
ಕೃಷಿ ಯಂತ್ರಗಳಿಗೆ ಸಂಬಂಧಿಸಿದಂತೆ ಜಾನ್ ಡಿಯರ್ ಹೊಸತನ ಮತ್ತು ವಿಶ್ವಾಸಾರ್ಹತೆಯ ಮಾರ್ಗದರ್ಶಿಯಾಗಿ ಹೊರಹೊಮ್ಮುತ್ತದೆ. ಭಾರತದಲ್ಲಿ ಮುಂಚೂಣಿಯಲ್ಲಿರುವ ಟ್ರ್ಯಾಕ್ಟರ್ ಕಂಪನಿಯಾಗಿ ಜಾನ್ ಡಿಯರ್ ಇಂಡಿಯಾ ಕೃಷಿ ಉತ್ಪಾದಕತೆ ಮತ್ತು ಸಾಮರ್ಥ್ಯವನ್ನು ವೃದ್ಧಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ನಿರಂತರವಾಗಿ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ.
ಭಾರತದ ಕೃಷಿಯಲ್ಲಿ ಕ್ರಾಂತಿ ತರುವ ತೀರ ಇತ್ತೀಚಿನ ಬದಲಾವಣೆಗಳು ಮತ್ತು ಹೊಸತನಗಳನ್ನು ಇನ್ನಷ್ಟು ಆಳವಾಗಿ ಅರಿತುಕೊಳ್ಳೋಣ.
ಜಾನ್ ಡಿಯರ್ ಇಂಡಿಯಾದ ಅತ್ಯಂತ ರೋಮಾಂಚಕ ಅಭಿವೃದ್ಧಿಗಳಲ್ಲಿ ಒಂದೆಂದರೆ ವರ್ಚುವಲ್ ಪವಿಲಿಯನ್. ಈ ಹೊಸ ವೇದಿಕೆಯು ವ್ಯಾಪಕ ವರ್ಚುವಲ್ ಅನುಭವ ನೀಡುವ ಮೂಲಕ ಬಳಕೆದಾರರು ತಮ್ಮ ಸ್ಕ್ರೀನ್ ಗಳಿಂದ ಜಾನ್ ಡಿಯರ್ ಕೊಡುಗೆಗಳ ಹಲವಾರು ಅಂಶಗಳನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತದೆ.
1. ಉತ್ಪನ್ನಗಳ ಶೋರೂಮ್ ಗಳು
ಬಳಕೆದಾರರು ನಿಯೋಜಿಸಲಾದ ಡೋರ್ ಮೇಲೆ ಕ್ಲಿಕ್ ಮಾಡುವ ಮೂಲಕ ಟ್ರ್ಯಾಕ್ಟರ್ ಮಾಡಲ್ ಗಳು, ಫ್ಯಾಕ್ಟರಿ ಪರಿಚಯಗಳು (ಟೂರ್ ಗಳು) ಮತ್ತು ಗ್ರಾಹಕರ ಅನುಭವ ಕೇಂದ್ರಗಳಂತಹ ವಿಭಿನ್ನ ವಿಭಾಗಗಳನ್ನು ನ್ಯಾವಿಗೇಟ್ ಮಾಡಬಹುದು.
2. 360-ಡಿಗ್ರಿ ನೋಟ
ಈ ವೇದಿಕೆಯು ಟ್ರ್ಯಾಕ್ಟರ್ ಮಾಡಲ್ ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಅವಕಾಶ ನೀಡುತ್ತದೆ, ತಾಂತ್ರಿಕ ಲಕ್ಷಣಗಳನ್ನು ವಿವರವಾಗಿ ಅರ್ಥಮಾಡಿಕೊಳ್ಳುವುದಕ್ಕಾಘಿ 360-ಡಿಗ್ರಿ ನೋಟ ನೀಡುತ್ತದೆ.
3. ಫ್ಯಾಕ್ಟರಿ ಪರಿಚಯ
ವರ್ಚುವಲ್ ಪವಿಲಿಯನ್ ನ ಫ್ಯಾಕ್ಟರಿ ವಿಭಾಗವನ್ನು ಒಳಹೊಕ್ಕು ನೋಡಿದಾಗ ಜಾನ್ ಡಿಯರ್ ಇಂಡಿಯಾ ಬಳಸುತ್ತಿರುವ ಅತ್ಯಾಧುನಿಕ ಉತ್ಪಾದನಾ ಪ್ರಕ್ರಿಯೆಗಳನ್ನು ತೋರಿಸುತ್ತದೆ. ಮಲ್ಟಿ-ಮಾಡಲ್ ಅಸೆಂಬ್ಲಿ ಲೈನ್ ಗಳಿಂದ ಪ್ರಿಸಿಶನ್ ರೋಬೊಟಿಕ್ಸ್ ವರೆಗೆ ಪುಣೆ ಫ್ಯಾಕ್ಟರಿಯಲ್ಲಿ ಶಕ್ತಿಶಾಲಿ ಮತ್ತು ತಂತ್ರಜ್ಞಾನದ ದೃಷ್ಟಿಯಿಂದ ಮುಂದುವರಿದ ಟ್ರ್ಯಾಕ್ಟರ್ ಗಳನ್ನು ತಯಾರಿಸುವಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ.
4. ಗ್ರಾಹಕರ ಅನುಭವ ಕೇಂದ್ರ
ವರ್ಚುವಲ್ ಪವಿಲಿಯನ್ ಗ್ರಾಹಕರ ಅನುಭವ ಕೇಂದ್ರವನ್ನು ಕೂಡ ಹೊಂದಿದ್ದು, ಜಾನ್ ಡಿಯರ್ ಒದಗಿಸುವ ಕೃಷಿ-ಸಂಬಂಧಿತ ಪರಿಹಾರಗಳು, ಆರ್ಥಿಕ ಸೇವೆಗಳು, ಪಾರ್ಟ್ ಗಳು, ಮತ್ತು ಸೇವೆಗಳನ್ನು ಕುರಿತು ಮೌಲ್ಯಯುತ ಒಳನೋಟಗಳನ್ನು ನೀಡುತ್ತದೆ. ಈ ಸಮಗ್ರ ವಿಧಾನವು ಗ್ರಾಹಕರು ತಮ್ಮ ಕೃಷಿ ಯೋಜನೆಗಳಿಗಾಗಿ ಎಲ್ಲ ಅಗತ್ಯ ಸಂಪನ್ಮೂಲಗಳನ್ನು ಹೊಂದುವುದನ್ನು ಖಚಿತಪಡಿಸುತ್ತದೆ.
Operations Center ಆ್ಯಪ್ ಅನ್ನು ಉಪಯೋಗಿಸುವ ಮೂಲಕ, ರೈತರು ತಮ್ಮ ಟ್ರ್ಯಾಕ್ಟರ್ ಗಳೊಂದಿಗೆ ರಿಯಲ್ ಟೈಮ್ ನಲ್ಲಿ ಸಂಪರ್ಕದಲ್ಲಿರಬಹುದು, ಎಲ್ಲ ಸೌಲಭ್ಯಗಳು ಅವರ ಬೆರಳ ತುದಿಗಳಲ್ಲಿ ಲಭ್ಯ. ಈ ಮುಂದುವರಿದ ತಂತ್ರಜ್ಞಾನವು ರೈತರು ತಮ್ಮ ಟ್ರ್ಯಾಕ್ಟರ್ ಗಳನ್ನು ನಿರಾಯಾಸವಾಗಿ ಮೇಲ್ವಿಚಾರಿಸುವುದನ್ನು ಸಾಧ್ಯವಾಗಿಸುವ ಮೂಲಕ ಅವರ ಕಾರ್ಯಾಚರಣೆಗಳಲ್ಲಿ ಉತ್ತಮ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವನ್ನು ಖಚಿತಪಡಿಸುತ್ತದೆ.
PowerTech™ ಟ್ರ್ಯಾಕ್ಟರ್ ಗಳಲ್ಲಿ JDLink™ ಫೀಲ್ಡ್ ಇನ್ ಸ್ಟಲೇಶನ್ ಕಿಟ್ ಅನ್ನು ಇನ್ ಸ್ಟಾಲ್ ಮಾಡುವ ಮೂಲಕ, ಭಾರತದಲ್ಲಿನ ರೈತರು ಯಂತ್ರದ ಕಾರ್ಯಕ್ಷಮತೆಯನ್ನು ಮೇಲ್ವಿಚಾರಿಸಲು, ಗದ್ದೆಯ ಚಟುವಟಿಕೆಗಳನ್ನು ಅನುಸರಿಸಲು, ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಉತ್ತಮಗೊಳಿಸಲು ಮುಂದುವರಿದ ತಂತ್ರಜ್ಞಾನಗಳ ಶಕ್ತಿಯ ಸದುಪಯೋಗಪಡಿಸಿಕೊಳ್ಳಬಹುದು.
JDLink ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ.
ಜಾನ್ ಡಿಯರ್ PowerTech™ ಟ್ರ್ಯಾಕ್ಟರ್ ಗಳ ಬಗ್ಗೆ ಹೆಚ್ಚು ತಿಳಿಯಲು:
ಜಾನ್ ಡಿಯರ್ ಇಂಡಿಯಾ 5D GearPro™ ಸರಣಿಯ ಪರಿಚಯದೊಂದಿಗೆ ತನ್ನ ಶಕ್ತಿ ಮೀರಿ ಟ್ರ್ಯಾಕ್ಟರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತಿದೆ. ಈ ಟ್ರ್ಯಾಕ್ಟರ್ ಗಳು ಶ್ರೇಷ್ಠ ಕಾರ್ಯಕ್ಷಮತೆಯನ್ನು ಮುಂದುವರಿದ ಲಕ್ಷಣಗಳೊಂದಿಗೆ ಸಂಯೋಜಿಸುವ ಮೂಲಕ ಆಧುನಿಕ ರೈತರುಗಳ ಬೆಳೆಯುತ್ತಿರುವ ಅವಶ್ಯಕತೆಗಳನ್ನು ಪೂರೈಸುತ್ತವೆ.
5D GearPro™ ಸರಣಿಯ ಟ್ರ್ಯಾಕ್ಟರ್ ಗಳು 12 ಫಾರ್ವರ್ಡ್ ಮತ್ತು 4 ರಿವರ್ಸ್ ಗೇರ್ ಗಳನ್ನು ಹೊಂದಿದ್ದು, ಬಳಕೆದಾರರಿಗೆ ಅವರ ಕೆಲಸಗಳ ಮೇಲೆ ಹೆಚ್ಚಿನ ಅನುಕೂಲತೆ ಮತ್ತು ನಿಯಂತ್ರಣ ನೀಡುತ್ತವೆ. ಈ ಟ್ರ್ಯಾಕ್ಟರ್ ಗಳು ದೊಡ್ಡ ಮುಂದಿನ ಟಯರ್ ಗಳ ಆಯ್ಕೆಗಳನ್ನು ಹೊಂದಿದ್ದು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತವೆ, ಹಲವಾರು ಭೂಪ್ರದೇಶಗಳಿಗೆ ಮತ್ತು ಕೃಷಿ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗಿವೆ.
5D GearPro™ ಸರಣಿ ಟ್ರ್ಯಾಕ್ಟರ್ ಗಳ ಮುಂದುವರಿದ ಎಂಜಿನಿಯರಿಂಗ್ ಶಬ್ದದ ಮಟ್ಟಗಳನ್ನು ಕಡಿಮೆ ಮಾಡುತ್ತದೆ, ಆಪರೇಟರ್ ಗಳಿಗೆ ಹೆಚ್ಚು ಆರಾಮದಾಯಕ ಮತ್ತು ಆನಂದಮಯ ಕೆಲಸದ ವಾತಾವರಣ ಒದಗಿಸುತ್ತದೆ. ಜಾನ್ ಡಿಯರ್ ನ 5D GearPro™ ಸರಣಿ ಟ್ರ್ಯಾಕ್ಟರ್ ಗಳ ಈ ಲಕ್ಷಣವು ಇವುಗಳನ್ನು ಒಳಗೊಂಡಿರುತ್ತದೆ:
GearPro™ ಸರಣಿಯಂತಹ ಮುಂದುವರಿದ ಲಕ್ಷಣಗಳೊಂದಿಗೆ, ರೈತರು ತಮ್ಮ ನಿರ್ದಿಷ್ಟ ಕೆಲಸಗಳಿಗಾಗಿ ಉತ್ತಮ ಸ್ಪೀಡ್ ಮತ್ತು ಗೇರ್ ಆಯ್ಕೆ ಮಾಡಬಹುದು, ಈ ಮೂಲಕ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬಹುದು. ಈ ಹೊಸ ಬೆಳವಣಿಗೆಗಳಿಂದಾಗಿ ಕಾರ್ಯಾಚರಣೆಗಳು ಸುವ್ಯವಸ್ಥಿತಗೊಳ್ಳುತ್ತವೆಯಲ್ಲದೇ ರೈತರ ಒಟ್ಟಾರೆ ಸಮೃದ್ಧಿಯನ್ನು ಕೂಡ ಹೆಚ್ಚಿಸುತ್ತವೆ.
ಜಾನ್ ಡಿಯರ್ GerPro™ ಟ್ರ್ಯಾಕ್ಟರ್ ಗಳ ಬಗ್ಗೆ ಹೆಚ್ಚು ತಿಳಿಯಲು:
ಭಾರತದಲ್ಲಿ ಇದೇ ಮೊದಲ ಬಾರಿ, ಜಾನ್ ಡಿಯರ್ ಪರಿಚಯಿಸುತ್ತಿದೆ AutoTrac™, ಇದೊಂದು ಆಟೊಮೇಟೆಡ್ ವೆಹಿಕಲ್ ಗೈಡನ್ಸ್ ಸಿಸ್ಟಮ್ ಆಗಿದ್ದು, ಗದ್ದೆಯ ಕಾರ್ಯಾಚರಣೆಗಳಲ್ಲಿ ಹೊಸತನ ತರುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅದು ಏಕೆ ಬದಲಾವಣೆ ತರುವಂಥದ್ದಾಗಿದೆ ಎಂಬುದಕ್ಕೆ ಕಾರಣವಿಲ್ಲಿದೆ:
ಜಾನ್ ಡಿಯರ್ ನ ನಿಖರವಾದ ag ತಂತ್ರಜ್ಞಾನಕ್ಕೆ ಕಾರಣ StarFire™ 6000 ರಿಸೀವರ್ ಆಗಿದ್ದು, ಟ್ರ್ಯಾಕ್ಟರ್ ಗಳಿಗೆ ಸಾಟಿಯಿಲ್ಲದ ನಿಖರತೆಯೊಂದಿಗೆ ಸ್ಯಾಟಲೈಟ್-ಆಧರಿತ ಮಾರ್ಗದರ್ಶನ ನೀಡುತ್ತದೆ.
ಜಾನ್ ಡಿಯರ್ ನ ಪ್ರಿಸಿಶನ್ ಡಿಸ್ಪ್ಲೇಗಳು ಸಮರ್ಥ ಕೃಷಿ ಕಾರ್ಯಾಚರಣೆಗಳ ಪ್ರಮುಖ ಗುಣವಾಗಿದ್ದು, ಸ್ಪಷ್ಟ ನೋಟ ಮತ್ತು ಇಂಟ್ಯೂಟಿವ್ ಕಂಟ್ರೋಲ್ ಗಳೊಂದಿಗೆ ಆಪರೇಟರ್ ಗಳನ್ನು ಸಶಕ್ತಗೊಳಿಸುತ್ತವೆ.
ಜಾನ್ ಡಿಯರ್ Autotrac™ ನೊಂದಿಗೆ ಅತ್ಯಂತ ನಿಖರವಾದ ಉಳುಮೆ:
ಭಾರತೀಯ ಕೃಷಿ ಭವಿಷ್ಯದಲ್ಲಿ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ, ತಂತ್ರಜ್ಞಾನದ ಪಾತ್ರವನ್ನು ಉತ್ಪ್ರೇಕ್ಷಿಸಲಾಗದು. ಜಾನ್ ಡಿಯರ್ ನ ಆಧುನಿಕ ಹೊಸ ಬೆಳವಣಿಗೆಗಳು ಮುಂದಾಳತ್ವ ವಹಿಸುವುದರೊಂದಿಗೆ, ಭಾರತೀಯ ರೈತರು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೊಸತನವನ್ನು ಮೈಗೂಡಿಸಿಕೊಂಡಿದ್ದಾರೆ.
ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಪರಿವರ್ತನೆ ತರುವುದಕ್ಕೆ ಜಾನ್ ಡಿಯರ್ ಬದ್ಧವಾಗಿದೆ. ಜಾನ್ ಡಿಯರ್ ನ ಹೊಸ ಬೆಳವಣಿಗೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ
ಸಂಬಂಧಪಟ್ಟ ವಿಡಿಯೋಗಳು:
JDLink™ - ಶಕ್ತಿ ಮತ್ತು ತಂತ್ರಜ್ಞಾನ 5.0:
GearPro™ ಟ್ರ್ಯಾಕ್ಟರ್ ಸರಣಿ ಮಾರುಕಟ್ಟೆಗೆ ಪರಿಚಯಿಸುವುದು - ಶಕ್ತಿ ಮತ್ತು ತಂತ್ರಜ್ಞಾನ 2.0:
5310 GearPro™ ಟ್ರ್ಯಾಕ್ಟರ್ ಪರಿಚಯ: