
ಕೃಷಿಯು ಜೀವನೋಪಾಯಗಳಿಗೆ ಮತ್ತು ಸಮುದಾಯಗಳಿಗೆ ಆಧಾರವಾಗಿರುವ ಭಾರತದ ಕೃಷಿ ಪ್ರಧಾನ ಪ್ರಮುಖ ಭಾಗಗಳಲ್ಲಿ ಹೊಸ, ಪರಿಸರ-ಸ್ನೇಹಿ ಪರಿಹಾರಗಳ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಭಾರತದಲ್ಲಿ ಒಂದು ಪ್ರಧಾನ ಟ್ರ್ಯಾಕ್ಟರ್ ಕಂಪನಿಯಾಗಿ, ಜಾನ್ ಡಿಯರ್ ಈ ಕೃಷಿ ಕ್ರಾಂತಿಯ ಮುಂಚೂಣಿಯಲ್ಲಿದ್ದು, ಕೃಷಿ ಯಂತ್ರೋಪಕರಣಗಳ ವಿಕಸನವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತಿದೆ.
TREM-IV ಟ್ರ್ಯಾಕ್ಟರ್ ಗಳನ್ನು ಪ್ರವೇಶಿಸಿ: ಸಮರ್ಥನೀಯ ಕೃಷಿಯ ಭವಿಷ್ಯವನ್ನು ರೂಪಿಸಲು ಸಿದ್ಧವಾಗಿರುವ ತಾಂತ್ರಿಕ ಚಾತುರ್ಯ ಮತ್ತು ಪರಿಸರೀಯ ಪಾರುಪತ್ಯಕ್ಕೆ ಪ್ರಮಾಣವಾಗಿದೆ.
ಸಮರ್ಥನೀಯ ಅಭ್ಯಾಸಗಳನ್ನು ಬಲಪಡಿಸುವುದು
ಅತ್ಯಾಧುನಿಕ TREM-IV ಟ್ರ್ಯಾಕ್ಟರ್ ಗಳುಸಮರ್ಥನೀಯ ಕೃಷಿಗೆ ಸಂಬಂಧಿಸಿದಂತೆ ಜಾನ್ ಡಿಯರ್ ನ ಗುಣವಿಶೇಷದೊಳಗೆ ಹಾಸುಹೊಕ್ಕಾಗಿವೆ. ಪರಿಸರಕ್ಕೆ ಹಾನಿಯಾಗುವುದನ್ನು ಕಡಿಮೆ ಮಾಡುವುದರ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಿದ ಶಕ್ತಿಶಾಲಿ ಲಕ್ಷಣಗಳ ಸರಣಿಯೊಂದಿಗೆ ಕಾಳಜಿಪೂರ್ವಕವಾಗಿ ಈ ಎಂಜಿನಿಯರಿಂಗ್ ಅದ್ಭುತಗಳನ್ನು ತಯಾರಿಸಲಾಗಿದೆ.
- ಇಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ (ECU) - ಈ ಟ್ರ್ಯಾಕ್ಟರ್ ಗಳ ಕೇಂದ್ರಬಿಂದುವಾಗಿರುವ ECU ಇಂಧನ ಬಳಕೆಯನ್ನು ಕಡಿಮೆಯಾಗಿಸುವುದರ ಜೊತೆಗೆ ಅಸಾಮಾನ್ಯ ಸಾಮರ್ಥ್ಯ ಸಾಧಿಸಲು ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ ಮತ್ತು ಎಂಜಿನ್ ಕಾರ್ಯಗಳನ್ನು ನಿಖರತೆಯೊಂದಿಗೆ ಸಂಯೋಜಿಸುತ್ತದೆ.
- ಹೈ-ಪ್ರೆಶರ್ ಕಾಮನ್ ರೇಲ್ (HPCR) ಫ್ಯುಯೆಲ್ ಇಂಜೆಕ್ಷನ್ ಸಿಸ್ಟಮ್ - ಎಂಜಿನಿಯರಿಂಗ್ ಕ್ಷೇತ್ರದ ಅದ್ಭುತವಾದ ಈ ಸಿಸ್ಟಮ್ ಅಧಿಕ ಒತ್ತಡಗಳಲ್ಲಿ ನಿಖರವಾದ ಪ್ರಮಾಣಗಳಲ್ಲಿ ಇಂಧನವನ್ನು ಹಾಕುತ್ತದೆ, ಇದರಿಂದಾಗಿ ಶುದ್ಧ ಕಂಬಸ್ಚನ್ ಆಗುತ್ತದೆ ಮತ್ತು ಎಮಿಶನ್ ಗಳು ಕಡಿಮೆಯಾಗುತ್ತವೆ - ಸಮರ್ಥನೀಯ ಕೃಷಿಯ ಕ್ರಮಗಳತ್ತ ಇದೊಂದು ಪ್ರಮುಖ ಹೆಜ್ಜೆಯಾಗಿದೆ.
- ಟರ್ಬೊಚಾರ್ಜರ್ - ಇಂಧನ ದಕ್ಷತೆಗೆ ಧಕ್ಕೆಯಾಗದ ರೀತಿಯಲ್ಲಿ ಪವರ್ ಔಟ್ ಪುಟ್ ಹೆಚ್ಚಿಸುವ ಟರ್ಬೊಚಾರ್ಜರ್ ನಿಂದಾಗಿ TREM-IV ಟ್ರ್ಯಾಕ್ಟರ್ ಗಳು ಉತ್ತಮ ಸಾಮರ್ಥ್ಯವನ್ನು ಕಾಪಾಡುವುದರ ಜೊತೆಗೆ ಅತ್ಯಂತ ಕಠಿಣವಾದ ಕೃಷಿ ಕೆಲಸಗಳನ್ನು ಸರಾಗವಾಗಿ ಮಾಡಿ ಮುಗಿಸುವಷ್ಟು ಸಮರ್ಥವಾಗಿರುತ್ತವೆ.
- ಡೀಸಲ್ ಆಕ್ಸಿಡೇಶನ್ ಕ್ಯಾಟಲಿಸ್ಟ್ - ಎಮಿಶನ್-ಕಡಿಮೆಗೊಳಿಸುವ ತಂತ್ರಜ್ಞಾನಗಳ ಮುಂಚೂಣಿಯಲ್ಲಿರುವ ಈ ಹೊಸ ಕ್ಯಾಟಲಿಸ್ಟ್ ಅಥವಾ ಪರಿವರ್ತಕವು ಹಾನಿಕಾರಕ ಎಕ್ಸಾಸ್ಟ್ ಎಮಿಶನ್ ಗಳನ್ನು ತಗ್ಗಿಸಲು ನಿರಂತರವಾಗಿ ಕೆಲಸ ಮಾಡುವ ಮೂಲಕ ಶುದ್ಧ ಗಾಳಿಯನ್ನು ಪೋಷಿಸುತ್ತದೆ ಮತ್ತು ಆರೋಗ್ಯಕರ ಪರಿಸರವನ್ನು ಕಾಪಾಡುತ್ತದೆ.
ವಿಭಿನ್ನ ರೀತಿಯ ಬಹುಮುಖ ಸಾಮರ್ಥ್ಯ
ಜಾನ್ ಡಿಯರ್ ನ TREM-IV ಟ್ರ್ಯಾಕ್ಟರ್ ಗಳಪ್ರಮುಖ ಲಕ್ಷಣಗಳಲ್ಲಿ ಒಂದು ಎಂದರೆ ಅವುಗಳ ಬಹುಮುಖ ಸಾಮರ್ಥ್ಯ. ವಿಶಾಲವಾದ ಜಮೀನುಗಳಲ್ಲಿ ನೇಗಿಲು ಹೂಡುವ ಕೆಲಸವಾಗಲಿ, ಮಣ್ಣಿನ ಉಳುಮೆ ಮಾಡುವುದಿರಲಿ, ಅಥವಾ ಬೆಳೆಗಳನ್ನು ಕಟಾವು ಮಾಡುವುದರಿಲಿ, ಈ ಟ್ರ್ಯಾಕ್ಟರ್ ಗಳು ವಿವಿಧ ಪ್ರಕಾರದ ಕೃಷಿ ಕೆಲಸಗಳಲ್ಲಿ ನಿರೀಕ್ಷೆಗೂ ಮೀರಿ ಫಲಿತಾಂಶ ನೀಡುತ್ತವೆ.
- ರೋಟರಿ ಟಿಲ್ಲರ್ ಗಳು - ಮಣ್ಣನ್ನು ನಿಖರತೆ ಮತ್ತು ದಕ್ಷತೆಯೊಂದಿಗೆ ಸಿದ್ಧಪಡಿಸುವುದು.
- ಸ್ಟ್ರಾ ರೀಪರ್ ಗಳು - ಬೆಳೆಗಳ ಉಳಿದ ಅವಶೇಷಗಳ ನಿರ್ವಹಣೆಯ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವುದು.
- ಪಟೇಟೋ ಪ್ಲಾಂಟರ್ ಗಳು - ಆರೋಗ್ಯಕರ ಆಲೂಗಡ್ಡೆ ಬೆಳೆಗಳಿಗಾಗಿ ಸೂಕ್ತ ಅಂತರ ಮತ್ತು ಆಳ ಖಚಿತಪಡಿಸುವುದು.
- ರಿವರ್ಸಿಬಲ್ MB ಪ್ಲೋ - ನೇಗಿಲು ಬಳಕೆಯ ಕಾರ್ಯಗಳಲ್ಲಿ ಬಹುಮುಖ ಸಾಮರ್ಥ್ಯ ಮತ್ತು ದಕ್ಷತೆಯನ್ನು ಒದಗಿಸುವುದು.
ಉತ್ಕೃಷ್ಟತೆಗಾಗಿ ತಯಾರಿಸಲ್ಪಟ್ಟಿದೆ
5310 ಮತ್ತು 5405 ಮಾಡಲ್ ಗಳು ಟ್ರ್ಯಾಕ್ಟರ್ ವಿನ್ಯಾಸ ಮತ್ತು ಕಾರ್ಯಕ್ಷಮತೆಯಲ್ಲಿ ಉತ್ಕೃಷ್ಟತೆಗೆ ಜಾನ್ ಡಿಯರ್ ನ ಬದ್ಧತೆಗೆ ಹಿಡಿದ ಕನ್ನಡಿಗಳಾಗಿವೆ.
5310 TREM-IV ಟ್ರ್ಯಾಕ್ಟರ್:
- ಗಟ್ಟಿಮುಟ್ಟಾದ ವಿನ್ಯಾಸ - ವಿವಿಧ ಪ್ರಕಾರದ ಮಣ್ಣುಗಳಲ್ಲಿ ಮತ್ತು ಸ್ಥಳದ ಸ್ವರೂಪದ ಸ್ಥಿತಿಗಳಲ್ಲಿ ಭಾರೀ ಕೃಷಿ ಕೆಲಸಗಳ ಕಾಠಿಣ್ಯತೆಗಳನ್ನು ಎದುರಿಸಲು ನಿರ್ಮಿಸಲಾಗಿದೆ.
- PowerTech ಎಂಜಿನ್ - ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ 57 ಹಾರ್ಸ್ ಪವರ್ ನ ಅಧಿಕ ಶಕ್ತಿಯನ್ನು ಪೂರೈಸುವ ಮೂಲಕ ಕಾರ್ಯಕ್ಷಮತೆ ಮತ್ತು ಪರಿಸರ-ಸ್ನೇಹ ಎರಡನ್ನೂ ಖಚಿತಪಡಿಸುತ್ತದೆ.
- ಅಧಿಕ ಆರಾಮದಾಯಕತೆ - ರಿಯರ್ ಫ್ಲೋರ್ ಎಕ್ಸ್ ಟೆನ್ಶನ್ ಗಳು ಮತ್ತು ಹೈ-ಬ್ಯಾಕ್ ಟೋರ್ಕ್ ನೊಂದಿಗೆ ಅಗಲವಾದ ಪ್ಲಾಟ್ ಫಾರ್ಮ್ ನಿಂದಾಗಿ ಆಪರೇಟರ್ ಗಳಿಗೆ ಆರಾಮದಾಯಕ ಮತ್ತು ಉತ್ಪಾದಕ ಕೆಲಸದ ವಾತಾವರಣ ಒದಗಿಸುತ್ತದೆ.
5405 TREM-IV Tractor:
- ತಾಂತ್ರಿಕ ಅಭಿವೃದ್ಧಿ - ಶಕ್ತಿಶಾಲಿ 63-ಹಾರ್ಸ್ ಪವರ್ ಟರ್ಬೊಚಾರ್ಜ್ ಚಾಲಿತ PowerTech ಎಂಜಿನ್ ಮತ್ತು HPCR ಫ್ಯುಯೆಲ್ ಇಂಜೆಕ್ಷನ್ ಸಿಸ್ಟಮ್ ಸರಿಸಾಟಿಯಿಲ್ಲದ ಸಾಮರ್ಥ್ಯವನ್ನು ನೀಡುತ್ತದೆ.
- ಅಂತಾರಾಷ್ಟ್ರೀಯ ಆಕಾರ - ಗುಣಮಟ್ಟ ಮತ್ತು ಚೆನ್ನಾಗಿ ಕಾಣಿಸುವ ಜಾಗತಿಕ ಮಾನದಂಡಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನದಿಂದ ರೈತರಿಗೆ ಪ್ರಯೋಜನ ಸಿಗುವಂತೆ ಮತ್ತು ಅವರ ಉಪಕರಣದ ಬಗ್ಗೆ ಅವರು ಹೆಮ್ಮೆ ಪಡುವಂತೆ ಖಚಿತಪಡಿಸುತ್ತದೆ.
- ಸ್ಟೇರಿಂಗ್ ಆಯ್ಕೆಗಳು - ಪವರ್ ಸ್ಟೇರಿಂಗ್ ನಿಂದ ಟಿಲ್ಟ್ ಮತ್ತು ಟೆಲಿಸ್ಕೋಪ್ ಸ್ಟೇರಿಂಗ್ ವರೆಗೆ, ಜಾನ್ ಡಿಯರ್ ಆಪರೇಟರ್ ಆರಾಮ ಮತ್ತು ನಿಯಂತ್ರಣಕ್ಕೆ ಪ್ರಾಶಸ್ತ್ಯ ನೀಡುತ್ತದೆ, ಈ ಮೂಲಕ ಹೊಲದಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವಾಗ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
ತಾಂತ್ರಿಕ ಲಕ್ಷಣಗಳು
ಈ ಹೊಸತನದಿಂದ ತುಂಬಿದ ಟ್ರ್ಯಾಕ್ಟರ್ ಗಳ ಲಕ್ಷಣಗಳ ಬಗ್ಗೆ ಇನ್ನಷ್ಟು ವಿವರಗಳನ್ನು ಇಲ್ಲಿ ನೀಡಿದೆ:
ಲಕ್ಷಣಗಳು | 5310 TREM-IV ಟ್ರ್ಯಾಕ್ಟರ್ | 5405 TREM-IV ಟ್ರ್ಯಾಕ್ಟರ್ |
ಎಂಜಿನ್ ಟೈಪ್ | ಜಾನ್ ಡಿಯರ್ 3029H, 57 HP | ಜಾನ್ ಡಿಯರ್ 3029H, 63 HP |
ಏರ್ ಫಿಲ್ಟರ್ | ಡ್ರೈ ಟೈಪ್, ಡ್ಯುಯೆಲ್ ಎಲಿಮೆಂಟ್ | ಡ್ರೈ ಟೈಪ್, ಡ್ಯುಯೆಲ್ ಎಲಿಮೆಂಟ್ |
ಟ್ರಾನ್ಸ್ ಮಿಶನ್ | 12F+4R / 12F+12R / 9F+3R | 12F+4R / 12F+12R / 9F+3R |
ಸ್ಪೀಡ್ ಗಳು (ಫಾರ್ವರ್ಡ್) | 0.35 ರಿಂದ 32.6 kmph | 1.9 ರಿಂದ 32.6 kmph |
ಸ್ಪೀಡ್ ಗಳು (ರಿವರ್ಸ್) | 0.61 ರಿಂದ 20 kmph | 0.35 ರಿಂದ 0.87 kmph |
ಬ್ರೇಕ್ ಗಳು | ಆಯಿಲ್ ನಲ್ಲಿ ಅದ್ದಿದ ಡಿಸ್ಕ್ ಬ್ರೇಕ್ ಗಳು | ಆಯಿಲ್ ನಲ್ಲಿ ಅದ್ದಿದ ಡಿಸ್ಕ್ ಬ್ರೇಕ್ ಗಳು |
ಹೈಡ್ರಾಲಿಕ್ಸ್ | ಗರಿಷ್ಠ ಎತ್ತುವ ಸಾಮರ್ಥ್ಯ: 2000/2500 Kgf |
ಗರಿಷ್ಠ ಎತ್ತುವ ಸಾಮರ್ಥ್ಯ: 2000/2500 Kgf |
ಸ್ಟೇರಿಂಗ್ | ಪವರ್ ಸ್ಟೇರಿಂಗ್ / ಟಿಲ್ಟ್ ಸ್ಟೇರಿಂಗ್ ಆಯ್ಕೆ | ಪವರ್ ಸ್ಟೇರಿಂಗ್ / ಟಿಲ್ಟ್ ಮತ್ತು ಟೆಲಿಸ್ಕೋಪಿಕ್ (ಕ್ಯಾಬ್) |
ಪವರ್ ಟೇಕ್ ಆಫ್ | ಇಂಡಿಪೆಂಡೆಂಟ್, 6 ಸ್ಪ್ಲೈನ್ ಗಳು | ಇಂಡಿಪೆಂಡೆಂಟ್, 6 ಸ್ಪ್ಲೈನ್ ಗಳು |
ವ್ಹೀಲ್ ಗಳು ಮತ್ತು ಟಯರ್ ಗಳು | ಮುಂಭಾಗ: 6.5 x 20, ಹಿಂಭಾಗ: 16.9 x 30 |
ಮುಂಭಾಗ: 6.5 x 20, ಹಿಂಭಾಗ: 16.9 x 30 |
ಭವಿಷ್ಯದ ಬೆಳವಣಿಗೆಯನ್ನು ಈಗಲೇ ಅನುಭವಿಸಿ
ಕೃಷಿ ಭೂದೃಶ್ಯ ಬೆಳೆದಂತೆಲ್ಲ ಜಾನ್ ಡಿಯರ್ ಹೊಸ ತಂತ್ರಜ್ಞಾನದ ಮುಂಚೂಣಿಯಲ್ಲಿರುತ್ತದೆ ಮತ್ತು ಸಾಧ್ಯವಾದ ಮಟ್ಟಿಗೆ ಸೇವೆಗಳನ್ನು ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತದೆ. ಭಾರತದಲ್ಲಿನ ರೈತರು TREM-IV ಟ್ರ್ಯಾಕ್ಟರ್ ಗಳನ್ನು ಉಪಯೋಗಿಸುವ ಮೂಲಕ ಕಾರ್ಯಕ್ಷಮತೆ ಅಥವಾ ಸಾಮರ್ಥ್ಯಕ್ಕೆ ಧಕ್ಕೆಯಾಗದಂತೆ ಸಮರ್ಥನೀಯ ಕೃಷಿ ಅಭ್ಯಾಸಗಳನ್ನು ಮಾಡಿಕೊಂಡು ಹೋಗಬಹುದು. ಇಂದೇ ಈ ಕ್ರಾಂತಿಯಲ್ಲಿ ಕೈಜೋಡಿಸಿ ಮತ್ತು ಜಾನ್ ಡಿಯರ್ ನೊಂದಿಗೆ ಕೃಷಿಯ ಭವಿಷ್ಯವನ್ನು ಅನುಭವಿಸಿ.