ಭಾರತದಲ್ಲಿ ಲಭ್ಯವಿರುವ ಜಾನ್ ಡಿಯರ್ ಟ್ರ್ಯಾಕ್ಟರ್ ಮಾಡಲ್ ಗಳ ವ್ಯಾಪಕ ಶ್ರೇಣಿಯನ್ನು ವಿಸ್ತಾರವಾಗಿ ತಿಳಿದುಕೊಳ್ಳುವುದು

John deere power tech tractors

ಕೃಷಿ, ತೋಟಗಾರಿಕೆ ಮೂಲಕ ಪ್ರದೇಶವನ್ನು ಸುಂದರಗೊಳಿಸುವುದು, ಅಥವಾ ಜಮೀನುಗಳ ನಿರ್ವಹಣೆಯ ವಿಷಯ ಬಂದಾಗ, ಸರಿಯಾದ ಉಪಕರಣಗಳು ನಿಮ್ಮ ಬಳಿ ಇರುವುದು ಬಹಳ ಮುಖ್ಯ. ಭಾರತದಲ್ಲಿ ಪ್ರಮುಖ ಟ್ರ್ಯಾಕ್ಟರ್ ತಯಾರಕರಾಗಿರುವ, ಜಾನ್ ಡಿಯರ್ ದೇಶದಾದ್ಯಂತ ರೈತರ, ತೋಟಗಾರಿಕೆ ಮೂಲಕ ಪ್ರದೇಶವನ್ನು ಸುಂದರಗೊಳಿಸುವವರ, ಮತ್ತು ಜಮೀನು ನಿರ್ವಹಣೆ ನೋಡಿಕೊಳ್ಳುವವರ ವೈವಿಧ್ಯಪೂರ್ಣ ಅವಶ್ಯಕತೆಗಳನ್ನು ಅರ್ಥಮಾಡಿಕೊಂಡಿದೆ. ವಿವಿಧ ಕೆಲಸಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಮಾರ್ಪಡಿಸಲಾದ ವ್ಯಾಪಕ ಶ್ರೇಣಿಯ ಟ್ರ್ಯಾಕ್ಟರ್ ಮಾಡಲ್ ಗಳೊಂದಿಗೆ ಜಾನ್ ಡಿಯರ್ ವಿಶ್ವಾಸಾರ್ಹತೆ, ಕಾರ್ಯಕ್ಷಮತೆ ಮತ್ತು ಹೊಸತನಕ್ಕೆ ಹಿಡಿದ ಕನ್ನಡಿಯಾಗಿದೆ.

ಭಾರತದಲ್ಲಿ ಲಭ್ಯವಿರುವ ಜಾನ್ ಡಿಯರ್ ಟ್ರ್ಯಾಕ್ಟರ್ ಮಾಡಲ್ ಗಳ ವೈವಿಧ್ಯಪೂರ್ಣ ಸಮೂಹವನ್ನು ಇನ್ನಷ್ಟು ವಿವರವಾಗಿ ನೋಡೋಣ, ಇವುಗಳಲ್ಲಿ ಪ್ರತಿಯೊಂದನ್ನು ನಿರ್ದಿಷ್ಟ ಅವಶ್ಯಕತೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ:

D ಶ್ರೇಣಿಯ ಟ್ರ್ಯಾಕ್ಟರ್ ಗಳು

ಜಾನ್ ಡಿಯರ್ ನ 5D ಶ್ರೇಣಿಯ ಟ್ರ್ಯಾಕ್ಟರ್ ಗಳು ಬಹುಕಾರ್ಯೋಪಯೋಗಿತ್ವ ಮತ್ತು ಸಾಮರ್ಥ್ಯಕ್ಕೆ ಪ್ರಮಾಣವಾಗಿವೆ. 36 HP ನಿಂದ 50 HP ವರೆಗಿನ ಸಾಮರ್ಥ್ಯವುಳ್ಳ ಈ ಟ್ರ್ಯಾಕ್ಟರ್ ಗಳನ್ನು ಕೃಷಿ ಸಂಬಂಧಿತ ಕೆಲಸಗಳಲ್ಲಿ ಮತ್ತು ಭಾರೀ ಪ್ರಮಾಣದ ಎಳೆಯುವ ಕೆಲಸಗಳಲ್ಲಿ ಇವೆರಡರಲ್ಲೂ ಅತ್ಯುತ್ತಮವಾಗಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ.

5D ಶ್ರೇಣಿಯ ಟ್ರ್ಯಾಕ್ಟರ್ ಗಳು ಹೆಚ್ಚು ಅಗಲವಾದ ಆಪರೇಟರ್ ಸ್ಟೇಷನ್ , ನ್ಯೂಟ್ರಲ್ ಸೇಫ್ಟಿ ಸ್ವಿಚ್, ಮತ್ತು ಕಡಿಮೆ ಮೆಂಟೆನನ್ಸ್ ವೆಚ್ಚಗಳಂತಹ ಲಕ್ಷಣಗಳೊಂದಿಗೆ ಅಧಿಕ ಪ್ರಮಾಣದ ಆರಾಮದಾಯಕತೆ ನೀಡುವಲ್ಲಿ ಮುಂದು. 5D ಶ್ರೇಣಿಯೊಳಗೆ, ಗ್ರಾಹಕರು PowerPro ಮಾಡಲ್ ಗಳು ಮತ್ತು Value+++ ಮಾಡಲ್ ಗಳಿಂದ ಆಯ್ಕೆ ಮಾಡಬಹುದು, ಈ ಮೂಲಕ ಪ್ರತಿಯೊಂದು ಅವಶ್ಯಕತೆಗೆ ತಕ್ಕ ಟ್ರ್ಯಾಕ್ಟರ್ ಇರುವುದನ್ನು ಖಚಿತಪಡಿಸುತ್ತದೆ.

ಕೆಲವು ಶ್ರೇಷ್ಠ ಮಾಡಲ್ ಗಳತ್ತ ದೃಷ್ಟಿ ಹಾಯಿಸೋಣ:

  • 5036 - 36 HP ಟ್ರ್ಯಾಕ್ಟರ್ 2WD ಮತ್ತು ಸ್ಟ್ಯಾಂಡರ್ಡ್ ಕ್ಲಚ್ ಆಯ್ಕೆಗಳನ್ನು ಹೊಂದಿರುತ್ತದೆ.
  • 5105 - 2WD ಮತ್ತು 4WD ಎರಡೂ ವೇರಿಯಂಟ್ ಗಳಲ್ಲಿ, 40 HP ಮತ್ತು ಡ್ಯುಯಲ್ ಕ್ಲಚ್ ಆಯ್ಕೆಗಳೊಂದಿಗೆ ಲಭ್ಯವಿದೆ.
  • 5205 - 48 HP ನೀಡುತ್ತದೆ, ಈ 2WD ಟ್ರ್ಯಾಕ್ಟರ್ ಸ್ಟ್ಯಾಂಡರ್ಡ್ ಮತ್ತು ಡ್ಯುಯಲ್ ಕ್ಲಚ್ ಆಯ್ಕೆಗಳನ್ನು ಒದಗಿಸುತ್ತದೆ.
  • 5039D PowerPro - ಸಮರ್ಥ ಕೃಷಿಗಾಗಿ ಬಹುಕಾರ್ಯೋಪಯೋಗಿತ್ವದ 2WD ಟ್ರ್ಯಾಕ್ಟರ್ 41 HP ಎಂಜಿನ್ ಮತ್ತು 8+4 ಕಾಲರ್ ಶಿಫ್ಟ್ ಟ್ರಾನ್ಸ್ ಮಿಶನ್ ಹೊಂದಿದೆ.
  • 5042D PowerPro - ವಿಸ್ತರಿಸಿದ ಉತ್ಪಾದಕತೆಗಾಗಿ 44 HP ಎಂಜಿನ್ ಮತ್ತು ಸ್ಟ್ಯಾಂಡರ್ಡ್/ಡ್ಯುಯಲ್/ರಿವರ್ಸ್ PTO ಆಯ್ಕೆಗಳನ್ನು ಹೊಂದಿರುವ ಶಕ್ತಿಶಾಲಿ 2WD ಟ್ರ್ಯಾಕ್ಟರ್.
  • 5045D PowerPro - ಇದೊಂದು ವಿಶ್ವಾಸಾರ್ಹ 2WD ಮತ್ತು 4WD ಟ್ರ್ಯಾಕ್ಟರ್ ಆಗಿದ್ದು, ಸರಾಗವಾದ ಕಾರ್ಯಾಚರಣೆಗೆ 46 HP ಎಂಜಿನ್ ಮತ್ತು ಸಿಂಗಲ್/ಡ್ಯುಯಲ್ ಕ್ಲಚ್ ಆಯ್ಕೆಗಳನ್ನು ಒದಗಿಸುತ್ತದೆ.
  • 5045D GearPro - ಇದೊಂದು ಶಕ್ತಿಶಾಲಿ 46 HP ಕೃಷಿ ಟ್ರ್ಯಾಕ್ಟರ್ ಆಗಿದ್ದು, ಎಲ್ಲ ಕೃಷಿ ಕೆಲಸಗಳಿಗಾಗಿ ಅಧಿಕ ಬ್ಯಾಕ್ ಅಪ್ ಟೋರ್ಕ್ ಮತ್ತು ತ್ವರಿತ ಉತ್ಪಾದಕತೆ ಒದಗಿಸುತ್ತದೆ. 
  • 5050D GearPro - ಅಧಿಕ ಕಾರ್ಯಕ್ಷಮತೆಯ 2WD ಮತ್ತು 4WD ಟ್ರ್ಯಾಕ್ಟರ್ ಅತ್ಯುತ್ಕೃಷ್ಟ ಸಾಮರ್ಥ್ಯಕ್ಕಾಗಿ 50 HP ಎಂಜಿನ್ ಮತ್ತು ಕಾಲರ್ ಶಿಫ್ಟ್ ಟ್ರಾನ್ಸ್ ಮಿಶನ್ ಹೊಂದಿದೆ.

5D ಶ್ರೇಣಿಯಲ್ಲಿ ಬರುವ ಎಲ್ಲ ಟ್ರ್ಯಾಕ್ಟರ್ ಗಳಲ್ಲಿರುವ ಪ್ರಮಾಣಿತ ಲಕ್ಷಣಗಳು ಗೇರ್ ಬಾಕ್ಸ್ ನಲ್ಲಿ ಟಾಪ್ ಶಾಫ್ಟ್ ಲುಬ್ರಿಕೇಶನ್, ಪಿಸ್ಟನ್ ಸ್ಪ್ರೇ ಕೂಲಿಂಗ್ ಜೆಟ್, ಮತ್ತು ಮೆಟಲ್ ಫೇಸ್ ಸೀಲ್ ನೊಂದಿಗೆ ಹಿಂದಿನ ಆಯಿಲ್ ಆಕ್ಸೆಲ್ ಒಳಗೊಂಡಿದ್ದು, ಹೆಚ್ಚು ಬಾಳಿಕೆ ಮತ್ತು ಕಡಿಮೆ ಮೆಂಟೆನನ್ಸ್ ಖಚಿತಪಡಿಸುತ್ತವೆ.

E ಶ್ರೇಣಿಯ ಟ್ರ್ಯಾಕ್ಟರ್ ಗಳು

ದೊಡ್ಡ ಪ್ರಮಾಣದ ಕೆಲಸಗಳಿಗಾಗಿ ಮತ್ತು ದೊಡ್ಡ ಇಂಪ್ಲಿಮೆಂಟ್ ಗಳನ್ನು ಸುಲಭವಾಗಿ ನಿರ್ವಹಿಸಲು, ಜಾನ್ ಡಿಯರ್ ನೀಡುತ್ತಿದೆ 5E ಶ್ರೇಣಿಯ ಟ್ರ್ಯಾಕ್ಟರ್ ಗಳು. 50 HP ನಿಂದ 74 HP ವರೆಗಿನ ಸಾಮರ್ಥ್ಯವುಳ್ಳ ಈ ಟ್ರ್ಯಾಕ್ಟರ್ ಗಳನ್ನು ಕೃಷಿ ಸಂಬಂಧಿತ ಅತ್ಯಂತ ಕಠಿಣ ಕೆಲಸಗಳನ್ನು ದಕ್ಷತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ನಿಭಾಯಿಸಲು ವಿನ್ಯಾಸಗೊಳಿಸಲಾಗಿದೆ.

ಪ್ರಮುಖ್ಯತೆ ಪಡೆದಿರುವ ಮಾಡಲ್ ಗಳು ಇವುಗಳನ್ನು ಒಳಗೊಂಡಿರುತ್ತವೆ:

  • 5210 GearPro - ಒಂದು ಬಹುಕಾರ್ಯೋಪಯೋಗಿತ್ವದ 50 HP ಟ್ರ್ಯಾಕ್ಟರ್ ಆಗಿದ್ದು, 2WD ಮತ್ತು 4WD ಎರಡೂ ವೇರಿಯಂಟ್ ಗಳಲ್ಲಿ ಲಭ್ಯವಿದೆ.
  • 5310 PowerTech ™ - 57 HP ಹೊಂದಿರುವ ಈ ಟ್ರ್ಯಾಕ್ಟರ್ ವಿಭಿನ್ನ ಅವಶ್ಯಕತೆಗಳಿಗೆ ತಕ್ಕಂತೆ ವಿವಿಧ ಟ್ರಾನ್ಸ್ ಮಿಶನ್ ಆಯ್ಕೆಗಳನ್ನು ನೀಡುತ್ತದೆ.
  • 5405 PowerTech ™ - ಈ ಶಕ್ತಿಶಾಲಿ ಮತ್ತು ಬಹುಕಾರ್ಯೋಪಯೋಗಿ 63 HP ಟ್ರ್ಯಾಕ್ಟರ್ ನಲ್ಲಿ ದಕ್ಷ ಇಂಧನ ಬಳಕೆ ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ತಕ್ಕಂತೆ ನಿಯಂತ್ರಿಸುವುದಕ್ಕಾಗಿ ಆಧುನಿಕ ತಂತ್ರಜ್ಞಾನವಿದೆ.
  • 5075 PowerTech ™ - ಈ ಶಕ್ತಿಶಾಲಿ 74 HP ಟ್ರ್ಯಾಕ್ಟರ್ ಹೆಚ್ಚಿನ ಕಾರ್ಯಕ್ಷಮತೆಗಾಗಿ ಡ್ಯುಯಲ್ ಕ್ಲಚ್ ಆಯ್ಕೆಗಳನ್ನು ಹೊಂದಿದೆ.

ಸ್ಪೆಶಾಲ್ಟಿ ಟ್ರ್ಯಾಕ್ಟರ್ ಗಳು

ಜಾನ್ ಡಿಯರ್ ನ ಸ್ಪೆಶಾಲ್ಟಿ ಟ್ರ್ಯಾಕ್ಟರ್ ಗಳು, 28 HP ನಿಂದ 35 HP ಸಾಮರ್ಥ್ಯ ಹೊಂದಿದ್ದು, ಹಣ್ಣಿನ ತೋಟದ ಕೆಲಸಗಳು, ಅಂತರ್ ಕೃಷಿ ಕಾರ್ಯಗಳು, ಮತ್ತು ಕೆಸರು ಹದ ಮಾಡುವ ಕಾರ್ಯಗಳಂತಹ ಸ್ಥಳಾವಕಾಶ ಕಡಿಮೆ ಇರುವ ಜಾಗಗಳಲ್ಲಿನ ಕೆಲಸಗಳಿಗಾಗಿ ನೈಪುಣ್ಯದಿಂದ ವಿನ್ಯಾಸಗೊಳಿಸಲಾಗಿವೆ. ಈ ಟ್ರ್ಯಾಕ್ಟರ್ ಗಳು ವಿಶೇಷ ಕೃಷಿ ಕೆಲಸಗಳಲ್ಲಿ ಆರಾಮದಾಯಕತೆಗೆ ಆದ್ಯತೆ ನೀಡುತ್ತವೆಯಲ್ಲದೇ ಸಾಕಷ್ಟು ಅನುಕೂಲ ಒದಗಿಸುತ್ತವೆ.

ಅಸಾಧಾರಣ ಮಾಡಲ್ ಗಳು ಇವುಗಳನ್ನು ಒಳಗೊಂಡಿರುತ್ತವೆ:

  • 3028EN - ಇದು ಡ್ಯುಯಲ್ ಕ್ಲಚ್ ಆಯ್ಕೆಗಳನ್ನು ಹೊಂದಿರುವ 28 HP 4WD ಟ್ರ್ಯಾಕ್ಟರ್ ಆಗಿದೆ.
  • 3036EN - ಸ್ಟ್ಯಾಂಡರ್ಡ್ ಮತ್ತು ಅಗಲವಾದ ಟಯರ್ ಎರಡೂ ವೇರಿಯಂಟ್ ಗಳಲ್ಲಿ ಲಭ್ಯವಿರುವ ಈ 35 HP ಟ್ರ್ಯಾಕ್ಟರ್ ಸಾಟಿಯಿಲ್ಲದ ಚಲನೆ ಮತ್ತು ಸಾಮರ್ಥ್ಯ ಒದಗಿಸುತ್ತದೆ.

ಜಾನ್ ಡಿಯರ್ ನ ವ್ಯಾಪಕ ಶ್ರೇಣಿಯ ಟ್ರ್ಯಾಕ್ಟರ್ ಮಾಡಲ್ ಗಳೊಂದಿಗೆ ಭಾರತದ ರೈತರು ಅವರ ನಿರ್ದಿಷ್ಟ ಅವಶ್ಯಕತೆಗಳಿಗೆ ತಕ್ಕಂತೆ ಮಾರ್ಪಡಿಸಲಾದ ಉಪಕರಣಗಳನ್ನು ಉಪಯೋಗಿಸುವುದು ಸಾಧ್ಯವಿದೆ. ಬಹುಕಾರ್ಯೋಪಯೋಗಿತ್ವ, ಶಕ್ತಿ ಇರಲಿ, ಅಥವಾ ವಿಶೇಷ ಕಾರ್ಯನಿರ್ವಹಣಾ ಸಾಮರ್ಥ್ಯವಿರಲಿ, ಜಾನ್ ಡಿಯರ್ ಟ್ರ್ಯಾಕ್ಟರ್ ಗಳು ಗದ್ದೆಯಲ್ಲಿ ಸಾಟಿಯಿಲ್ಲದ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆ ನೀಡುತ್ತವೆ. ಆದ್ದರಿಂದ, ನೀವು ಸಣ್ಣ ಪ್ರಮಾಣದ ರೈತರಾಗಿರಲಿ ಅಥವಾ ದೊಡ್ಡ ಪ್ರಮಾಣದ ಕೃಷಿ ಕಾರ್ಯಾಚರಣೆಳನ್ನು ನಿರ್ವಹಿಸುತ್ತಿರಲಿ, ನಿಮ್ಮ ಕೃಷಿ ಕೆಲಸದ ಅನುಭವವನ್ನು ಇನ್ನಷ್ಟು ಸುಖಮಯವಾಗಿಸಲು ಜಾನ್ ಡಿಯರ್ ಟ್ರ್ಯಾಕ್ಟರ್ ಸದಾ ಸಿದ್ಧವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಭಾರತದಲ್ಲಿ ಲಭ್ಯವಿರುವ ಜಾನ್ ಡಿಯರ್ ಟ್ರ್ಯಾಕ್ಟರ್ ಗಳ ಸಂಪೂರ್ಣ ಶ್ರೇಣಿಯ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು, ಇಲ್ಲಿ ಭೇಟಿ ನೀಡಿ ಜಾನ್ ಡಿಯರ್ ಇಂಡಿಯಾ ವೆಬ್ ಸೈಟ್.