ಜಾನ್ ಡಿಯರ್ ನ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಕೃಷಿಯನ್ನು ಪರಿವರ್ತಿಸುವುದು!

John-deere-technology-blog

ಕೃಷಿ ಯಂತ್ರಗಳಿಗೆ ಸಂಬಂಧಿಸಿದಂತೆ ಜಾನ್ ಡಿಯರ್ ಹೊಸತನ ಮತ್ತು ವಿಶ್ವಾಸಾರ್ಹತೆಯ ಮಾರ್ಗದರ್ಶಿಯಾಗಿ ಹೊರಹೊಮ್ಮುತ್ತದೆ.  ಭಾರತದಲ್ಲಿ ಮುಂಚೂಣಿಯಲ್ಲಿರುವ ಟ್ರ್ಯಾಕ್ಟರ್ ಕಂಪನಿಯಾಗಿ ಜಾನ್ ಡಿಯರ್ ಇಂಡಿಯಾ ಕೃಷಿ ಉತ್ಪಾದಕತೆ ಮತ್ತು ಸಾಮರ್ಥ್ಯವನ್ನು ವೃದ್ಧಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ನಿರಂತರವಾಗಿ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. 

ಭಾರತದ ಕೃಷಿಯಲ್ಲಿ ಕ್ರಾಂತಿ ತರುವ ತೀರ ಇತ್ತೀಚಿನ ಬದಲಾವಣೆಗಳು ಮತ್ತು ಹೊಸತನಗಳನ್ನು ಇನ್ನಷ್ಟು ಆಳವಾಗಿ ಅರಿತುಕೊಳ್ಳೋಣ.

ವರ್ಚುವಲ್ ಪವಿಲಿಯನ್:  ಹೊಸತನಕ್ಕೆ ಡಿಜಿಟಲ್ ಹೆಬ್ಬಾಗಿಲು

ಜಾನ್ ಡಿಯರ್ ಇಂಡಿಯಾದ ಅತ್ಯಂತ ರೋಮಾಂಚಕ ಅಭಿವೃದ್ಧಿಗಳಲ್ಲಿ ಒಂದೆಂದರೆ ವರ್ಚುವಲ್ ಪವಿಲಿಯನ್. ಈ ಹೊಸ ವೇದಿಕೆಯು ವ್ಯಾಪಕ ವರ್ಚುವಲ್ ಅನುಭವ ನೀಡುವ ಮೂಲಕ ಬಳಕೆದಾರರು ತಮ್ಮ ಸ್ಕ್ರೀನ್ ಗಳಿಂದ ಜಾನ್ ಡಿಯರ್ ಕೊಡುಗೆಗಳ ಹಲವಾರು ಅಂಶಗಳನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತದೆ.

Virtual Tour

 

1. ಉತ್ಪನ್ನಗಳ ಶೋರೂಮ್ ಗಳು
ಬಳಕೆದಾರರು ನಿಯೋಜಿಸಲಾದ ಡೋರ್ ಮೇಲೆ ಕ್ಲಿಕ್ ಮಾಡುವ ಮೂಲಕ ಟ್ರ್ಯಾಕ್ಟರ್ ಮಾಡಲ್ ಗಳು, ಫ್ಯಾಕ್ಟರಿ ಪರಿಚಯಗಳು (ಟೂರ್ ಗಳು) ಮತ್ತು ಗ್ರಾಹಕರ ಅನುಭವ ಕೇಂದ್ರಗಳಂತಹ ವಿಭಿನ್ನ ವಿಭಾಗಗಳನ್ನು ನ್ಯಾವಿಗೇಟ್ ಮಾಡಬಹುದು.
2. 360-ಡಿಗ್ರಿ ನೋಟ
ಈ ವೇದಿಕೆಯು ಟ್ರ್ಯಾಕ್ಟರ್ ಮಾಡಲ್ ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಅವಕಾಶ ನೀಡುತ್ತದೆ, ತಾಂತ್ರಿಕ ಲಕ್ಷಣಗಳನ್ನು ವಿವರವಾಗಿ ಅರ್ಥಮಾಡಿಕೊಳ್ಳುವುದಕ್ಕಾಘಿ 360-ಡಿಗ್ರಿ ನೋಟ ನೀಡುತ್ತದೆ.
3. ಫ್ಯಾಕ್ಟರಿ ಪರಿಚಯ
ವರ್ಚುವಲ್ ಪವಿಲಿಯನ್ ನ ಫ್ಯಾಕ್ಟರಿ ವಿಭಾಗವನ್ನು ಒಳಹೊಕ್ಕು ನೋಡಿದಾಗ ಜಾನ್ ಡಿಯರ್ ಇಂಡಿಯಾ ಬಳಸುತ್ತಿರುವ ಅತ್ಯಾಧುನಿಕ ಉತ್ಪಾದನಾ ಪ್ರಕ್ರಿಯೆಗಳನ್ನು ತೋರಿಸುತ್ತದೆ. ಮಲ್ಟಿ-ಮಾಡಲ್ ಅಸೆಂಬ್ಲಿ ಲೈನ್ ಗಳಿಂದ ಪ್ರಿಸಿಶನ್ ರೋಬೊಟಿಕ್ಸ್ ವರೆಗೆ ಪುಣೆ ಫ್ಯಾಕ್ಟರಿಯಲ್ಲಿ ಶಕ್ತಿಶಾಲಿ ಮತ್ತು ತಂತ್ರಜ್ಞಾನದ ದೃಷ್ಟಿಯಿಂದ ಮುಂದುವರಿದ ಟ್ರ್ಯಾಕ್ಟರ್ ಗಳನ್ನು ತಯಾರಿಸುವಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ.
4. ಗ್ರಾಹಕರ ಅನುಭವ ಕೇಂದ್ರ
ವರ್ಚುವಲ್ ಪವಿಲಿಯನ್ ಗ್ರಾಹಕರ ಅನುಭವ ಕೇಂದ್ರವನ್ನು ಕೂಡ ಹೊಂದಿದ್ದು, ಜಾನ್ ಡಿಯರ್ ಒದಗಿಸುವ ಕೃಷಿ-ಸಂಬಂಧಿತ ಪರಿಹಾರಗಳು, ಆರ್ಥಿಕ ಸೇವೆಗಳು, ಪಾರ್ಟ್ ಗಳು, ಮತ್ತು ಸೇವೆಗಳನ್ನು ಕುರಿತು ಮೌಲ್ಯಯುತ ಒಳನೋಟಗಳನ್ನು ನೀಡುತ್ತದೆ. ಈ ಸಮಗ್ರ ವಿಧಾನವು ಗ್ರಾಹಕರು ತಮ್ಮ ಕೃಷಿ ಯೋಜನೆಗಳಿಗಾಗಿ ಎಲ್ಲ ಅಗತ್ಯ ಸಂಪನ್ಮೂಲಗಳನ್ನು ಹೊಂದುವುದನ್ನು ಖಚಿತಪಡಿಸುತ್ತದೆ.

JDLink™ – ಸ್ಮಾರ್ಟ್ ಕೃಷಿಗಾಗಿ ಸಂಪರ್ಕ ಪರಿಹಾರ

Operations Center ಆ್ಯಪ್ ಅನ್ನು ಉಪಯೋಗಿಸುವ ಮೂಲಕ, ರೈತರು ತಮ್ಮ ಟ್ರ್ಯಾಕ್ಟರ್ ಗಳೊಂದಿಗೆ ರಿಯಲ್ ಟೈಮ್ ನಲ್ಲಿ ಸಂಪರ್ಕದಲ್ಲಿರಬಹುದು, ಎಲ್ಲ ಸೌಲಭ್ಯಗಳು ಅವರ ಬೆರಳ ತುದಿಗಳಲ್ಲಿ ಲಭ್ಯ. ಈ ಮುಂದುವರಿದ ತಂತ್ರಜ್ಞಾನವು ರೈತರು ತಮ್ಮ ಟ್ರ್ಯಾಕ್ಟರ್ ಗಳನ್ನು ನಿರಾಯಾಸವಾಗಿ ಮೇಲ್ವಿಚಾರಿಸುವುದನ್ನು ಸಾಧ್ಯವಾಗಿಸುವ ಮೂಲಕ ಅವರ ಕಾರ್ಯಾಚರಣೆಗಳಲ್ಲಿ ಉತ್ತಮ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವನ್ನು ಖಚಿತಪಡಿಸುತ್ತದೆ.

jd-link

JDLink™ನ ಪ್ರಮುಖ ಲಕ್ಷಣಗಳು:

 • ಟ್ರ್ಯಾಕ್ಟರ್ ಸ್ಥಿತಿ ಬಗ್ಗೆ ಎಚ್ಚರಿಕೆಗಳು: ನಿಮ್ಮ ಟ್ರ್ಯಾಕ್ಟರ್ ನ ಸ್ಥಿತಿಯ ಬಗ್ಗೆ ರಿಯಲ್-ಟೈಮ್ ಎಚ್ಚರಿಕೆಗಳನ್ನು ಸ್ವೀಕರಿಸುವ ಮೂಲಕ ಪೂರ್ವಭಾವಿ ಮೆಂಟೆನನ್ಸ್ ಮತ್ತು ಡೌನ್ ಟೈಮ್ ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.
 • ಸುಲಭ ಟ್ರ್ಯಾಕ್ಟರ್ ಸ್ಥಳ: ನಿಮ್ಮ ಟ್ರ್ಯಾಕ್ಟರ್ ಅನ್ನು ಸುಲಭವಾಗಿ ಕಂಡುಹಿಡಿಯಿರಿ, ಈ ಮೂಲಕ ಭದ್ರತೆ ಮತ್ತು ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ವೃದ್ಧಿಸಿ.
 • ಸುವ್ಯವಸ್ಥಿತಗೊಳಿಸಿದ ಜಮೀನಿನ ಕೆಲಸದ ದಾಖಲೆಗಳ ಸಂಗ್ರಹಣೆ: ಜಮೀನಿನ ಕೆಲಸದ ದಾಖಲೆಗಳ ಸಂಗ್ರಹಣೆ ಸುಲಭಗೊಳಿಸಿ, ಚಟುವಟಿಕೆಗಳನ್ನು ಅನುಸರಿಸುವುದು ಮತ್ತು ಕೆಲಸದ ರೀತಿಯನ್ನು ಉತ್ತಮಗೊಳಿಸುವುದನ್ನು ಸುಲಭಗೊಳಿಸುತ್ತದೆ.
 • ಮೇಲ್ವಿಚಾರಣೆ ಮತ್ತು ರಕ್ಷಣೆ: ವ್ಯಾಪಕ ಒಳನೋಟಗಳು ಮತ್ತು ಭದ್ರತೆಯ ಲಕ್ಷಣಗಳ ಮುಖಾಂತರ ನಿಮ್ಮ ಟ್ರ್ಯಾಕ್ಟರ್ ಅನ್ನು ಮೇಲ್ವಿಚಾರಿಸಿ ಮತ್ತು ರಕ್ಷಿಸಿ.
 • ಸುಲಭಗೊಳಿಸಿದ ಫ್ಲೀಟ್ ನಿರ್ವಹಣೆ: ನಿಮ್ಮ ಫ್ಲೀಟ್ ಅನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ವಿವಿಧ ಟ್ರ್ಯಾಕ್ಟರ್ ಗಳ ಕಾರ್ಯಾಚರಣೆಗಳು ಸರಾಗವಾಗಿ ನಡೆಯುವಂತೆ ಖಚಿತಪಡಿಸಿಕೊಳ್ಳಿ.

PowerTech™ ಟ್ರ್ಯಾಕ್ಟರ್ ಗಳಲ್ಲಿ JDLink  ಫೀಲ್ಡ್ ಇನ್ ಸ್ಟಲೇಶನ್ ಕಿಟ್ ಅನ್ನು ಇನ್ ಸ್ಟಾಲ್ ಮಾಡುವ ಮೂಲಕ, ಭಾರತದಲ್ಲಿನ ರೈತರು ಯಂತ್ರದ ಕಾರ್ಯಕ್ಷಮತೆಯನ್ನು ಮೇಲ್ವಿಚಾರಿಸಲು, ಗದ್ದೆಯ ಚಟುವಟಿಕೆಗಳನ್ನು ಅನುಸರಿಸಲು, ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಉತ್ತಮಗೊಳಿಸಲು ಮುಂದುವರಿದ ತಂತ್ರಜ್ಞಾನಗಳ ಶಕ್ತಿಯ ಸದುಪಯೋಗಪಡಿಸಿಕೊಳ್ಳಬಹುದು.

JDLink ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ.

ಜಾನ್ ಡಿಯರ್ PowerTech™ ಟ್ರ್ಯಾಕ್ಟರ್ ಗಳ ಬಗ್ಗೆ ಹೆಚ್ಚು ತಿಳಿಯಲು:

5310 PowerTech ಟ್ರ್ಯಾಕ್ಟರ್:

5405 PowerTech ಟ್ರ್ಯಾಕ್ಟರ್: 

5075E PowerTech ಟ್ರ್ಯಾಕ್ಟರ್:

ಕಾರ್ಯಕ್ಷಮತೆಗಾಗಿ ಹೊಸತನ ತರುವುದು:  5D GearPro™ ಸರಣಿ

ಜಾನ್ ಡಿಯರ್ ಇಂಡಿಯಾ  5D GearPro™ ಸರಣಿಯ ಪರಿಚಯದೊಂದಿಗೆ ತನ್ನ ಶಕ್ತಿ ಮೀರಿ ಟ್ರ್ಯಾಕ್ಟರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತಿದೆ. ಈ ಟ್ರ್ಯಾಕ್ಟರ್ ಗಳು ಶ್ರೇಷ್ಠ ಕಾರ್ಯಕ್ಷಮತೆಯನ್ನು ಮುಂದುವರಿದ ಲಕ್ಷಣಗಳೊಂದಿಗೆ ಸಂಯೋಜಿಸುವ ಮೂಲಕ ಆಧುನಿಕ ರೈತರುಗಳ ಬೆಳೆಯುತ್ತಿರುವ ಅವಶ್ಯಕತೆಗಳನ್ನು ಪೂರೈಸುತ್ತವೆ.

d-series-technology-which-transforms-life

1. ವರ್ಧಿತ ಟ್ರಾನ್ಸ್ ಮಿಶನ್

5D GearPro™ ಸರಣಿಯ ಟ್ರ್ಯಾಕ್ಟರ್ ಗಳು 12 ಫಾರ್ವರ್ಡ್ ಮತ್ತು 4 ರಿವರ್ಸ್ ಗೇರ್ ಗಳನ್ನು ಹೊಂದಿದ್ದು, ಬಳಕೆದಾರರಿಗೆ ಅವರ ಕೆಲಸಗಳ ಮೇಲೆ ಹೆಚ್ಚಿನ ಅನುಕೂಲತೆ ಮತ್ತು ನಿಯಂತ್ರಣ ನೀಡುತ್ತವೆ. ಈ ಟ್ರ್ಯಾಕ್ಟರ್ ಗಳು ದೊಡ್ಡ ಮುಂದಿನ ಟಯರ್ ಗಳ ಆಯ್ಕೆಗಳನ್ನು ಹೊಂದಿದ್ದು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತವೆ, ಹಲವಾರು ಭೂಪ್ರದೇಶಗಳಿಗೆ ಮತ್ತು ಕೃಷಿ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗಿವೆ.

2. ಸುಧಾರಿತ ಚಲಿಸುವಿಕೆ

5D GearPro™ ಸರಣಿ ಟ್ರ್ಯಾಕ್ಟರ್ ಗಳ ಮುಂದುವರಿದ ಎಂಜಿನಿಯರಿಂಗ್ ಶಬ್ದದ ಮಟ್ಟಗಳನ್ನು ಕಡಿಮೆ ಮಾಡುತ್ತದೆ, ಆಪರೇಟರ್ ಗಳಿಗೆ ಹೆಚ್ಚು ಆರಾಮದಾಯಕ ಮತ್ತು ಆನಂದಮಯ ಕೆಲಸದ ವಾತಾವರಣ ಒದಗಿಸುತ್ತದೆ. ಜಾನ್ ಡಿಯರ್ ನ 5D GearPro™ ಸರಣಿ ಟ್ರ್ಯಾಕ್ಟರ್ ಗಳ ಈ ಲಕ್ಷಣವು ಇವುಗಳನ್ನು ಒಳಗೊಂಡಿರುತ್ತದೆ:

 • ಕಡಿಮೆಯಾದ ಶಬ್ದದ ಮಟ್ಟಗಳು - ಈ ಟ್ರ್ಯಾಕ್ಟರ್ ಗಳನ್ನು ಕಡಿಮೆ ಶಬ್ದ ಮಾಡುವಂತೆ ಉತ್ಪಾದಿಸಲಾಗಿದ್ದು, ಹೆಚ್ಚು ಆರಾಮದಾಯಕ ಕೆಲಸದ ವಾತಾವರಣ ಸೃಷ್ಟಿಸುತ್ತವೆ ಮತ್ತು ಮನೆಗಳಿರುವ ಪ್ರದೇಶಗಳಲ್ಲಿ ತೊಂದರೆಗಳನ್ನು ಕಡಿಮೆ ಮಾಡುತ್ತವೆ.
 • ಆರಾಮದಾಯಕ ಕಾರ್ಯಾಚರಣೆ - ಆಪರೇಟರ್ ಗಳು ಅನುಕೂಲಕರ ಸೀಟ್, ಇಂಟ್ಯೂಟಿವ್ ಕಂಟ್ರೋಲ್ ಗಳು, ಮತ್ತು ಕಡಿಮೆ ವೈಬ್ರೇಶನ್ ಗಳಿಂದ ಪ್ರಯೋಜನ ಪಡೆಯಬಹುದು, ದೀರ್ಘಕಾಲದ ಕೆಲಸದ ವೇಳೆ ಆಯಾಸ ಕಡಿಮೆಯಾಗುತ್ತದೆ.
 • ಫೋರ್-ವ್ಹೀಲ್ ಡ್ರೈವ್ ತಂತ್ರಜ್ಞಾನ - 4WD ಹಿಡಿತ ಮತ್ತು ಸ್ಥಿರತೆಯನ್ನು ವೃದ್ಧಿಸುತ್ತದೆ, ಈ ಮೂಲಕ ಕಷ್ಟಕರ ಭೂಪ್ರದೇಶಗಳಲ್ಲಿ ಸುಲಭವಾಗಿ ಚಲಿಸುವಂತೆ ಮಾಡುತ್ತದೆ.
 • ವೃದ್ಧಿಸಿದ ಸ್ಥಿರತೆ - ಕಡಿಮೆ ಗುರುತ್ವಾಕರ್ಷಣ ಕೇಂದ್ರ ಮತ್ತು ಉತ್ತಮಗೊಂಡ ತೂಕ ವಿತರಣೆಯಂತಹ ಡಿಸೈನ್ ಸುಧಾರಣೆಗಳಿಂದಾಗಿ ಇಕ್ಕಟ್ಟಾದ ತಿರುವುಗಳು ಅಥವಾ ಹಠಾತ್ ಚಲನೆಗಳ ವೇಳೆ ಸ್ಥಿರತೆಯನ್ನು ಖಚಿತಪಡಿಸುತ್ತವೆ.

3. ಸಾಮರ್ಥ್ಯ ಮತ್ತು ಉತ್ಪಾದಕತೆ

GearPro™ ಸರಣಿಯಂತಹ ಮುಂದುವರಿದ ಲಕ್ಷಣಗಳೊಂದಿಗೆ, ರೈತರು ತಮ್ಮ ನಿರ್ದಿಷ್ಟ ಕೆಲಸಗಳಿಗಾಗಿ ಉತ್ತಮ ಸ್ಪೀಡ್ ಮತ್ತು ಗೇರ್ ಆಯ್ಕೆ ಮಾಡಬಹುದು, ಈ ಮೂಲಕ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬಹುದು. ಈ ಹೊಸ ಬೆಳವಣಿಗೆಗಳಿಂದಾಗಿ ಕಾರ್ಯಾಚರಣೆಗಳು ಸುವ್ಯವಸ್ಥಿತಗೊಳ್ಳುತ್ತವೆಯಲ್ಲದೇ ರೈತರ ಒಟ್ಟಾರೆ ಸಮೃದ್ಧಿಯನ್ನು ಕೂಡ ಹೆಚ್ಚಿಸುತ್ತವೆ.

ಜಾನ್ ಡಿಯರ್ GerPro™ ಟ್ರ್ಯಾಕ್ಟರ್ ಗಳ ಬಗ್ಗೆ ಹೆಚ್ಚು ತಿಳಿಯಲು:

5045D GearPro™ ಸರಣಿ: 

5050D GearPro™ ಸರಣಿ:

5210 GearPro™ ಸರಣಿ: 

AutoTrac™: ಗದ್ದೆಯ ಕಾರ್ಯಾಚರಣೆಗಳಲ್ಲಿ ಕ್ರಾಂತಿ ತರುವುದು

John_Deere_AutoTrac_Precision_Ag

ಭಾರತದಲ್ಲಿ ಇದೇ ಮೊದಲ ಬಾರಿ, ಜಾನ್ ಡಿಯರ್ ಪರಿಚಯಿಸುತ್ತಿದೆ AutoTrac™, ಇದೊಂದು ಆಟೊಮೇಟೆಡ್ ವೆಹಿಕಲ್ ಗೈಡನ್ಸ್ ಸಿಸ್ಟಮ್ ಆಗಿದ್ದು, ಗದ್ದೆಯ ಕಾರ್ಯಾಚರಣೆಗಳಲ್ಲಿ ಹೊಸತನ ತರುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅದು ಏಕೆ ಬದಲಾವಣೆ ತರುವಂಥದ್ದಾಗಿದೆ ಎಂಬುದಕ್ಕೆ ಕಾರಣವಿಲ್ಲಿದೆ:

Need for AutoTrac™

AutoTrac™ ಅವಶ್ಯಕತೆ

 • ಹ್ಯಾಂಡ್ಸ್-ಫ್ರೀ ಮಾರ್ಗದರ್ಶನ: AutoTrac™ ಹ್ಯಾಂಡ್ಸ್-ಫ್ರೀ ಸ್ಟೇರಿಂಗ್ ಒದಗಿಸುವ ಮೂಲಕ ಆಪರೇಟರ್ ಆಯಾಸ ಕಡಿಮೆಯಾಗಿಸುತ್ತದೆ ಮತ್ತು ಉತ್ಪಾದಕತೆಯನ್ನು ವೃದ್ಧಿಸುತ್ತದೆ.
 • ನಿಖರವಾದ ಸಸಿ ಬಿತ್ತನೆ/ಬೀಜ ಬಿತ್ತನೆ - ಒಂದರ ಮೇಲೆ ಒಂದು ಬಿತ್ತುವುದನ್ನು ಕಡಿಮೆಗೊಳಿಸುವ ಮೂಲಕ ಸಮಯ, ಇಂಧನ, ಹಾಗೂ ಸಂಪನ್ಮೂಲಗಳ ಉಳಿತಾಯವಾಗುತ್ತದೆ, ವಿಶೇಷವಾಗಿ ಸಾಲು ಬೆಳೆಗಳಲ್ಲಿ ಉಳಿತಾಯವಾಗುತ್ತದೆ.

Benefits of AutoTrac™

AutoTrac™ ಪ್ರಯೋಜನಗಳು

 • ವೃದ್ಧಿಸಿದ ಸಾಮರ್ಥ್ಯ: ನೇರ ದಾರಿಯ ಮಾರ್ಗದರ್ಶನದಿಂದಾಗಿ ಹೆಚ್ಚು ಜಾಗದಲ್ಲಿ ಉಳುಮೆ ಸಾಧ್ಯವಾಗುತ್ತದೆ ಹಾಗೂ ಗದ್ದೆಯಲ್ಲಿ ಪ್ರತಿಯೊಂದು ಹಾಯಿಸುವಿಕೆಯನ್ನು ಹೆಚ್ಚಿಸುತ್ತದೆ.
 • ಕಡಿಮೆಯಾದ ಡೌನ್ ಟೈಮ್: ರಿಯಲ್-ಟೈಮ್ ಮೇಲ್ವಿಚಾರಣೆ ಮತ್ತು ಪತ್ತೆಮಾಡುವಿಕೆಯು ಡೌನ್ ಟೈಮ್ ಅನ್ನು ಕಡಿಮೆ ಮಾಡುತ್ತದೆ, ಹೀಗೆ ಕಾರ್ಯಾಚರಣೆಗಳನ್ನು ಅಡೆತಡೆಯಿಲ್ಲದೇ ಆಗುವಂತೆ ಮಾಡುತ್ತದೆ.
 • ಸುಧಾರಿತ ದಕ್ಷತೆ - ಆರಾಮದಾಯಕ ಮತ್ತು ಸುಲಭ ಬಳಕೆಗಾಗಿ ವಿನ್ಯಾಸಗೊಳಿಸಿದ AutoTrac™ ನಿಖರವಾದ ಗದ್ದೆಯ ನ್ಯಾವಿಗೇಶನ್ ಖಚಿತಪಡಿಸುವುದರೊಂದಿಗೆ ಆಪರೇಟರ್ ಅನುಭವವನ್ನು ವೃದ್ಧಿಸುತ್ತದೆ.

StarFire™ 6000 Receiver

ಪ್ರಿಸಿಶನ್ Ag ಯ ಅಡಿಪಾಯ: StarFire™ 6000 ರಿಸೀವರ್

ಜಾನ್ ಡಿಯರ್ ನ ನಿಖರವಾದ ag ತಂತ್ರಜ್ಞಾನಕ್ಕೆ ಕಾರಣ StarFire™ 6000 ರಿಸೀವರ್ ಆಗಿದ್ದು, ಟ್ರ್ಯಾಕ್ಟರ್ ಗಳಿಗೆ ಸಾಟಿಯಿಲ್ಲದ ನಿಖರತೆಯೊಂದಿಗೆ ಸ್ಯಾಟಲೈಟ್-ಆಧರಿತ ಮಾರ್ಗದರ್ಶನ ನೀಡುತ್ತದೆ.

StarFire™ 6000 ರಿಸೀವರ್ ಲಕ್ಷಣಗಳು

 • ನೇರ ದಾರಿಯ ಮಾರ್ಗದರ್ಶನ - ಟ್ರ್ಯಾಕ್ಟರ್ ಗಳು ನೇರ ದಾರಿಯಲ್ಲಿ ಸಾಗುವುದನ್ನು ಸಾಧ್ಯವಾಗಿಸುವ ಮೂಲಕ ಸಮಾನತೆ ಮತ್ತು ನಿಖರತೆಯನ್ನು ಒದಗಿಸುತ್ತದೆ.
 • 2" ಇಂಚಿನ ನಿಖರತೆ - ನಿಖರವಾದ ಇರಿಸುವಿಕೆ ಸಾಧ್ಯವಾಗಿಸುತ್ತದೆ, ಈ ಮೂಲಕ ಸಾಲುಗಳ ನಡುವೆ ಉತ್ತಮ ಅಂತರ ಮತ್ತು ಬೀಜ ಇಡುವಿಕೆಗೆ ಅವಕಾಶ ಮಾಡಿಕೊಡುತ್ತದೆ.
 • ಬಾಳಿಕೆ ಬರುವ ನಿರ್ಮಾಣ: ಧೂಳು ಮತ್ತು ಆರ್ದ್ರತೆಯನ್ನು ನಿರೋಧಿಸುವ ಮೂಲಕ ಕಠಿಣ ಕೃಷಿ ಪರಿಸ್ಥಿತಿಗಳನ್ನು ಸಹಿಸುವುದಕ್ಕಾಗಿ ರಿಸೀವರ್ ನಿರ್ಮಿಸಲಾಗಿದ್ದು, ಪ್ರತಿಯೊಂದು ಋತುವಿನಲ್ಲಿ ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ.

 

ಕಮಾಂಡ್ ಸೆಂಟರ್: ಪ್ರಿಸಿಶನ್ ಡಿಸ್ಪ್ಲೇಗಳು

ಕಮಾಂಡ್ ಸೆಂಟರ್: ಪ್ರಿಸಿಶನ್ ಡಿಸ್ಪ್ಲೇಗಳು

ಜಾನ್ ಡಿಯರ್ ನ ಪ್ರಿಸಿಶನ್ ಡಿಸ್ಪ್ಲೇಗಳು ಸಮರ್ಥ ಕೃಷಿ ಕಾರ್ಯಾಚರಣೆಗಳ ಪ್ರಮುಖ ಗುಣವಾಗಿದ್ದು, ಸ್ಪಷ್ಟ ನೋಟ ಮತ್ತು ಇಂಟ್ಯೂಟಿವ್ ಕಂಟ್ರೋಲ್ ಗಳೊಂದಿಗೆ ಆಪರೇಟರ್ ಗಳನ್ನು ಸಶಕ್ತಗೊಳಿಸುತ್ತವೆ.

ಪ್ರಿಸಿಶನ್ ಡಿಸ್ಪ್ಲೇಗಳ ಲಕ್ಷಣಗಳು

 • ಓಪನ್ ಸ್ಟೇಶನ್ ಡಿಸೈನ್ - ಶಾಖ, ಹೊಲಸು, ಮತ್ತು ಧೂಳು ತಡೆಯುವುದರಿಂದ, ವಿಶ್ವಾಸಾರ್ಹ ಕಾರ್ಯಕ್ಷಮತೆ ಖಚಿತಪಡಿಸುತ್ತದೆ.
 • ಹೆಚ್ಚು ಚೆನ್ನಾಗಿ ಕಾಣಿಸುವಿಕೆ - ಪ್ರಕಾಶಮಾನವಾದ ಸೂರ್ಯನ ಬೆಳಕನ್ನು ಎದುರಿಸಲು ವಿನ್ಯಾಸಗೊಳಿಸಿರುವುದರಿಂದ, ಕಠಿಣ ವಾತಾವರಣಗಳಲ್ಲಿ ಕೂಡ ಆಪರೇಟರ್ ಗಳಿಗೆ ಮುಂದಿನ ದಾರಿ ಹೆಚ್ಚು ಚೆನ್ನಾಗಿ ಕಾಣಿಸುವಂತೆ ಮಾಡುತ್ತದೆ.
 • ಅನುಕಲಿತ ಅನುಭವ - ಇತರ ಪ್ರಿಸಿಶನ್ ag ಕಂಪೋನಂಟ್ ಗಳೊಂದಿಗೆ ಸರಾಗವಾಗಿ ಅನುಕಲನವಾಗುವ ಕಾರಣ ರೈತರಿಗೆ ಒಟ್ಟುಗೂಡಿಸಿದ ಮತ್ತು ಬಳಸಲು ಸುಲಭವಾದ ಇಂಟರ್ ಫೇಸ್ ಅನ್ನು ಒದಗಿಸುತ್ತದೆ.

ಜಾನ್ ಡಿಯರ್ Autotrac™ ನೊಂದಿಗೆ ಅತ್ಯಂತ ನಿಖರವಾದ ಉಳುಮೆ:

ಭಾರತೀಯ ಕೃಷಿ ಭವಿಷ್ಯದಲ್ಲಿ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ, ತಂತ್ರಜ್ಞಾನದ ಪಾತ್ರವನ್ನು ಉತ್ಪ್ರೇಕ್ಷಿಸಲಾಗದು. ಜಾನ್ ಡಿಯರ್ ನ ಆಧುನಿಕ ಹೊಸ ಬೆಳವಣಿಗೆಗಳು ಮುಂದಾಳತ್ವ ವಹಿಸುವುದರೊಂದಿಗೆ, ಭಾರತೀಯ ರೈತರು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೊಸತನವನ್ನು ಮೈಗೂಡಿಸಿಕೊಂಡಿದ್ದಾರೆ.