Anubhuti ಆಪ್ ಉಪಯೋಗಿಸಿಕೊಂಡು ನಿಮ್ಮ ಜಾನ್ ಡಿಯರ್ ಟ್ರ್ಯಾಕ್ಟರ್ ನ ಅನುಕೂಲಕರ ಮತ್ತು ಪರಿಣಾಮಕಾರಿ ನಿರ್ವಹಣೆ

ಕೃಷಿಯಲ್ಲಿ ತಂತ್ರಜ್ಞಾನವನ್ನು ಸರಾಗವಾಗಿ ಏಕೀಕರಿಸುವಿಕೆಯು ಪ್ರವೃತ್ತಿಯಾಗಿ ಮಾತ್ರ ಉಳಿದಿಲ್ಲ - ಹಾಗೆ ಮಾಡುವುದು ಸ್ಥಿರ ಬೆಳವಣಿಗೆ ಮತ್ತು ಹೆಚ್ಚಾದ ಉತ್ಪಾದಕತೆಯನ್ನು ಖಚಿತಪಡಿಸಲು ಅವಶ್ಯಕವಾಗಿರುತ್ತದೆ. Anubhuti ಆಪ್ ಹೇಗೆ ತಂತ್ರಜ್ಞಾನವು ಕೃಷಿಯ ಅಭಿವೃದ್ಧಿಪಡಿಸುತ್ತದೆ, ಆಧುನಿಕ ರೈತರಿಗಾಗಿ ಮತ್ತು ಕೃಷಿ ವೃತ್ತಿಪರರಿಗಾಗಿ ಅನೇಕ ಲಕ್ಷಣಗಳನ್ನು ಹಾಗೂ ಪ್ರಯೋಜನಗಳನ್ನು ಒದಗಿಸುತ್ತದೆ ಎಂಬುದಕ್ಕೆ ಪ್ರಮುಖ ಉದಾಹರಣೆಯಾಗಿದೆ.

ಇನ್ನು Anubhuti ಆಪ್ ನ ಲಕ್ಷಣಗಳು ಮತ್ತು ಪ್ರಯೋಜನಗಳನ್ನು ನೋಡೋಣ, ಭಾರತದಾದ್ಯಂತ ಕೃಷಿ ಸಮುದಾಯಗಳ ಸುಧಾರಣೆಗಾಗಿ ಕೃಷಿ ಮತ್ತು ತಂತ್ರಜ್ಞಾನದ ನಡುವೆ ಪರಸ್ಪರ ಸಹಕಾರವನ್ನು ಇವು ತೋರಿಸಿಕೊಡುತ್ತವೆ.

Anubhuti ಆಪ್: ಕೃಷಿಯಲ್ಲಿ ನಿಮ್ಮ ಸಂಗಾತಿ!

ಸರಾಗವಾದ ಮತ್ತು ಪ್ರತ್ಯಕ್ಷವಾದ ಬಳಕೆದಾರರ ಅನುಭವವೇ Anubhuti ಯ ತಿರುಳಾಗಿದೆ.  ನೀವು ಜಾನ್ ಡಿಯರ್ ನ ಹಳೆಯ ಗ್ರಾಹಕರಾಗಿರಲೀ ಅಥವಾ ಈಗಷ್ಟೇ ನಿಮ್ಮ ಕೃಷಿ ಪ್ರಯಾಣ ಪ್ರಾರಂಭಿಸಿರಲೀ, ಆಪ್ ನ ಸುಲಭ ಸೈನ್-ಅಪ್ ಪ್ರಕ್ರಿಯೆಯು ನಿಮ್ಮನ್ನು ತ್ವರಿತವಾಗಿ ಆನ್ ಬೋರ್ಡ್ ಮಾಡುವುದನ್ನು ಖಚಿತಪಡಿಸುತ್ತದೆ. 

ನಿಮ್ಮ ಉಪಕರಣಗಳನ್ನು ಸುಲಭವಾಗಿ ನೋಂದಾಯಿಸಿ ಮತ್ತು ವಾರಂಟಿ ಕವರೇಜ್ ಒಳಗೊಂಡು ಅನೇಕ ಪ್ರಯೋಜನಗಳನ್ನು ಆನಂದಿಸಿ ಹಾಗೂ ಪಾರ್ಟ್ ಗಳನ್ನು ನೇರವಾಗಿ ನಿಮ್ಮ ಮನೆ ಬಾಗಿಲಲ್ಲಿ ಪಡೆಯಿರಿ.

Anubhuti ಆಪ್ ಲಕ್ಷಣಗಳು

Anubhuti ಆಪ್ ಅನೇಕ ಲಕ್ಷಣಗಳನ್ನು ಒದಗಿಸುವ ಮೂಲಕ ನಿಮ್ಮ ಕೃಷಿ ಉಪಕರಣಗಳನ್ನು ತ್ವರಿತವಾಗಿ ಮತ್ತು ನಿಖರವಾಗಿ ನಿರ್ವಹಿಸಲು ಸಶಕ್ತರನ್ನಾಗಿಸುತ್ತವೆ.

ಹೆಚ್ಚುವರಿ ಲಕ್ಷಣಗಳು ಇಲ್ಲಿವೆ:

1. ಬಹುಭಾಷೆಯ ಇಂಟರ್ಫೇಸ್

Anubhuti ಆಪ್ ನ ವಿಶಿಷ್ಟ ಲಕ್ಷಣಗಳಲ್ಲಿ ಒಂದೆಂದರೆ ಅದರ ಬಹುಭಾಷೆಯ ಇಂಟರ್ಫೇಸ್, ಅದು 9 ಕ್ಕಿಂತ ಹೆಚ್ಚು ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತದೆ.  ಈ ಒಳಗೊಳ್ಳುವಿಕೆಯ ಗುಣದಿಂದಾಗಿ ನೀವು ನಿಮಗಿಷ್ಟವಾದ ಭಾಷೆಯಲ್ಲಿ, ಅರ್ಥಮಾಡಿಕೊಂಡು ಮತ್ತು ಯಾವುದೇ ತೊಂದರೆಯಿಲ್ಲದೇ ನ್ಯಾವಿಗೇಟ್ ಮಾಡುವುದರೊಂದಿಗೆ ಸುಲಭವಾಗಿ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಹುಡುಕಬಹುದು.

2. ಉಪಕರಣಗಳ ನಿರ್ವಹಣೆ ಮತ್ತು ಮೆಂಟೆನನ್ಸ್

Anubhuti ಆಪ್ ‌ಇದ್ದರೆ, ನೀವು ನಿಮ್ಮ ಜಾನ್ ಡಿಯರ್ ಉಪಕರಣಗಳ ನಿರ್ವಹಣೆ ಮತ್ತು ಮೆಂಟೆನನ್ಸ್ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತೀರಿ. ‌ಆಪ್ ವ್ಯಾಪಕ ಮೆಂಟೆನನ್ಸ್ ವೇಳಾಪಟ್ಟಿಗಳಿಗೆ ಮತ್ತು ಸರ್ವಿಸ್ ಹಿನ್ನೆಲೆಗೆ ಪ್ರವೇಶ ಒದಗಿಸುವ ಮೂಲಕ ನಿಮ್ಮ ಉಪಕರಣಗಳ ಮೆಂಟೆನನ್ಸ್ ಅನ್ನು ಸಮರ್ಥ ರೀತಿಯಲ್ಲಿ ಯೋಜಿಸಲು ಮತ್ತು ಉತ್ತಮಗೊಳಿಸಲು ಅವಕಾಶ ಮಾಡಿಕೊಡುತ್ತದೆ. ಅತ್ಯುತ್ತಮವಾದ ನಿಯಮಿತ ಮೆಂಟೆನನ್ಸ್ ಮೂಲಕ ನೀವು ನಿಮ್ಮ ಮಷೀನ್ ಗಳ ಬಾಳಿಕೆಯನ್ನು ವಿಸ್ತರಿಸಬಹುದು ಮತ್ತು ಅವು ನಿಂತುಹೋಗುವುದರಿಂದಾಗುವ ಖರ್ಚುಗಳನ್ನು ತಪ್ಪಿಸಬಹುದು.

3. ಜಾನ್ ಡಿಯರ್ ಡೀಲರ್ ನೆಟ್ವರ್ಕ್ ನೊಂದಿಗೆ ಸಂಪರ್ಕ ಹೊಂದಿ

Anubhuti ಆಪ್ ನಲ್ಲಿ “ಡೀಲರ್ ಕಂಡುಹಿಡಿಯಿರಿ” ಮೇಲೆ ಕ್ಲಿಕ್ ಮಾಡುವ ಮೂಲಕ ಭಾರತದಾದ್ಯಂತ ಜಾನ್ ಡಿಯರ್ ಡೀಲರ್ ಶಿಪ್ ಅನ್ನು ಸುಲಭವಾಗಿ ಕಂಡುಹಿಡಿಯಿರಿ.  ನಿಮಗೆ ಹೊಸ ಉಪಕರಣದ ಅಗತ್ಯವಿರಲೀ, ನಿಜವಾದ ಪಾರ್ಟ್ ಗಳ, ಅಥವಾ ತಜ್ಞರ ಸಲಹೆಯ ಅಗತ್ಯವಿರಲೀ, ನಮ್ಮ ಡೀಲರ್ ಗಳು ನಿಮ್ಮ ಸೇವೆಗಾಗಿ ಸದಾ ಸಿದ್ಧರಾಗಿರುತ್ತಾರೆ. 

ಜಾನ್ ಡಿಯರ್ ಟ್ರ್ಯಾಕ್ಟರ್ ಗಳಲ್ಲಿ ವಿಶೇಷ ಅನುಭವವುಳ್ಳ ಅತ್ಯಂತ ಕೌಶಲ್ಯಪೂರ್ಣ ಮತ್ತು ತರಬೇತಿ ಪಡೆದ ಸ್ಥಳೀಯ ಮೆಕ್ಯಾನಿಕ್ ಗಳನ್ನು ಸುಲಭವಾಗಿ ಹುಡುಕಲು ಸಹಾಯ ಮಾಡುವ ಲಕ್ಷಣಗಳನ್ನು ಕೂಡ ಆಪ್ ಹೊಂದಿದೆ.  ಉತ್ತಮ ಕಾರ್ಯಕ್ಷಮತೆ ಮತ್ತು ಕನಿಷ್ಠ ಡೌನ್ ಟೈಮ್ ಅನ್ನು ಖಚಿತಪಡಿಸಲು ನೀವು “ಸ್ಥಳೀಯ ಮೆಕ್ಯಾನಿಕ್ ಗಳು” ಎಂಬ ಬಟನ್ ಅನ್ನು ಕ್ಲಿಕ್ ಮಾಡಬಹುದು ಮತ್ತು ಈ ಲಕ್ಷಣದ ಲಾಭ ಪಡೆಯಬಹುದು.

4. ಸ್ಪೇರ್ ಪಾರ್ಟ್ ಗಳನ್ನು ಆರ್ಡರ್ ಮಾಡುವುದು

ಕ್ಯಾಟಲಾಗ್ ಗಳನ್ನು ಬಳಸಿ ಹುಡುಕುವ ಅಥವಾ ಕಸ್ಟಮರ್ ಸರ್ವಿಸ್ ಗೆ ಕರೆ ಮಾಡಿ ಹೋಲ್ಡ್ ನಲ್ಲಿ ಕಾದು ಕಾದು ಸಾಕಾಗುವ ದಿನಗಳು ಇನ್ನಿಲ್ಲ. Anubhuti ಆಪ್ ನಿಮ್ಮ ಜಾನ್ ಡಿಯರ್ ಟ್ರ್ಯಾಕ್ಟರ್ ಗಾಗಿ ಸ್ಪೇರ್ ಪಾರ್ಟ್ ಗಳನ್ನು ಆರ್ಡರ್ ಮಾಡುವುದನ್ನು ಸುಲಭವಾಗಿಸುತ್ತದೆ. ನಿಮ್ಮ ಮೊಬೈಲ್ ನಲ್ಲಿ ಕೇವಲ ಕೆಲವು ಟ್ಯಾಪ್ ಗಳ ಮೂಲಕ ನೀವು ನಿಜವಾದ ಜಾನ್ ಡಿಯರ್ ಪಾರ್ಟ್ ಗಳ ದಾಸ್ತಾನಿನಲ್ಲಿ ಸುಲಭವಾಗಿ ಹುಡುಕಬಹುದು, ಅವುಗಳ ಲಭ್ಯತೆ ನೋಡಬಹುದು ಮತ್ತು ಆರ್ಡರ್ ಗಳನ್ನು ನೀಡಬಹುದು.

ಆಪ್ ಉತ್ಪನ್ನದ ವಿವರವಾದ ಮಾಹಿತಿ ಮತ್ತು ಹೊಂದಾಣಿಕೆಯನ್ನು ಕೂಡ ಒದಗಿಸುತ್ತದೆ, ಈ ಮೂಲಕ ನೀವು ನಿಮ್ಮ ನಿರ್ದಿಷ್ಟ ಉಪಕರಣಕ್ಕಾಗಿ ಸರಿಯಾದ ಪಾರ್ಟ್ ಗಳನ್ನು ಆಯ್ಕೆ ಮಾಡುವುದನ್ನು ಖಚಿತಪಡಿಸುತ್ತದೆ. ಇದರಿಂದ ಊಹಿಸುವುದು ತಪ್ಪುತ್ತದೆ ಮತ್ತು ತಪ್ಪಾದ ಅಥವಾ ಸರಿಹೊಂದದ ಪಾರ್ಟ್ ಗಳನ್ನು ಆರ್ಡರ್ ಮಾಡುವ ಸಾಧ್ಯತೆಗಳು ಕಡಿಮೆಯಾಗುತ್ತದೆ.

5. ಸುಲಭವಾದ ಸರ್ವಿಸ್ ವಿನಂತಿಗಳು

ತೊಡಕಿನ ಸರ್ವಿಸ್ ಬುಕಿಂಗ್ ಕಾರ್ಯವಿಧಾನಗಳಿಗೆ ವಿದಾಯ ಹೇಳಿ, Anubhuti ಆಪ್ ನ ಇಂಟ್ಯೂಟಿವ್ ಇಂಟರ್ಫೇಸ್ ನೊಂದಿಗೆ ಸೇವೆ ಮತ್ತು ರಿಪೇರಿಗಳಿಗಾಗಿ ವಿನಂತಿಸಿ. ಚಸಿಸ್ ಸಂಖ್ಯೆಯ ನೋಂದಣಿ ಬಳಸಿಕೊಂಡು ಗ್ರಾಹಕರು ಸರ್ವಿಸ್ ಅಪಾಯಿಂಟ್ಮೆಂಟ್ ಗಳನ್ನು ಸುಲಭವಾಗಿ ನಿಗದಿಪಡಿಸಬಹುದು, ಮೆಂಟೆನನ್ಸ್ ವಿನಂತಿಗಳ ಸ್ಥಿತಿ ತಿಳಿದುಕೊಳ್ಳಬಹುದು, ಹಾಗೂ ಕಾಲಕಾಲಕ್ಕೆ ಅಪ್ಡೇಟ್ ಗಳನ್ನು ಸ್ವೀಕರಿಸಬಹುದು, ಡೌನ್ ಟೈಮ್ ಕಡಿಮೆ ಮಾಡಬಹುದು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬಹುದು.

6. ಇಂಪ್ಲಿಮೆಂಟ್ ಸೆಲೆಕ್ಟರ್ ಮತ್ತು ಸರ್ವಿಸ್ ಕಿಟ್ ಲಭ್ಯತೆ

ಆಪ್ ಇಂಪ್ಲಿಮೆಂಟ್ ಸೆಲೆಕ್ಟರ್ ಲಕ್ಷಣ ಒದಗಿಸುವ ಮೂಲಕ ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಈ ಲಕ್ಷಣವು ಗ್ರಾಹಕರು ತಮ್ಮ ಮಷಿನರಿಗಾಗಿ ಸೂಕ್ತ ಇಂಪ್ಲಿಮೆಂಟ್ ಗಳನ್ನು ನಿರಾಯಾಸವಾಗಿ ಹುಡುಕಲು ಮತ್ತು ಆಯ್ಕೆ ಮಾಡಲು ಅವಕಾಶ ಮಾಡಿಕೊಡುತ್ತದೆ.  ಹೆಚ್ಚುವರಿಯಾಗಿ, ನೋಂದಾಯಿತ ಬಳಕೆದಾರರು ಸರ್ವಿಸ್ ಕಿಟ್ ಲಭ್ಯತೆ ಬಳಸಬಹುದು ಮತ್ತು ಫಂಕ್ಷನ್ಯಾಲಿಟಿಗಳನ್ನು ಆರ್ಡರ್ ಮಾಡಬಹುದು, ಮೆಂಟೆನನ್ಸ್ ಪ್ರಾಸೆಸ್ ಗಳನ್ನು ಸುಲಭಗೊಳಿಸಬಹುದು ಹಾಗೂ ಉಪಕರಣಗಳು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಬಹುದು.

7. ಹೊಸ ಫೀಡ್ ಗಳು ಮತ್ತು ನೊಟಿಫಿಕೇಶನ್ ಗಳ ಮೂಲಕ ಹೊಸ ಹೊಸ ಮಾಹಿತಿ ಪಡೆಯುತ್ತಿರಿ

Anubhuti ಆಪ್ ನ ಅನುಕಲಿತ ಸುದ್ದಿ ಸಂದೇಶಗಳು ಮತ್ತು ನೊಟಿಫಿಕೇಶನ್ ಸಿಸ್ಟಮ್ ನೊಂದಿಗೆ ಪ್ರಮುಖ ಅಪ್ಡೇಟ್ ಗಳನ್ನು ಅಥವಾ ಘೋಷಣೆಗಳನ್ನು ಎಂದಿಗೂ ತಪ್ಪದೇ ಪಡೆಯುತ್ತಿರಿ. ಇತ್ತೀಚಿನ ಅಭಿವೃದ್ಧಿಗಳು, ಪರಿಚಯಿಸಲಾದ ಉತ್ಪನ್ನಗಳು, ಮತ್ತು ಉದ್ಯಮದೊಳಗಿನ ಸುದ್ದಿ ಸಮಾಚಾರಗಳ ಬಗ್ಗೆ ತಿಳಿಯಿರಿ, ಈ ಮೂಲಕ ಮಾಹಿತಿಯುಕ್ತ ನಿರ್ಧಾರ-ತೆಗೆದುಕೊಳ್ಳುವುದು ಮತ್ತು ಜಾನ್ ಡಿಯರ್ ಇಂಡಿಯಾದ ಕೊಡುಗೆಗಳೊಂದಿಗೆ ಸಕ್ರಿಯರಾಗಿ ತೊಡಗಿಕೊಳ್ಳುವುದು ಮಾಡಿ.

8. ವ್ಯಾಪಕ ಸಂಪನ್ಮೂಲಗಳ ಭಂಡಾರ

ವೃದ್ಧಿಸಲಾದ ಉಪಯುಕ್ತತೆ ಮತ್ತು ಸುಲಭ ಲಭ್ಯತೆಗಾಗಿ, ಚಸಿಸ್ ಸಂಖ್ಯೆಯನ್ನು ನೋಂದಾಯಿಸಿದ ನಂತರ ಗ್ರಾಹಕರ ನಿರ್ದಿಷ್ಟ ಮಷಿನರಿಗೆ ತಕ್ಕಂತೆ ಸಿದ್ಧಪಡಿಸಲಾದ ಆಪರೇಟರ್ ಮ್ಯಾನ್ಯುವಲ್ ಗಳಿಗೆ ಆಪ್ ಪ್ರವೇಶ ನೀಡುತ್ತದೆ.  ಹೆಚ್ಚುವರಿಯಾಗಿ, ಬಳಕೆದಾರರು ಜಾನ್ ಡಿಯರ್ ಫೈನಾನ್ಸ್-ಸಂಬಂಧಿತ ಮಾಹಿತಿಯನ್ನು ವಿವರವಾಗಿ ತಿಳಿದುಕೊಳ್ಳಬಹುದು, ಜೊತೆಗೆ ತಮ್ಮ ಎಲ್ಲ ಉಪಕರಣ-ಸಂಬಂಧಿತ ಪ್ರಶ್ನೆಗಳಿಗಾಗಿ ಮತ್ತು ಅಗತ್ಯಗಳಿಗಾಗಿ ವ್ಯಾಪಕ ಸಂಪನ್ಮೂಲಗಳ ಭಂಡಾರವಾಗಿ ಆಪ್ ಅನ್ನು ಉಪಯೋಗಿಸಬಹುದು.

9. ತಲ್ಲೀನಗೊಳಿಸುವ ಟ್ರ್ಯಾಕ್ಟರ್ 3ಡಿ ಅನುಭವ

ಡೀಲರ್ ಶಿಪ್ ಅನುಭವವನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸುವ ಮೂಲಕ, Anubhuti ಆಪ್ ಆಕರ್ಷಕ ಟ್ರ್ಯಾಕ್ಟರ್ 3ಡಿ ಲಕ್ಷಣ ಒದಗಿಸುತ್ತದೆ, ಬಳಕೆದಾರರಿಗೆ ವರ್ಚುವಲ್ ಡೀಲರ್ ಶಿಪ್ ಅನುಭವ ಮತ್ತು ಆಗ್ಮೆಂಟೆಡ್ ರಿಯಾಲಿಟಿ ಕ್ವಿಕ್ ಲಿಂಕ್ ಗಳನ್ನು ನೀಡುತ್ತದೆ. ಈ ಮೈಮರೆಸುವ ಇಂಟರ್ಫೇಸ್ ಮೂಲಕ ಗ್ರಾಹಕರು ಜಾನ್ ಡಿಯರ್ ನ ಉತ್ಪನ್ನಗಳನ್ನು ದೃಶ್ಯ ಮನೋಹರವಾದ ರೀತಿಯಲ್ಲಿ ನೋಡಬಹುದಾಗಿದ್ದು, ಹೀಗೆ ಹೆಚ್ಚು ಸಮಯ ತೆಗೆದುಕೊಂಡು ಉತ್ಪನ್ನ ನೋಡಬಹುದು ಮತ್ತು ಮಾಹಿತಿಯುಕ್ತ ನಿರ್ಧಾರ-ತೆಗೆದುಕೊಳ್ಳಬಹುದು.

ಜಾನ್ ಡಿಯರ್ ನ Anubhuti ಆಪ್ ಉಪಯೋಗಿಸುವುದರ ಪ್ರಯೋಜನಗಳು

ನಾವೀಗ Anubhuti ಆಪ್ ನ ಲಕ್ಷಣಗಳನ್ನು ನೋಡಿ ಆಗಿದೆ, ಇನ್ನು ಅವುಗಳಿಂದ ಜಾನ್ ಡಿಯರ್ ಇಂಡಿಯಾದ ಗ್ರಾಹಕರಿಗೆ ಸಿಗುವ ಅಮೂಲ್ಯ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿಯೋಣ.

ಇಂಟ್ಯೂಟಿವ್ ಇಂಟರ್ಫೇಸ್ ಮತ್ತು ಬಹುಭಾಷೆಯ ಬೆಂಬಲದಿಂದಾಗಿ, ಈ ಆಪ್ ವಿವಿಧ ಭಾಷೆಗಳನ್ನು ಮಾತನಾಡುವ ಬಳಕೆದಾರರಿಗೆ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆಯಲ್ಲದೇ, ‌ಎಲ್ಲ ಪ್ರಕಾರದ ಬಳಕೆದಾರರನ್ನು ಒಳಗೊಳ್ಳುತ್ತದೆ ಮತ್ತು ಬಳಕೆಯನ್ನು ಸುಲಭವಾಗಿಸುತ್ತದೆ.

ವೃದ್ಧಿಸಿದ ಸುಲಭ ಲಭ್ಯತೆ

HeadingIcon

ಇಂಟ್ಯೂಟಿವ್ ಇಂಟರ್ಫೇಸ್ ಮತ್ತು ಬಹುಭಾಷೆಯ ಬೆಂಬಲದಿಂದಾಗಿ, ಈ ಆಪ್ ವಿವಿಧ ಭಾಷೆಗಳನ್ನು ಮಾತನಾಡುವ ಬಳಕೆದಾರರಿಗೆ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆಯಲ್ಲದೇ, ‌ಎಲ್ಲ ಪ್ರಕಾರದ ಬಳಕೆದಾರರನ್ನು ಒಳಗೊಳ್ಳುತ್ತದೆ ಮತ್ತು ಬಳಕೆಯನ್ನು ಸುಲಭವಾಗಿಸುತ್ತದೆ.

ಆಪ್ ಪಾರ್ಟ್ ಗಳ ಕ್ರೋಢೀಕರಣ, ಸರ್ವಿಸ್ ಗಾಗಿ ವಿನಂತಿಗಳು, ಮತ್ತು ಆಪರೇಟರ್ ಮ್ಯಾನ್ಯುವಲ್ ಸುಲಭ ಲಭ್ಯತೆಯಂತಹ ಸೇವೆಗಳನ್ನು ಕೇಂದ್ರೀಕರಿಸುವ ಮೂಲಕ ಬಳಕೆದಾರರ ಕಾರ್ಯಾಚರಣೆಗಳನ್ನು ಸರಳಗೊಳಿಸುತ್ತದೆ ಹಾಗೂ ಅವರ ಉಪಕರಣಗಳ ನಿರ್ವಹಣೆಯಲ್ಲಿ ಅವರ ಸಮಯ ಮತ್ತು ಶ್ರಮವನ್ನು ಉಳಿತಾಯ ಮಾಡುತ್ತದೆ.

ಸರಳೀಕರಿಸಲಾದ ಕಾರ್ಯಾಚರಣೆಗಳು

HeadingIcon

ಆಪ್ ಪಾರ್ಟ್ ಗಳ ಕ್ರೋಢೀಕರಣ, ಸರ್ವಿಸ್ ಗಾಗಿ ವಿನಂತಿಗಳು, ಮತ್ತು ಆಪರೇಟರ್ ಮ್ಯಾನ್ಯುವಲ್ ಸುಲಭ ಲಭ್ಯತೆಯಂತಹ ಸೇವೆಗಳನ್ನು ಕೇಂದ್ರೀಕರಿಸುವ ಮೂಲಕ ಬಳಕೆದಾರರ ಕಾರ್ಯಾಚರಣೆಗಳನ್ನು ಸರಳಗೊಳಿಸುತ್ತದೆ ಹಾಗೂ ಅವರ ಉಪಕರಣಗಳ ನಿರ್ವಹಣೆಯಲ್ಲಿ ಅವರ ಸಮಯ ಮತ್ತು ಶ್ರಮವನ್ನು ಉಳಿತಾಯ ಮಾಡುತ್ತದೆ.

ನೋಂದಾಯಿತ ಗ್ರಾಹಕರು ವಿಶೇಷ ಪ್ರವೇಶ ಮತ್ತು ವೈಯಕ್ತೀಕರಿಸಿದ ಸೇವೆಗಳನ್ನು ಆನಂದಿಸುತ್ತಾರೆ, ಈ ಮೂಲಕ
ಜಾನ್ ಡಿಯರ್ ನೊಂದಿಗೆ ಅವರ ಒಟ್ಟಾರೆ ಅನುಭವ ಹೆಚ್ಚು ಉತ್ತಮಗೊಳ್ಳುತ್ತದೆ ಹಾಗೂ ದೀರ್ಘಕಾಲದ ವಿಶ್ವಾಸಾರ್ಹತೆ ಬೆಳೆಯುತ್ತದೆ.

ವೈಯಕ್ತೀಕರಿಸಿದ ಅನುಭವ

HeadingIcon

ನೋಂದಾಯಿತ ಗ್ರಾಹಕರು ವಿಶೇಷ ಪ್ರವೇಶ ಮತ್ತು ವೈಯಕ್ತೀಕರಿಸಿದ ಸೇವೆಗಳನ್ನು ಆನಂದಿಸುತ್ತಾರೆ, ಈ ಮೂಲಕ
ಜಾನ್ ಡಿಯರ್ ನೊಂದಿಗೆ ಅವರ ಒಟ್ಟಾರೆ ಅನುಭವ ಹೆಚ್ಚು ಉತ್ತಮಗೊಳ್ಳುತ್ತದೆ ಹಾಗೂ ದೀರ್ಘಕಾಲದ ವಿಶ್ವಾಸಾರ್ಹತೆ ಬೆಳೆಯುತ್ತದೆ.

ಸುದ್ದಿ ಸಂದೇಶಗಳು ಮತ್ತ ನೊಟಿಫಿಕೇಶನ್ ಗಳ ಮೂಲಕ ಬಳಕೆದಾರರು ಉತ್ಪನ್ನಗಳ ಹೊಸ ಮಾಹಿತಿ, ಪ್ರಚಾರಗಳು, ಮತ್ತು ಉದ್ಯಮದ ಸುದ್ದಿ ಸಮಾಚಾರಗಳನ್ನು ತಿಳಿದುಕೊಳ್ಳಬಹುದಾಗಿದ್ದು, ಅವರು ಮಾಹಿತಿಯುಕ್ತ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ಸಕಾಲಿಕ ಮಾಹಿತಿ

HeadingIcon

ಸುದ್ದಿ ಸಂದೇಶಗಳು ಮತ್ತ ನೊಟಿಫಿಕೇಶನ್ ಗಳ ಮೂಲಕ ಬಳಕೆದಾರರು ಉತ್ಪನ್ನಗಳ ಹೊಸ ಮಾಹಿತಿ, ಪ್ರಚಾರಗಳು, ಮತ್ತು ಉದ್ಯಮದ ಸುದ್ದಿ ಸಮಾಚಾರಗಳನ್ನು ತಿಳಿದುಕೊಳ್ಳಬಹುದಾಗಿದ್ದು, ಅವರು ಮಾಹಿತಿಯುಕ್ತ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

Anubhuti ಆಪ್ ಅನ್ನು ಬಳಸಲು ಪ್ರಾರಂಭಿಸುವುದು ಹೇಗೆ?

Anubhuti ಆಪ್ ಉಪಯೋಗಿಸುವುದನ್ನು ಪ್ರಾರಂಭಿಸುವುದು ಸುಲಭ. ವೃದ್ಧಿಸಲಾದ ಸಮರ್ಥತೆ ಮತ್ತು ಉತ್ಪಾದಕತೆಯ ಅದ್ಭುತ ಅನುಭವ ಪಡೆಯಲು ಈ ಹಂತಗಳನ್ನು ಅನುಸರಿಸಿ:

  • Google Play Store ನಿಂದ Anubhuti ಆಪ ಡೌನ್ ಲೋಡ್ ಮಾಡಿಕೊಳ್ಳಿ
  • ನಿಮ್ಮ ಜಾನ್ ಡಿಯರ್ ಟ್ರ್ಯಾಕ್ಟರ್ ಚಸಿಸ್ ಸಂಖ್ಯೆ ನೋಂದಾಯಿಸುವ ಮೂಲಕ ಅಥವಾ ಹೊಸ ಬಳಕೆದಾರರಾಗಿ ಸೈನ್ ಅಪ್ ಮಾಡುವ ಮೂಲಕ ಖಾತೆ ಸೃಷ್ಟಿಸಿ
  • ಇಂಟ್ಯೂಟಿವ್ ಆನ್ ಬೋರ್ಡಿಂಗ್ ಮುಖಾಂತರ ಆಪ್ ನ ಲಕ್ಷಣಗಳನ್ನು ಮತ್ತು ಕೆಲಸಗಳನ್ನು ಚೆನ್ನಾಗಿ ತಿಳಿದುಕೊಳ್ಳಿ
  • ಉಪಕರಣಗಳ ನಿರ್ವಹಣೆ, ಸ್ಪೇರ್ ಪಾರ್ಟ್ ಗಳನ್ನು ಆರ್ಡರ್ ಮಾಡುವುದು, ಮತ್ತು ತಾಂತ್ರಿಕ ದಾಖಲೆ ಸಂಗ್ರಹಣದಂತಹ ವಿವಿಧ ಲಕ್ಷಣಗಳ ಬಗ್ಗೆ ತಿಳಿಯಿರಿ
  • ಹೆಚ್ಚುವರಿ ಸಹಾಯ ಅಥವಾ ಮಾಹಿತಿಗಾಗಿ ಆಪ್ ನ ಬಳಕೆದಾರರ ಮಾರ್ಗದರ್ಶಿ ಹಾಗೂ ದಾಖಲೆ ಸಂಗ್ರಹಣೆ ನೋಡಿ

Anubhuti ಆಪ್ ಜಾನ್ ಡಿಯರ್ ಇಂಡಿಯಾ ಗ್ರಾಹಕರಿಗೆ ಹೊಸ ಮತ್ತು ಉಪಯುಕ್ತ ಬದಲಾವಣೆಗಳನ್ನು ಪರಿಚಯಿಸಿದೆ.  ಅದು ಉಪಕರಣಗಳ ನಿರ್ವಹಣೆಯನ್ನು, ಸ್ಪೇರ್ ಪಾರ್ಟ್ ಗಳನ್ನು ಆರ್ಡರ್ ಮಾಡುವುದು, ಹಾಗೂ ತಾಂತ್ರಿಕ ಮಾಹಿತಿ ಲಭ್ಯತೆಯನ್ನು ಸರಳಗೊಳಿಸುವುದಕ್ಕೆ ವ್ಯಾಪಕ ಪರಿಹಾರ ಒದಗಿಸುತ್ತದೆ.

ಅದರ ಬಳಸಲು ಸುಲಭವಾದ ಇಂಟರ್ಫೇಸ್, ರಿಯಲ್-ಟೈಮ್ ನಿಗಾವಣೆ, ಹಾಗೂ ಅಡಚಣೆ ರಹಿತ ಸಂವಹನ ಲಕ್ಷಣಗಳಿಂದಾಗಿ ಆಪ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಸಂಪನ್ಮೂಲಗಳನ್ನು ಉತ್ತಮಗೊಳಿಸುತ್ತದೆ ಹಾಗೂ ಗ್ರಾಹಕರ ಅನುಭವವನ್ನು ಹೆಚ್ಚು ಉತ್ತಮಗೊಳಿಸುತ್ತದೆ.

ನೀವು Anubhuti ಆಪ್ ನೊಂದಿಗೆ ನಿಮ್ಮ ಪ್ರಯಾಣ ಪ್ರಾರಂಭಿಸಿದಾಗ ಆಪ್ ನ ವ್ಯಾಪಕ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳಿ ಹಾಗೂ ಯಾವುದೇ ಸಹಾಯ ಅಥವಾ ಮಾರ್ಗದರ್ಶನಕ್ಕಾಗಿ ಜಾನ್ ಡಿಯರ್ ನ ತಜ್ಞರನ್ನು ಸಂಪರ್ಕಿಸಿ.  ತಂತ್ರಜ್ಞಾನದ ಶಕ್ತಿಯ ಉಪಯೋಗ ಪಡೆದುಕೊಳ್ಳಿ ಮತ್ತು ಜಾನ್ ಡಿಯರ್ ನೊಂದಿಗೆ ನಿಮ್ಮ ಸಂಬಂಧವನ್ನು ಉತ್ಪಾದಕತೆ ಮತ್ತು ಯಶಸ್ಸಿನ ಹೊಸ ಉತ್ತುಂಗಕ್ಕೆ ಒಯ್ಯಿರಿ.

ಕೃಷಿ ಉಪಕರಣಗಳ ನಿರ್ವಹಣೆಯ ಭವಿಷ್ಯ ಇಲ್ಲಿದೆ - Anubhuti ಆಪ್ ನ ಜಗತ್ತಿಗೆ ಸ್ವಾಗತ.

ಸಂಬಂಧಿತ ಲಿಂಕ್ ಗಳು: