John Deere ಟ್ರ‍್ಯಾಕ್ಟರ‍್ 5105 ಶಕ್ತಿಶಾಲಿ 40 HP ಟ್ರ‍್ಯಾಕ್ಟರ‍್ ಸೆಗ್ಮೆಂಟ್ ಮತ್ತು ಇದು 2 WD ಮತ್ತು 4 WD ಎರಡೂ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹೆವಿ ಡ್ಯೂಟಿ ಕೃಷಿ ಟ್ರ್ಯಾಕ್ಟರ್ ಶಕ್ತಿ ಯಿಂದ ಪ್ಯಾಕ್ ಆಗಿದೆ ಒಣ ಮತ್ತು ಆರ್ದ್ರ ಎರಡೂ ರೀತಿಯ ಭೂ ಕೃಷಿಗೆ ಸೂಕ್ತವಾಗಿರುತ್ತದೆ.
ಇವುಗಳಿಗಾಗಿ ಹುಡುಕಿ:
ಪವರ‍್ ಸ್ಟೇರಿಂಗ್ ಹೆಚ್ಚು ಕೆಲಸದ ಗಂಟೆಗಳವರೆಗೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ
ನಿಯಮಿತ ಮತ್ತು ಹೈ ಲಗ್ ಡೆಪ್ತ್ ಟೈರ್‌ಗಳೊಂದಿಗೆ 4WD
ಹೈಡ್ರಾಲಿಕ್ ಆಗಿ ಕಾರ್ಯನಿರ್ವಹಿಸುವ ಉಪಕರಣಗಳಿಗೆ ಸೆಲೆಕ್ಟಿವ್ ಕಂಟ್ರೋಲ್ ವಾಲ್ವ್ ಕಾರ್ಯಾಚರಣೆಯ ಸುಲಭತೆಯನ್ನು ಒದಗಿಸುತ್ತದೆ
John Deere ಟ್ರ‍್ಯಾಕ್ಟರ‍್ ನ ವಿವಿಧ ಬೆಲೆಗಳನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ‍್ ಅನ್ನು ಈಗಲೇ ಸಂಪರ್ಕಿಸಿ!
ಅಧಿಕ ಎಂಜಿನ್ ಟೋರ್ಕ್ ಮೌಲ್ಯಗಳಿಂದಾಗಿ ಎಂಜಿನ್ನಿನ ಎಳೆಯುವ ಸಾಮರ್ಥ್ಯದಿಂದ ಹಿಡಿದು ಸ್ವಲ್ಪ ಹೊತ್ತು ಹಠಾತ್ತಾಗಿ ಬೀಳುವ ಭಾರಗಳನ್ನು ಹೊರುವವರೆಗೆ ಸುಧಾರಣೆ ತರುತ್ತವೆ. ಮಣ್ಣಿನ ಗುಣಗಳಲ್ಲಿ ಆಗುವ ಬದಲಾವಣೆಗಳಿಂದಾಗಿ ಅದು ಟ್ರ್ಯಾಕ್ಟರಿನ ಒಟ್ಟಾರೆ ಎಳೆಯುವ ಸಾಮರ್ಥ್ಯವನ್ನು ಅಥವಾ ಹಠಾತ್ತಾಗಿ ಉಂಟಾಗುವ ಭಾರಗಳನ್ನು ಹೊರುವ ಟ್ರ್ಯಾಕ್ಟರಿನ ಶಕ್ತಿಯನ್ನು ಕೂಡ ಸುಧಾರಿಸುತ್ತದೆ.
ಆಪರೇಟರ್ ಗೆ ಹೆಚ್ಚುವರಿ ಪ್ರಯೋಜನಗಳು
ಮೇಲಿಂದ ಮೇಲೆ ಗೇರ್ ಬದಲಾಯಿಸುವ ಅಗತ್ಯವಿರುವುದಿಲ್ಲ
ಹೆಚ್ಚಿನ ಗೇರ್ ಆಯ್ಕೆಯೊಂದಿಗೆ ಸಾಧ್ಯವಾದಷ್ಟು ಕಡಿಮೆ ಎಂಜಿನ್ rpm (erpm) ನಲ್ಲಿ ಓಡುವ ಟ್ರ್ಯಾಕ್ಟರ್ ಸಾಮರ್ಥ್ಯ
ಆಪರೇಟರ್ ಪೊಸಿಶನ್ ಕಂಟ್ರೊಲ್ (PC) ಮತ್ತು ಡ್ರಾಫ್ಟ್ ಕಂಟ್ರೋಲ್ (DC) ಲೀವರ್ ಗಳನ್ನು ಉಪಯೋಗಿಸಲು ಆಪರೇಟರ್ ಹೆಚ್ಚು ಶ್ರಮ ಪಡಬೇಕಾಗಿಲ್ಲ.
ಎಂಜಿನ್ ನಲ್ಲಿ ವಿಶೇಷವಾಗಿ ತಯಾರಿಸಿದ ಪಿಸ್ಟನ್ ಸ್ಪ್ರೇ ಜೆಟ್ ಸಿಸ್ಟಮ್ ಪಿಸ್ಟನ್ ಕೆಳಗೆ ಆಯಿಲ್ ಸ್ಪ್ರೇ ಒದಗಿಸುತ್ತದೆ. ಈ ವಿಶಿಷ್ಟ ಡಿಸೈನ್ ಸಿಸ್ಟಮ್ ಪಿಸ್ಟನ್ ಮೇಲೆ ನಿರಂತರವಾಗಿ ಆಯಿಲ್ ಸ್ಪ್ರೇ ಒದಗಿಸುತ್ತದೆ ಮತ್ತು ಅತಿಯಾದ ಉಷ್ಣವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ, ಎಂಜಿನ್ ಕೆಲಸ ಮಾಡುವಾಗ ಉಂಟಾಗುವ ತಾಪಮಾನವನ್ನು ನಿಯಂತ್ರಿಸುತ್ತದೆ ಮತ್ತು ಎಂಜಿನ್ ದಕ್ಷತೆಯನ್ನು ಸುಧಾರಿಸುತ್ತದೆ. ಉತ್ತಮವಾದ ಎಂಜಿನ್ ಕೆಲಸ ಮಾಡುವಾಗಿನ ತಾಪಮಾನವು ಪ್ರಮುಖ ಎಂಜಿನ್ ಪಾರ್ಟ್ ಗಳ ಬಾಳಿಕೆಯನ್ನು ಕೂಡ ಅಧಿಕಗೊಳಿಸುತ್ತದೆ ಮತ್ತು ಮೆಂಟೆನನ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಎಂಜಿನ್ನಿನ ಮುಖ್ಯ ಕಂಪೋನೆಂಟ್ ಗಳಿಗೆ ಹೆಚ್ಚುವರಿ ಲುಬ್ರಿಕೇಶನ್ ಒದಗಿಸುತ್ತದೆ
ಎಂಜಿನ್ನಿನ ಒಟ್ಟಾರೆ ಕಾರ್ಯಕ್ಷಮತೆಯನ್ನು ಅಧಿಕಗೊಳಿಸುತ್ತದೆ
ಮೆಂಟೆನನ್ಸ್ ವೆಚ್ಚಗಳನ್ನು ಕಡಿಮೆ ಮಾಡುತ್ತದೆ
ಎಂಜಿನ್ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ
ಎಂಜಿನ್ ರಿಪೇರಿ ಅಥವಾ ಓವರ್ ಹೌಲ್ ಅವಧಿಯನ್ನು ಹೆಚ್ಚಿಸುತ್ತದೆ
ಜಾನ್ ಡಿಯರ್ 5D ಸರಣಿಯ ಟ್ರ್ಯಾಕ್ಟರ್ ನಲ್ಲಿ ಪ್ಲಾನೆಟರಿ ರಿಡಕ್ಷನ್ ನಂತರ ಇನ್ ಬೋರ್ಡ್ ವೆಟ್-ಡಿಸ್ಕ್ ಬ್ರೇಕ್ ಗಳು ಇರುತ್ತವೆ.
ಬ್ರೇಕ್ ಪೆಡಲ್ ಗಳು ಟ್ರಾನ್ಸ್ ಪೋರ್ಟ್ ವೇಳೆ ಅಥವಾ ಕೃಷಿ ಕೆಲಸಗಳಲ್ಲಿ ವೈಯಕ್ತಿಕವಾಗಿ ಉಪಯೋಗಿಸುವಾಗ ಲಾಕ್-ಟು-ಆಪರೇಟ್ ಬ್ರೇಕಿಂಗ್ ಸಿಸ್ಟಮ್ ಸೌಲಭ್ಯ ಹೊಂದಿದ್ದು, ಇವು ಕಡಿಮೆ ಸ್ಥಳಾವಕಾಶದಲ್ಲಿ ಟ್ರ್ಯಾಕ್ಟರ್ ಅನ್ನು ತಿರುಗಿಸಲು ಅನುಕೂಲ ಮಾಡಿಕೊಡುತ್ತವೆ.
ಬ್ರೇಕ್ ಹಾಕುವ ವೇಳೆ ಉತ್ಪನ್ನವಾಗುವ ಉಷ್ಣವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ
ಅತಿ ಹೆಚ್ಚಿನ ಬ್ರೇಕ್ ಹಾಕುವ ಸಾಮರ್ಥ್ಯ
ದೀರ್ಘಕಾಲದವರೆಗೆ ಬಾಳಿಕೆ ಬರುವ ಬ್ರೇಕ್ ಡಿಸ್ಕ್ ಮತ್ತು ಸಿಸ್ಟಮ್
ಡುಯೆಲ್ ಕ್ಲಚ್ (ಅಂದರೆ ಸೆಪರೇಟ್ ಟ್ರ್ಯಾಕ್ಷನ್) ಮತ್ತು ಪವರ್ ಟೇಕ್-ಆಫ್ (PTO) ಕ್ಲಚ್ ನಂತಹ ಅತ್ಯಾಧನಿಕ ಲಕ್ಷಣಗಳೊಂದಿಗೆ ಆಪರೇಟರ್ PTO ಅನ್ನು ನಿರಂತರವಾಗಿ ಬಳಸುವುದು ಸಾಧ್ಯವಾಗುತ್ತದೆ, ತೋಟದಲ್ಲಿರುವ ಎಲ್ಲ ಮಣ್ಣನ್ನು ಉಳುಮೆ ಮಾಡುವ ಮೂಲಕ ಉಳುಮೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಜಾನ್ ಡಿಯರ್ 5D ಸರಣಿ ಟ್ರ್ಯಾಕ್ಟರ್ ಗಳಲ್ಲಿ MQRL ಇರುತ್ತದೆ, ಇದು ಉಬ್ಬುಗಳಿರುವ ಜಾಗದಲ್ಲಿ ತಿರುಗಿಸುವಾಗ ಪೊಸಿಶನ್ ಕಂಟ್ರೋಲ್ (PC) ಮತ್ತು ಡ್ರಾಫ್ಟ್ ಕಂಟ್ರೋಲ್ (DC) ಲೀವರ್ ಗಳಿಗೆ ಅಡಚಣೆಯುಂಟು ಮಾಡದೇ ಇಂಪ್ಲಿಮೆಂಟ್ ಗಳನ್ನು ಬೇಕಾದ ಪೊಸಿಶನ್ ಗೆ ಎತ್ತುವುದನ್ನು ಸುಲಭವಾಗಿಸುತ್ತದೆ.
PC ಮತ್ತು DC ಲೀವರ್ ಗಳನ್ನು ಉಪಯೋಗಿಸದೇ/ಅವುಗಳಿಗೆ ತಡೆಯುಂಟು ಮಾಡದೇ ಉಬ್ಬುಗಳಿರುವ ಜಾಗಗಳಲ್ಲಿ ಅಥವಾ ಅಗತ್ಯವಿದ್ದಾಗ ಇಂಪ್ಲಿಮೆಂಟ್ ಅನ್ನು ಎತ್ತಲು ಮತ್ತು ಕೆಳಗಿಳಿಸಲು ಹೆಚ್ಚುವರಿ ಲೀವರ್ ಒದಗಿಸಲಾಗಿದೆ.
MQRL ಪ್ರಯೋನಗಳು
ಉತ್ತಮ ತಂತ್ರಜ್ಞಾನ ಮತ್ತು ವಿಶ್ವಾಸಾರ್ಹತೆಯ ಮುಖಾಂತರ ಆಪರೇಟರ್ ಗೆ ಹೆಚ್ಚು ಆರಾಮದಾಯ ಅನುಭವ ನೀಡುತ್ತದೆ
ತಿರುಗಿಸುವ ಸಮಯವನ್ನು ಕಡಿಮೆ ಮಾಡುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ
ಮೇಲಿಂದ ಮೇಲೆ PC ಮತ್ತು DC ಬಳಕೆಯನ್ನು ತಪ್ಪಿಸುವ ಮೂಲಕ ಆಪರೇಟರ್ ಗೆ ಹೆಚ್ಚು ಆರಾಮ ನೀಡುತ್ತದೆ
ಗಮನಿಸಿ: ಕೇವಲ JD ರಾಕ್ ಶಾಫ್ಟ್ ನೊಂದಿಗೆ ಲಭ್ಯವಿರುತ್ತದೆ.
ಜಾನ್ ಡಿಯರ್ 5105 ಒಂದು ಶಕ್ತಿಶಾಲಿ 40 HP ಟ್ರ್ಯಾಕ್ಟರ್ ಆಗಿದ್ದು, ಒಣ ಮತ್ತು ಹಸಿ ಎರಡೂ ಪ್ರಕಾರದ ಕೃಷಿಗೆ ಸೂಕ್ತವಾಗಿದೆ. ಅದು 2WD ಮತ್ತು 4WD ಆಯ್ಕೆಗಳಲ್ಲಿ ಲಭ್ಯವಿದ್ದು, ರೈತರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಅದರಲ್ಲಿ 3-ಸಿಲಿಂಡರ್ ಗಳ, 2900 CC ಎಂಜಿನ್ ಇದ್ದು, 2100 RPM ನಲ್ಲಿ ಓಡುತ್ತದೆ ಮತ್ತು ಅಧಿಕ ಟೋರ್ಕ್ ಉತ್ಪಾದಿಸುವ ಮೂಲಕ ಹೆಚ್ಚಿನ ಲೋಡ್ ಗಳನ್ನು ಸುಲಭವಾಗಿ ನಿರ್ವಹಿಸುತ್ತದೆ. ...
ಡ್ರೈ-ಟೈಪ್ ಡ್ಯುಯೆಲ್-ಎಲಿಮೆಂಟ್ ಏರ್ ಫಿಲ್ಟರ್ 99.9% ರಷ್ಟು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದ್ದು, ಧೂಳಿನಿಂದ ಎಂಜಿನ್ ಅನ್ನು ರಕ್ಷಿಸುತ್ತದೆ ಮತ್ತು ಅದು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. ಟ್ರ್ಯಾಕ್ಟರ್ ನಲ್ಲಿ ಕಾಲರ್ ಶಿಫ್ಟ್ ಗೇರ್ ಬಾಕ್ಸ್ ಇದ್ದು, ಅದು 8 ಫಾರ್ವರ್ಡ್ ಮತ್ತು 4 ರಿವರ್ಸ್ ಗೇರ್ ಗಳನ್ನು ಹೊಂದಿದೆ, 2.83 ರಿಂದ 31.07 km/h ಫಾರ್ವರ್ಡ್ ಮತ್ತು 4.10 ರಿಂದ 14.87 km/h ರಿವರ್ಸ್ ಸ್ಪೀಡ್ ರೇಂಜ್ ನೀಡುತ್ತದೆ.
ಪವರ್ ಸ್ಟೇರಿಂಗ್ ಸಿಸ್ಟಮ್ ನಿಂದಾಗಿ ತಿರುಗಿಸಲು ಸುಲಭವಾಗಿರುತ್ತದೆ, ಈ ಮೂಲಕ ದೀರ್ಘ ಕಾಲದವರೆಗೆ ಕೆಲಸ ಮಾಡುವಾಗ ಹೆಚ್ಚು ದಣಿವಾಗುವುದಿಲ್ಲ. 1600 kg ಎತ್ತುವ ಸಾಮರ್ಥ್ಯ ಹೊಂದಿದ್ದು, ವಿವಿಧ ಪ್ರಕಾರದ ಇಂಪ್ಲಿಮೆಂಟ್ ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲದು.
ಅಲ್ಲದೇ, ಎಣ್ಣೆಯಲ್ಲಿ-ಅದ್ದಿದ ಡಿಸ್ಕ್ ಬ್ರೇಕ್ ಗಳು ಉತ್ತಮ ನಿಲ್ಲಿಸುವ ಶಕ್ತಿ ಒದಗಿಸುತ್ತವೆ ಮತ್ತು 60-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಇರುವುದರಿಂದ ಮೇಲಿಂದ ಮೇಲೆ ಫ್ಯೂಲ್ ಹಾಕಿಸದೇ ದೀರ್ಘ ಕಾರ್ಯಾಚರಣೆಗಳನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ. ಪಿಸ್ಟನ್ ಸ್ಪ್ರೇ ಜೆಟ್ ಸಿಸ್ಟಮ್ ಎಂಜಿನ್ ತಾಪಮಾನವನ್ನು ಕಾಪಾಡುತ್ತದೆ ಮತ್ತು ಆಯ್ಕೆ ಮಾಡಬಹುದಾದ ಕಂಟ್ರೋಲ್ ವಾಲ್ವ್ ನಿಂದಾಗಿ ಹೈಡ್ರಾಲಿಕ್ ಇಂಪ್ಲಿಮೆಂಟ್ ಗಳನ್ನು ಉಪಯೋಗಿಸುವುದು ಸುಲಭವಾಗುತ್ತದೆ. ಈ ಶಕ್ತಿ, ಸಾಮರ್ಥ್ಯ ಮತ್ತು ಅತ್ಯಾಧುನಿಕ ಲಕ್ಷಣಗಳ ಸಂಯೋಜನೆಯು ಜಾನ್ ಡಿಯರ್ 5105 ಟ್ರ್ಯಾಕ್ಟರ್ ಅನ್ನು ಆಧುನಿಕ ಕೃಷಿ ಅವಶ್ಯಕತೆಗಳಿಗಾಗಿ ಒಂದು ವಿಶ್ವಾಸಾರ್ಹ ಆಯ್ಕೆಯನ್ನಾಗಿಸುತ್ತದೆ.
ಪ್ರಮಾಣಿತ ವೈಶಿಷ್ಟ್ಯಗಳು -
ಗೇರ್ ಬಾಕ್ಸ್‌ನಲ್ಲಿ ಟಾಪ್ ಶಾಫ್ಟ್ ಲೂಬ್ರಿಕೇಶನ್, ಪಿಸ್ಟನ್ ಸ್ಪ್ರೇ ಕೂಲಿಂಗ್ ಜೆಟ್ & ಮೆಟಲ್ ಫೇಸ್ ಸೀಲ್ ನೊಂದಿಗೆ ಹಿಂಭಾಗದ ಆಯಿಲ್ ಆಕ್ಸೆಲ್ ಎಲ್ಲಾ 5D ಮಾಡಲ್ ಗಳಲ್ಲಿ ಪ್ರಮಾಣಿತ ವೈಶಿಷ್ಟ್ಯಗಳಾಗಿದ್ದು, ಇವುಗಳನ್ನು ವಿವಿಧ ಕೆಲಸಗಳನ್ನು ಮಾಡಬಲ್ಲ, ಬಾಳಿಕೆ ಬರುವಂತೆ ಮಾಡುತ್ತದೆ & ಟ್ರಾಕ್ಟರ್‌ಗಳ ಕಡಿಮೆ ನಿರ್ವಹಣೆ ಶ್ರೇಣಿ..
ಜಾನ್ ಡಿಯರ್ 40HP ಹೊಂದಿರುವ ಶಕ್ತಿಶಾಲಿ ಟ್ರ್ಯಾಕ್ಟರ್ ಆಗಿದೆ, ಅದರಲ್ಲಿ ಶಕ್ತಿ ಇದೆ ಮತ್ತು ದೊಡ್ಡ ಪ್ರಮಾಣದ ಕೃಷಿ ಕೆಲಸಗಳನ್ನು ಮಾಡಬಲ್ಲ ಟ್ರ್ಯಾಕ್ಟರ್ ಆಗಿದ್ದು, ಒಣ ಮತ್ತು ಹಸಿ ಎರಡೂ ರೀತಿಯ ಜಮೀನು ಉಳುಮೆಗೆ ಅತ್ಯುತ್ತಮವಾಗಿದೆ. ಅದು 2WD ಮತ್ತು 4WD ಎರಡರಲ್ಲೂ ಲಭ್ಯವಿದೆ
ವಿವಿಧ ಸ್ಥಳಗಳಲ್ಲಿ ಸಲಕರಣೆಗಳ ಮಾದರಿಗಳು, ವೈಶಿಷ್ಟ್ಯಗಳು, ಆಯ್ಕೆಗಳು, ಲಗತ್ತುಗಳು ಮತ್ತು ಬೆಲೆಗಳು ಬದಲಾಗಬಹುದು. ವಿವರಗಳಿಗಾಗಿ, ದಯವಿಟ್ಟು ನಿಮ್ಮ ಸ್ಥಳೀಯ John Deere ಡೀಲರ್ ಅನ್ನು ಸಂಪರ್ಕಿಸಿ. ನಿರ್ದಿಷ್ಟತೆಗಳು, ಮಾದರಿ ವೈಶಿಷ್ಟ್ಯಗಳು ಮತ್ತು John Deere ಭಾಗಗಳ ಬೆಲೆಗಳನ್ನು ಪರಿಶೀಲಿಸುವ ಮತ್ತು ಸರಿಹೊಂದಿಸುವ ಸಂಪೂರ್ಣ ಹಕ್ಕನ್ನು John Deere ಅವರು ಹೊಂದಿರುತ್ತಾರೆ. ವಾಹನವನ್ನು ನಿರ್ವಹಿಸುವ ಮೊದಲು, ವಾಹನಕ್ಕಾಗಿ ಯಾವುದೇ ಉತ್ಪನ್ನ/ಆಪರೇಟರ್/ಸೇವಾ ಕೈಪಿಡಿಯಲ್ಲಿ ಒದಗಿಸಲಾದ ಸುರಕ್ಷತಾ ಸೂಚನೆಗಳನ್ನು ನೀವು ಎಚ್ಚರಿಕೆಯಿಂದ ಓದಬೇಕು ಮತ್ತು ಕಟ್ಟುನಿಟ್ಟಾಗಿ ಅನುಸರಿಸಬೇಕು.
ಬೆಲ್ಟ್ ಧರಿಸುವುದು, ಟೈರ್ ಆಯ್ಕೆ, ವಾಹನದ ತೂಕ, ಇಂಧನ ಸ್ಥಿತಿ, ಭೂಪ್ರದೇಶ ಮತ್ತು ಇತರ ಪರಿಸರ ಅಂಶಗಳ ಆಧಾರದ ಮೇಲೆ ನಿಜವಾದ ವಾಹನದ ಗರಿಷ್ಠ ವೇಗವು ಬದಲಾಗಬಹುದು. ಎಂಜಿನ್ ತಯಾರಕರು ಒದಗಿಸಿದ ಎಂಜಿನ್ ಹಾರ್ಸ್‌ಪವರ್ ಮತ್ತು ಟಾರ್ಕ್ ಮಾಹಿತಿಯನ್ನು ಹೋಲಿಕೆಯ ಉದ್ದೇಶಗಳಿಗಾಗಿ ಮಾತ್ರ ಬಳಸುತ್ತಾರೆ. ಹಾರ್ಸ್ ಪವರ್ ಮತ್ತು ಟಾರ್ಕ್‌ಗಳಲ್ಲಿ ನಿಜವಾದ ಕಾರ್ಯಾಚರಣೆಯ ಡೇಟಾ ಮತ್ತು ಡೀಫಾಲ್ಟ್ ಡೇಟಾದ ನಡುವೆ ವ್ಯತ್ಯಾಸವಿರಬಹುದು. ವಿವರವಾದ ಮಾಹಿತಿಗಾಗಿ ದಯವಿಟ್ಟು ಮೂಲ ಎಂಜಿನ್ ತಯಾರಕರ ವೆಬ್‌ಸೈಟ್ ಅನ್ನು ನೋಡಿ. ಐಚ್ಛಿಕ ಪರಿಕರಗಳು ಮತ್ತು ಲಗತ್ತುಗಳನ್ನು ಮರುಪಾವತಿಗಾಗಿ ಪ್ರಮಾಣಿತ ವಾರಂಟಿ ಕ್ಲೈಮ್‌ನಲ್ಲಿ ಸೇರಿಸಲಾಗಿಲ್ಲ. ಉತ್ಪನ್ನ (ಅದರ ಘಟಕಗಳನ್ನು ಒಳಗೊಂಡಂತೆ) ಮತ್ತು ಪರಿಕರಗಳು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು.