ಸಂಪೂರ್ಣ ಟ್ರ್ಯಾಕ್ಟರ್ ಮೆಂಟೆನನ್ಸ್ ಮಾರ್ಗದರ್ಶಿ: ನಿಮ್ಮ ಜಾನ್ ಡಿಯರ್ ಸರಾಗವಾಗಿ ಕೆಲಸ ಮಾಡಿಕೊಂಡಿರುವಂತೆ ಕಾಪಾಡಲು ಸಲಹೆಗಳು

Ultimate tractor maintenance guide

1. ಪ್ರತಿದಿನ ಬೆಳಿಗ್ಗೆ ಅದರ ಪರಿಶೀಲನೆ ನಡೆಸಿ

ಇದು ನಿಮ್ಮ ಟ್ರ್ಯಾಕ್ಟರಿನ "ಶುಭೋದಯದ” ಪರಿಶೀಲನೆ ಎಂದುಕೊಳ್ಳಿ. ನೀವು ಎಂಜಿನ್ ಅನ್ನು ಪ್ರಾರಂಭಿಸುವ ಮುಂಚೆ, ಅದು ಯಾವ ಸ್ಥಿತಿಯಲ್ಲಿದೆ ಎಂದು ನೋಡಿ.

  • ಯಾವುದೇ ಆಯಿಲ್ ಅಥವಾ ಇಂಧನ ಸೋರಿಕೆಗಳಿರುವುದು ಗೊತ್ತಾಗಿದೆಯೆ? ಬೇಗನೇ ಅವುಗಳನ್ನು ದುರಸ್ತಿಗೊಳಿಸಿ.
  • ಅದರ ಟೈರ್ ಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಏರ್ ಇದೆಯೆ? ಇದು ಇಂಧನ ಉಳಿಸುತ್ತದೆ ಮತ್ತು ಸವೆತಗಳಾಗದಂತೆ ನೋಡಿಕೊಳ್ಳುತ್ತದೆ.
  • ಯಾವುದೇ ಸಡಿಲವಾದ ವೈರ್ ಗಳು ಅಥವಾ ಪಾರ್ಟ್ ಗಳಿವೆಯೆ? ಅವುಗಳನ್ನು ಈಗಲೇ ಬಿಗಿಯಿರಿ, ಆಮೇಲೆ ಮಾಡಿದರಾಯ್ತು ಅಂತಾ ಬಿಡಬೇಡಿ.
  • ರೇಡಿಯೇಟರ್ ಮೇಲೆ ಅಥವಾ ಏರ್ ವೆಂಟ್ ಗಳಲ್ಲಿ ಧೂಳು ಇದೆಯೆ? ಅದನ್ನು ಒರೆಸಿ.
  • ಲೈಟ್ ಗಳು, ಹಾರ್ನ್, ಮತ್ತು ಇಂಡಿಕೇಟರ್ ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೆ? ಯಾವಾಗಲೂ ಪರಿಶೀಲಿಸಿ, ಅದರಲ್ಲೂ ವಿಶೇಷವಾಗಿ ನೀವು ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದರೆ ತಪ್ಪದೇ ಪರಿಶೀಲಿಸಿ. 

ಅದಕ್ಕೆ 5 ನಿಮಿಷಗಳು ಬೇಕಾಗುತ್ತದೆಯಾದರೂ ಅದು ಮುಂದೆ ತೊಂದರೆಯಿಂದಾಗಿ ನಿಮಗಾಗಬಹುದಾದ ಹಲವಾರು ಗಂಟೆಗಳ ನಷ್ಟವನ್ನು ತಪ್ಪಿಸುತ್ತದೆ.

2. ಎಂಜಿನ್ ಅನ್ನು ಖುಷಿಯಾಗಿಡಿ

ನಿಮ್ಮ ಟ್ರ್ಯಾಕ್ಟರಿನ ಎಂಜಿನ್ ಅದರ ಹೃದಯಬಡಿತವಿದ್ದಂತೆ. ಇಲ್ಲಿ ಸ್ವಲ್ಪ ಗಮನ ನೀಡಿದರೂ ಸಾಕು ಮುಂಬರುವ ದೀರ್ಘಕಾಲದವರೆಗೆ ನಿಮ್ಮ ಯಂತ್ರ ಬಲಿಷ್ಠವಾಗಿರುತ್ತದೆ ಮತ್ತು ಇಂಧನ-ದಕ್ಷತೆ ಕಾಪಾಡುತ್ತದೆ.

  • ಎಂಜಿನ್ ಆಯಿಲ್ ವೇಳಾಪಟ್ಟಿಯನ್ನು ಚಾಚೂ ತ‌ಪ್ಪದೇ ಅನುಸರಿಸಿ, ಅದಕ್ಕಿಂತ ಜಾಸ್ತಿ ಸಮಯ ತೆಗೆದುಕೊಳ್ಳಬೇಡಿ.
  • ವಿಶೇಷವಾಗಿ ನೀವು ಧೂಳು ಜಾಸ್ತಿ ಇರುವ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರೆ, ಏರ್ ಫಿಲ್ಟರ್ ಬಗ್ಗೆ ನಿಗಾವಹಿಸಿ.
  • ಕೂಲಂಟ್ ಪ್ರಮಾಣ ಕಡಿಮೆಯಾಗಿದ್ದರೆ ಅದನ್ನು ತುಂಬಿಸಿ.
  • ಮತ್ತು ಎಂಜಿನ್ ಸ್ವಲ್ಪ ಬೇರೆ ರೀತಿ ಶಬ್ದ ಮಾಡುತ್ತಿದ್ದರೆ? ತಡ ಮಾಡಬೇಡಿ, ಅದನ್ನು ಪರಿಶೀಲಿಸಿಕೊಳ್ಳಿ. 

ಅದು ಆರೋಗ್ಯ ತಪಾಸಣೆಗಳಿದ್ದಂತೆ. ನಿಮಗೆ ಏನಾದರೂ ಅಸ್ವಸ್ಥತೆ ಇದ್ದರೆ, ತಪ್ಪದೇ ತಪಾಸಣೆಗೆ ಒಳಗಾಗುತ್ತೀರಿ ತಾನೇ?

3. ಟ್ರಾನ್ಸ್ ಮಿಶನ್ ಮೇಲೆ ಹೆಚ್ಚು ಒತ್ತಡ ಹಾಕಬೇಡಿ

ನೀವು ಭಾರವಾದ ಲೋಡ್ ಗಳನ್ನು ಎಳೆಯುವಾಗ ಅಥವಾ ಇಂಪ್ಲಿಮೆಂಟ್ ಗಳನ್ನು ಬಳಸುವಾಗ ಗೇರ್ ಬಾಕ್ಸ್ ಮತ್ತು ಕ್ಲಚ್ ಮೇಲೆ ಸಾಕಷ್ಟು ಒತ್ತಡ ಬೀಳುತ್ತದೆ. ಅವುಗಳಿಗೂ ಸ್ವಲ್ಪ ಪ್ರೀತಿ ತೋರಿಸಿ.

  • ಟ್ರಾನ್ಸ್ ಮಿಶನ್ ಆಯಿಲ್ ಅನ್ನು ನಿಯಮಿತವಾಗಿ ಪರಿಶೀಲಿಸಿ.
  • ಕ್ಲಚ್ ಅನ್ನು ರೈಡ್ ಮಾಡಬೇಡಿ, ಅದನ್ನು ಪೂರ್ತಿ ತುಳಿಯಿರಿ ಅಥವಾ ತುಳಿಯಲೇಬೇಡಿ.
  • ಗೇರ್ ಬದಲಾಯಿಸುವಾಗ ಬಿಗಿಯಾದ ಅಥವಾ ಶಬ್ದ ಮಾಡುವಂತಹ ಅನುಭವವಾದರೆ, ಸರ್ವಿಸ್ ಮಾಡಿಸುವ ಸಮಯವಾಗಿದೆ ಎಂದರ್ಥ.

ಸರಾಗವಾದ ಗೇರ್ ಗಳು = ಹೆಚ್ಚು ಸರಾಗವಾದ ಚಾಲನೆಗಳು = ಅಷ್ಟೇ ಸಂತುಷ್ಟ ಟ್ರ್ಯಾಕ್ಟರ್.

4. ಹೈಡ್ರಾಲಿಕ್ಸ್ ಮತ್ತು PTO: ಶಾಂತ ಕೆಲಸಗಾರರು, ದೊಡ್ಡ ಪ್ರಭಾವ

ನಿಮ್ಮ ಹೈಡ್ರಾಲಿಕ್ ಸಿಸ್ಟಮ್ ಮತ್ತು PTO ಯಾವಾಗಲೂ ಗಮನ ಸೆಳೆಯದಿರಬಹುದು, ಆದರೆ ಅವು ಕೆಲವು ಅತ್ಯಂತ ಕಠಿಣವಾದ ಕೆಲಸಗಳನ್ನು ಮಾಡುತ್ತವೆ.

  • ಆಯಿಲ್ ಸೋರುತ್ತಿದೆಯೆ ಅಥವಾ ಹೋಸ್ ಗಳು ಬಿರುಕು ಬಿಟ್ಟಿವೆಯೆ ಎಂದು ನೋಡಿ.
  • ನಿಮ್ಮ ಇಂಪ್ಲಿಮೆಂಟ್ ಗಳು ಎಷ್ಟು ಬೇಗ ಪ್ರತಿಕ್ರಿಯಿಸುತ್ತಿವೆ ಎಂಬುದನ್ನು ಗಮನಿಸುತ್ತಿರಿ, ಅವು ಸ್ವಲ್ಪ ನಿಷ್ಕ್ರಿಯಗೊಂಡರೆ, ಅವುಗಳಿಗೆ ತಾಜಾ ಆಯಿಲ್ ಅಥವಾ ಫಿಲ್ಟರ್ ಗಳ ಅಗತ್ಯವಿರಬಹುದು.
  • ದೀರ್ಘಕಾಲದ ಹಾನಿಯನ್ನು ತಪ್ಪಿಸಬೇಕೆಂದರೆ, ಯಾವಾಗಲೂ ಜಾನ್ ಡಿಯರ್ ಅನುಮೋದಿತ ಹೈಡ್ರಾಲಿಕ್ ಆಯಿಲ್ ಗಳನ್ನು ಉಪಯೋಗಿಸಿ.

ಪ್ರಮುಖ ಸಲಹೆ: ಆಯಿಲ್ ಸಣ್ಣ ಹನಿಗಳಲ್ಲಿ ಸೋರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ, ಹೆಚ್ಚಾಗಿ ಅವು ಮುಂದೆ ತಲೆದೋರಲಿರುವ ದೊಡ್ಡ ಸಮಸ್ಯೆಯ ಮೊದಲ ಸಂಕೇತಗಳಾಗಿರುತ್ತವೆ.

5. ಸ್ವಚ್ಛ ಟ್ರ್ಯಾಕ್ಟರ್ ಆರೋಗ್ಯವಂತ ಟ್ರ್ಯಾಕ್ಟರ್

ನಿಜ ಹೇಳಬೇಕೆಂದರೆ, ವಸ್ತುಗಳು ಸ್ವಚ್ಛವಾಗಿದ್ದಾಗ ನಮಗೆಲ್ಲ ಸ್ವಲ್ಪ ಸಮಾಧಾನವೆನಿಸುತ್ತದೆ. ಇದು ನಿಮ್ಮ ಟ್ರ್ಯಾಕ್ಟರ್ ವಿಷಯದಲ್ಲಿ ಕೂಡ ನಿಜ.

  • ರೇಡಿಯೇಟರ್ ಗ್ರಿಲ್ ನಿಂದ ಕೆಸರು ಮತ್ತು ಬೆಳೆಯ ತುಣುಕುಗಳನ್ನು ತೆಗೆಯಿರಿ.
  • ಸೀಟ್ ಕೆಳಗೆ ಮತ್ತು ಬ್ಯಾಟರಿ ಹತ್ತಿರ ಸ್ವಚ್ಛಗೊಳಿಸಿ.
  • ವಿಶೇಷವಾಗಿ ಮುಂಜಾನೆ ಹೊತ್ತು ಅಥವಾ ಸಂಜೆ ಬಹಳ ಹೊತ್ತು ಗದ್ದೆಯಲ್ಲಿ ಕೆಲಸ ಮಾಡುವಾಗ ಲೈಟ್ ಗಳನ್ನು, ಮಿರರ್ ಗಳನ್ನು, ಮತ್ತು ರಿಫ್ಲೆಕ್ಟರ್ ಗಳನ್ನು ಸ್ವಚ್ಛವಾಗಿಡಿ.

ಅಷ್ಟೇ ಅಲ್ಲ, ಸ್ವಚ್ಛವಾಗಿಟ್ಟರೆ ಫೋಟೋಗಳಲ್ಲಿ ತುಂಬಾ ಚೆನ್ನಾಗಿ ಕಾಣುತ್ತದೆ. ಏಕೆಂದರೆ ಸ್ವಚ್ಛವಾದ ಜಾನ್ ಡಿಯರ್ ಟ್ರ್ಯಾಕ್ಟರ್ ಅದ್ಭುತವಾಗಿ ಕಾಣಿಸುತ್ತದೆ.

6. ಸರ್ವಿಸ್ ವೇಳಾಪಟ್ಟಿ ಅನುಸರಿಸಿ

ಲೈಫ್ ತುಂಬಾ ಬ್ಯುಸಿ ಅಂತಾ ನಮಗೆ ಗೊತ್ತು. ಆದರೆ ಸರ್ವಿಸ್ ಮಾಡಿಸುವುದನ್ನು ತಪ್ಪಿಸುವುದು ಊಟ ತಪ್ಪಿಸಿಕೊಂಡಂತೆ: ಅದರಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ.

  • ಜಾನ್ ಡಿಯರ್ ನ ಅಧಿಕೃತ ಸರ್ವಿಸ್ ವೇಳಾಪಟ್ಟಿಯನ್ನು ಭಾರತೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ, ಅದನ್ನು ನಂಬಿ.
  • ಉತ್ತಮ ಕಾರ್ಯಕ್ಷಮತೆ ಮತ್ತು ವಾರಂಟಿ ರಕ್ಷಣೆಗಾಗಿ ನಿಜವಾದ ಜಾನ್ ಡಿಯರ್ ಪಾರ್ಟ್ ಗಳನ್ನು ಮತ್ತು ಸರ್ವಿಸ್ ಬಳಸಿ.
  • ಎಂಜಿನ್ ಗಂಟೆಗಳನ್ನು ಗಮನಿಸುತ್ತಿರಿ ಮತ್ತು ಪ್ರಮುಖ ಸರ್ವಿಸ್ ಗಳನ್ನು ತಡ ಮಾಡಬೇಡಿ (250, 500, 1000 ಗಂಟೆಗಳು).

ನೀವು ಸರ್ವಿಸ್ ಜ್ಞಾಪನೆಗಳನ್ನು ಪಡೆಯಲು JDLink™ ನಂತಹ ಟೂಲ್ ಗಳನ್ನು ಕೂಡ ಬಳಸಬಹುದು. ಅದು ನಿಮ್ಮ ಸ್ವಂತ ಟ್ರ್ಯಾಕ್ಟರ್ ಸಹಾಯಕನನ್ನು ಇಟ್ಟುಕೊಂಡಂತೆ.

7. ನಿಜವಾದ ಪಾರ್ಟ್ ಗಳನ್ನು ಬಳಸಿ

ನಿಮ್ಮ ಟ್ಯಾಂಕ್ ನಲ್ಲಿ ನೀವು ಕಡಿಮೆ-ಗುಣಮಟ್ಟದ ಇಂಧನ ಹಾಕಬೇಡಿ. ಹಾಗಾದರೆ ನಕಲಿ ಪಾರ್ಟ್ ಗಳನ್ನು ಬಳಸಿ ನಷ್ಟ ಏಕೆ ಅನುಭವಿಸುತ್ತೀರಿ?

  • ನಿಜವಾದ ಜಾನ್ ಡಿಯರ್ ಪಾರ್ಟ್ ಗಳನ್ನು ಮಾತ್ರ ಖರೀದಿಸಿ, ಅವುಗಳನ್ನು ನಿಮ್ಮ ಮಾಡಲ್ ಗೆಂದೇ ವಿಶೇಷವಾಗಿ ತಯಾರಿಸಲಾಗಿದೆ.
  • ಕೆಲವು ಸಾಮಾನ್ಯ ಸ್ಪೇರ್ ಗಳನ್ನು ನಿಮ್ಮ ಬಳಿ ಇಟ್ಟುಕೊಂಡಿರಿ: ಫಿಲ್ಟರ್ ಗಳು, ಸ್ಪಾರ್ಕ್ ಪ್ಲಗ್ ಗಳು, ಫ್ಯಾನ್ ಬೆಲ್ಟ್ ಗಳು.
  • ನಿಮ್ಮ ಡೀಲರ್ ಅನ್ನು ಮೆಂಟೆನನ್ಸ್ ಕಿಟ್ ಬಗ್ಗೆ ಕೇಳಿ, ಅವು ಬಹಳ ಉಪಯುಕ್ತವಾಗಿರುತ್ತವೆ.

ಅಗ್ಗದ ಪಾರ್ಟ್ ಗಳು ಇವತ್ತು ನಿಮಗೆ ಉಳಿತಾಯ ಮಾಡಿಸಬಹುದು. ಆದರೆ ನಾಳೆ ಅವುಗಳಿಂದಾಗುವ ಹಾನಿ ಸಾಕಷ್ಟು ಖರ್ಚು ಮಾಡಿಸುತ್ತದೆ.

8. ಬ್ಯಾಟರಿ ಮತ್ತು ವೈರಿಂಗ್ ಪರಿಶೀಲಿಸಿ

ಟ್ರ್ಯಾಕ್ಟರ್ ಸ್ಟಾರ್ಟ್ ಮಾಡುವುದು ಸಾಧ್ಯವಾಗದಿದ್ದಾಗ ಮಾತ್ರ ಬ್ಯಾಟರಿಗಳ ಬಗ್ಗೆ ಹೆಚ್ಚು ಗಮನ ನೀಡುತ್ತೇವೆ.

  • ಟರ್ಮಿನಲ್ ಗಳನ್ನು ಸ್ವಚ್ಛಗೊಳಿಸಿ (ತುಕ್ಕು ನಿಮ್ಮ ಹಿತೈಷಿಯಲ್ಲ).
  • ನೀರಿನ ಮಟ್ಟ ಪರಿಶೀಲಿಸಿ (ನಿಮ್ಮ ಬ್ಯಾಟರಿ ಸೀಲ್ ಆಗಿರದಿದ್ದರೆ).
  • ನಿಮ್ಮ ಲೈಟ್ ಗಳು ಮಿನುಗುತ್ತಿದ್ದರೆ (ಫ್ಲಿಕರ್) ಅಥವಾ ಪೂರ್ತಿ ಆನ್ ಆಗದಿದ್ದರೆ, ಇಲೆಕ್ಟ್ರಿಕಲ್ ಗಳನ್ನು ಪರಿಶೀಲಿಸಿಕೊಳ್ಳಿ.

ಹಾಗೂ ಸಾಧ್ಯವಾದಾಲೆಲ್ಲ ನೆರಳಲ್ಲಿ ಪಾರ್ಕ್ ಮಾಡಿ, ಆಗ ಬ್ಯಾಟರಿ ಮತ್ತು ವೈರಿಂಗ್ ಅತಿಯಾದ ಉಷ್ಣತೆಯಿಂದ ರಕ್ಷಣೆ ದೊರೆಯುತ್ತದೆ.

9. ಅದನ್ನು ಆಫ್-ಸೀಸನ್ ನಲ್ಲಿ ನಿಲ್ಲಿಸಿ

ಕೆಲಸ ಮುಗಿದ ನಂತರ ಮತ್ತು ಗದ್ದೆಗಳಲ್ಲಿ ಕೆಲಸವಿಲ್ಲದಿರುವಾಗ, ಟ್ರ್ಯಾಕ್ಟರ್ ಅನ್ನು ಪಾರ್ಕ್ ಮಾಡಿ ಹೋದರೆ ಸಾಲದು.

  • ಅದನ್ನು ಒಳಗೆ ಮತ್ತು ಹೊರಗೆ ಚೆನ್ನಾಗಿ ಸ್ವಚ್ಛಗೊಳಿಸಿ.
  • ಅದನ್ನು ಕವರ್ ಮಾಡಿ ಅಥವಾ ಶೆಡ್ ಒಳಗೆ ಪಾರ್ಕ್ ಮಾಡಿ.
  • ನೀವು ಬ್ಯಾಟರಿಯನ್ನು ಸ್ವಲ್ಪ ಹೊತ್ತು ಬಳಸದಿದ್ದರೆ, ಅದನ್ನು ಡಿಸ್ಕನೆಕ್ಟ್ ಮಾಡಿ.
  • ಇಂಧನ ಹಲವಾರು ವಾರಗಳವರೆಗೆ ಬಳಸದೇ ಇಡಬೇಕಾದರೆ, ಅದನ್ನು ಸರಿಯಾದ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ.

ಹಾಗೆ ಮಾಡುವುದರಿಂದ, ಮತ್ತೆ ಕೆಲಸ ಮಾಡುವುದು ಶುರುವಾದಾಗ, ನಿಮ್ಮ ಟ್ರ್ಯಾಕ್ಟರ್ ನಿಮ್ಮಂತೆಯೇ ಸಿದ್ಧವಾಗಿರುತ್ತದೆ.

ನೀವು ಸೀಟ್ ನಲ್ಲಿ ಕುಳಿತಾಗಲೆಲ್ಲ ನಿಮ್ಮ ಜಾನ್ ಡಿಯರ್ ಟ್ರ್ಯಾಕ್ಟರ್ ನಿಮಗೆ ಅತ್ಯುತ್ತಮ ಅನುಭವ ನೀಡುತ್ತದೆ. ನಿಯಮಿತ ಮೆಂಟೆನನ್ಸ್ ಎಂದರೆ ಬರೀ ಯಂತ್ರಗಳನ್ನು ಒಳ್ಳೆಯ ಸ್ಥಿತಿಯಲ್ಲಿಡುವುದಲ್ಲ, ನಿಮ್ಮ ಜೀವನೋಪಾಯದ ಬೆನ್ನೆಲುಬಾಗಿ ನಿಂತಿರುವ ಉಪಕರಣಕ್ಕೆ ನೀವು ತೋರಿಸುವ ಗೌರವವಾಗಿದೆ.

ಆದ್ದರಿಂದ ಬೇಕಾದಷ್ಟು ಸಮಯ ತೆಗೆದುಕೊಳ್ಳಿ. ಪರಿಶೀಲನೆಗಳನ್ನು ಮಾಡಿ. ಅದನ್ನು ಸ್ವಚ್ಛವಾಗಿಡಿ. ಮತ್ತು ಸಂದೇಹವಿದ್ದರೆ, ನಿಮ್ಮ ಹತ್ತಿರದ ಜಾನ್ ಡಿಯರ್ ಇಂಡಿಯಾ ಡೀಲರ್ ಸಹಾಯ ಪಡೆಯಿರಿ. ನೀವು ಹಣ ಉಳಿಸುತ್ತೀರಿ, ಸಮಯ ಉಳಿಸುತ್ತೀರಿ, ಹಾಗೂ ಅತ್ಯಂತ ಮುಖ್ಯವಾಗಿ, ಹೆಚ್ಚು ನೆಮ್ಮದಿಯಿಂದ ಕೆಲಸ ಮಾಡಿಕೊಂಡು ಹೋಗುತ್ತೀರಿ.