TREM-IV ಟ್ರ್ಯಾಕ್ಟರ್: ಸಮರ್ಥನೀಯ ಕೃಷಿಯ ಭವಿಷ್ಯ

John deere power tech tractors

ಕೃಷಿಯು ಜೀವನೋಪಾಯಗಳಿಗೆ ಮತ್ತು ಸಮುದಾಯಗಳಿಗೆ ಆಧಾರವಾಗಿರುವ ಭಾರತದ ಕೃಷಿ ಪ್ರಧಾನ ಪ್ರಮುಖ ಭಾಗಗಳಲ್ಲಿ ಹೊಸ, ಪರಿಸರ-ಸ್ನೇಹಿ ಪರಿಹಾರಗಳ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಭಾರತದಲ್ಲಿ ಒಂದು ಪ್ರಧಾನ ಟ್ರ್ಯಾಕ್ಟರ್ ಕಂಪನಿಯಾಗಿ, ಜಾನ್ ಡಿಯರ್ ಈ ಕೃಷಿ ಕ್ರಾಂತಿಯ ಮುಂಚೂಣಿಯಲ್ಲಿದ್ದು, ಕೃಷಿ ಯಂತ್ರೋಪಕರಣಗಳ ವಿಕಸನವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತಿದೆ.

TREM-IV ಟ್ರ್ಯಾಕ್ಟರ್ ಗಳನ್ನು ಪ್ರವೇಶಿಸಿ: ಸಮರ್ಥನೀಯ ಕೃಷಿಯ ಭವಿಷ್ಯವನ್ನು ರೂಪಿಸಲು ಸಿದ್ಧವಾಗಿರುವ ತಾಂತ್ರಿಕ ಚಾತುರ್ಯ ಮತ್ತು ಪರಿಸರೀಯ ಪಾರುಪತ್ಯಕ್ಕೆ ಪ್ರಮಾಣವಾಗಿದೆ.

ಸಮರ್ಥನೀಯ ಅಭ್ಯಾಸಗಳನ್ನು ಬಲಪಡಿಸುವುದು

ಅತ್ಯಾಧುನಿಕ TREM-IV ಟ್ರ್ಯಾಕ್ಟರ್ ಗಳುಸಮರ್ಥನೀಯ ಕೃಷಿಗೆ ಸಂಬಂಧಿಸಿದಂತೆ ಜಾನ್ ಡಿಯರ್ ನ ಗುಣವಿಶೇಷದೊಳಗೆ ಹಾಸುಹೊಕ್ಕಾಗಿವೆ. ಪರಿಸರಕ್ಕೆ ಹಾನಿಯಾಗುವುದನ್ನು ಕಡಿಮೆ ಮಾಡುವುದರ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಿದ ಶಕ್ತಿಶಾಲಿ ಲಕ್ಷಣಗಳ ಸರಣಿಯೊಂದಿಗೆ ಕಾಳಜಿಪೂರ್ವಕವಾಗಿ ಈ ಎಂಜಿನಿಯರಿಂಗ್ ಅದ್ಭುತಗಳನ್ನು ತಯಾರಿಸಲಾಗಿದೆ.

  • ಇಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ (ECU) - ಈ ಟ್ರ್ಯಾಕ್ಟರ್ ಗಳ ಕೇಂದ್ರಬಿಂದುವಾಗಿರುವ ECU ಇಂಧನ ಬಳಕೆಯನ್ನು ಕಡಿಮೆಯಾಗಿಸುವುದರ ಜೊತೆಗೆ ಅಸಾಮಾನ್ಯ ಸಾಮರ್ಥ್ಯ ಸಾಧಿಸಲು ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ ಮತ್ತು ಎಂಜಿನ್ ಕಾರ್ಯಗಳನ್ನು ನಿಖರತೆಯೊಂದಿಗೆ ಸಂಯೋಜಿಸುತ್ತದೆ.
  • ಹೈ-ಪ್ರೆಶರ್ ಕಾಮನ್ ರೇಲ್ (HPCR) ಫ್ಯುಯೆಲ್ ಇಂಜೆಕ್ಷನ್ ಸಿಸ್ಟಮ್ - ಎಂಜಿನಿಯರಿಂಗ್ ಕ್ಷೇತ್ರದ ಅದ್ಭುತವಾದ ಈ ಸಿಸ್ಟಮ್ ಅಧಿಕ ಒತ್ತಡಗಳಲ್ಲಿ ನಿಖರವಾದ ಪ್ರಮಾಣಗಳಲ್ಲಿ ಇಂಧನವನ್ನು ಹಾಕುತ್ತದೆ, ಇದರಿಂದಾಗಿ ಶುದ್ಧ ಕಂಬಸ್ಚನ್ ಆಗುತ್ತದೆ ಮತ್ತು ಎಮಿಶನ್ ಗಳು ಕಡಿಮೆಯಾಗುತ್ತವೆ - ಸಮರ್ಥನೀಯ ಕೃಷಿಯ ಕ್ರಮಗಳತ್ತ ಇದೊಂದು ಪ್ರಮುಖ ಹೆಜ್ಜೆಯಾಗಿದೆ.
  • ಟರ್ಬೊಚಾರ್ಜರ್ - ಇಂಧನ ದಕ್ಷತೆಗೆ ಧಕ್ಕೆಯಾಗದ ರೀತಿಯಲ್ಲಿ ಪವರ್ ಔಟ್ ಪುಟ್ ಹೆಚ್ಚಿಸುವ ಟರ್ಬೊಚಾರ್ಜರ್ ನಿಂದಾಗಿ TREM-IV ಟ್ರ್ಯಾಕ್ಟರ್ ಗಳು ಉತ್ತಮ ಸಾಮರ್ಥ್ಯವನ್ನು ಕಾಪಾಡುವುದರ ಜೊತೆಗೆ ಅತ್ಯಂತ ಕಠಿಣವಾದ ಕೃಷಿ ಕೆಲಸಗಳನ್ನು ಸರಾಗವಾಗಿ ಮಾಡಿ ಮುಗಿಸುವಷ್ಟು ಸಮರ್ಥವಾಗಿರುತ್ತವೆ.
  • ಡೀಸಲ್ ಆಕ್ಸಿಡೇಶನ್ ಕ್ಯಾಟಲಿಸ್ಟ್ - ಎಮಿಶನ್-ಕಡಿಮೆಗೊಳಿಸುವ ತಂತ್ರಜ್ಞಾನಗಳ ಮುಂಚೂಣಿಯಲ್ಲಿರುವ ಈ ಹೊಸ ಕ್ಯಾಟಲಿಸ್ಟ್ ಅಥವಾ ಪರಿವರ್ತಕವು ಹಾನಿಕಾರಕ ಎಕ್ಸಾಸ್ಟ್ ಎಮಿಶನ್ ಗಳನ್ನು ತಗ್ಗಿಸಲು ನಿರಂತರವಾಗಿ ಕೆಲಸ ಮಾಡುವ ಮೂಲಕ ಶುದ್ಧ ಗಾಳಿಯನ್ನು ಪೋಷಿಸುತ್ತದೆ ಮತ್ತು ಆರೋಗ್ಯಕರ ಪರಿಸರವನ್ನು ಕಾಪಾಡುತ್ತದೆ.

ವಿಭಿನ್ನ ರೀತಿಯ ಬಹುಮುಖ ಸಾಮರ್ಥ್ಯ

ಜಾನ್ ಡಿಯರ್ ನ TREM-IV ಟ್ರ್ಯಾಕ್ಟರ್ ಗಳಪ್ರಮುಖ ಲಕ್ಷಣಗಳಲ್ಲಿ ಒಂದು ಎಂದರೆ ಅವುಗಳ ಬಹುಮುಖ ಸಾಮರ್ಥ್ಯ. ವಿಶಾಲವಾದ ಜಮೀನುಗಳಲ್ಲಿ ನೇಗಿಲು ಹೂಡುವ ಕೆಲಸವಾಗಲಿ, ಮಣ್ಣಿನ ಉಳುಮೆ ಮಾಡುವುದಿರಲಿ, ಅಥವಾ ಬೆಳೆಗಳನ್ನು ಕಟಾವು ಮಾಡುವುದರಿಲಿ, ಈ ಟ್ರ್ಯಾಕ್ಟರ್ ಗಳು ವಿವಿಧ ಪ್ರಕಾರದ ಕೃಷಿ ಕೆಲಸಗಳಲ್ಲಿ ನಿರೀಕ್ಷೆಗೂ ಮೀರಿ ಫಲಿತಾಂಶ ನೀಡುತ್ತವೆ.

  • ರೋಟರಿ ಟಿಲ್ಲರ್ ಗಳು - ಮಣ್ಣನ್ನು ನಿಖರತೆ ಮತ್ತು ದಕ್ಷತೆಯೊಂದಿಗೆ ಸಿದ್ಧಪಡಿಸುವುದು.
  • ಸ್ಟ್ರಾ ರೀಪರ್ ಗಳು - ಬೆಳೆಗಳ ಉಳಿದ ಅವಶೇಷಗಳ ನಿರ್ವಹಣೆಯ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವುದು.
  • ಪಟೇಟೋ ಪ್ಲಾಂಟರ್ ಗಳು - ಆರೋಗ್ಯಕರ ಆಲೂಗಡ್ಡೆ ಬೆಳೆಗಳಿಗಾಗಿ ಸೂಕ್ತ ಅಂತರ ಮತ್ತು ಆಳ ಖಚಿತಪಡಿಸುವುದು.
  • ರಿವರ್ಸಿಬಲ್ MB ಪ್ಲೋ - ನೇಗಿಲು ಬಳಕೆಯ ಕಾರ್ಯಗಳಲ್ಲಿ ಬಹುಮುಖ ಸಾಮರ್ಥ್ಯ ಮತ್ತು ದಕ್ಷತೆಯನ್ನು ಒದಗಿಸುವುದು.

ಉತ್ಕೃಷ್ಟತೆಗಾಗಿ ತಯಾರಿಸಲ್ಪಟ್ಟಿದೆ

5310 ಮತ್ತು 5405 ಮಾಡಲ್ ಗಳು ಟ್ರ್ಯಾಕ್ಟರ್ ವಿನ್ಯಾಸ ಮತ್ತು ಕಾರ್ಯಕ್ಷಮತೆಯಲ್ಲಿ ಉತ್ಕೃಷ್ಟತೆಗೆ ಜಾನ್ ಡಿಯರ್ ನ ಬದ್ಧತೆಗೆ ಹಿಡಿದ ಕನ್ನಡಿಗಳಾಗಿವೆ.

5310 TREM-IV ಟ್ರ್ಯಾಕ್ಟರ್:

  • ಗಟ್ಟಿಮುಟ್ಟಾದ ವಿನ್ಯಾಸ - ವಿವಿಧ ಪ್ರಕಾರದ ಮಣ್ಣುಗಳಲ್ಲಿ ಮತ್ತು ಸ್ಥಳದ ಸ್ವರೂಪದ ಸ್ಥಿತಿಗಳಲ್ಲಿ ಭಾರೀ ಕೃಷಿ ಕೆಲಸಗಳ ಕಾಠಿಣ್ಯತೆಗಳನ್ನು ಎದುರಿಸಲು ನಿರ್ಮಿಸಲಾಗಿದೆ.
  • PowerTech ಎಂಜಿನ್ - ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ 57 ಹಾರ್ಸ್ ಪವರ್ ನ ಅಧಿಕ ಶಕ್ತಿಯನ್ನು ಪೂರೈಸುವ ಮೂಲಕ ಕಾರ್ಯಕ್ಷಮತೆ ಮತ್ತು ಪರಿಸರ-ಸ್ನೇಹ ಎರಡನ್ನೂ ಖಚಿತಪಡಿಸುತ್ತದೆ.
  • ಅಧಿಕ ಆರಾಮದಾಯಕತೆ - ರಿಯರ್ ಫ್ಲೋರ್ ಎಕ್ಸ್ ಟೆನ್ಶನ್ ಗಳು ಮತ್ತು ಹೈ-ಬ್ಯಾಕ್ ಟೋರ್ಕ್ ನೊಂದಿಗೆ ಅಗಲವಾದ ಪ್ಲಾಟ್ ಫಾರ್ಮ್ ನಿಂದಾಗಿ ಆಪರೇಟರ್ ಗಳಿಗೆ ಆರಾಮದಾಯಕ ಮತ್ತು ಉತ್ಪಾದಕ ಕೆಲಸದ ವಾತಾವರಣ ಒದಗಿಸುತ್ತದೆ.

5405 TREM-IV Tractor:

  • ತಾಂತ್ರಿಕ ಅಭಿವೃದ್ಧಿ - ಶಕ್ತಿಶಾಲಿ 63-ಹಾರ್ಸ್ ಪವರ್ ಟರ್ಬೊಚಾರ್ಜ್ ಚಾಲಿತ PowerTech ಎಂಜಿನ್ ಮತ್ತು HPCR ಫ್ಯುಯೆಲ್ ಇಂಜೆಕ್ಷನ್ ಸಿಸ್ಟಮ್ ಸರಿಸಾಟಿಯಿಲ್ಲದ ಸಾಮರ್ಥ್ಯವನ್ನು ನೀಡುತ್ತದೆ.
  • ಅಂತಾರಾಷ್ಟ್ರೀಯ ಆಕಾರ - ಗುಣಮಟ್ಟ ಮತ್ತು ಚೆನ್ನಾಗಿ ಕಾಣಿಸುವ ಜಾಗತಿಕ ಮಾನದಂಡಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನದಿಂದ ರೈತರಿಗೆ ಪ್ರಯೋಜನ ಸಿಗುವಂತೆ ಮತ್ತು ಅವರ ಉಪಕರಣದ ಬಗ್ಗೆ ಅವರು ಹೆಮ್ಮೆ ಪಡುವಂತೆ ಖಚಿತಪಡಿಸುತ್ತದೆ.
  • ಸ್ಟೇರಿಂಗ್ ಆಯ್ಕೆಗಳು - ಪವರ್ ಸ್ಟೇರಿಂಗ್ ನಿಂದ ಟಿಲ್ಟ್ ಮತ್ತು ಟೆಲಿಸ್ಕೋಪ್ ಸ್ಟೇರಿಂಗ್ ವರೆಗೆ, ಜಾನ್ ಡಿಯರ್ ಆಪರೇಟರ್ ಆರಾಮ ಮತ್ತು ನಿಯಂತ್ರಣಕ್ಕೆ ಪ್ರಾಶಸ್ತ್ಯ ನೀಡುತ್ತದೆ, ಈ ಮೂಲಕ ಹೊಲದಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವಾಗ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ತಾಂತ್ರಿಕ ಲಕ್ಷಣಗಳು

ಈ ಹೊಸತನದಿಂದ ತುಂಬಿದ ಟ್ರ್ಯಾಕ್ಟರ್ ಗಳ ಲಕ್ಷಣಗಳ ಬಗ್ಗೆ ಇನ್ನಷ್ಟು ವಿವರಗಳನ್ನು ಇಲ್ಲಿ ನೀಡಿದೆ:

ಲಕ್ಷಣಗಳು 5310 TREM-IV ಟ್ರ್ಯಾಕ್ಟರ್ 5405 TREM-IV ಟ್ರ್ಯಾಕ್ಟರ್
ಎಂಜಿನ್ ಟೈಪ್ ಜಾನ್ ಡಿಯರ್ 3029H, 57 HP ಜಾನ್ ಡಿಯರ್ 3029H, 63 HP
‌ಏರ್ ಫಿಲ್ಟರ್ ಡ್ರೈ ಟೈಪ್, ಡ್ಯುಯೆಲ್ ಎಲಿಮೆಂಟ್ ಡ್ರೈ ಟೈಪ್, ಡ್ಯುಯೆಲ್ ಎಲಿಮೆಂಟ್
ಟ್ರಾನ್ಸ್ ಮಿಶನ್ 12F+4R / 12F+12R / 9F+3R 12F+4R / 12F+12R / 9F+3R
ಸ್ಪೀಡ್ ಗಳು (ಫಾರ್ವರ್ಡ್) 0.35 ರಿಂದ 32.6 kmph 1.9 ರಿಂದ 32.6 kmph
ಸ್ಪೀಡ್ ಗಳು (ರಿವರ್ಸ್) 0.61 ರಿಂದ 20 kmph 0.35 ರಿಂದ 0.87 kmph
ಬ್ರೇಕ್ ಗಳು ಆಯಿಲ್ ನಲ್ಲಿ ಅದ್ದಿದ ಡಿಸ್ಕ್ ಬ್ರೇಕ್ ಗಳು ಆಯಿಲ್ ನಲ್ಲಿ ಅದ್ದಿದ ಡಿಸ್ಕ್ ಬ್ರೇಕ್ ಗಳು
ಹೈಡ್ರಾಲಿಕ್ಸ್ ಗರಿಷ್ಠ ಎತ್ತುವ ಸಾಮರ್ಥ್ಯ:
2000/2500 Kgf
ಗರಿಷ್ಠ ಎತ್ತುವ ಸಾಮರ್ಥ್ಯ:
2000/2500 Kgf
ಸ್ಟೇರಿಂಗ್ ಪವರ್ ಸ್ಟೇರಿಂಗ್ / ಟಿಲ್ಟ್ ಸ್ಟೇರಿಂಗ್ ಆಯ್ಕೆ ಪವರ್ ಸ್ಟೇರಿಂಗ್ / ಟಿಲ್ಟ್ ಮತ್ತು ಟೆಲಿಸ್ಕೋಪಿಕ್ (ಕ್ಯಾಬ್)
ಪವರ್ ಟೇಕ್ ಆಫ್ ‌ಇಂಡಿಪೆಂಡೆಂಟ್, 6 ಸ್ಪ್ಲೈನ್ ಗಳು ‌ಇಂಡಿಪೆಂಡೆಂಟ್, 6 ಸ್ಪ್ಲೈನ್ ಗಳು
ವ್ಹೀಲ್ ಗಳು ಮತ್ತು ಟಯರ್ ಗಳು ಮುಂಭಾಗ: 6.5 x 20, ಹಿಂಭಾಗ:
16.9 x 30
ಮುಂಭಾಗ: 6.5 x 20, ಹಿಂಭಾಗ:
16.9 x 30

ಭವಿಷ್ಯದ ಬೆಳವಣಿಗೆಯನ್ನು ಈಗಲೇ ಅನುಭವಿಸಿ

ಕೃಷಿ ಭೂದೃಶ್ಯ ಬೆಳೆದಂತೆಲ್ಲ ಜಾನ್ ಡಿಯರ್ ಹೊಸ ತಂತ್ರಜ್ಞಾನದ ಮುಂಚೂಣಿಯಲ್ಲಿರುತ್ತದೆ ಮತ್ತು ಸಾಧ್ಯವಾದ ಮಟ್ಟಿಗೆ ಸೇವೆಗಳನ್ನು ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತದೆ. ಭಾರತದಲ್ಲಿನ ರೈತರು TREM-IV ಟ್ರ್ಯಾಕ್ಟರ್ ಗಳನ್ನು ಉಪಯೋಗಿಸುವ ಮೂಲಕ ಕಾರ್ಯಕ್ಷಮತೆ ಅಥವಾ ಸಾಮರ್ಥ್ಯಕ್ಕೆ ಧಕ್ಕೆಯಾಗದಂತೆ ಸಮರ್ಥನೀಯ ಕೃಷಿ ಅಭ್ಯಾಸಗಳನ್ನು ಮಾಡಿಕೊಂಡು ಹೋಗಬಹುದು.  ಇಂದೇ ಈ ಕ್ರಾಂತಿಯಲ್ಲಿ ಕೈಜೋಡಿಸಿ ಮತ್ತು ಜಾನ್ ಡಿಯರ್ ನೊಂದಿಗೆ ಕೃಷಿಯ ಭವಿಷ್ಯವನ್ನು ಅನುಭವಿಸಿ.