತೆಗಳು, ಮಾದರಿ ವೈಶಿಷ್ಟ್ಯಗಳು ಮತ್ತು John Deere ಭಾಗಗಳ ಬೆಲೆಗಳನ್ನು ಪರಿಶೀಲಿಸುವ ಮತ್ತು ಸರಿಹೊಂದಿಸುವ ಸಂಪೂರ್ಣ ಹಕ್ಕನ್ನು John Deere ಅವರು ಹೊಂದಿರುತ್ತಾರೆ. ವಾಹನವನ್ನು ನಿರ್ವಹಿಸುವ ಮೊದಲು, ವಾಹನಕ್ಕಾಗಿ ಯಾವುದೇ ಉತ್ಪನ್ನ/ಆಪರೇಟರ್/ಸೇವಾ ಕೈಪಿಡಿಯಲ್ಲಿ ಒದಗಿಸಲಾದ ಸುರಕ್ಷತಾ ಸೂಚನೆಗಳನ್ನು ನೀವು ಎಚ್ಚರಿಕೆಯಿಂದ ಓದಬೇಕು ಮತ್ತು ಕಟ್ಟುನಿಟ್ಟಾಗಿ ಅನುಸರಿಸಬೇಕು.
ಬೆಲ್ಟ್ ಧರಿಸುವುದು, ಟೈರ್ ಆಯ್ಕೆ, ವಾಹನದ ತೂಕ, ಇಂಧನ ಸ್ಥಿತಿ, ಭೂಪ್ರದೇಶ ಮತ್ತು ಇತರ ಪರಿಸರ ಅಂಶಗಳ ಆಧಾರದ ಮೇಲೆ ನಿಜವಾದ ವಾಹನದ ಗರಿಷ್ಠ ವೇಗವು ಬದಲಾಗಬಹುದು. ಎಂಜಿನ್ ತಯಾರಕರು ಒದಗಿಸಿದ ಎಂಜಿನ್ ಹಾರ್ಸ್‌ಪವರ್ ಮತ್ತು ಟಾರ್ಕ್ ಮಾಹಿತಿಯನ್ನು ಹೋಲಿಕೆಯ ಉದ್ದೇಶಗಳಿಗಾಗಿ ಮಾತ್ರ ಬಳಸುತ್ತಾರೆ. ಹಾರ್ಸ್ ಪವರ್ ಮತ್ತು ಟಾರ್ಕ್‌ಗಳಲ್ಲಿ ನಿಜವಾದ ಕಾರ್ಯಾಚರಣೆಯ ಡೇಟಾ ಮತ್ತು ಡೀಫಾಲ್ಟ್ ಡೇಟಾದ ನಡುವೆ ವ್ಯತ್ಯಾಸವಿರಬಹುದು. ವಿವರವಾದ ಮಾಹಿತಿಗಾಗಿ ದಯವಿಟ್ಟು ಮೂಲ ಎಂಜಿನ್ ತಯಾರಕರ ವೆಬ್‌ಸೈಟ್ ಅನ್ನು ನೋಡಿ. ಐಚ್ಛಿಕ ಪರಿಕರಗಳು ಮತ್ತು ಲಗತ್ತುಗಳನ್ನು ಮರುಪಾವತಿಗಾಗಿ ಪ್ರಮಾಣಿತ ವಾರಂಟಿ ಕ್ಲೈಮ್‌ನಲ್ಲಿ ಸೇರಿಸಲಾಗಿಲ್ಲ. ಉತ್ಪನ್ನ (ಅದರ ಘಟಕಗಳನ್ನು ಒಳಗೊಂಡಂತೆ) ಮತ್ತು ಪರಿಕರಗಳು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು.