ಜಾನ್ ಡಿಯರ್ 3036EN 35 HP ಬಹುಪಯೋಗಿ ಟ್ರ್ಯಾಕ್ಟರ್ ಆಗಿದೆ. ಅದು ದ್ರಾಕ್ಷಿ ತೋಟಗಳಿಗೆ, ತರಕಾರಿ ಬೆಳೆಗಳಿಗೆ ಮತ್ತು ಅಂತರ್-ಕೃಷಿ ಕಾರ್ಯಗಳಿಗೆ ಹೆಚ್ಚು ಸೂಕ್ತವಾಗಿದೆ. ಅದರ ಸಣ್ಣ ರಚನೆ ಮತ್ತು ಶಕ್ತಿಶಾಲಿ ಎಂಜಿನ್ ಅತ್ಯುತ್ತಮ ಇಂಧನ ದಕ್ಷತೆ ಮತ್ತು ಉತ್ಪಾದಕತೆಯನ್ನು ಒದಗಿಸುತ್ತದೆ.
ಇವುಗಳಿಗಾಗಿ ಹುಡುಕಿ:
17-28% ದಷ್ಟು ಉತ್ತಮ ಎಂಜಿನ್ ಪವರ್ ಉತ್ಪಾದಿಸುವ ಟೋರ್ಕ್
910 kgf ನಷ್ಟು ಅಧಿಕ ಎತ್ತುವ ಸಾಮರ್ಥ್ಯ
ಕಡಿಮೆ ಟ್ರ್ಯಾಕ್ ಅಗಲವು ಚಿಕ್ಕ ಸ್ಥಳದಲ್ಲಿ ತಿರುಗಿಸಲು ಅನುಕೂಲ ಮಾಡುತ್ತದೆ ಮತ್ತು ಇದು ದ್ರಾಕ್ಷಿ ಹಾಗೂ ಹಣ್ಣಿನ ತೋಟಗಳಿಗೆ ಸೂಕ್ತ.
ಜಾನ್ ಡಿಯರ್ ಟ್ರ್ಯಾಕ್ಟರ್ ನ ವಿವಿಧ ಬೆಲೆಗಳನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ್ ಅನ್ನು ಈಗಲೇ ಸಂಪರ್ಕಿಸಿ!
ಜಾನ್ ಡಿಯರ್ 3036EN ಒಂದು ವಿವಿಧೋದ್ದೇಶದ ಟ್ರ್ಯಾಕ್ಟರ್ ಆಗಿದ್ದು, ಇದು 35 ಹಾರ್ಸ್ ...ಪವರ್ನೊಂದಿಗೆ ಬರುತ್ತದೆ. ದ್ರಾಕ್ಷಿತೋಟ, ದಾಳಿಂಬೆ, ಹಣ್ಣಿನ ತೋಟ ಮತ್ತು ಇತರ ತರಕಾರಿ ಕೃಷಿಗೆ ಇದು ಆದ್ಯತೆಯ ಟ್ರ್ಯಾಕ್ಟರ್ ಆಗಿದೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ, 3036EN ಟ್ರ್ಯಾಕ್ಟರ್ ಬಹಳ ವೈವಿಧ್ಯಮಯವಾದ ಮತ್ತು ಬುದ್ಧಿವಂತ ಟ್ರ್ಯಾಕ್ಟರ್ ಆಗಿದ್ದು, ಇದು ಅನೇಕ ರೈತರ ಮೊದಲ ಆಯ್ಕೆಯಾಗಿದೆ. 3036EN ಟ್ರ್ಯಾಕ್ಟರ್ನ ಎಲ್ಲಾ ವೈಶಿಷ್ಟ್ಯಗಳು, ವಿವರಗಳು, ಗ್ರಾಹಕರ ಲಾಭಗಳು ಮತ್ತು ಗ್ರಾಹಕರ ವಿಮರ್ಶೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯಲು ಮುಂದೆ ಓದಿ. ಈ 35 HP ಜಾನ್ ಡಿಯರ್ ಟ್ರ್ಯಾಕ್ಟರ್ನಲ್ಲಿ, ಬ್ಯಾಟರಿ ಮತ್ತು ಏರ್ ಫಿಲ್ಟರ್ ಅನ್ನು ಸುಲಭ ಮೆಂಟೆನನ್ಸ್ ಗಾಗಿ ಮುಂಭಾಗದ ಸ್ಥಾನದಲ್ಲಿ ಇರಿಸಲಾಗಿದೆ. ಡ್ರೈ-ಟೈಪ್ ಏರ್ ಫಿಲ್ಟರ್ ಡ್ಯುಯಲ್ ಎಲಿಮೆಂಟ್ ಅಂದರೆ ಪ್ರೈಮರಿ ಮತ್ತು ಸೆಕೆಂಡರಿ ಫಿಲ್ಟರ್ನಲ್ಲಿ ಬರುತ್ತಿದ್ದು, ಇದು 99% ಸ್ವಚ್ಛತೆಯ ದಕ್ಷತೆಯನ್ನು ಪಡೆಯುವುದನ್ನು ಸಾಧ್ಯವಾಗಿಸುತ್ತದೆ. ದೊಡ್ಡ ಟೈರ್ಗಳು 320 mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುವುದರಿಂದ ಬಳಕೆದಾರರು ಮಳೆಗಾಲದಲ್ಲಿ ಕೆಸರಿನ ಪರಿಸ್ಥಿತಿಗಳಲ್ಲಿ ಮತ್ತು ಹಳ್ಳಗಳ ಮೂಲಕ ಸುರಕ್ಷಿತವಾಗಿ ಚಾಲನೆ ಮಾಡಿ ಟ್ರ್ಯಾಕ್ಟರ್ ಅನ್ನು ಓಡಿಸಬಹುದು. ಮತ್ತು ಅಗಲವು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಅನೇಕ ವೇರಿಯೆಂಟ್ಗಳಲ್ಲಿ ಲಭ್ಯವಿರುತ್ತದೆ. ಇದಲ್ಲದೆ, ಈ ಟ್ರಾಕ್ಟರ್ನ 1.63 ಮೀಟರ್ನಷ್ಟು ಸಣ್ಣ ತಿರುಗುವಿಕೆ ಸಾಮರ್ಥ್ಯದೊಂದಿಗೆ ರೈತರು ಕಿರಿದಾದ ದಾರಿಗಳಲ್ಲೂ ತಿರುಗಿಸಬಹುದು. ಜಾನ್ ಡಿಯರ್ 3036EN 35 HP 3 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ಜೊತೆಗೆ ಇನ್ಲೈನ್ FIP ಯೊಂದಿಗೆ ಬರುತ್ತದೆ. ಇದು 17-27% ರ ಅಧಿಕ ಬ್ಯಾಕಪ್ ಟಾರ್ಕ್ ಅನ್ನು ಹೊಂದಿದೆ ಜಾನ್ ಡಿಯರ್ EN ಸರಣಿಯ ಟ್ರ್ಯಾಕ್ಟರುಗಳು 4-ವ್ಹೀಲ್ ಡ್ರೈವ್ ಅನ್ನು ಹೊಂದಿದ್ದು, ಇದು ಹಣ್ಣಿನ ತೋಟಗಳಲ್ಲಿ ಕಠಿಣವಾದ ಕೃಷಿ ಕಾರ್ಯಾಚರಣೆಗಳನ್ನು ನಡೆಸುವುದನ್ನು ಸಾಧ್ಯವಾಗಿಸುತ್ತದೆ. ಇದಲ್ಲದೆ, 4 ವ್ಹೀಲ್ ಡ್ರೈವ್ ಹೆಚ್ಚಿನ ಎಳೆತ ಮತ್ತು ಕಡಿಮೆ ಜಾರುವಿಕೆಯನ್ನು ಖಚಿತಪಡಿಸುತ್ತಿದ್ದು ಇದು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಮುಂಭಾಗದ ಟೈರ್ಗಳು ರೇಡಿಯಲ್ ಟ್ಯೂಬ್ಲೆಸ್ ಟೈರ್ಗಳನ್ನು ಹೊಂದಿದ್ದು ಇದು ಮಣ್ಣಿನ ಸಾಂದ್ರತೆಯನ್ನು ಕಡಿಮೆ ಮಾಡಿ ಉತ್ತಮವಾದ ಗಾಳಿಯಾಡುವಿಕೆ ಮತ್ತು ಬೇರಿನ ಬೆಳವಣಿಗೆಗೆ ಕಾರಣವಾಗುತ್ತದೆ, ಇದರಿಂದಾಗಿ ಸಸ್ಯದ ಬೆಳವಣಿಗೆ ಮತ್ತು ಇಳುವರಿ ಸುಧಾರಿಸುತ್ತದೆ. ಅಗಲವಾದ ರೇಡಿಯಲ್ ಟ್ಯೂಬ್ಲೆಸ್ ಟೈರ್ಗಳು ಕೆಸರು ಗದ್ದೆಗಳಲ್ಲಿ ಟೈರ್ಗಳು ಮುಳುಗುವುದನ್ನು ತಪ್ಪಿಸುತ್ತದೆ. ಬಳಕೆದಾರರು ಲೈಟ್ ಆನ್ ಮಾಡಿ ಕತ್ತಲೆಯಲ್ಲಿಯೂ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಲು ಸಾಧ್ಯವಾಗುವಂತೆ 7 ಪಾಯಿಂಟ್ ಕನೆಕ್ಟರ್ ಅನ್ನು ಒದಗಿಸಲಾಗಿದೆ. ಅಗಲವಾದ ವೀಲ್ ಬೇಸ್ನಿಂದಾಗಿ, ಫ್ಲೋರ್ ವಿಶಾಲವಾಗಿದೆ ಮತ್ತು ಆಪರೇಟರ್ಗೆ ಲಿವರ್ಗಳು ಮತ್ತು ಗೇರ್ಗಳನ್ನು ಸುಲಭವಾಗಿ ಬಳಸಲು ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ. ಏರ್ಬ್ಲಾಸ್ಟ್ ಸ್ಪ್ರೇಯರ್ನಂತಹ ದೊಡ್ಡ ಉಪಕರಣಗಳೊಂದಿಗೆ ಕೆಲಸ ಮಾಡುವಾಗ ಓವರ್ ರನ್ನಿಂಗ್ ಕ್ಲಚ್ ವಿದ್ಯುತ್ ಕೇವಲ ಒಂದು ದಿಕ್ಕಿನಲ್ಲಿ ಹರಿಯುವುದನ್ನು ಸಾಧ್ಯವಾಗಿಸುತ್ತದೆ. ಇದು ವಿದ್ಯುತ್ PTO ದಿಂದ ಎಂಜಿನ್ಗೆ ಹಿಮ್ಮುಖವಾಗಿ ಹರಿಯುವುದನ್ನು ತಡೆಯುತ್ತದೆ ಮತ್ತು ಬ್ರೇಕ್ ಹಾಕಿ ಟ್ರ್ಯಾಕ್ಟರ್ ಅನ್ನು ಸುಲಭವಾಗಿ ನಿಲ್ಲಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದರೊಂದಿಗೆ, ಆಯಿಲ್ ನಲ್ಲಿ ಅದ್ದಿದ ಡಿಸ್ಕ್ ಬ್ರೇಕ್ಗಳು ಸುಲಭ ಬ್ರೇಕಿಂಗ್, ಕಡಿಮೆ ನಿರ್ವಹಣೆ ಮತ್ತು ಬ್ರೇಕ್ಗಳ ದೀರ್ಘ ಬಾಳಿಕೆಯನ್ನು ಒದಗಿಸುತ್ತವೆ. ಅಲ್ಲದೆ, ಇಂಧನ ಟ್ಯಾಂಕ್ 32 ಲೀಟರ್ ಸಾಮರ್ಥ್ಯವನ್ನು ಹೊಂದಿದ್ದು, ನಿಮಗೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ನ್ಯೂಟ್ರಲ್ ಸೇಫ್ಟಿ ಸ್ವಿಚ್ (NSS) ಮತ್ತು PTO NSS ಯಾವುದೇ ಲಿವರ್ ಹಾಕಿದ್ದಾಗ ಟ್ರ್ಯಾಕ್ಟರ್ ಪ್ರಾರಂಭವಾಗಲು ಬಿಡದೇ ಆಪರೇಟರ್ನ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ಜಾನ್ ಡಿಯರ್ 3036 EN (ಹೆಚ್ಚು ಅಗಲವಾದ ಟಯರ್ ಗಳೊಂದಿಗೆ)
ಜಾನ್ ಡಿಯರ್ 3036 EN (ಹೆಚ್ಚು ಅಗಲವಾದ ಟಯರ್ ಗಳೊಂದಿಗೆ)
ಜಾನ್ ಡಿಯರ್ 3036EN 35 HP ಬಹುಪಯೋಗಿ ಟ್ರ್ಯಾಕ್ಟರ್ ಆಗಿದೆ. ಅದು ದ್ರಾಕ್ಷಿ ತೋಟಗಳಿಗೆ, ತರಕಾರಿ ಬೆಳೆಗಳಿಗೆ ಮತ್ತು ಅಂತರ್-ಕೃಷಿ ಕಾರ್ಯಗಳಿಗೆ ಹೆಚ್ಚು ಸೂಕ್ತವಾಗಿದೆ. ಅದರ ಸಣ್ಣ ರಚನೆ ಮತ್ತು ಶಕ್ತಿಶಾಲಿ ಎಂಜಿನ್ ಅತ್ಯುತ್ತಮ ಇಂಧನ ದಕ್ಷತೆ ಮತ್ತು ಉತ್ಪಾದಕತೆಯನ್ನು ಒದಗಿಸುತ್ತದೆ.
ಇವುಗಳಿಗಾಗಿ ಹುಡುಕಿ:
17-28% ದಷ್ಟು ಉತ್ತಮ ಎಂಜಿನ್ ಪವರ್ ಉತ್ಪಾದಿಸುವ ಟೋರ್ಕ್
910 kgf ನಷ್ಟು ಅಧಿಕ ಎತ್ತುವ ಸಾಮರ್ಥ್ಯ
ಸರ್ವಶ್ರೇಷ್ಠ ಮಟ್ಟದ 1.63 m ತಿರುಗುವಿಕೆ ವ್ಯಾಸ
ಕಠಿಣವಾದ & ಹಸಿ ಜಮೀನಿನಲ್ಲಿ ಕೆಲಸ ಮಾಡಲು 320 mm ನಷ್ಟು ಹೆಚ್ಚಿನ ಮುಂಭಾಗದ ಗ್ರೌಂಡ್ ಕ್ಲಿಯರೆನ್ಸ್
ಅಗಲವಾದ ರೇಡಿಯಲ್ ಟ್ಯೂಬ್ ರಹಿತ ಟಯರ್ ಗಳುಕಡಿಮೆ ಗ್ರೌಂಡ್ ಪ್ರೆಶರ್ ಮತ್ತು ಕಡಿಮೆ ಮಣ್ಣಿನ ಸಾಂದ್ರತೆಗೆ ಕಾರಣವಾಗತ್ತವೆ
ಟೈಪ್ – 35 HP (25.9 kW), 2800 RPM, 3 ಸಿಲಿಂಡರ್ ಗಳು, ಓವರ್ ಫ್ಲೋ ರೆಸರ್ವಾಯರ್ ನಿಂದ ತಂಪಾಗುವ ಕೂಲಂಟ್, ಸಹಜವಾಗಿ ಆಸ್ಪಿರೇಟ್ ಆಗುವ ಏರ್ ಫಿಲ್ಟರ್ – ಡ್ರೈ ಟೈಪ್, ಡುಯೆಲ್ ಎಲಿಮೆಂಟ್
ಕ್ಲಚ್ – ಸಿಂಗಲ್ ಗೇರ್ ಬಾಕ್ಸ್ - 8 ಫಾರ್ವರ್ಡ್ + 8 ರಿವರ್ಸ್ FNR ಸಿಂಕ್ ರಿವರ್ಸರ್ / ಕಾಲರ್ ರಿವರ್ಸ್ ಫಾರ್ವರ್ಡ್ ಸ್ಪೀಡ್ ಗಳು - (ಹಿಂದಿನ ಟಯರ್ ಗಳು 280/85 R20 1.6 km/h ನಿಂದ 19.3 km/h) ರಿವರ್ಸ್ ಸ್ಪೀಡ್ ಗಳು - (ಹಿಂದಿನ ಟಯರ್ ಗಳು 280/85 R20 1.5 km/h ನಿಂದ 18.4 km/h) ಒಟ್ಟಾರೆ ಅಗಲ (ಹಿಂದಿನ ಟಯರ್ ಗಳು) - 1248 mm ಒಟ್ಟಾರೆ ಅಗಲ (ಮುಂದಿನ ಟಯರ್ ಗಳು) - 1235 mm