W-70 ಸಿಂಕ್ರೊಮಾಸ್ಟರ್ ಕಂಬೈನ್ ಹಾರ್ವೆಸ್ಟರ್ Powerpro
ಜಾನ್ ಡಿಯರ್ W-70 Synchrosmart ಕಂಬೈನ್ ಹಾರ್ವೆಸ್ಟರ್ Powerpro ಒಂದು ಶಕ್ತಿಶಾಲಿ, ಹಗುರವಾದ 100HP ಕಾಂಪ್ಯಾಕ್ಟ್ ಹಾರ್ವೆಸ್ಟರ್ ಆಗಿದೆ! ಅದು ಹಸಿ ಮತ್ತು ಸಣ್ಣ ಗದ್ದೆಗಳಲ್ಲಿ ವೇಗವಾಗಿ ಮತ್ತು ಸಮರ್ಥವಾದ ರೀತಿಯಲ್ಲಿ ಕೆಲಸ ಮಾಡಬಲ್ಲದು. ಅದರ ಎರ್ಗೊನಾಮಿಕ್ ಆಕಾರದಿಂದಾಗಿ ಇತರ ಹಾರ್ವೆಸ್ಟರ್ ಗಳು ತಲುಪಲಾಗದ ಜಾಗಗಳಲ್ಲಿ ಅದು ಸುಲಭವಾಗಿ ತಲುಪುತ್ತದೆ.
- ಚಿಕ್ಕ ವಿನ್ಯಾಸವು ಇಕ್ಕಟ್ಟು ದಾರಿಗಳ ಮೂಲಕ ಹಾದು ಹೋಗಲು ಸಹಾಯ ಮಾಡುತ್ತದೆ
- ತೂಕ ಕಡಿಮೆ ಇರುವುದರಿಂದ ಇಂಧನ ಉಳಿತಾಯ ಮಾಡುತ್ತದೆ ಮತ್ತು ಅಧಿಕ ಉತ್ಪಾದಕತೆಯನ್ನು ನೀಡುತ್ತದೆ
- ಭತ್ತ, ಗೋಧಿ, ಜೋಳ, ಸೋಯಾಬೀನ್, ಸಾಸಿವೆ, ಕಡಲೆ, ರಾಗಿ, ದ್ವಿದಳ ಧಾನ್ಯಗಳು, ಸೂರ್ಯಕಾಂತಿ, ಕುಸುಂಬೆ, ಅಗಸೆಬೀಜ ಕೊಯ್ಲಿಗೆ ಸೂಕ್ತ