ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ 30-46 HP ಜಾನ್ ಡಿಯರ್ ಟ್ರ್ಯಾಕ್ಟರ್ ಗಳು

john deere tractor models

ಇಂದಿನ ದಿನಮಾನದಲ್ಲಿ ಸರಿಯಾದ ಟ್ರ್ಯಾಕ್ಟರ್ ಖರೀದಿಸುವುದು ದೊಡ್ಡ ಬದಲಾವಣೆಯುಂಟು ಮಾಡಬಲ್ಲದು.  ಹಾಗೂ ನಾವು ಸರಿಯಾದ ಟ್ರ್ಯಾಕ್ಟರ್ ಗಳ ಬಗ್ಗೆ ಮಾತನಾಡುವಾಗ, ಭಾರತದಲ್ಲಿ ವಿಶ್ವಾಸಾರ್ಹತೆ, ಸಮರ್ಥತೆ, ಮತ್ತು ಮುಂದುವರಿದ ತಂತ್ರಜ್ಞಾನಕ್ಕೆ ಇನ್ನೊಂದು ಹೆಸರಾಗಿರುವ ಜಾನ್ ಡಿಯರ್ ಟ್ರ್ಯಾಕ್ಟರ್ ಗಳನ್ನು ಕುರಿತು ಮಾತನಾಡುತ್ತಿದ್ದೇವೆ.

ನೀವು 30-40 HP ಶ್ರೇಣಿಯಲ್ಲಿ ಯಾವುದೇ ಟ್ರ್ಯಾಕ್ಟರ್ ಅನ್ನು ಹುಡುಕುತ್ತಿದ್ದರೆ, ಜಾನ್ ಡಿಯರ್ ಬಳಿ ಕೆಲವು ಅತ್ಯುತ್ತಮ ಟ್ರ್ಯಾಕ್ಟರ್ ಆಯ್ಕೆಗಳಿವೆ.  ಈ ಬ್ಲಾಗ್ ನಲ್ಲಿ, ನಾವು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ 30-40 HP ಜಾನ್ ಡಿಯರ್ ಟ್ರ್ಯಾಕ್ಟರ್ ಗಳು, ಅವುಗಳ ಲಕ್ಷಣಗಳು, ಮತ್ತು ರೈತರು ಅವುಗಳಿಗೆ ಆದ್ಯತೆ ನೀಡಲು ಕಾರಣವೇನು ಎಂಬುದನ್ನು ನೋಡೋಣ.

ಜಾನ್ ಡಿಯರ್ ಟ್ರ್ಯಾಕ್ಟರ್ ಗಳನ್ನು ಏಕೆ ಆಯ್ಕೆ ಮಾಡಬೇಕು?

ಅನೇಕ ವರ್ಷಗಳಿಂದ, ಜಗತ್ತಿನಾದ್ಯಂತ ರೈತ ಬಾಂಧವರು ಜಾನ್ ಡಿಯರ್ ಟ್ರ್ಯಾಕ್ಟರ್ ಗಳನ್ನು ನಂಬಿದ್ದಾರೆ.  ಭಾರತದಲ್ಲಿ, ಜಾನ್ ಡಿಯರ್ ತನ್ನ ವಿಶ್ವಾಸಾರ್ಹತೆ, ಅತ್ಯಾಧುನಿಕ ಲಕ್ಷಣಗಳು, ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯಿಂದಾಗಿ ಕೃಷಿ ಉಪಕರಣಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. 

ರೈತರು ಜಾನ್ ಡಿಯರ್ ಗೆ ಪ್ರಥಮ ಪ್ರಾಶಸ್ತ್ಯ ನೀಡಲು ಕಾರಣಗಳು ಈ ಕೆಳಗಿನಂತಿವೆ:

  • ಸಾಮರ್ಥ್ಯ - ಅತ್ಯಾಧುನಿಕ ಇಂಜಿನಿಯರಿಂಗ್ ನಿಂದಾಗಿ ಸಾಧ್ಯವಾದಷ್ಟು ಮಟ್ಟಿಗೆ ಅತ್ಯುತ್ತಮ ಉತ್ಪಾದಕತೆ ಮತ್ತು ಇಂಧನ ಬಳಕೆಯ ಭರವಸೆ ಸಿಗುತ್ತದೆ.
  • ಆವಿಷ್ಕಾರ - ಆಧುನಿಕ ತಂತ್ರಜ್ಞಾನದಿಂದಾಗಿ ಕೃಷಿ ಕಾರ್ಯಾಚರಣೆಗಳು ಹೆಚ್ಚು ಸಮರ್ಥ ಮತ್ತು ಬಳಕೆದಾರರ-ಸ್ನೇಹಿಯಾಗಿವೆ.
  • ಬೆಂಬಲ - ದೊಡ್ಡ ಡೀಲರ್ ನೆಟ್ವರ್ಕ್ ಅತ್ಯುತ್ತಮ ಸೇವೆ ಮತ್ತು ಬೆಂಬಲ ಒದಗಿಸುತ್ತದೆ.

#1. ಜಾನ್ ಡಿಯರ್ 3036EN: ವಿವಿಧೋದ್ದೇಶ ಟ್ರ್ಯಾಕ್ಟರ್

ಜಾನ್ ಡಿಯರ್ 3036EN 35 ಹಾರ್ಸ್ ಪವರ್ ಹೊಂದಿರುವ ಟ್ರ್ಯಾಕ್ಟರ್ ಆಗಿದ್ದು, ತನ್ನ ಸಾಮರ್ಥ್ಯ ಮತ್ತು ಚಲನಶೀಲತೆಗೆ ಹೆಸರು ವಾಸಿಯಾಗಿದೆ. ಈ ಟ್ರ್ಯಾಕ್ಟರಿನ 2800 RPM ಎಂಜಿನ್ ನಿಂದಾಗಿ ಇದು ಅಂತರ್-ಸಂಸ್ಕರಣಾ ಚಟುವಟಿಕೆಗಳು, ತರಕಾರಿ ಬೆಳೆಗಳು, ಮತ್ತು ದ್ರಾಕ್ಷಿ ತೋಟಗಳಂತಹ ವಿವಿಧ ಕೆಲಸಗಳಲ್ಲಿ ಬಳಸಲು ಸೂಕ್ತವಾಗಿದೆ. 

ಅದರ ಪ್ರಬಲ ಎಂಜಿನ್ ಮತ್ತು ಆಕರ್ಷಕ ಡಿಸೈನ್ ಅಸಾಮಾನ್ಯ ಉತ್ಪಾದಕತೆ ಮತ್ತು ಇಂಧನ ಉಳಿತಾಯದ ಭರವಸೆ ನೀಡುತ್ತವೆ.

ಜಾನ್ ಡಿಯರ್ 3036EN ಪ್ರಮುಖ ಲಕ್ಷಣಗಳು: -

  • ಎಂಜಿನ್ ಶಕ್ತಿ - 17–28% ಟಾರ್ಕ್ ಉತ್ಪಾದಿಸುತ್ತದೆ
  • ಎತ್ತುವ ಸಾಮರ್ಥ್ಯ - 910 kgf, ಅಧಿಕ ಎತ್ತುವ ಸಾಮರ್ಥ್ಯ
  • ಅಗಲ ಕಡಿಮೆ ಇರುವ ದಾರಿ - ಹಣ್ಣಿನ ತೋಟಗಳು ಮತ್ತು ದ್ರಾಕ್ಷಿ ತೋಟಗಳಿಗೆ ಸೂಕ್ತವಾಗಿದೆ, ಸಣ್ಣ ತಿರುವುಗಳಲ್ಲಿ ಸಮರ್ಥವಾಗಿ ಕೆಲಸ ಮಾಡುವ ಭರವಸೆ.

ವಿಶ್ವಾಸಾರ್ಹ ಮತ್ತು ಸಮರ್ಥ ಟ್ರ್ಯಾಕ್ಟರ್ ಹುಡುಕುತ್ತಿರುವ ರೈತ ಬಾಂಧವರಿಗೆ ಜಾನ್ ಡಿಯರ್ 35 ಹಾರ್ಸ್ ಪವರ್ ಅತ್ಯುತ್ತಮ ಆಯ್ಕೆಯಾಗಿದೆ ಏಕೆಂದರೆ ಅದು ಕಡಿಮೆ ಬೆಲೆಯಲ್ಲಿ ಹೆಚ್ಚು ಕೆಲಸ ನೀಡುತ್ತದೆ.  ಜಾನ್ ಡಿಯರ್ 3036EN ನ ಶಕ್ತಿ ಮತ್ತು ನಿಖರತೆ ನಿಮ್ಮ ಕೃಷಿ ಕಾರ್ಯಾಚರಣೆಗಳ ಸರಾಗವಾದ ಮತ್ತು ಪರಿಣಾಮಕಾರಿ ನಿರ್ವಹಣೆಯ ಭರವಸೆ ನೀಡುತ್ತವೆ.

#2. ಜಾನ್ ಡಿಯರ್ 5045D GearPro™

ಜಾನ್ ಡಿಯರ್ 5045D GearProTM 30–46 HP ಟ್ರ್ಯಾಕ್ಟರ್ ಗಿಂತ ಸ್ವಲ್ಪ ಹೆಚ್ಚು ಶಕ್ತಿಶಾಲಿಯಾಗಿದ್ದರೂ ಸಹ ಅದರ ಜನಪ್ರಿಯತೆ ಮತ್ತು ಯೋಗ್ಯತೆಗಳ ಬಗ್ಗೆ ಹೇಳಲೇಬೇಕು. ಈ ಟ್ರ್ಯಾಕ್ಟರಿನ 46 HP ಎಂಜಿನ್ 2100 RPM ನಲ್ಲಿ ಕೆಲಸ ಮಾಡುವ ಮೂಲಕ ಅದನ್ನು ವಿವಿಧ ಕೃಷಿ ಕೆಲಸಗಳಲ್ಲಿ ಸಹಕಾರಿಯಾಗಿರುತ್ತದೆ. 

ಎರಡು ಡ್ರೈವ್ ಆಯ್ಕೆಗಳಿವೆ—2WD ಮತ್ತು 4WD—ಹಾಗೂ 12-ಸ್ಪೀಡ್, 4-ರಿಡಕ್ಷನ್ ಗೇರ್ ಬಾಕ್ಸ್ ಇದ್ದು ಹಲವಾರು ಕೃಷಿ ಕಾರ್ಯಾಚರಣೆಗಳಿಗೆ ಅತ್ಯುತ್ತಮ ಸ್ಪೀಡ್ ಒದಗಿಸುತ್ತವೆ.

ಜಾನ್ ಡಿಯರ್ 5045D GearPro™ ಪ್ರಮುಖ ಲಕ್ಷಣಗಳು

  • ಟ್ರಾನ್ಸ್ ಮಿಶನ್ - 1 ರಿವರ್ಸ್ ರೇಂಜ್ (R) ಮತ್ತು 3 ಫಾರ್ವರ್ಡ್ ರೇಂಜ್ ಗಳು (A, B, and C)
  • ಗೇರ್ ಆಯ್ಕೆಗಳು - 4 ಗೇರ್ ಆಯ್ಕೆಗಳು (1, 2, 3, 4)
  • ಆರಾಮದಾಯಕತೆ - ಸ್ಟೈಲಿಶ್ ಸ್ಟೇರಿಂಗ್ ವ್ಹೀಲ್, ಬಾಳಿಕೆ ಬರುವ ರಬ್ಬರ್ ಫ್ಲೋರ್ ಮ್ಯಾಟ್, ಪ್ರೀಮಿಯಮ್ ಸೀಟ್
  • ಸಾಮರ್ಥ್ಯ - 500 ಗಂಟೆಗಳ ಸರ್ವಿಸ್ ಮಧ್ಯಂತರ

46 ಹಾರ್ಸ್ ಪವರ್ ನ ಜಾನ್ ಡಿಯರ್ ಟ್ರ್ಯಾಕ್ಟರ್ ನ ಅತ್ಯಾಧುನಿಕ ಲಕ್ಷಣಗಳು ಮತ್ತು ಸಾಮರ್ಥ್ಯ ಅದರ ಬೆಲೆಗೆ ತಕ್ಕ ಹಾಗಿರುತ್ತದೆ.  5045D GearProTM ಎಳೆಯುವುದು, ಉಳುಮೆ ಮಾಡುವುದು, ಅಥವಾ ನೇಗಿಲು ಹೂಡುವುದು ಯಾವುದೇ ಕೆಲಸವನ್ನು ಆರಾಮದಾಯಕವಾಗಿ ಮತ್ತು ಸುಲಭವಾಗಿ ಪೂರ್ಣಗೊಳಿಸುವ ಭರವಸೆ ನೀಡುತ್ತದೆ.

#3. ಜಾನ್ ಡಿಯರ್ 5405 PowerTech™

ಜಾನ್ ಡಿಯರ್ 5405 PowerTech ಮುಂದುವರಿದ ತಂತ್ರಜ್ಞಾನ ಮತ್ತು ಹೊಸ ವಿನ್ಯಾಸ ಹೊಂದಿದೆ. ಈ ಟ್ರ್ಯಾಕ್ಟರ್ ಹೆಚ್ಚು ಶಕ್ತಿಶಾಲಿಯಾಗಿದ್ದು, ಸಾಮರ್ಥ್ಯ ಬಯಸುವವರಿಗಾಗಿ ಅತ್ಯುತ್ತಮ ಆಯ್ಕೆಯಾಗಿದೆ.  ಈ ಟ್ರ್ಯಾಕ್ಟರಿನ 63 HP ಟರ್ಬೊಚಾರ್ಜ್ಡ್ PowerTech ಎಂಜಿನ್ ಅನ್ನು HPCR ಇಲೆಕ್ಟ್ರಾನಿಕ್ ಇಂಜೆಕ್ಟರ್ ಗಳಿಗೆ ಜೋಡಿಸಲಾಗಿದ್ದು, ಇಂಧನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಮಾಲಿನ್ಯ ಉಂಟುಮಾಡುವ ಪದಾರ್ಥಗಳನ್ನು ಕಡಿಮೆ ಮಾಡುತ್ತದೆ.

ಜಾನ್ ಡಿಯರ್ 5405 PowerTech™ ಪ್ರಮುಖ ಲಕ್ಷಣಗಳು: -

  • ಆರಾಮದಾಯಕತೆ = ಕಂಬೈನ್ಡ್ ಸ್ವಿಚ್, ಫ್ಲೋರ್ ಮ್ಯಾಟ್, ಮತ್ತು ದೊಡ್ಡ ಪ್ಲಾಟ್ ಫಾರ್ಮ್
  • ‌ಎತ್ತುವ ಸಾಮರ್ಥ್ಯ - 2500 kg ವರೆಗೆ ವರ್ಧಿತ ಎತ್ತುವ ಸಾಮರ್ಥ್ಯ

5405 PowerTechTM 30–40 HP ಶಕ್ತಿ ಹೊಂದಿರದಿದ್ದರೂ ಅದು ಶಕ್ತಿ ಮತ್ತು ಸಾಮರ್ಥ್ಯದ ಭರವಸೆ ನೀಡುವ ಲಕ್ಷಣಗಳನ್ನು ಹೊಂದಿದೆ ಮತ್ತು ಜಾನ್ ಡಿಯರ್ ನ ತಂತ್ರಜ್ಞಾನದ ನೈಪುಣ್ಯತೆಗೆ ಅತ್ಯುತ್ತಮ ಉದಾಹರಣೆಯಾಗಿದೆ.

#4. ಜಾನ್ ಡಿಯರ್ 5050D GearPro™

ಜಾನ್ ಡಿಯರ್ 5050D GearProTM ನ 50 HP ಎಂಜಿನ್ 2100 RPM ನಲ್ಲಿ ಕೆಲಸ ಮಾಡುವ ಮೂಲಕ ಅಸಾಮಾನ್ಯ ಶಕ್ತಿ ನೀಡುತ್ತದೆ. 12F+4R ಗೇರ್ ಸೆಟ್ ಹೊಂದಿರುವ ಈ ಟ್ರ್ಯಾಕ್ಟರ್ 2WD ಮತ್ತು 4WD ನಲ್ಲಿ ಲಭ್ಯವಿದ್ದು, ವಿವಿಧ ಪ್ರಕಾರದ ಕೃಷಿ ಕೆಲಸಗಳಿಗೆ ಸೂಕ್ತವಾದ ಸ್ಪೀಡ್ ನೀಡುತ್ತದೆ.

ಜಾನ್ ಡಿಯರ್ 5050D GearPro™ ಪ್ರಮುಖ ಲಕ್ಷಣಗಳು: -

  • ಟ್ರಾನ್ಸ್ ಮಿಶನ್ - 3 ಫಾರ್ವರ್ಡ್ ರೇಂಜ್ ಗಳು (A, B, C) ಮತ್ತು 1 ರಿವರ್ಸ್ ರೇಂಜ್ (R)
  • ಗೇರ್ ಆಯ್ಕೆಗಳು - 4 ಗೇರ್ ಆಯ್ಕೆಗಳು (1, 2, 3, 4)
  • ಆರಾಮದಾಯಕತೆ - ಸ್ಟೈಲಿಶ್ ಸ್ಟೇರಿಂಗ್ ವ್ಹೀಲ್, ಬಾಳಿಕೆ ಬರುವ ರಬ್ಬರ್ ಫ್ಲೋರ್ ಮ್ಯಾಟ್, ಪ್ರೀಮಿಯಮ್ ಸೀಟ್
  • ಸಾಮರ್ಥ್ಯ - 500 ಗಂಟೆಗಳ ಸರ್ವಿಸ್ ಮಧ್ಯಂತರ

#5. ಜಾನ್ ಡಿಯರ್ 5075E PowerTech™: ಶಕ್ತಿಶಾಲಿ ಕಾರ್ಯನಿರ್ವಾಹಕ

ಕೊನೆಯದಾಗಿ, ತನ್ನ ಬಲ ಮತ್ತು ಅತ್ಯಾಧುನಿಕ ಲಕ್ಷಣಗಳಿಗಾಗಿ ಪ್ರಖ್ಯಾತವಾಗಿರುವ 74 HP ಶಕ್ತಿಯ ಟ್ರ್ಯಾಕ್ಟರ್ ಹೆಸರು  ಜಾನ್ ಡಿಯರ್  5075E PowerTechTM. TREM IV ಎಮಿಶನ್ ಮಾನದಂಡಗಳನ್ನು ಪೂರೈಸುವ ಗಟ್ಟಿಮುಟ್ಟಾದ PowerTech ಎಂಜಿನ್ ಹೊಂದಿರುವ ಈ ಟ್ರ್ಯಾಕ್ಟರ್ ಹೆಚ್ಚು ಶ್ರಮದ ಅಗತ್ಯವಿರುವ ಕೆಲಸಗಳಿಗೆ ಹೇಳಿ ಮಾಡಿಸಿದಂತಿದೆ.

ಜಾನ್ ಡಿಯರ್ 5075E PowerTech™ ಪ್ರಮುಖ ಲಕ್ಷಣಗಳು: -

  • ಡಿಸೈನ್ - LED ಸ್ಟೈಲ್ ಹುಡ್ ನೊಂದಿಗೆ ಹೊಸ ಹೆಡ್ ಲ್ಯಾಂಪ್
  • ‌ಎಂಜಿನ್ ಕ್ರಮಗಳು - ಎರಡು ಎಂಜಿನ್ ಮೋಡ್ ಸ್ವಿಚ್ ಗಳು (ಗುಣಮಟ್ಟ ಮತ್ತು ಮಿತವ್ಯಯ).
  • ‌ಎತ್ತುವ ಸಾಮರ್ಥ್ಯ - 2500 kg ವರೆಗೆ ವರ್ಧಿತ ಎತ್ತುವ ಸಾಮರ್ಥ್ಯ

5075E PowerTechTM 30–46 HP ಶಕ್ತಿ ಹೊಂದಿರದಿದ್ದರೂ, ಇದರಲ್ಲಿ  ಜಾನ್ ಡಿಯರ್ ಟ್ರ್ಯಾಕ್ಟರ್ ಗಳ ಶ್ರೇಷ್ಠ ಇಂಜಿನಿಯರಿಂಗ್ ಮತ್ತು ಕಾರ್ಯಕ್ಷಮತೆಯ ಸಾಮರ್ಥ್ಯಗಳನ್ನು ಕಾಣಬಹುದು.

ಭಾರತದಲ್ಲಿ, ಜಾನ್ ಡಿಯರ್ ಟ್ರ್ಯಾಕ್ಟರ್ ಗಳು ಅವುಗಳ ಶ್ರೇಷ್ಠ ಗುಣಮಟ್ಟ, ವಿಶ್ವಾಸಾರ್ಹತೆ, ಮತ್ತು ಸಾಮರ್ಥ್ಯಕ್ಕೆ ಹೆಸರು ವಾಸಿಯಾಗಿವೆ.  ನೀವು 35 ಹಾರ್ಸ್ ಪವರ್ ನ ಜಾನ್ ಡಿಯರ್ ಟ್ರ್ಯಾಕ್ಟರ್ ಹುಡುಕುತ್ತಿರಲಿ ಅಥವಾ 40 ಹಾರ್ಸ್ ಪವರ್ ನ ಜಾನ್ ಡಿಯರ್ ಟ್ರ್ಯಾಕ್ಟರ್ ಹುಡುಕುತ್ತಿರಲಿ, ಜಾನ್ ಡಿಯರ್ ಬಳಿ ಆಧುನಿಕ ರೈತ ಬಾಂಧವರ ಬೇಡಿಕೆಗಳನ್ನು ಈಡೇರಿಸುವ ಟ್ರ್ಯಾಕ್ಟರ್ ಗಳಿ ಸಂಗ್ರಹಣೆಯಿದೆ.   ಜಾನ್ ಡಿಯರ್ 3036EN ತನ್ನ ಹಲವಾರು ಯೋಗ್ಯತೆಗಳ ಮುಖಾಂತರ 30-46 HP ವರ್ಗದಲ್ಲಿ ವ್ಯತ್ಯಾಸ ತೋರಿಸುತ್ತದೆ ಮತ್ತು ಭಾರತೀಯ ರೈತ ಬಾಂಧವರಲ್ಲಿ ಜನಪ್ರಿಯ ಆಯ್ಕೆಯಾಗಿದೆ.

ನೀವು ನಿಮ್ಮ ಕೃಷಿ ಉಪಕರಣಗಳನ್ನು ಬದಲಾಯಿಸಲು ಸಿದ್ಧರಾಗಿದ್ದೀರಾ?  ಭಾರತದಲ್ಲಿ ಅತ್ಯುತ್ತಮ ಜಾನ್ ಡಿಯರ್ ಟ್ರ್ಯಾಕ್ಟರ್ ಗಳನ್ನು ಮತ್ತು ನಿಮ್ಮ ಕೃಷಿ ಅಗತ್ಯತೆಗಳಿಗಾಗಿ ಸೂಕ್ತ ಮಾಡಲ್ ಹುಡುಕುವುದಕ್ಕಾಗಿ, ಇಂದೇ ನಮ್ಮ ಹತ್ತಿರದ ಡೀಲರ್ ಶಿಪ್ ಗೆ ಭೇಟಿ ನೀಡಿ!