ಸಾಮರ್ಥ್ಯ ಕಂಡುಕೊಳ್ಳುವುದು: ಜಾನ್ ಡಿಯರ್ ಇಂಡಿಯಾ ತಂತ್ರಜ್ಞಾನದೊಂದಿಗೆ ಕೃಷಿ ಉತ್ಪಾದಕತೆಯನ್ನು ವೃದ್ಧಿಸುವುದು

product-post-5405-powertech-web-banner

ಕೃಷಿ ಪ್ರಗತಿಯ ಮುಂಚೂಣಿಯಲ್ಲಿರುವ ಜಾನ್ ಡಿಯರ್ ಇಂಡಿಯಾ ಅಸಾಮಾನ್ಯ ಸಾಮರ್ಥ್ಯದತ್ತ ಪರಿವರ್ತಕ ಪ್ರಯಾಣದ ಮುಂದಾಳತ್ವ ವಹಿಸಿದೆ. ಕೃಷಿ ತಂತ್ರಜ್ಞಾನದ ವ್ಯವಸ್ಥೆಯೊಳಗೆ, ಎರಡು ಮೊಟ್ಟಮೊದಲ ಆವಿಷ್ಕಾರಗಳಾದ PowerReverser ತಂತ್ರಜ್ಞಾನ ಮತ್ತು PTO ಸಿಸ್ಟಮ್ ಹೆಚ್ಚು ಜನಪ್ರಿಯವಾಗಿವೆ. ಭಾರತದಾದ್ಯಂತ ಮತ್ತು ಹೊರದೇಶಗಳಲ್ಲಿ ಕೂಡ ತೋಟಗಾರಿಕೆ ಕೆಲಸದ ಮೂಲಕ ಪ್ರದೇಶಗಳನ್ನು ಸುಂದರಗೊಳಿಸುವ ಕೆಲಸಕ್ಕೆ ಹೊಸ ಮೆರುಗು ನೀಡುತ್ತಿರುವ ಈ ಹೊಸ ತಂತ್ರಜ್ಞಾನಗಳ ಪ್ರಮುಖ ಪ್ರಭಾವವನ್ನು ಎಳೆಎಳೆಯಾಗಿ ಬಿಚ್ಚಿ ನೋಡೋಣ ಬನ್ನಿ.

PowrReverser ತಂತ್ರಜ್ಞಾನ: ಟ್ರ್ಯಾಕ್ಟರ್ ಗಳ ಭವಿಷ್ಯದ ಸವಾರಿ

ನೀವು ಎಂದಾದರೂ ಆಟೊಮ್ಯಾಟಿಕ್ ಸಾಮರ್ಥ್ಯದ ಸೌಕರ್ಯದೊಂದಿಗೆ ಟ್ರ್ಯಾಕ್ಟರ್ ಓಡಿಸುವ ಕಲ್ಪನೆ ಮಾಡಿದ್ದೀರಾ?

ನೀವು ಕ್ಲಚ್ ಅನ್ನು ಮೇಲಿಂದ ಮೇಲೆ ತುಳಿಯದೇ ಅಥವಾ ಗೇರ್ ಗಳನ್ನು ಬದಲಾಯಿಸದೇ ಆರಾಮಾಗಿ ಮುಂದಕ್ಕೆ ಮತ್ತು ಹಿಂದಕ್ಕೆ ಚಲಿಸಲು ಸಾಧ್ಯವಾದರೆ ಹೇಗಿರುತ್ತದೆ ಯೋಚಿಸಿ ನೋಡಿ. ಇದು PowrReverser ತಂತ್ರಜ್ಞಾನದ ಕೊಡುಗೆ, ಈ ಮೂಲಕ ಟ್ರ್ಯಾಕ್ಟರ್ ಅನ್ನು ಚಲಿಸುವುದು ತೀರ ಸುಲಭವಾಗುತ್ತದೆ.

ಅದು ಹೇಗೆ ಕೆಲಸ ಮಾಡುತ್ತದೆ?

ಜಾನ್ ಡಿಯರ್ ಇಂಡಿಯಾದ PowrReverser ತಂತ್ರಜ್ಞಾನ ಹೈಡ್ರಾಲಿಕ್ ವೆಟ್ ಕ್ಲಚ್ ಸಿಸ್ಟಮ್ ಉಪಯೋಗಿಸುತ್ತದೆ ಹಾಗೂ ಅಸಾಮಾನ್ಯ ನಿಯಂತ್ರಣ ಮತ್ತು ನಿಖರತೆ ನೀಡುತ್ತದೆ. ಅತ್ಯಾಧುನಿಕ ಸೆನ್ಸರ್ ಗಳು, ಕಂಟ್ರೋಲ್ ವಾಲ್ವ್ ಗಳು, ಮತ್ತು ಇಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ ಹೊಂದಿರುವ ಈ ತಂತ್ರಜ್ಞಾನವು ಫಾರ್ವರ್ಡ್ ಮತ್ತು ರಿವರ್ಸ್ ಎರಡೂ ದಿಕ್ಕುಗಳಲ್ಲಿ ಸರಾಗವಾದ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡುತ್ತದೆ.

ಹೊಸ FNR (ಫಾರ್ವರ್ಡ್, ನ್ಯೂಟ್ರಲ್, ರಿವರ್ಸ್) ಲೀವರ್ ಕ್ಲಚ್ ಬಳಕೆ ಅಥವಾ ಗೇರ್ ಬದಲಾಯಿಸುವ ಅಗತ್ಯವಿಲ್ಲದೇ ತ್ವರಿತ ಬದಲಾವಣೆಯನ್ನು ಸಾಧ್ಯವಾಗಿಸುತ್ತದೆ. 12 ಫಾರ್ವರ್ಡ್ ಮತ್ತು 12 ರಿವರ್ಸ್ ಗೇರ್ ಗಳೊಂದಿಗೆ, ಈ ವ್ಯವಸ್ಥೆಯು ಹಲವಾರು ಕೃಷಿ ಕೆಲಸಗಳಿಗಾಗಿ ಸಾಟಿಯಿಲ್ಲದ ಬಹುಪಯೋಗಿಯಾಗಿದೆ.

ಪ್ರಯೋಜನಗಳು

  • ಹೆಚ್ಚಿನ ಸಾಮರ್ಥ್ಯ: ಮೇಲಿಂದ ಮೇಲೆ ಕ್ಲಚ್ ತುಳಿಯುವ ಮತ್ತು ಗೇರ್ ಬದಲಾಯಿಸುವ ಅವಶ್ಯಕತೆ ಇರುವುದಿಲ್ಲ, ಹೀಗೆ ಡ್ರೈವರ್ ಗೆ ಕಡಿಮೆ ಆಯಾಸವಾಗುತ್ತದೆ ಮತ್ತು ಒಟ್ಟಾರೆ ಸಾಮರ್ಥ್ಯ ಸುಧಾರಿಸುತ್ತದೆ
  • ಬಹುಪಯೋಗಿ ಕಾರ್ಯಾಚರಣೆ: 12 ಫಾರ್ವರ್ಡ್ ಮತ್ತು 12 ರಿವರ್ಸ್ ಗೇರ್ ಗಳನ್ನು ಹೊಂದಿರುವ Power Reverser ಸರಿಸಾಟಿಯಿಲ್ಲದ ಬಹುಪಯೋಗಿ ಕಾರ್ಯಗಳನ್ನು ಮಾಡಲು ಸಹಾಯ ಮಾಡುವ ಮೂಲಕ ವಿಭಿನ್ನ ಪ್ರದೇಶಗಳಿಗೆ ಮತ್ತು ಕೆಲಸಗಳಿಗೆ ಯಾವುದೇ ಕಷ್ಟವಿಲ್ಲದೇ ಹೊಂದಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
  • ಬಾಳಿಕೆ: ಕ್ಲಚ್ ಕಂಪೋನಂಟ್ ಗಳು ಸವೆಯುವುದು ಮತ್ತು ಬಿರುಕು ಬಿಡುವುದನ್ನು ಕಡಿಮೆ ಮಾಡುತ್ತದೆ, ಹೀಗೆ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು ಮೆಂಟೆನನ್ಸ್ ವೆಚ್ಚಗಳನ್ನು ಕಡಿಮೆ ಮಾಡುತ್ತದೆ.
  • ಆರಾಮ ಮತ್ತು ಉತ್ಪಾದಕತೆ: ಅನಾನುಕೂಲತೆ ಇಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡುವುದನ್ನು ಸಾಧ್ಯವಾಗಿಸುತ್ತದೆ, ಈ ಮೂಲಕ ಪ್ರಮುಖ ಕೃಷಿ ಕೆಲಸಗಳು ಹೆಚ್ಚಾಗಿರುವ ಕಾಲಗಳಲ್ಲಿ ಸಮರ್ಥನೀಯ ಉತ್ಪಾದಕತೆಯನ್ನು ಖಚಿತಪಡಿಸುತ್ತದೆ.

PTO ಸಿಸ್ಟಮ್: ಬಹುಪಯೋಗಿ ಕೃಷಿ ಕಾರ್ಯಾಚರಣೆಗಳನ್ನು ಸಾಧ್ಯವಾಗಿಸುವುದು

ಕೃಷಿ ಕೆಲಸಗಳು ಕೇವಲ ಕೆಲಸದವರನ್ನು ಅವಲಂಬಿಸಿರುತ್ತಿದ್ದ ಕಾಲ ಮುಗಿಯಿತು. ಟ್ರ್ಯಾಕ್ಟರ್ ಗಳಲ್ಲಿ PTO (ಪವರ್ ಟೇಕ್-ಆಫ್) ಸಿಸ್ಟಮ್ ಲಭ್ಯವಿರುವುದರಿಂದ, ಹಲವಾರು ಕೃಷಿ ಇಂಪ್ಲಿಮೆಂಟ್ ಗಳಿಗೆ ಸಮರ್ಥವಾಗಿ ಶಕ್ತಿ ನೀಡಬಹುದು ಮತ್ತು ಕೃಷಿಯ ಅಭ್ಯಾಸಗಳಲ್ಲಿ ಕ್ರಾಂತಿ ತರುತ್ತದೆ.

ಕೆಲಸಗಳು

ಮಣ್ಣಿನ ಉಳುಮೆಯಿಂದ ಹಿಡಿದು ಧಾನ್ಯಗಳ ಕಟಾವು ಮಾಡುವವರೆಗೆ, PTO ಸಿಸ್ಟಮ್ ಅನೇಕ ಪ್ರಕಾರದ ಇಂಪ್ಲಿಮೆಂಟ್ ಗಳಿಗೆ ಶಕ್ತಿ ಒದಗಿಸುತ್ತದೆ, ಅವುಗಳೆಂದರೆ:

- ರೋಟರಿ ಟಿಲ್ಲರ್ ಗಳು, ಪವರ್ ಹ್ಯಾರೋಗಳು, ಮತ್ತು ರೋಟವೇಟರ್ ಗಳು
- ಪಟೇಟೋ ಡಿಗ್ಗರ್ ಗಳು, ಪೋಸ್ಟ್-ಹೋಲ್ ಡಿಗ್ಗರ್ ಗಳು, ಮತ್ತು ಮಲ್ಚರ್ ಗಳು
- ಶ್ರೆಡರ್ ಗಳು, ನೀರಿನ ಪಂಪ್ ಗಳು, ಜನರೇಟರ್ ಗಳು, ಮತ್ತು ಥ್ರೆಶರ್ ಗಳು

ಪ್ರಮಾಣಬದ್ಧ PTO ಮತ್ತು ಮಿತವ್ಯಯದ PTO:

ಉತ್ತಮ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಗಾಗಿ ಯಾವಾಗ ಪ್ರಮಾಣಬದ್ಧ PTO ಮತ್ತು ಮಿತವ್ಯಯದ PTO ಮೋಡ್ ಗಳನ್ನು ಬಳಸಬೇಕು ಎಂದು ಅರ್ಥಮಾಡಿಕೊಳ್ಳುವುದು ಮುಖ್ಯ.

  • ಪ್ರಮಾಣಬದ್ಧ PTO: ಇದು ಗ್ರೇನ್ ಹಾರ್ವೆ‌ಸ್ಟರ್ ಗಳು ಮತ್ತು ಶ್ರೆಡರ್ ಗಳಂತಹ ಅಧಿಕ ಎಂಜಿನ್ ಪವರ್ ಬಳಕೆಯ ಅಗತ್ಯವಿರುವ ಹೆವಿ-ಡ್ಯೂಟಿ ಇಂಪ್ಲಿಮೆಂಟ್ ಗಳಿಗೆ ಸೂಕ್ತವಾಗಿದೆ.
  • ಮಿತವ್ಯಯದ PTO: ಕಡಿಮೆ ಎಂಜಿನ್ ಪವರ್ ಅಗತ್ಯವಿರುವ ನೀರಿನ ಪಂಪ್ ಗಳು, ಜನರೇಟರ್ ಗಳು, ಮತ್ತು ಪೋಸ್ಟ್-ಹೋಲ್ ಡಿಗ್ಗರ್ ಗಳನ್ನು ಒಳಗೊಂಡು ಹಗುರವಾದ ಇಂಪ್ಲಿಮೆಂಟ್ ಗಳಿಗೆ ಸೂಕ್ತವಾಗಿದೆ.

ಹೆಚ್ಚುವರಿಯಾಗಿ, ರಿವರ್ಸ್ PTO ಲಕ್ಷಣವು ಬಹುಪಯೋಗಿ ಗುಣವನ್ನು ‌ಇನ್ನಷ್ಟು ಹೆಚ್ಚಿಸುತ್ತದೆ, ಹೀಗೆ ರೈತರು ಗ್ರೇನ್ ಹಾರ್ವೆಸ್ಟರ್ ಗಳಂತಹ ಉಪಕರಣಗಳನ್ನು ಸಮರ್ಥವಾಗಿ ಉಪಯೋಗಿಸುವುದು ಸಾಧ್ಯವಾಗುತ್ತದೆ.

ಕೃಷಿ ಸಾಮರ್ಥ್ಯ ಹೆಚ್ಚಿಸುವುದು: ರೈತರೊಬ್ಬರ ಅಭಿಪ್ರಾಯ

ಒಬ್ಬ ಅನುಭವಿ ರೈತನಾಗಿ ನಾನು ಜಾನ್ ಡಿಯರ್ ನ ತಂತ್ರಜ್ಞಾನದ ಪ್ರಗತಿಯ ಬದಲಾವಣೆ ತರುವಂತಹ ಶಕ್ತಿಯನ್ನು ನೇರವಾಗಿ ಕಂಡಿದ್ದೇನೆ. Power Reverser ತಂತ್ರಜ್ಞಾನದ ಸಹಾಯದಿಂದ, ನನ್ನ ಟ್ರ್ಯಾಕ್ಟರ್ ಅನ್ನು ಓಡಿಸುವುದು, ತಿರುಗಿಸುವುದು ತೀರ ಸುಲಭವಾಗಿದೆಯಲ್ಲದೇ ಆಯಾಸ ಕಡಿಮೆ ಮತ್ತು ಉತ್ಪಾದಕತೆ ಹೆಚ್ಚಾಗಿದೆ.

PTO ಸಿಸ್ಟಮ್ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸುತ್ತದೆ, ಈ ಮೂಲಕ ವಿವಿಧ ಕೃಷಿ ಕಾರ್ಯಗಳನ್ನು ಯಾವುದೇ ಅಡಚಣೆಯಿಲ್ಲದೇ ಮಾಡಲು ಸಹಾಯ ಮಾಡುತ್ತದೆ. ಜಾನ್ ಡಿಯರ್ ಇಂಡಿಯಾದಿಂದಾಗಿ ಕೃಷಿ ಕಾರ್ಯಗಳು ಹಿಂದೆಂದಿಗಿಂತಲೂ ಹೆಚ್ಚು ಸಮರ್ಥ ಅಥವಾ ಲಾಭದಾಯಕವಾಗಿವೆ.

ಜಾನ್ ಡಿಯರ್ ಇಂಡಿಯಾದ PowrReverser ತಂತ್ರಜ್ಞಾನ ಮತ್ತು PTO ಸಿಸ್ಟಮ್ ಕೇವಲ ಹೊಸ ತಂತ್ರಜ್ಞಾನಗಳಷ್ಟೇ ಅಲ್ಲ, ಅವು ಕೃಷಿ ಕಾರ್ಯಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಿಗೆ ಬುನಾದಿಯಾಗಿವೆ. ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತು ಕಾರ್ಯಾಚರಣೆಗಳನ್ನು ಸುಲಭವಾಗಿಸುವ ಮೂಲಕ ಈ ತಂತ್ರಜ್ಞಾನಗಳು ಹೆಚ್ಚಿನ ಕಾರ್ಯಸಾಧನೆ ಮಾಡಲು ರೈತರಿಗೆ ಸಹಾಯ ಮಾಡುತ್ತವೆ, ಹೀಗೆ ಭಾರತೀಯ ಕೃಷಿ ಕ್ಷೇತ್ರದ ಭವಿಷ್ಯ ಇನ್ನಷ್ಟು ಉಜ್ವಲ ಮತ್ತು ಸಮೃದ್ಧವಾಗಲು ದಾರಿ ಮಾಡಿಕೊಟ್ಟಿವೆ. ಜಾನ್ ಡಿಯರ್ ಇಂಡಿಯಾ ಕೃಷಿ ಕ್ರಾಂತಿಯ ಮುಂದಾಳತ್ವ ವಹಿಸುವ ಮೂಲಕ ಸಮರ್ಥನೀಯ ಕೃಷಿ ಅಭ್ಯಾಸಗಳೆಡೆಗಿನ ಪ್ರಯಾಣವು ಮುಂಚೆಗಿಂತಲೂ ಹೆಚ್ಚು ಭರವಸೆಯಿಂದ ತುಂಬಿದೆ.

ಜಾನ್ ಡಿಯರ್ ಇಂಡಿಯಾ ಗೆ ಭೇಟಿ ನೀಡಿ ಮತ್ತು ಇಂದೇ ಬದಲಾವಣೆಯಿಂದ ಕೂಡಿರುವ ಕೃಷಿ ಪ್ರಯಾಣದ ಭಾಗವಾಗಿ. ಜಾನ್ ಡಿಯರ್ ಅನ್ನು ಏಕೆ ಧಾನ್ಯಗಳ ಕಟಾವು ಹಾಗೂ ಇನ್ನೂ ಅನೇಕ ಕೆಲಸಗಳಲ್ಲಿ ಹೊಸತನ ಮತ್ತು ‌ಉತ್ಕೃಷ್ಟತೆ ಪರಿಚಯಿಸಿದ ಭಾರತದ ಅತ್ಯುತ್ತಮ ಟ್ರ್ಯಾಕ್ಟರ್ ಬ್ರ್ಯಾಂಡ್ ಎಂದು ಕೊಂಡಾಡುತ್ತಾರೆ ಎಂಬುದನ್ನು ನೇರವಾಗಿ ತಿಳಿದುಕೊಳ್ಳಿ.

ಸಂಬಂಧಪಟ್ಟ ವಿಡಿಯೋಗಳು: