ಆಟೋಟ್ರಾಕ್ಸಾರ್ವತ್ರಿಕ 300 ಸ್ಟೇರಿಂಗ್ ಕಿಟ್ ಒಂದು ಮೊಬೈಲ್ ಮಾರ್ಗದರ್ಶಕ ಪರಿಹಾರವಾಗಿದ್ದು ಬೆಳೆ ಬೆಳೆಯುವ ಅವಧಿಯುದ್ದಕ್ಕೂ ಕೃಷಿ ಕಾರ್ಯಗಳಲ್ಲಿ ಹೆಚ್ಚುವರಿ ಉತ್ಪಾದಕತೆಯನ್ನು ನೀಡುತ್ತದೆ.
ಆಟೋಟ್ರಾಕ್ಸಾರ್ವತ್ರಿಕ 300 ಗ್ರೀನ್ಸ್ಟಾರ್ ™ 2 1800 ಮತ್ತು 2600 ಪ್ರದರ್ಶನ ಗಳು, ಗ್ರೀನ್ಸ್ಟಾರ್ 3 2630, ಮತ್ತು Gen 4 4240 ಮತ್ತು 4640 ಸಾರ್ವತ್ರಿಕ ಪ್ರದರ್ಶನ ಗಳಿಗೆ ಹೊಂದಿಕೊಳ್ಳುತ್ತದೆ. ಇದು ಸ್ಟಾರ್ಫೈರ್ ™ 6000 ಮತ್ತು ಸ್ಟಾರ್ಫೈರ್ 3000 ರಿಸೀವರ್ಗ ಳೊಂದಿಗೆ ಹೊಂದಿಕೊಳ್ಳುತ್ತದೆ. ಆಟೋಟ್ರಾಕ್ ಸಾರ್ವತ್ರಿಕ 300 ಒರಿಜಿನಲ್ ಗ್ರೀನ್ಸ್ಟಾರ್ ಪ್ರದರ್ಶನ ಜೊತೆ ಹೊಂದಿಕೊಳ್ಳುವುದಿಲ್ಲ.
ಆಟೋಟ್ರಾಕ್ ಸಾರ್ವತ್ರಿಕ 300 ಅನ್ನು 600 ಕ್ಕೂ ಹೆಚ್ಚು ವಿಭಿನ್ನ ಉಪಕರಣಗಳ ಜೊತೆ ಉಪಯೋಗಿಸಲು ಅನುಮೋದಿಸಲಾಗಿದೆ ಮತ್ತು ಉತ್ತಮ ಮೆಕ್ಯಾನಿಕಲ್ ಕಂಡಿಷನ್ ನಲ್ಲಿರುವ ಸ್ಟೇರಿಂಗ್ ವ್ಯವಸ್ಥೆಗಳನ್ನು ಹೊಂದಿದ ಕೃಷಿ ವಾಹನಗಳೊಂದಿಗೆ ಹೊಂದಿಕೊಳ್ಳುತ್ತದೆ.
ಆಟೋಟ್ರಾಕ್ ಸಾರ್ವತ್ರಿಕ 200 ಹೋಲಿಕೆಯಲ್ಲಿ ಆಟೋಟ್ರಾಕ್ಸಾರ್ವತ್ರಿಕ 300 ನ ಪ್ರಯೋಜನಗಳು ಇವುಗಳನ್ನು ಒಳಗೊಂಡಿರುತ್ತವೆ:
ಪೋರ್ಟೆಬಲ್ ಆಟೋಟ್ರಾಕ್&ಟ್ರೇಡ್; ಸಾರ್ವತ್ರಿಕ 300 ಸ್ಟೇರಿಂಗ್ ಕಿಟ್ ನೊಂದಿಗೆ, ಉತ್ಪಾದಕರು ಬೆಳೆ ಬೆಳೆಯುವ ಅವಧಿಯುದ್ದಕ್ಕೂ ಹಲವಾರು ವಿಭಿನ್ನ ಮಷೀನ್ ಗಳಲ್ಲಿ ಆಟೋಟ್ರಾಕ್ನ ಲ್ಲಿ ತಮ್ಮ ಹೂಡಿಕೆಯಿಂದ ಹೆಚ್ಚು ಲಾಭ ಪಡೆಯಬಹುದಲ್ಲದೇ ಈ ಹೂಡಿಕೆಯ ಫಲವಾಗಿ ಇಡೀ ವರ್ಷ ಲಾಭ ಗಳಿಸಬಹುದು. ನವೀಕರಿಸಿದ ಕ್ಯಾಲಿಬ್ರೇಶನ್ ಕಾರ್ಯವಿಧಾನದಿಂದಾಗಿ ಮಷೀನ್ ನಿಂದ ಮಷೀನ್ ಗೆ ಸ್ಥಳಾಂತರವಾಗುವುದು ಹೆಚ್ಚು ಸುಲಭವಾಗುತ್ತದೆ ಮತ್ತು ಇದರಿಂದ ಅನೇಕ ಸ್ಟೇರಿಂಗ್ ಸೆಟಿಂಗ್ ಅಡ್ಜಸ್ಟ್ ಮೆಂಟ್ ಗಳನ್ನು ಮಾಡುವ ಅಗತ್ಯವಿರುವುದಿಲ್ಲ.
ಗಮನಿಸಿ: ಆಟೋಟ್ರಾಕ್&ಟ್ರೇಡ್; ಸಾರ್ವತ್ರಿಕ 300 ಭಿನ್ನ ರೀತಿಯ ಅಲ್ಗಾರಿದಮ್ ಹೊಂದಿದೆ ಮತ್ತು ಅದಕ್ಕೆ ಕ್ಯಾಲಿಬ್ರೇಶನ್ ಅಗತ್ಯವಿರುತ್ತದೆ. ಆಟೋಟ್ರಾಕ್&ಟ್ರೇಡ್; ಸಾರ್ವತ್ರಿಕ l 200 ನಲ್ಲಿರುವ ಅದೇ ಸೆಟಿಂಗ್ ಗಳನ್ನು ನಮೂದಿಸುವುದರಿಂದ ಕಳಪೆ ಮಟ್ಟದ ಕಾರ್ಯಕ್ಷಮತೆ ದೊರೆಯಬಹುದು.
ಉಪಕರಣ ದೊಡ್ಡದಾದಂತೆ ಮತ್ತು ಮಾರ್ಜಿನ್ ಗಳು ಬಿಗಿಯಾದಂತೆ, ಗದ್ದೆಯಲ್ಲಿನ ಕಾರ್ಯಗಳ ಮತ್ತು ಇನ್ಪುಟ್ ಪ್ಲೇಸ್ಮೆಂಟ್ ನಿಖರತೆ ಬಹಳ ಮುಖ್ಯವಾಗುತ್ತದೆ.
ಗದ್ದೆಯಲ್ಲಿ ಚಲಿಸುವಾಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಮರಳಿ ಬರುವಾಗ ನಿಖರತೆ ಇರಬೇಕಾದುದು ಬಹಳ ಮುಖ್ಯ. ಪಾಸ್-ನಿಂದ-ಪಾಸ್ ನಿಖರತೆ ಎಂದರೆ ಪ್ಲಾಂಟರ್ ಗೆಸ್ ರೋಗಳು ನಿಖರವಾಗಿರುತ್ತವೆ ಮತ್ತು ಅನಂತರ ಸೃಷ್ಟಿಯಾಗುವ ಸಾಲುಗಳಿಂದಾಗಿ ಬೆಳೆಗೆ ಹಾನಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ದೀರ್ಘಕಾಲದ ಕೆಲಸದ ವೇಳೆ ರಿಸೀವರ್ ಅದರ ಸ್ಥಾನವನ್ನು ಎಷ್ಟು ನಿಖರವಾಗಿ ಲೆಕ್ಕ ಹಾಕುತ್ತದೆ ಎಂದು ಪುನರಾವರ್ತನೆಯು ನಿರ್ಧರಿಸುತ್ತದೆ.
ಆಟೋಟ್ರಾಕ್ ಸಹಾಯದಿಂದ ಕೆಲಸ ಮಾಡುವ ಸ್ಟೇರಿಂಗ್ ವ್ಯವಸ್ಥೆಯು ನಿರಂತರವಾದ ನಿಖರತೆ ಮತ್ತು ದಕ್ಷತೆಯನ್ನು ಕಾಪಾಡುವ ಮೂಲಕ ಆಪರೇಟರ್ ಉತ್ಪಾದಕತೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಆಪರೇಟರ್ ಗಳು ತೋಟದಲ್ಲಿದ್ದಾಗ ಹೆಚ್ಚು ಎಚ್ಚರಿಕೆಯಿಂದ ಇರುತ್ತಾರೆ ಮತ್ತು ಇಂಪ್ಲಿಮೆಂಟ್ ಸೆಟಿಂಗ್ ಗಳತ್ತ ಮತ್ತು ಬದಲಾಗುವ ತೋಟದ ಸ್ಥಿತಿಗಳತ್ತ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಆಟೋಟ್ರಾಕ್ಸ ಹಾಯದಿಂದ ಆಪರೇಟರ್ ಗಳು ಸಂಜೆ ಹೊತ್ತು ಮಾತ್ರವಲ್ಲದೇ ಮಳೆಯಲ್ಲಿ, ಧೂಳಿನಲ್ಲಿ ಅಥವಾ ಮಂಜು ಕವಿದ ಪರಿಸ್ಥಿತಿಗಳಲ್ಲಿ ಸಮಾನ ಅಂತರಗಳಲ್ಲಿ ಸಾಲುಗಳನ್ನು ಆತ್ಮವಿಶ್ವಾಸದೊಂದಿಗೆ ಸೃಷ್ಟಿಸುವುದು ಸಾಧ್ಯವಾಗುತ್ತದೆ.
ಆಪರೇಟರ್ ಇಂಪ್ಲಿಮೆಂಟ್ ಕೆಲಸಗಳತ್ತ ಗಮನ ಕೇಂದ್ರೀಕರಿಸಲು ಸಮಯವಿರುವುದರಿಂದ ಆಟೋಟ್ರಾಕ್ ಆಪರೇಟರ್ ಗೆ ಹೆಚ್ಚು ಆರಾಮವಾಗಿ ಕೆಲಸ ಮಾಡಲು ಸಾಧ್ಯವಾಗುವಂತೆ ಮಾಡುತದೆ.
ಟ್ರ್ಯಾಕ್ಟರ್ ಗಳು ಮತ್ತು ತೋಟದ ಉಪಕರಣಗಳು ದೊಡ್ಡದು ಮತ್ತು ಭಾರವಾದಂತೆ, ಮಣ್ಣಿನ ಸಾಂದ್ರತೆಯ ಬಗ್ಗೆ ಕಳವಳ ಹೆಚ್ಚಾಗುತ್ತದೆ. ಭಾರವಾದ ಉಪಕರಣ ಮತ್ತು ಉಳುಮೆಯ ಇಂಪ್ಲಿಮೆಂಟ್ ಗಳು ಮಣ್ಣಿಗೆ ಹಾನಿಯನ್ನುಂಟು ಮಾಡಬಹುದು. ಮಣ್ಣಿನ ಗುಣ ಮುಖ್ಯವಾಗಿರುತ್ತದೆ ಏಕೆಂದರೆ ಅದು ಸಸ್ಯದ ಬೇರುಗಳ ಚಟುವಟಿಕೆಗೆ ಅವಶ್ಯಕವಾದ ನೀರನ್ನು, ಪೋಷಕಾಂಶಗಳನ್ನು, ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವ ಮತ್ತು ಅಗತ್ಯಕ್ಕೆ ತಕ್ಕಂತೆ ಉಪಯೋಗಿಸುವ ಸಾಮರ್ಥ್ಯ ಹೊಂದಿರುತ್ತದೆ.
ಆಟೋಟ್ರಾಕ್ ಉಪಯೋಗಿಸುವ ಮೂಲಕ, ಆಪರೇಟರ್ ಗಳು ಎಷ್ಟು ಸಲ ಬಿತ್ತನೆ ಸಾಲುಗಳನ್ನು (ಪಾಸ್ ಗಳು) ಹಾಕಬೇಕು ಎಂದು ನಿರ್ಧರಿಸಬಹುದು ಮತ್ತು ಮಣ್ಣಿನ ಸಾಂದ್ರತೆಯನ್ನು ಕಡಿಮೆ ಮಾಡಬಹುದು. ಹೆಚ್ಚುವರಿಯಾಗಿ, ಆಪರೇಟರ್ ಕೆಲವು ಸಾಲುಗಳ ನಡುವೆ ಮಾತ್ರ ಕೃಷಿ ಉಪಕರಣ ಹಾಯುವಂತೆ ಮಾಡಬಹುದು ಮತ್ತು ಸಾಲುಗಳನ್ನು ಹಾಕಿದ ಪ್ರದೇಶದಲ್ಲಿ ಸಾಂದ್ರತೆಯನ್ನು ತಪ್ಪಿಸಬಹುದು.
ಆಟೋಟ್ರಾಕ್ಸ ಹಾಯದಿಂದ ಉತ್ಪಾದಕರು ತೋಟದ ಸಣ್ಣ ಕ್ಷೇತ್ರದ ಅದೇ ಬಿತ್ತನೆ ಸಾಲುಗಳನ್ನು (ಟ್ರಾಫಿಕ್ ಲೇನ್ಸ್) ಪ್ರತಿ ವರ್ಷ ಉಪಯೋಗಿಸುವುದು ಸಾಧ್ಯವಾಗುತ್ತದೆ ಮತ್ತು ತೋಟದ ಹೆಚ್ಚು ಭಾಗದಲ್ಲಿ ಚಕ್ರಗಳು (ವ್ಹೀಲ್) ಹಾಯದಂತೆ ಮಾಡಬಹುದು. ನಿರ್ದಿಷ್ಟ ಸಾಲುಗಳಲ್ಲಿ ಮಾತ್ರ ಉಪಕರಣ ಹಾಯುವಂತೆ ಮಾಡುವುದರಿಂದ ಟ್ರ್ಯಾಕ್ಟರ್ ಬಳಕೆಗೆ ಹೆಚ್ಚು ದೃಢವಾದ ಮಣ್ಣಿನ ಮೇಲ್ಮೈ ಸಿಗುತ್ತದೆ.
ತೋಟದ ಕೆಲಸಗಳ ವೇಳೆ ಆಟೋಟ್ರಾಕ್ಉ ಪಯೋಗಿಸದಿದ್ದರೆ, ಬಿತ್ತನೆ ಸಾಲುಗಳು ಒಂದರ ಮೇಲೊಂದು ಹಾದುಹೋಗುವ ಸಾಧ್ಯತೆ ಇರುತ್ತದೆ. ಕಳಪೆ ಸ್ಥಿತಿಗಳಡಿಯಲ್ಲಿ ತೋಟದಲ್ಲಿ ಹಾಕಿದ ಪ್ರತಿಯೊಂದು ಬಿತ್ತನೆ ಸಾಲು ಮಣ್ಣಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಬಹುದು.
ಆಟೋಟ್ರಾಕ್&ಟ್ರೇಡ್; ಮಾರ್ಗದರ್ಶನ ಸ್ಟೀರಿಂಗ್ ವ್ಯವಸ್ಥೆ ಸಹಾಯದಿಂದ ಆಪರೇಟರ್ ಗಳು ಟ್ರ್ಯಾಮ್ ಲೈನ್ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸಬಹುದು ಮತ್ತು ಮಣ್ಣಿನ ಸಾಂದ್ರತೆ ಕಡಿಮೆ ಮಾಡಬಹುದು. ಹೆಚ್ಚುವರಿಯಾಗಿ, ಆಟೋಟ್ರಾಕ್ ಸಹಾಯದಿಂದ ಮಷೀನ್ ಆಪರೇಟರ್ ಸ್ಟ್ರೈಟ್ ಟ್ರ್ಯಾಕ್, AB ತಿರುವುಗಳು, ಹೊಂದಿಕೊಳ್ಳುವ ತಿರುವುಗಳು, ಸರ್ಕಲ್ ಟ್ರ್ಯಾಕ್, ಬೌಂಡರಿ ಫಿಲ್, ಮಷೀನ್ ಬಳಕೆ (ಆಕ್ಸೆಸ್), ಮತ್ತು ಸ್ವಾಪ್ ಟ್ರ್ಯಾಕ್ ಒಳಗೊಂಡು ವಿವಿಧ ಪ್ರಕಾರದ ಮಾರ್ಗದರ್ಶಕ ವಿಧಾನಗಳಿಂದ ಆಯ್ಕೆ ಮಾಡಬಹುದು. ಈ ಟ್ರ್ಯಾಕಿಂಗ್ ಆಯ್ಕೆಗಳು ತೋಟಕ್ಕೆ ಹೆಚ್ಚು ಸೂಕ್ತವಾದ ಟ್ರ್ಯಾಕ್ ಅನ್ನು ಆಯ್ಕೆ ಮಾಡಲು ಮತ್ತು ತೋಟವನ್ನು ಆವರಿಸಲು ಅಗತ್ಯವಿರುವ ಬಿತ್ತನೆ ಸಾಲುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸ್ಥಿತಿಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತವೆ.
ಸ್ಟ್ರೈಟ್ ಟ್ರ್ಯಾಕ್ ಉಪಯೋಗಿಸುವುದನ್ನು ಅಸಾಧ್ಯವಾಗಿಸುವ (ಉಬ್ಬು ತಗ್ಗುಗಳಿರುವ ಗುಡ್ಡಗಳು ಅಥವಾ ಎತ್ತರದ ಪ್ರದೇಶಗಳು) ಜಮೀನಿನಲ್ಲಿ -ಬಾಗಿದ ಮಾರ್ಗದರ್ಶನ ರೇಖೆ ಗಳನ್ನು ತಾನಾಗಿಯೇ ತಿರುಗಿಸುವ ಮೂಲಕ ಕರ್ವ್ ಟ್ರ್ಯಾಕ್ ವಿಧಾನವು ಆಪರೇಟರ್ ಗಳಿಗೆ ಸಹಾಯ ಮಾಡುತ್ತದೆ.
ಕರ್ವ್ ಟ್ರ್ಯಾಕ್ ನೊಂದಿಗೆ ಓಡಿಸುವಾಗ ಈ ಮೂಲ ಸಿದ್ಧಾಂತಗಳನ್ನು ನೆನಪಿಟ್ಟುಕೊಳ್ಳಿ:
ಸರಳ ತಿರುವು | |
S-ತಿರುವು | |
ಬಾಕ್ಸ್ಡ್ | |
ರೇಸ್ ಟ್ರ್ಯಾಕ್ | |
ಸುರುಳಿಯಂತಹ (ಸ್ಪೈರಲ್) | |
ವೃತ್ತಾಕಾರದ (ಸರ್ಕಲ್) | |
ಸೃಷ್ಟಿಸಬೇಕಾದ ಪ್ರಕಾರದ ತಿರುವು ಆಧರಿಸಿ ಎರಡು ವಿಭಿನ್ನ ವಿಧಾನಗಳನ್ನು ಉಪಯೋಗಿಸಬಹುದು: ಹೊಂದಿಕೊಳ್ಳುವ ಅಥವಾ ಅಡಾಪ್ಟಿವ್ ತಿರುವುಗಳು ಅಥವಾ A/B ತಿರುವುಗಳು.
ಹೊಂದಿಕೊಳ್ಳುವ ತಿರುವಿನ ಸಾಲು ಅಥವಾ ಟ್ರ್ಯಾಕ್
ಈ ಟ್ರ್ಯಾಕ್ ಸಹಾಯದಿಂದ ಆಪರೇಟರ್ ತಾವೇ ಸ್ವತಃ ಓಡಿಸುವ ಕರ್ವ್ಡ್ ಗೈಡನ್ಸ್ ಲೈನ್ ಅನ್ನು ದಾಖಲಿಸಬಹುದು. ಗ್ರೀನ್ಸ್ಟಾರ್&ಟ್ರೇಡ್;3 2630 ಡಿಸ್ಪ್ಲೇ ಉಪಯೋಗಿಸುವ ಆಪರೇಟರ್ ಗಳು ಪ್ರತಿ ತೋಟಕ್ಕೆ ವಿವಿಧ ಹೊಂದಿಕೊಳ್ಳುವ ತಿರುವುಗಳನ್ನು ದಾಖಲಿಸುವುದು ಮತ್ತು ಉಪಯೋಗಿಸುವುದು ಸಾಧ್ಯವಾಗುತ್ತದೆ. ಈ ಲಕ್ಷಣವು ಮುಖ್ಯವಾಗಿ ಆಪರೇಟರ್ ಗಳು ಛಾವಣಿಗಳ ಸುತ್ತ ಅಥವಾ ಅಂಕುಡೊಂಕಾದ, ನಿರಂತರವಾಗಿ ಬದಲಾಗುವ ತೋಟಗಳಲ್ಲಿ ಟ್ರ್ಯಾಕ್ಟರ್ ತಿರುಗಿಸುವಾಗ ಪ್ರಯೋಜನಕ್ಕೆ ಬರುತ್ತದೆ. ಹೊಂದಿಕೊಳ್ಳುವ ತಿರುವು ವಿಧಾನ ಅಥವಾ ಮೋಡ್ ಡಾಕ್ಯುಮೆಂಟೇಶನ್ ಅನ್ನು ದಾಖಲೀಕರಸುವ ಅಥವಾ ರೆಕಾರ್ಡಿಂಗ್ ಮಾಡುವ ಮೂಲವಾಗಿ ಆಯ್ಕೆ ಮಾಡಿದಾಗ ಲೈನ್ ಸೆಗ್ಮೆಂಟ್ ಗಳಿಗೆ ಕನೆಕ್ಟ್ ಆಗುವ ಸಾಮರ್ಥ್ಯವನ್ನು ಕೂಡ ಹೊಂದಿರುತ್ತದೆ. ಸೆಲ್ಫ್ ಪ್ರೊಪೆಲ್ಡ್ ಫೋರೇಜ್ ಹಾರ್ವೆಸ್ಟರ್ ಅಥವಾ ಕಂಬೈನ್ ಬಳಸುವ ಆಪರೇಟರ್ ಗಳು ತಮ್ಮ ಹೆಡರ್ ಅನ್ನು ಯಾವುದೇ ಕಾರಣಕ್ಕಾಗಿ ಬೇಗನೇ ಎತ್ತರಿಸಬೇಕಾಗಿದ್ದರೆ ಅವರಿಗೆ ಈ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಶೈಲಿ ಉಪಯುಕ್ತವಾಗಿರಬಹುದು.
A/B ತಿರುವಿನ ಸಾಲು (ಕರ್ವ್ ಟ್ರ್ಯಾಕ್)
ಈ ಟ್ರ್ಯಾಕ್ ಸಹಾಯದಿಂದ ಆಪರೇಟರ್ ತೋಟದಲ್ಲಿ ಎರಡು ತುದಿಗಳೊಂದಿಗೆ (A ಮತ್ತು B) ತಿರುಗಿಕೊಂಡ ಗೆರೆಯನ್ನು ನಿಗದಿಪಡಿಸಹುದು ಹಾಗೂ ಯಾವುದೇ ಒಂದು ದಿಕ್ಕಿನಲ್ಲಿ ಮೊದಲು ಹಾಕಿದ ಟ್ರ್ಯಾಕ್ ಗೆ ಸಮಾನಾಂತರವಾಗಿ ಗೈಡನ್ಸ್ ಲೈನ್ ಗಳನ್ನು ಸೃಷ್ಟಿಸುತ್ತದೆ.
ಟ್ರ್ಯಾಕ್ ಅನ್ನು ನಿಗದಿಪಡಿಸಿದ ನಂತರ, ತೋಟದಲ್ಲಿನ ಎಲ್ಲ ಮುಂದಿನ ಟ್ರ್ಯಾಕ್ ಲೈನ್ ಗಳು ನಿಗದಿತ ಅಂತರ ಹೊಂದಿದ ಟ್ರ್ಯಾಕ್ ನಲ್ಲಿ ಒಂದಕ್ಕೊಂದು ಸಮಾನಾಂತರದಲ್ಲಿ ಸೃಷ್ಟಿಸಲ್ಪಡುತ್ತವೆ.
ಸರ್ಕಲ್ ಟ್ರ್ಯಾಕ್ ಪ್ಯಾರಲಲ್ ಟ್ರ್ಯಾಕಿಂಗ್ ಮೋಡ್ ನಲ್ಲಿ ಲಭ್ಯವಿರುತ್ತದೆ. ಆಟೊಮೆಟಿಕ್ ಗೈಡನ್ಸ್ ನೊಮದಿಗೆ ಸರ್ಕಲ್ ಟ್ರ್ಯಾಕ್ ಉಪಯೊಗಿಸಬೇಕೆಂದರೆ Pivot Pro activation ಅನ್ನು ಖರೀದಿಸಬೇಕು.
GreenStar Basics ಜೊತೆ ಸರ್ಕಲ್ ಟ್ರ್ಯಾಕ್ ಕಾರ್ಯನಿರ್ವಹಣೆಯನ್ನು ಒಳಗೊಂಡಿದ್ದು ಇದರ ಸಹಾಯದಿಂದ ಆಪರೇಟರ್ ಯಾವುದೇ ಅಪ್ ಗ್ರೇಡ್ ಆಕ್ಟಿವೇಶನ್ ಇಲ್ಲದೇ ತಾವೇ ಮಷೀನ್ ಅನ್ನು ಕಾನ್ಸೆಂಟ್ರಿಕ್ ಸರ್ಕಲ್ ಸುತ್ತಲೂ ಓಡಿಸಬಹುದಾಗಿರುತ್ತದೆ. ಮಷೀನ್ ಆಟೊಮೆಟಿಕ್ ಆಗಿ ವೃತ್ತಗಳನ್ನು ಹಾಕುವಂತೆ ಮಾಡಲು ಪಿವಟ್ ಪ್ರೋ ಆಕ್ಟಿವೇಶನ್ ಅನ್ನು GreenStar AutoTrac ನೊಂದಿಗೆ ಸಂಪರ್ಕಿಸಿ.
ಪಿವಟ್ ಪ್ರೋ ಸಮತಟ್ಟಾದ ನೆಲವಿರುವ ತೋಟಗಳಲ್ಲಿ ಬಳಸಲು ಅನುಮೋದನೆ ಪಡೆದಿದೆ ಏಕೆಂದರೆ ಇಳಿಜಾರು ಹೆಚ್ಚಾಂದತೆ ನಿಖರತೆ ಕಡಿಮೆಯಾಗಬಹುದು. ತೋಟದಲ್ಲಿ ಇಳಿಜಾರು ಇದ್ದರೆ, ಸರ್ಕಲ್ ಟ್ರ್ಯಾಕ್ ಸ್ಥಳ ಮತ್ತು ಸೆಂಟರ್ ಪಿವಟ್ ಟವರ್ ಟ್ರ್ಯಾಕ್ ಹೊಂದುವುದಿಲ್ಲ. AutoTrac ಸಮತಟ್ಟಾದ ನೆಲದಲ್ಲಿ ಮಾಡುವ ರೀತಿಯಲ್ಲೇ ವೃತ್ತಗಳ ನಡುವೆ ಅಂತರವನ್ನು ಬಿಡುತ್ತದೆ ಎಂದು ನೆನಪಿಟ್ಟುಕೊಳ್ಳಿ.
ಜಾನ್ ಡಿಯರ್ ಆಕ್ಟಿವ್ ಇಂಪ್ಲಿಮೆಂಟ್ ಗೈಡನ್ಸ್ ವೈಶಿಷ್ಟ್ಯದಂತೆ, ಫಾಲೋ ಟ್ರ್ಯಾಕ್ ಮೋಡ್ ಉಬ್ಬುಗಳು ಅಥವಾ ಅಡೆತಡೆಗಳ ಸುತ್ತಲೂ ಚಲಿಸುವಾಗ ಡ್ರೈವರ್ ಗೆ ಸಹಾಯ ಮಾಡುತ್ತದೆ ಮತ್ತು ಇಂಪ್ಲಿಮೆಂಟ್ ಟ್ರ್ಯಾಕ್ಟರ್ ಹಾಕಿದ ದಾರಿಯನ್ನು ಅನುಸರಿಸುವಂತೆ ಮಾಡುತ್ತದೆ. ಇದರಿಂದ ಬೆಳೆ ಹಾನಿ ಮತ್ತು ಮಣ್ಣಿನ ಸಾಂದ್ರತೆ ಕಡಿಮೆ ಮಾಡಲು ಸಹಾಯವಾಗುತ್ತದೆ.
ಟ್ರ್ಯಾಮ್ ಲೈನ್ ನಿರ್ವಹಣೆಯು ಕೆಲವು ಗೈಡನ್ಸ್ ಲೈನ್ ಗಳನ್ನು ಟ್ರ್ಯಾಮ್ ಲೈನ್ ಗಳಾಗಿ ಸೆಟ್ ಅಪ್ ಮಾಡುವ ಅವಕಾಶ ಒದಗಿಸುತ್ತದೆ. ಆ ಗೆರೆಗಳನ್ನು ಅಥವಾ ಲೈನ್ ಗಳನ್ನು ಗೈಡನ್ಸ್ ಸ್ಕ್ರೀನ್ ನಲ್ಲಿ ಪ್ರತ್ಯೇಕವಾಗಿ ಹೈಲೈಟ್ ಮಾಡಲಾಗುತ್ತದೆ. ಟ್ರ್ಯಾಮ್ ಲೈನ್ ನಿರ್ವಹಣೆಯು ಗ್ರೀನ್ಸ್ಟಾರ್&ಟ್ರೇಡ್;3 2630 ಡಿಸ್ಪ್ಲೇ ನಲ್ಲಿ ಸ್ಟ್ರೈಟ್ ಟ್ರ್ಯಾಕ್ ನಲ್ಲಿ, AB ಕರ್ವ್ ನಲ್ಲಿ, ಮತ್ತು ಸರ್ಕಲ್ ಟ್ರ್ಯಾಕ್ ಮೋಡ್ ಗಳಲ್ಲಿ ಲಭ್ಯವಿರುತ್ತದೆ.
ಪ್ರದರ್ಶನ ನ್ಲಲಿ ಪ್ರತಿಯೊಂದು A-B ಲೈನ್ ಗಾಗಿ ಟ್ರ್ಯಾಮ್ ಲೈನ್ ಗಳನ್ನು ನಿಗದಿಪಡಿಸಬಹುದು ಮತ್ತು ಸಂಗ್ರಹಿಸಬಹುದು. ಈ ಮೂಲಕ ಆಪರೇಟರ್ ನಿಖರವಾದ ಟ್ರ್ಯಾಮ್ ಲೈನ್ ಗಳೊಂದಿಗೆ ತೋಟದಲ್ಲಿ ಸರಿಯಾದ ರೀತಿಯಲ್ಲಿ ಬೀಜ ಬಿತ್ತಲು ಮತ್ತು ಸಸ್ಯ ನೆಡಲು ಸಾಧ್ಯವಾಗುತ್ತದೆ. ಇದು ಸಿಂಡಣೆಯಂತಹ ಎಲ್ಲ ಮುಂದಿನ ತೋಟದ ಕೆಲಸಗಳಿಗೆ ಉಪಯೋಗಿಸುವ ಸಾಮಗ್ರಿಗಳನ್ನು ಕಡಿಮೆ ಮಾಡುವುದನ್ನು ಸುಲಭವಾಗಿಸುತ್ತದೆ.
ಗಮನಿಸಿ: ಟ್ರ್ಯಾಮ್ ಲೈನ್ ನಿರ್ವಹಣೆಯು ಪ್ರಸ್ತುತವಾಗಿ ಗ್ರೀನ್ಸ್ಟಾರ್ 3 ಕಮಾಂಡ್ ಸೆಂಟರ್™ ಕಂಟ್ರೋಲ್ ಗಳಲ್ಲಿ ಲಭ್ಯವಿರುವುದಿಲ್ಲ.
ಸ್ವಾಪ್ ಟ್ರ್ಯಾಕ್
ಆಪರೇಟರ್ ಗಳು ವಿವಿಧ ಪ್ರಕಾರದ ಭೌಗೋಳಿಕ ಸ್ಥಿತಿಗಳಲ್ಲಿ ತೋಟಗಳಲ್ಲಿ ಕೆಲಸ ಮಾಡುವುದರಿಂದ Swap track ಸಹಾಯದಿಂದ ಅವರು ಬೇಗನೇ ಗೈಡನ್ಸ್ ಮೋಡ್ ಗಳನ್ನು ಬದಲಾಯಿಸಬಹುದು. ಆಪರೇಟರ್ ಗಳು ಸ್ಟ್ರೈಟ್ ಟ್ರ್ಯಾಕ್ ನಿಂದ ಯಾವುದೇ ಇತರ ಟ್ರ್ಯಾಕಿಂಗ್ ಮೋಡ್ ಗಳಿಗೆ ಅಗತ್ಯವಿದ್ದಂತೆ ಸುಲಭವಾಗಿ ಬದಲಾಗಬಹುದು. ಸ್ವಾಪ್ ಟ್ರ್ಯಾಕ್ ನಿಂದಾಗಿ ಅದೇ ತೋಟದೊಳಗೆ ಕೆಲಸ ಮಾಡುವಾಗ ಆಪರೇಟರ್ ಗ್ರೀನ್ಸ್ಟಾರ್ 3 2630 ಪ್ರದರ್ಶನ ನಲ್ಲಿ ನಾಲ್ಕು ವಿಭಿನ್ನ ಗೈಡನ್ಸ್ ಲೈನ್ ಗಳನ್ನು ಅದಲು ಬದಲಾಗಿ ಉಪಯೋಗಿಸಬಹುದು. ಆಟೋಟ್ರಾಕ್ ಕಾರ್ಯನಿರತವಾಗಿರುವಾಗ ಆಪರೇಟರ್ ಗಳು ಟ್ರ್ಯಾಕ್ ಕ್ರಮಗಳನ್ನು ಕೂಡ ಬದಲಾಯಿಸಬಹುದು.
ಗ್ರೀನ್ಸ್ಟಾರ್3 2630 ಪ್ರದರ್ಶನನಲ್ಲಿ ಟ್ರ್ಯಾಕ್ ಅನ್ನು ಬದಲಿಸಿ ಲಭ್ಯವಿರುತ್ತದೆ.
ಗಮನಿಸಿ: ಗ್ರೀನ್ಸ್ಟಾರ್3 ಕಮಾಂಡ್ ಸೆಂಟರ್ನಲ್ಲಿ ಟ್ರ್ಯಾಕ್ ಅನ್ನು ಬದಲಿಸಿ ಭ್ಯವಿರುವುದಿಲ್ಲ.