
ಕೃಷಿ ಎಂದರೆ ಕೇವಲ ಕಠಿಣ ಶ್ರಮ ವಹಿಸುವುದಲ್ಲ, ಜಾಣ್ಮೆಯಿಂದ ಕೆಲಸ ಮಾಡುವುದು ಕೂಡ ಆಗಿದೆ. ಸರಿಯಾದ ಉಪಕರಣಗಳೊಂದಿಗೆ, ರೈತರು ಸಮಯ ಉಳಿಸಬಹುದು, ಶ್ರಮ ಕಡಿಮೆ ಮಾಡಬಹುದು, ಬೆಳೆಯ ಉತ್ಪಾದನೆ ಹೆಚ್ಚಿಸಬಹುದು ಮತ್ತು ತಮ್ಮ ಆದಾಯ ಜಾಸ್ತಿ ಮಾಡಿಕೊಳ್ಳಬಹುದು. ಆದ್ದರಿಂದ ಸರಿಯಾದ ಕೃಷಿ ಸಲಕರಣೆಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.
ಜಾನ್ ಡಿಯರ್ ನಲ್ಲಿ, ಆಧುನಿಕ ರೈತರ ಅಗತ್ಯಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ದಶಕಗಳ ವಿಶ್ವಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ, ಜಮೀನು ಸಿದ್ಧಪಡಿಸುವುದರಿಂದ ಕೊಯ್ಲು ಮಾಡುವವರೆಗೆ ಪ್ರತಿಯೊಂದು ಹಂತವನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾದ ವಿಶ್ವಾಸಾರ್ಹ ಕೃಷಿ ಪರಿಹಾರಗಳ ಸಂಪೂರ್ಣ ಶ್ರೇಣಿಯನ್ನು ನಾವು ಒದಗಿಸುತ್ತೇವೆ.
ಸಲಕರಣೆಗಳ ಅಗತ್ಯ ಏಕಿರುತ್ತದೆ ಮತ್ತು ನಿಮ್ಮ ಕೃಷಿ ಪ್ರಯಾಣದಲ್ಲಿ ನಿಮಗೆ ಬೇಕಾಗಿರುವ ಉಪಕರಣಗಳಾವುವು ಎಂದು ನೋಡೋಣ.
ಇವತ್ತು ಕೃಷಿ ಸಲಕರಣೆಗಳು ಏಕೆ ಮುಖ್ಯವಾಗಿವೆ?
ಆಧುನಿಕ ಕೃಷಿಯಲ್ಲಿ ಮಾನವ ಶಕ್ತಿಗಿಂತ ಹೆಚ್ಚಿನ ಅಂಶಗಳ ಅಗತ್ಯವಿರುತ್ತದೆ. ಒಳ್ಳೆಯ ಸಲಕರಣೆ ಇವುಗಳಿಗೆ ಸಹಾಯ ಮಾಡುತ್ತದೆ:
- ಕೆಲಸ ಜಾಸ್ತಿ ಇರುವ ಸಮಯದಲ್ಲಿ ಸಮಯ ಉಳಿಸಲು
- ಕೈ ಕೆಲಸ ಮತ್ತು ಆಯಾಸ ಕಡಿಮೆ ಮಾಡಲು
- ನಿಖರತೆ ಹೆಚ್ಚಿಸಲು ಮತ್ತು ಬೆಳೆ ಇಳುವರಿ
- ದೊಡ್ಡ ಪ್ರಮಾಣದ ತೋಟಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು
- ಕಠಿಣವಾದ ಗದ್ದೆ ಪರಿಸ್ಥಿತಿಗಳನ್ನು ಸುಲಭವಾಗಿ ನಿಭಾಯಿಸಲು
ಪ್ರಗತಿಶೀಲ ಕೃಷಿಗಾಗಿ ಹೊಂದಿರಲೇಬೇಕಾದ ಜಾನ್ ಡಿಯರ್ ಕೃಷಿ ಉಪಕರಣಗಳು
1. ಜಾನ್ ಡಿಯರ್ 5405 PowerTechTM ಟ್ರ್ಯಾಕ್ಟರ್
ಜಾನ್ ಡಿಯರ್ 5405 PowerTechTM ಟ್ರ್ಯಾಕ್ಟರ್, ಅಧಿಕ ಶಕ್ತಿಯ ಅಗತ್ಯವಿರುವ ಕಾರ್ಯಾಚರಣೆಗಳಿಗಾಗಿ ನಿರ್ಮಿಸಲಾದ ಬಲಿಷ್ಠ 63 HP ಟ್ರ್ಯಾಕ್ಟರ್ ಆಗಿದೆ. ಇದರ ಟರ್ಬೋಚಾರ್ಜ್ಡ್ PowerTech™ ಎಂಜಿನ್ ಮತ್ತು ಪ್ರಬಲ ಹೈಡ್ರಾಲಿಕ್‌ಗಳು ಆಳವಾದ ಉಳುಮೆ ಮತ್ತು ಲೋಡ್ ಮಾಡುವಂತಹ ಅಧಿಕ ಶ್ರಮದ ಕಾರ್ಯಗಳಿಗೆ ಸೂಕ್ತವಾಗಿವೆ. ಅದರ ಬಾಳಿಕೆ ಮತ್ತು ಅಡಚಣೆ ರಹಿತ ಟ್ರಾನ್ಸ್ ಮಿಶನ್ ಗೆ ಹೆಸರುವಾಸಿಯಾದ ಇದು ಅತ್ಯಗತ್ಯ ಪರಿಸ್ಥಿತಿಗಳಲ್ಲಿಯೂ ಸಹ ಸ್ಥಿರವಾದ ತೋಟದ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಆರಾಮದಾಯಕ ಆಪರೇಟರ್ ಸ್ಟೇಷನ್ ಮತ್ತು ಅತ್ಯುತ್ತಮ ಎತ್ತುವ ಸಾಮರ್ಥ್ಯದೊಂದಿಗೆ, ಇದು ಇಂಪ್ಲಿಮೆಂಟ್ ಕಾರ್ಯಾಚರಣೆಗಳು ಮತ್ತು ಸಾಗಣೆ ಎರಡನ್ನೂ ನಿರಾಯಾಸವಾಗಿ ಬೆಂಬಲಿಸುವ ಮೂಲಕ ದೊಡ್ಡ ಗದ್ದೆಗಳು ಮತ್ತು ದಿಟ್ಟ ಗುರಿಗಳಿಗೆ ವಿಶ್ವಾಸಾರ್ಹ ಒಡನಾಡಿಯಾಗಿದೆ.
2. ಜಾನ್ ಡಿಯರ್ 5075E ಟ್ರ್ಯಾಕ್ಟರ್
5075E ಅದರ ಬಹುಪಯೋಗ ಮತ್ತು ಆಧುನಿಕ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾದ 75 HP ಟ್ರ್ಯಾಕ್ಟರ್ ಆಗಿದೆ. ಶಕ್ತಿಶಾಲಿ 3-ಸಿಲಿಂಡರ್ ಎಂಜಿನ್ ಮತ್ತು ಅಧಿಕ ಟೋರ್ಕ್ ರಿಸರ್ವ್ ಹೊಂದಿರುವ ಇದು ರೋಟರಿ ಟಿಲ್ಲರ್ ಗಳಿಂದ ಹಿಡಿದು ಸ್ಪ್ರೇಯರ್ ಗಳು ಮತ್ತು ಪ್ಲಾಂಟರ್ ಗಳವರೆಗೆ ವಿವಿಧ ಇಂಪ್ಲಿಮೆಂಟ್ ಗಳನ್ನು ಸರಾಗವಾಗಿ ನಿರ್ವಹಿಸುತ್ತದೆ. 4WD ಸಾಮರ್ಥ್ಯ ಮತ್ತು ಎಣ್ಣೆಯಲ್ಲಿ-ಅದ್ದಿದ ಬ್ರೇಕ್ ಗಳು ಅಸಮ ಭೂಪ್ರದೇಶದಲ್ಲಿ ಅತ್ಯುತ್ತಮ ನಿಯಂತ್ರಣವನ್ನು ನೀಡುತ್ತವೆ. ಇದರ ಶಕ್ತಿ ಮತ್ತು ಆಪರೇಟರ್ ಅನುಕೂಲತೆಯ ಸಂಯೋಜನೆಯಿಂದಾಗಿ ರೈತರು ವಿಶೇಷವಾಗಿ ದೀರ್ಘ ಕೆಲಸದ ಸಮಯದಲ್ಲಿ ಇದನ್ನು ಬಳಸಲು ಆದ್ಯತೆ ನೀಡುತ್ತಾರೆ. ಹೆಚ್ಚಿನ ಉತ್ಪಾದಕತೆ ಮತ್ತು ವಿಶ್ವಾಸಾರ್ಹತೆಯನ್ನು ಗುರಿಯಾಗಿಟ್ಟುಕೊಂಡಿರುವ ಮಧ್ಯಮದಿಂದ ದೊಡ್ಡ ಪ್ರಮಾಣದ ತೋಟಗಳಿಗೆ ಇದು ಹೇಳಿ ಮಾಡಿಸಿದಂತಿರುತ್ತದೆ.
3. ಜಾನ್ ಡಿಯರ್ 5050D
ದೈನಂದಿನ ಕೃಷಿ ಸವಾಲುಗಳನ್ನು ಸುಲಭವಾಗಿ ನಿಭಾಯಿಸಲು ನಿರ್ಮಿಸಲಾದ ಜಾನ್ ಡಿಯರ್ 5050D ಟ್ರ್ಯಾಕ್ಟರ್ 50 HP ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು ಭೂಮಿ ಸಿದ್ಧತೆ, ಬಿತ್ತನೆ ಮತ್ತು ಸಾಗಣೆಯಂತಹ ವ್ಯಾಪಕ ಶ್ರೇಣಿಯ ಕೃಷಿ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ. ತನ್ನ ಇಂಧನ ದಕ್ಷತೆ ಮತ್ತು ಕನಿಷ್ಠ ಮೆಂಟೆನನ್ಸ್ ಗೆ ಹೆಸರುವಾಸಿಯಾದ ಇದು ರೈತರಿಗೆ ಅತ್ಯುತ್ತಮ ಮೌಲ್ಯವನ್ನು ಪೂರೈಸುತ್ತದೆ. ಬೃಹತ್ ನಿರ್ಮಾಣ ಗುಣಮಟ್ಟ ಮತ್ತು ವಿವಿಧ ಇಂಪ್ಲಿಮೆಂಟ್ ಗಳೊಂದಿಗೆ ಹೊಂದಾಣಿಕೆ ಇರುವ ಈ ಟ್ರ್ಯಾಕ್ಟರ್ ಋತುವಿನಿಂದ ಋತುವಿಗೆ ಸ್ಥಿರ ಉತ್ಪಾದನೆಯನ್ನು ಖಚಿತಪಡಿಸುತ್ತದೆ. ಇದು ತೋಟಗಳನ್ನು ಯಾವುದೇ ಅಡಚಣೆಯಿಲ್ಲದೆ ನಡೆಸಿಕೊಂಡು ಹೋಗುವಂತೆ ಸಹಾಯ ಮಾಡುವ ವಿಶ್ವಾಸಾರ್ಹ ಶ್ರಮಿಕನಿದ್ದಂತೆ.
4. ಜಾನ್ ಡಿಯರ್ 5210 GearProTM ಟ್ರ್ಯಾಕ್ಟರ್
5210 GearProTM ಟ್ರ್ಯಾಕ್ಟರ್ ಹೆಚ್ಚುವರಿ ಟೋರ್ಕ್ ಮತ್ತು ಎತ್ತುವ ಶಕ್ತಿಯೊಂದಿಗೆ 50 HP ಅನ್ನು ನೀಡುವುದರಿಂದ, ಇದು ಭಾರೀ ಇಂಪ್ಲಿಮೆಂಟ್ ಗಳು ಮತ್ತು ದೈನಂದಿನ ಕೃಷಿ ಕೆಲಸಗಳಿಗೆ ಸೂಕ್ತವಾಗಿದೆ. ರೈತರು 5210 ಅನ್ನು, ವಿಶೇಷವಾಗಿ ದೀರ್ಘಕಾಲದ ಕಾರ್ಯಾಚರಣೆಗಳ ಸಮಯದಲ್ಲಿ, ಅದರ ಬಲಿಷ್ಠ ಎಂಜಿನ್, ಉತ್ತಮ PTO ಕಾರ್ಯಕ್ಷಮತೆ, ಮತ್ತು ಸರಾಗವಾದ ಗೇರ್ ಶಿಫ್ಟಿಂಗ್ ಗಾಗಿ ನಂಬುತ್ತಾರೆ. ಇದರ ಬಲಿಷ್ಠವಾದ ಚಸಿಸ್ ಮತ್ತು ಪವರ್ ಸ್ಟೇರಿಂಗ್ ತೋಟದ ಕಾರ್ಯಗಳನ್ನು ಹೆಚ್ಚು ಸಮರ್ಥ ಮತ್ತು ಕಡಿಮೆ ಶ್ರಮದಾಯಕವಾಗಿಸುತ್ತವೆ. ನೀವು ಮಲ್ಚಿಂಗ್ ಮಾಡುತ್ತಿರಲಿ, ಸಮತಟ್ಟು ಮಾಡುತ್ತಿರಲಿ ಅಥವಾ ಬಿತ್ತನೆ ಮಾಡುತ್ತಿರಲಿ, 5210 ಎಲ್ಲವನ್ನೂ ನಿಖರತೆ ಮತ್ತು ನಿಯಂತ್ರಣದೊಂದಿಗೆ ನಿರ್ವಹಿಸುತ್ತದೆ.
5. ಲೇಸರ್ ಲೆವಲರ್
ಸಮತಟ್ಟಾದ ತೋಟಗಳಿದ್ದರೆ ಉತ್ತಮ ನೀರಿನ ಬಳಕೆ ಮತ್ತು ಒಂದೇ ಪ್ರಕಾರದ ಬೆಳೆಯ ಬೆಳವಣಿಗೆ ಸಾಧ್ಯವಾಗುತ್ತದೆ. GreenSystemTM ಲೇಸರ್ ಲೆವಲರ್ ಲೇಸರ್-ಆಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಪೂರ್ತಿ ಸಮತಟ್ಟಾದ ತೋಟಗಳನ್ನು ಸಿದ್ಧಪಡಿಸುವಲ್ಲಿ ರೈತರಿಗೆ ಸಹಾಯ ಮಾಡುತ್ತದೆ. ಇದು ನೀರಾವರಿ ವೆಚ್ಚವನ್ನು ಕಡಿಮೆ ಮಾಡುತ್ತದೆ, ನೀರು ನಿಲ್ಲುವುದನ್ನು ತಡೆಯುತ್ತದೆ ಮತ್ತು ಬೀಜ ಮೊಳಕೆಯೊಡೆಯುವುದನ್ನು ಸುಧಾರಿಸುತ್ತದೆ. ಇದರ ನಿಖರವಾದ ಕಾರ್ಯಕ್ಷಮತೆಯು ಸಮಯ ಮತ್ತು ಇಂಧನ ಎರಡನ್ನೂ ಉಳಿಸುವ ಮೂಲಕ ಪರಿಣಾಮಕಾರಿ ನೀರು ಮತ್ತು ಮಣ್ಣಿನ ನಿರ್ವಹಣೆಯ ಮೇಲೆ ಕೇಂದ್ರೀಕರಿಸಿದ ಪ್ರಗತಿಪರ ರೈತರಿಗೆ ಅಗತ್ಯ ಸಾಧನವಾಗಿದೆ.
6. ಹೈ ಸ್ಪೀಡ್ ಪ್ಲಾಂಟರ್
ಬಿತ್ತನೆ ವೇಗ ಮತ್ತು ನಿಖರತೆಯ ಮುಖ್ಯವಾದಾಗ, GreenSystemTM ಹೈ ಸ್ಪೀಡ್ ಪ್ಲಾಂಟರ್ ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಒಂದೇ ತೆರನಾದ ಬೀಜ ನಿಯೋಜನೆ ಮತ್ತು ಆಳಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ಮೊಳಕೆಯೊಡೆಯುವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಬೆಳೆ ನಿಲುವನ್ನು ಖಚಿತಪಡಿಸುತ್ತದೆ. ಇದು ನಿಖರತೆಗೆ ಧಕ್ಕೆಯಾಗದಂತೆ ಹೆಚ್ಚಿನ ವೇಗಗಳಲ್ಲಿ ಸಹ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕಾರ್ಯಾಚರಣೆಯ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ಹೀಗೆ ಇದು ದೊಡ್ಡ ತೋಟಗಳಿಗೆ ಮತ್ತು ಸಕಾಲಿಕ ಬಿತ್ತನೆಯ ಗುರಿ ಹೊಂದಿರುವವರಿಗೆ ನೆಚ್ಚಿನದಾಗಿದೆ.
7. ಬಾಳೆ ಮಲ್ಚರ್
ಇದನ್ನು ಬಾಳೆ ದಿಂಡಿನಂತಹ ದಪ್ಪ ಬೆಳೆಯ ಅವಶೇಷಗಳನ್ನು ನಿರ್ವಹಿಸುವುದಕ್ಕಾಗಿ ವಿಶೇಷವಾಗಿ ಎಂಜಿನಿಯರ್ ಮಾಡಲಾಗಿದೆ. ಇದು ಅವುಗಳನ್ನು ಸಣ್ಣಗೆ ಚೂರು ಮಾಡಿ ಹೊಲದಾದ್ಯಂತ ಸಮವಾಗಿ ಹರಡುತ್ತದೆ, ಮಣ್ಣಿನ ಪೋಷಣೆಯನ್ನು ಹೆಚ್ಚಿಸುತ್ತದೆ ಮತ್ತು ಸುಡುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ದಟ್ಟವಾದ ಹೊಲಗಳಲ್ಲಿಯೂ ಸಹ ಸ್ಥಿರವಾದ ಮಲ್ಚಿಂಗ್‌ಗಾಗಿ ಇದನ್ನು ಹೆವಿ-ಡ್ಯೂಟಿ ಬ್ಲೇಡ್ ಗಳು ಮತ್ತು ಹೈ-ಸ್ಪೀಡ್ ರೋಟರ್ ಗಳೊಂದಿಗೆ ನಿರ್ಮಿಸಲಾಗಿದೆ. ರೈತರು ಸುಧಾರಿತ ಮಣ್ಣಿನ ಆರೋಗ್ಯ ಮತ್ತು ರಸಗೊಬ್ಬರ ಮತ್ತು ಕಾರ್ಮಿಕರ ಮೇಲೆ ಮಾಡುವ ಖರ್ಚಿನ ಉಳಿತಾಯದಿಂದ ಲಾಭ ಪಡೆಯುತ್ತಾರೆ, ಈ ಮೂಲಕ ಇದು ಸುಸ್ಥಿರ ಕೃಷಿಗೆ ಉತ್ತಮ ಆಯ್ಕೆಯಾಗಿದೆ.
8. ಪಡ್ಲರ್ ಲೆವಲರ್
ಭತ್ತದ ಗದ್ದೆಗಳಿಗೆ, ನೀರು ಮತ್ತು ಮಣ್ಣಿನ ಮಟ್ಟದ ನಿರ್ವಹಣೆ ಬಹಳ ಮುಖ್ಯವಾಗಿರುತ್ತದೆ. GreenSystemTM ಪುಡ್ಲರ್ ಲೆವಲರ್ ಅನ್ನು ನಾಟಿ ಮಾಡುವ ಮೊದಲು ಪರಿಣಾಮಕಾರಿ ಕೆಸರು ಹದ ಮಾಡುವುದು (ಪಡ್ಲಿಂಗ್) ಮತ್ತು ಪೂರ್ತಿ ಸಮತಟ್ಟಾಗಿಸಲು (ಪೂರ್ತಿ ಲೆವಲಿಂಗ್) ವಿನ್ಯಾಸಗೊಳಿಸಲಾಗಿದೆ. ಇದು ನೀರು ಹಿಡಿದಿಟ್ಟುಕೊಳ್ಳುವುದನ್ನು ಸುಧಾರಿಸುವ ಮೂಲಕ ಮತ್ತು ಕಳೆ ಬೆಳೆಯುವುದನ್ನು ಕಡಿಮೆ ಮಾಡುವ ಮೂಲಕ ಭತ್ತದ ಬಿತ್ತನೆಗೆ ಸೂಕ್ತವಾದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಇದರ ಗಟ್ಟಿಮುಟ್ಟಾದ ಚೌಕಟ್ಟು ಮತ್ತು ಅತ್ಯುತ್ಕೃಷ್ಟ ಬ್ಲೇಡ್ ವಿನ್ಯಾಸವು ಒಂದೇ ತೆರನಾದ ಕಾರ್ಯಕ್ಷಮತೆ ಮತ್ತು ದೀರ್ಘ ಸೇವಾ ಬಾಳಿಕೆಯನ್ನು ಖಚಿತಪಡಿಸುತ್ತವ ಮೂಲಕ ಅಕ್ಕಿ ಬೆಳೆಯುವ ರೈತರು ನೀರು ಉಳಿಸಲು ಮತ್ತು ಜಾಸ್ತಿ ಶ್ರಮ ವಹಿಸದಂತೆ ಸಹಾಯ ಮಾಡುತ್ತದೆ.
9. ಸಬ್ ಸಾಯ್ಲರ್
ಮಣ್ಣಿನಲ್ಲಿರುವ ಗಟ್ಟಿ ಮಣ್ಣಿನ ಪದರು (ಹಾರ್ಡ್‌ಪ್ಯಾನ್) ಬೇರಿನ ಬೆಳವಣಿಗೆ ಮತ್ತು ನೀರಿನ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. GreenSystemTM ಸಬ್ ಸಾಯ್ಲರ್ ಒಂದು ಶಕ್ತಿಶಾಲಿ ಇಂಪ್ಲಿಮೆಂಟ್ ಆಗಿದ್ದು, ಭೂಮಿಯ ಮೇಲ್ಮೈ ಕೆಳಗೆ ಆಳದಲ್ಲಿರುವ ಸಾಂದ್ರವಾದ ಮಣ್ಣಿನ ಪದರಗಳನ್ನು ಒಡೆಯುತ್ತದೆ, ಗಾಳಿ ಮತ್ತು ನೀರು ಚೆನ್ನಾಗಿ ಒಳಹೋಗಲು ಸಹಾಯ ಮಾಡುತ್ತದೆ. ಇದು ಆಳವಾದ ಬೇರು ವ್ಯವಸ್ಥೆಗಳು ಮತ್ತು ಉತ್ತಮ ಪೋಷಕಾಂಶಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮೂಲಕ ಬೆಳೆ ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಗಟ್ಟಿಯಾದ ಮಣ್ಣನ್ನು ತಡೆದುಕೊಳ್ಳಲು ಪ್ರಬಲವಾಗಿ ನಿರ್ಮಿಸಲಾಗಿರುವ ಈ ಇಂಪ್ಲಿಮೆಂಟ್ ಮಣ್ಣಿನ ಆರೋಗ್ಯವನ್ನು ಮರುಸ್ಥಾಪಿಸಲು ಮತ್ತು ದೀರ್ಘಕಾಲೀನ ಉತ್ಪಾದಕತೆಯನ್ನು ಸುಧಾರಿಸಲು ಅವಶ್ಯಕವಾಗಿರುತ್ತದೆ.
ಕೃಷಿ ವೇಗವಾಗಿ ಬದಲಾಗುತ್ತಿದೆ. ಒಂದು ಹೆಜ್ಜೆ ಮುಂದಿರಬೇಕೆಂದರೆ, ನೀವು ಹೆಚ್ಚು ಶ್ರಮವಹಿಸುವ ಬದಲು ಜಾಣತನದಿಂದ ಕೆಲಸ ಮಾಡಬೇಕು. ಸರಿಯಾದ ಉಪಕರಣಗಳಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಸಮಯವನ್ನು ಉಳಿಸುವುದರ ಜೊತೆಗೆ ನಿಮ್ಮ ತೋಟದ ಉತ್ತಮ, ಹೆಚ್ಚು ಉತ್ಪಾದಕ ಭವಿಷ್ಯವನ್ನು ನಿರ್ಮಿಸುತ್ತಿದ್ದೀರಿ.
ನೀವು ಯಾವಾಗಲೂ ನಂಬಿಕೆ ಇಡಬಹುದಾದ ಟ್ರ್ಯಾಕ್ಟರ್‌ಗಳು, ಇಂಪ್ಲಿಮೆಂಟ್ ಗಳು ಮತ್ತು ಮಾರಾಟ- ನಂತರದ ಬೆಂಬಲದೊಂದಿಗೆ ನಾವು ಪ್ರತಿ ಹಂತದಲ್ಲೂ ನಿಮ್ಮ ಬೆನ್ನೆಲುಬಾಗಿ ನಿಂತಿರುತ್ತೇವೆ!
ಹೆಚ್ಚು ಬೆಳೆಯೋಣ, ಹೆಚ್ಚು ಉಳಿಸೋಣ ಮತ್ತು ಜಾಣತನದಿಂದ ಕೃಷಿ ಮಾಡೋಣ.